Wednesday, April 30, 2025
Irabeku Olleyaa Aase / Lyrics - Jagadeesha Chandra / ಕವನದ ಶೀರ್ಷಿಕೆ - ಆಸೆ...
Tuesday, April 29, 2025
Tande Ninu /AhirBhairav /Music -Jagadeesha Chandra /ತಂದೆನೀನು ತಾಯಿನೀನು/ ಅ...
ಬಸವೇಶ್ವರ ವಚನ
ಬಸವಣ್ಣನವರ ಪ್ರತಿಯೊಂದು ವಚನದಲ್ಲೂ ಏನಾದರೊಂದು ಸಂದೇಶವಿರುತ್ತದೆ. ಇಲ್ಲಿ ದೇವರ ಮುಂದೆ ಭಕ್ತನೊಬ್ಬನ ಸಮರ್ಪಣಾ ಭಾವವನ್ನು ಕಾಣಬಹುದು.
ಭಕ್ತನು ದೇವರಿಗೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಆಗ ದೇವರೇ ಅವನಿಗೆ ತಂದೆ, ತಾಯಿ, ಬಂಧು ಬಳಗ ಎಲ್ಲವೂ. ದೇವರು ತನ್ನನ್ನು ಹಾಲಲ್ಲಾದರೂ ಹಾಕಲಿ, ನೀರಲ್ಲಾದರೂ ಹಾಕಲಿ, ಹಾಕುವುದು ಅವನ ಧರ್ಮ, ಅನುಭವಿಸುವುದು ತನ್ನ ಧರ್ಮ ಎಂದು ಹೇಳುತ್ತಾನೆ. ದೇವರನ್ನು ಸಮರ್ಪಣಾಭಾವದಿಂದ ಪೂರ್ಣವಾಗಿ ನಂಬಿ, ಅವನು ಏನು ಮಾಡಿದರೂ ಅದನ್ನು ನಾನು ಅನುಭವಿಸುತ್ತೇನೆ, ದೇವರು ತಾಯಿಯು ಕಂದನನ್ನು ರಕ್ಷಿಸುವಂತೆ ತನ್ನನ್ನು ರಕ್ಷಿಸುತ್ತಾನೆ ಎಂಬ ಭರವಸೆ ಮೂಡಿಸಿಕೊಳ್ಳುತ್ತಾನೆ. ಮುಗ್ಧ ಮಗುವೊಂದು ತಂದೆ ತಾಯಿಯ ರಕ್ಷಣೆಯಲ್ಲಿ ಧೈರ್ಯವಾಗಿ ಇರುವಂತೆ ಇಲ್ಲಿ ಭಕ್ತನು ದೇವರನ್ನು ನಂಬಿ ಧೈರ್ಯದಿಂದ ಇರುತ್ತಾನೆ.
ದೇವರು ಇದ್ದನೋ ಇಲ್ಲವೋ ಎಂದು ಪರಿತಪಿಸುವುದಕ್ಕಿಂತ ಅವನು ಇದ್ದಾನೆ, ನನ್ನನ್ನು ಕಾಪಾಡುತ್ತಾನೆ ಎಂಬ ಭಾವನೆಯಿಂದ ಒಳ್ಳೆಯ ಬಾಳನ್ನು ನಡೆಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಸಂದೇಶವನ್ನು ಈ ವಚನ ನೀಡುತ್ತದೆ.
ತಂದೆ ನೀನು ತಾಯಿ ನೀನು, ಎಂಬ ಬಸವಣ್ಣನವರ ಈ ವಚನಕ್ಕೆ ಅಹಿರ್ ಭೈರವ್ ರಾಗದಲ್ಲಿ ಸಂಯೋಜಿಸಿ ಕೀಬೋರ್ಡ್ನಲ್ಲಿ ನುಡಿಸಿದ್ದೇನೆ. ಕೇಳಿ ಆನಂದಿಸಿ, ಪ್ರೋತ್ಸಾಹಿಸಿ. ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.
Ivanarava / Abhogi / Basavanna /Music & Keyboard Jagadeesha Chandra / ಇ...
ಬಸವೇಶ್ವರ ವಚನ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನು ಎಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನು ಎಂದೆನಿಸಯ್ಯಾ.
ಬಸವಣ್ಣನವರ ಪ್ರತಿಯೊಂದು ವಚನದಲ್ಲೂ ಏನಾದರೊಂದು ಸಂದೇಶವಿರುತ್ತದೆ. ಇಲ್ಲಿ ನಾವು ಹೇಗಿರಬೇಕು , ಇತರರೊಂದಿಗೆ ಹೇಗಿರಬೇಕು ಎಂದು ಹಿತವಚನವನ್ನು ನೀಡಿದ್ದಾರೆ .
ಯಾರನ್ನಾದರೂ ನೋಡಿದರೆ ಇವನ್ಯಾರು ಎಂದು ದೂರವಿಡಬೇಡಿ, ಅವನು ನಮ್ಮವನು ಎಂಬ ಭಾವನೆ ಇದ್ದರೆ ಆಗ ಸುಖ ನಮ್ಮದಾಗುತ್ತದೆ. ಕೇವಲ ನಮ್ಮವನು ಎಂದಾದರೆ ಸಾಲದು ನಮ್ಮ ಮನೆಯವನೇ, ನಮ್ಮ ಮಗನಂತೆಯೇ ಎಂಬ ಭಾವನೆ ಬಂದರೆ ಸೌಹಾರ್ದತೆ ತಾನೇ ತಾನಾಗಿ ಮೂಡುತ್ತದೆ. ಅಂದರೆ ಇಲ್ಲಿನ ಮುಖ್ಯ ಸಂದೇಶ, ನಾವೆಲ್ಲರೂ ಒಂದೇ, ಬೇಧಭಾವ ಮಾಡಬೇಡಿ ಎಂದು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಚಿಕ್ಕಂದಿನಿಂದಲೂ ಇಂತಹ ಒಳ್ಳೆಯ ಉಪದೇಶಗಳನ್ನು ಕೇಳಿ ಕೇಳಿಯೇ ಬೆಳೆಯುತ್ತೇವೆ. ಶಾಂತಿ, ಸಹನೆ, ಮರುಕ, ನಾವೆಲ್ಲರೂ ಒಂದೇ ಎಂಬ ಭಾವ, ನಮ್ಮಂತೆಯೇ ಇತರರು ಇಂತಹ ಭಾವನೆಗಳು ನಮ್ಮಲ್ಲಿ ಹಾಸುಹೊಕ್ಕಾಗಿರುತ್ತದೆ.
ಎಲ್ಲರೂ ಹೀಗೇ ಭಾವಿಸಿ ನಡೆದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಒಬ್ಬರು ಮಾತ್ರ ಹೀಗಿದ್ದು ಇನ್ನೊಬ್ಬರು ಅದಕ್ಕೆ ತದ್ವಿರುದ್ಧವಾಗಿ ನಡೆದರೆ ಏನಾಗಬಹುದು? ಅದೇ ಇಂದು ನಡೆಯುತ್ತಿರುವುದು. ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುವವರೇ ಮೇಲುಗೈ ಸಾಧಿಸುತ್ತಿದ್ದಾರೆ.
ಹೀಗಾಗಿ ಇಂದಿನ ಕಾಲಕ್ಕೆ, ಶಾಂತಿ ಸಹನೆ ಮೊದಲಾದ ಒಳ್ಳೆಯತನವಷ್ಟೇ ಸಾಲದು, ಸಮಯ ಬಂದರೆ ಕೆಚ್ಚೆದೆಯಿಂದ ಸವಾಲನ್ನು ಎದುರಿಸಬೇಕು ಎಂಬ ಉಪದೇಶವನ್ನೂ ಕಲಿಸಬೇಕು. ನಾವು ಇತರರನ್ನು ನಮ್ಮವರಂತೆ ಕಾಣಬೇಕು ನಿಜ, ಆದರೆ ಅದೇ ಒಳ್ಳೆಯತನ ಅವರಲ್ಲಿಯೂ ಇರಬೇಕಲ್ಲವೇ? ನಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ನಮ್ಮ ವಿರುದ್ಧ ತಿರುಗಿಬೀಳುವ ಅನೇಕರು ನಮ್ಮ ನಡುವೆಯೇ ಇದ್ದಾರೆ. ನಾವು ಎಚ್ಚರಿಕೆಯಿಂದ ಇದ್ದು ಒಳ್ಳೆಯವರಾಗಿ ಇರೋಣ, ದುರುಪಯೋಗ ಪಡಿಸಿಕೊಂಡು ಕೆಡುಕನ್ನುಂಟು ಮಾಡುವವರಿಗೆ ಸರಿಯಾಗಿ ಪಾಠ ಕಲಿಸುವ ಬುದ್ಧಿಯನ್ನೂ ಕಲಿಯೋಣ.
ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಎಂಬ ಬಸವಣ್ಣನವರ ಈ ವಚನಕ್ಕೆ ಅಭೋಗಿ ರಾಗದಲ್ಲಿ ಸಂಯೋಜಿಸಿ ಕೀಬೋರ್ಡ್ನಲ್ಲಿ ನುಡಿಸಿದ್ದೇನೆ. ಕೇಳಿ ಆನಂದಿಸಿ, ಪ್ರೋತ್ಸಾಹಿಸಿ. ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.
Monday, April 28, 2025
Chandrodayake Ambudhi / Basava Vachana / Music, Keyboard - Jagadeesha Ch...
ಬಸವೇಶ್ವರ ವಚನ
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದೇ ಅಯ್ಯಾ; ಚಂದಿರ ಕುಂದೆ ಕುಂದುವುದಯ್ಯಾ. ಚಂದ್ರಗೆ ರಾಹು ಅಡ್ಡ ಬಂದಲ್ಲಿ ಬೊಬ್ಬಿಟ್ಟಿತ್ತೆ ಅಂಬುಧಿಯು ಅಂಬುಧಿಯನ್ನು ಮುನಿಯಾಪೋಷಿಸಲು ಚಂದ್ರಮನು ಅಡ್ಡ ಬಂದನೆ ಆರಿಗಾರು ಇಲ್ಲ ತಿಳಿದಿರಲಿ ಕೆಟ್ಟವರಿಗೆ ಕೆಳೆಯಿಲ್ಲ ವಿಶ್ವದ ನಂಟ ನೀನೇ ಅಯ್ಯ ಕೂಡಲಸಂಗಮದೇವಾ
ವಚನದ ವಿವರಣೆ - ಜಗದೀಶ ಚಂದ್ರ
ಸಮುದ್ರದಲ್ಲಿ ಭರತ ಇಳಿತ ಎಂಬುದು ಇದ್ದದ್ದೇ. ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆ ಸಮುದ್ರ ಉಕ್ಕಿ ಅಲೆಗಳು ಭೋರ್ಗರೆಯುತ್ತದೆ. ಚಂದ್ರ ಕ್ಷೀಣವಾಗುತ್ತಿದ್ದಂತೆ ಅಲೆಗಳ ಭೋರ್ಗರೆತವೂ ಕಡಿಮೆಯಾಗುತ್ತದೆ. ಸಮುದ್ರ ಮತ್ತು ಚಂದ್ರನ ಸಂಬಂಧವನ್ನು ಉಲ್ಲೇಖಿಸುತ್ತಾ ಬಸವಣ್ಣನವರು, ಚಂದ್ರನಿಗೆ ರಾಹು ಅಡ್ಡ ಬಂದರೆ ಗ್ರಹಣವಾಗುತ್ತದೆ. ಹಾಗೆಂದು ಸಮುದ್ರವೆಂದಾದರೂ ಚಂದ್ರನಿಗೆ ತೊಂದರೆಯಾಗುತ್ತಿದೆ ಎಂದು ಬೊಬ್ಬಿಟ್ಟಿತೇ? ಇಲ್ಲ. ಇದೆ ರೀತಿ ಸಮುದ್ರವನ್ನೇ ಋಷಿಯೊಬ್ಬರು ಕುಡಿದುಬಿಟ್ಟರು ಎಂದು ಚಂದ್ರನೆಂದಾದರೂ ಸಮುದ್ರದ ಸಹಾಯಕ್ಕೆ ಬಂದನೆ? ಇಲ್ಲ. ಚಂದ್ರನಿಗೂ ಸಮುದ್ರಕ್ಕೂ ಅಷ್ಟೊಂದು ನಂಟಿದ್ದರೂ ಒಬ್ಬರಿಗೊಬ್ಬರು ಸಹಾಯಕ್ಕೆ ಬರಲಿಲ್ಲ. ಅಂದರೆ ಅವರಿಬ್ಬರಲ್ಲೂ ಕೆಳೆ ಇರಲಿಲ್ಲ, ಅಂದರೆ ಗೆಳೆತನ, ಆತ್ಮೀಯತೆ ಇರಲಿಲ್ಲ. ನಮ್ಮ ನಿತ್ಯ ಜೀವನದಲ್ಲೂ ಯಾರಾದರೂ ಸಹಾಯಕ್ಕೆ ಬರುತ್ತಾರೆ ಎಂಬ ಭ್ರಮೆ ಬೇಡ, ನಮಗೆ ನಾವೇ ನೆಂಟರು, ಇತರರಿಗೆ ಕಾಯದೇ ನಮ್ಮ ದಾರಿಯನ್ನು ನಾವೇ ನೋಡಿಕೊಳ್ಳಬೇಕು ಎಂಬ ನೀತಿಯನ್ನು ಈ ವಚನದಲ್ಲಿ ಹೇಳುತ್ತಾರೆ ಬಸವಣ್ಣನವರು. - ಜಗದೀಶ ಚಂದ್ರ
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದೇ ಎಂಬ ಬಸವಣ್ಣನವರ ಈ ವಚನಕ್ಕೆ ರಾಗೇಶ್ರೀ ರಾಗದಲ್ಲಿ ಸಂಯೋಜಿಸಿ ಕೀಬೋರ್ಡ್ನಲ್ಲಿ ನುಡಿಸಿದ್ದೇನೆ. ಕೇಳಿ ಆನಂದಿಸಿ, ಪ್ರೋತ್ಸಾಹಿಸಿ. ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.
Monday, April 21, 2025
E Hasiru Siriyali /C Ashwath /Sangita Katti /Gopal Yajnik /Nagamandala /...
Sunday, April 20, 2025
Chand si mehbooba /Mukhesh /Manojkumar /Keyboard -JagadishChandra /चाँद ...
Saturday, April 19, 2025
Neela Megha Gali Beesi /Shankar Ganesh /SPB, S Janaki /Chi Udayashankar ...
This song is based on Raga Mohana or Bhoop. Singers are S Janaki and SPB. Music scored by Shankar Ganesh, Film - Anand.
ನೀಲ ಮೇಘ ಗಾಳಿ ಬೀಸಿ / ಎಸ್.ಜಾನಕಿ, ಎಸ್ ಪಿ ಬಿ / ಚಿ ಉದಯಶಂಕರ / ಶಂಕರ್ ಗಣೇಶ್ /ಆನಂದ್ / ಕೀಬೋರ್ಡ್ - ಜಗದೀಶ ಚಂದ್ರ
Neela Megha Gali Beesi / Shankar Ganesh / SPB, S Janaki / Chi Udayashankara / Film - Anand / Keyboard - Jagadeesha Chandra ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ ಚಂದ್ರತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ ಎದೆಯ ತುಂಬಿ ಕೆಣಕಿದೆ ಚಿಂತೆ ಕರಗಿ ಕರಗಿ ಇಬ್ಬನಿಯಂತೆ ಮನ ಉಯ್ಯಾಲೆಯಂತಾಗಿ ತೂಗಾಡಿದೆ // ಹೂವಾಯಿತು ಮನ ಹೂವಾಯಿತು ನೀ ಸೇರಲು ಸವಿ ಜೇನಾಯಿತು ಹಾಡಾಯಿತು ಹೊಸ ಹಾಡಾಯಿತು ನೀ ಹಾಡಲು ಬಲು ಇಂಪಾಯಿತು ಬಳಿ ಬಂದಾಗ, ಸುಖ ತಂದಾಗ ಆನಂದವೇ ತುಂಬಿತು …. // ಹಾರಾಡುವ ಗಿಳಿಯಂತಾಗುವ ಆ ಬಾನಲಿ ಜೊತೆ ನಾವಾಗುವಾ ಆ ದೂರದ ಗಿರಿ ಮೇಲೇರುವ ಸೌಂದರ್ಯದ ಸಿರಿ ಬಾ ನೋಡುವ ಮಳೆ ಬಂದಾಗ, ಹಿತ ತಂದಾಗ ಮಳೆ ಬಿಲ್ಲಲಿ ಜಾರುವಾ........// +4 T280 L291 split T054 L148 R077 spd80
Thursday, April 17, 2025
ದೇಖೊ ಬಿಜಲಿ ಡೋಲೆ /Dekho Bijali Dole /Asha Bhonsle, Usha Mangeshkar / O P ...
I have made an attempt to play this song in keyboard.
“Dekho Bijli Dole Bin Badal Ki”, is a melodious Hindi film hit from the film Phir Wohi Dil Laya Hoon (1963), directed by Nasir Hussain and stars Joy Mukherjee, Asha Parekh and Pran. Music composed by O P Nayyar, the song is sung by Asha Bhosle and Usha Mangeshkar, with lyrics penned by Majrooh Sultanpuri. The dance song is based on Rag Basant Mukhari.
राग बसंत मुखारी / देखो बिजलि डोले / आशा भोंसले, उषा मंगेशकर / ओ पि नय्यार
Dekho Bijali Dole / Asha Bhonsle, Usha Mangeshkar / O P Nayyar / Raag Basant Mukhari ರಾಗ - ಬಸಂತ್ ಮುಖಾರಿ / ದೇಖೊ ಬಿಜಲಿ ಡೋಲೆ / ಆಶಾ ಭೊಂಸ್ಗೆ , ಉಷಾ ಮಂಗೇಷ್ಕರ್ / ಓ ಪಿ ನಯ್ಯರ್ देखो बिजली डोले बिन बादल की देखो बिजली डोले बिन बादल की चम चम चमके माथे की बिंदिया छनन छनन धुन पायल की देखो बिजली डोले बिन बादल की देखो बिजली डोले……. रंग रुपहला जलवे सुनहरे रंग रुपहला जलवे सुनहरे ठहरे तोह कैसे पाग नहीं ठहरे झलक दिखाते हुए कई बलखाये डरे नजर हल्की हल्की देखो बिजली डोले बिन बादल की देखो बिजली डोले……. गिरती सम्भालती चली मतवारी गिरती सम्भालती चली मतवारी हंस के उछल पडी जैसे चिनगारी गिरी कब दिल पे गयी कब दिल से दुनिया रही रे अंखिया मल्टी देखो बिजली डोले बिन बादल कीಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...
ಬೀಸುವ ಪದ Folk song sung while grinding grains. Folk song of Karnataka ಕನ್ನಡ ಜಾನಪದ ಹಾಡು ಕೀಬೋರ್ಡ್ - ಜಗದೀಶ ಚಂದ್ರ Keyboard - Jagadeesha ...
-
ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣ...
-
ಭೀಮನ ಅಮಾವಾಸ್ಯೆ Bhimana Amavasye ಆಷಾಢ ಮಾಸದ ಕಡೆಯ ದಿನ ಅಂದರೆ ಅಮಾವಾಸ್ಯೆಯೇ ಭೀಮನ ಅಮಾವಾಸ್ಯೆ. ಇಲ್ಲಿಗೆ ಆಷಾಢ ಮಾಸದ ಗಾಳಿಯ ಆರ್ಭಟ ಕಡಿಮೆಯಾಗಿ ಶ್ರಾವಣ ಮಾಸದ ...
-
ದೀನ ದಲಿತರ ಸೇವೆ ದೇವರ ದರ್ಶನಕ್ಕಿಂತ ಮಿಗಿಲು - ಜಗದೀಶ ಚಂದ್ರ ಬಿ ಎಸ್ - ಕಷ್ಟದಲ್ಲಿದ್ದವರಿಗೆ, ಅಸಹಾಯಕರಿಗೆ ಸಹಾಯ ಮಾಡಿದರೆ ಅದು ದೇವರ ದರ್ಶನಕ್ಕಿಂತ ಮಿಗಿಲು ಎಂಬ...