ಆಸೆ Aase
ರಚನೆ - ಜಗದೀಶ ಚಂದ್ರ / Lyrics - Jagadeesha Chandra
ಇರಬೇಕು ಒಳ್ಳೆಯಾ ಆಸೆ
ಇರದಿರಲಿ ಕೆಟ್ಟದೀ ಆಸೆ
ಅತಿ ಆಸೆಪಟ್ಟು ಗತಿ ಕೇಡು ಆಗಿ
ಸಿಕ್ಕುವುದು ಬರಿ ನಿರಾಸೆ //
ಬೇಡ ಬೇಡ ಅತಿ ಆಸೆ
ಆಗುವುದು ದುಷ್ಟರಾ ಆಸೆ
ಅತಿ ದುಷ್ಟ ಆಸೆ ಭ್ರಷ್ಟನ್ನ ಮಾಡಿ
ಬಾಳನ್ನೆ ನರಕ ಮಾಡ್ತು //
ಆ ಆ ಆ ... ಆ ಆ ಆ ..ಆ ಆ ಆ
ಹಣವ ಮಾಡುವಾ ಆಸೆ
ದುಪ್ಪಟು ಪಡೆಯುವಾ ಆಸೆ
ಇಂಥ ಆಸೆಯು ಹಾಳು ಮಾಡಿಸಿತು
ಬದುಕು ಆಯ್ತು ಬರಿ ಗೋಳು
ಅಯ್ಯೋ ಇಂಥ ಗೋಳಿನ ಬಾಳು
ಪಡೆದು ಏಕೆ ಬದುಕಬೇಕು //
ಆ ಆ ಆ ... ಆ ಆ ಆ ..ಆ ಆ ಆ
ಕೆಟ್ಟ ಮಾರ್ಗ ವಿ ದುರಾಸೆ
ಅದಕೆಂದು ಅಂತ್ಯವೇ ಇಲ್ಲ
ಅಂತ ಮಾರ್ಗದಲಿ ನೀವು ಹೋದರೆ
ಭ್ರಷ್ಟ ದುಷ್ಟ ಎಂಬ ಬಿರುದು
ಅಯ್ಯೋ ಇಂಥ ಹಣೆಯ ಪಟ್ಟಿ
ಪಡೆದು ಏಕೆ ಬದುಕಬೇಕು //
ಈ ಕವನದ ಮುಖ್ಯ ಆಶಯ ಆಸೆಯಿಂದ ಆಗುವ ಅನಾಹುತಗಳು. ಇಂದು ಹಣ ಹಾಗೂ ಅಧಿಕಾರದ ಆಸೆಗಳಿಂದ ಅನೇಕರು ಹಾಳಾಗುತ್ತಿದ್ದಾರೆ, ಬಹಳ ಸ್ವಾರ್ಥಿಗಳಾಗಿ, ಸಂಕುಚಿತ ಬುದ್ದಿಯುಳ್ಳವರಾಗಿದ್ದಾರೆ. ತಲೆಮಾರುಗಳಿಗೆ ಆಗುವಷ್ಟು ಹಣವನ್ನು ಕೂಡಿಟ್ಟು ತಮ್ಮ ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ. ಅವರ ಮಕ್ಕಳಿಗೆ ಓದು ಬರಹ ಏನೂ ಬೇಡ ಅಪ್ಪ ಸಂಪಾದಿಸಿದ ಹಣವನ್ನು ಖರ್ಚು ಮಾಡಿ ಮೋಜು ಮಾಡುವುದಷ್ಟೇ ಕೆಲಸ. ಈ ಧನಪಿಶಾಚಿ ಹಿಡಿದುಬಿಟ್ಟಿತೆಂದರೆ ಅದು ಒಳ್ಳೆಯವರನ್ನು ಭ್ರಷ್ಟರನ್ನಾಗಿ ಮಾಡಿಬಿಡುತ್ತದೆ.
ಮುಖ್ಯವಾದ ಅಂಶವೆಂದರೆ ಅತಿ ಆಸೆ ಗತಿ ಕೇಡು ಎಂಬುದು. ಆಸೆ ಇರಬೇಕು ಆದರೆ ಅತಿ ಆಸೆ ಅಥವಾ ದುರಾಸೆ ಇರಬಾರದು. ಕೆಲವರಂತೂ ಅದರಲ್ಲಿಯೂ ತಾವು ಬೆವರು ಸುರಿಸಿ ಗಳಿಸಿದ ಹಣ ದುಪ್ಪಟ್ಟಾಗುತ್ತದೆ ಎಂಬ ಆಸೆಯಿಂದ ಹಿಂದುಮುಂದು ನೋಡದೆ ಎಲ್ಲೆಲ್ಲಿಯೋ ಹೂಡಿ ಅಸಲು ಹಣವನ್ನು ಕಳೆದು ಕೊಂಡಿದ್ದಾರೆ.
ಹಣಗಳಿಸಲಿ, ಅದರಿಂದ ಮಕ್ಕಳನ್ನು ಚೆನ್ನಾಗಿ ಬೆಳೆಸಲಿ, ಆದರೆ ಆ ಮಕ್ಕಳೂ ಸಹ ತಮ್ಮದೇ ಹಣದಿಂದ ಸಂತೋಷದಿಂದ ಬದುಕುವುದನ್ನು ಕಲಿಯಲಿ ಎಂಬುದು ಈ ಕವನದ ಸಾರಾಂಶ.
ರಾಜನ್ ನಾಗೇಂದ್ರ ಅವರ ಸಂಗೀತ ನಿರ್ದೇಶನದ "ಯಾರು ಯಾರು ನೀ ಯಾರು" ಎಂಬ ಒಂದು ಹಾಸ್ಯಭರಿತ ಹಾಡನ್ನು ನಾಗೇಂದ್ರ ಮತ್ತು ಜಮುನಾ ರಾಣಿ ಅವರು ಹಾಡಿದ್ದಾರೆ. ಸೊಗಸಾದ ಹಾಸ್ಯ ಶೈಲಿಯ ಆ ಹಾಡಿನ ದಾಟಿಯಲ್ಲಿ ನಾನೇ ರಚಿಸಿದ ಈ ಕವನಕ್ಕೆ ರಾಗ ಸಂಯೋಜಿಸಿ ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಹಳೆಯ ಹಾಡುಗಳು ಕೇಳಲು ಮಧುರ. ನಿಮಗೂ ಇಷ್ಟವಾಗವುದು ಎಂದುಕೊಂಡಿದ್ದೇನೆ.
No comments:
Post a Comment