Saturday, May 31, 2025

Ee Sambhashane / Upendra Kumar / S Janaki / SPB / ವಿಜಯನಾರಸಿಂಹ/ ಕೀಬೋರ್ಡ್ ...


ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ

Ee Sambhashane (These are our conversations about love)

S Janaki, S P Balasubhramanyam; Music: Upendrakumar; Lyrics: Vijaya Naarasimha; Keyboard - Jagadeesha Chandra
ಎಸ್ ಜಾನಕಿ , ಎಸ್ ಪಿ ಬಾಲಸುಬ್ರಮಣ್ಯಂ; ಸಂಗೀತ: ಉಪೇಂದ್ರಕುಮಾರ್ ; ಸಾಹಿತ್ಯ: ವಿಜಯ ನಾರಸಿಂಹ / ಕೀಬೋರ್ಡ್: ಜಗದೀಶ ಚಂದ್ರ

Puttanna Kanagal is the director of the movie. S. Janaki and S. P. Balasubrahmanyam sing, and Upendrakumar composes the music. Beautiful lyrics have been written by Vijaya Naarasimha. Pure Kannada, the regional style, and Kannada combined with Sanskrit all have their own unique beauty while writing lyrics. Here, the "combination of Sanskrit and Kannada" style has added a certain grandeur. Srinath and Satyapriya, two lovers, sing this beautiful song. 
Their romance is a brand-new poem with a charming core. 
Like a river, the song's joy, excitement, and fantasy are reminiscent of the new wave and are gentle and delightful.
Their song is as beautiful as the spring blossom, as pure and delicate as the beauty wave.
As a result, this song's melody, lyrics, and singing style all work together to make it worth listening to multiple times. Music fans are delighted by Upendrakumar's exquisite adoption of the Mohana or Bhupali raga.


ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರ್ಮಸೆರೆ ಎಂಬ ಚಿತ್ರದ ಹಾಡು.  ಸಂಗೀತ ನಿರ್ದೇಶನ ಉಪೇಂದ್ರಕುಮಾರ್ ಅವರದ್ದು,  ಗಾಯನ ಎಸ್ ಜಾನಕಿ ಹಾಗು ಎಸ್ ಪಿ ಬಾಲಸುಬ್ರಮಣ್ಯಂ ಅವರದ್ದು. ವಿಜಯನಾರಸಿಂಹ ಅವರು ಸೊಗಸಾದ ಸಾಹಿತ್ಯ ನೀಡಿದ್ದಾರೆ. ಕನ್ನಡ ಭಾಷೆಗೆ ಅಚ್ಚಕನ್ನಡದಲ್ಲಿ,  ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಸಂಸ್ಕೃತ ಮಿಶ್ರಿತ ಕನ್ನಡದಲ್ಲಿ ತನ್ನದೇ ಆದ ಸೌಂದರ್ಯವಿರುತ್ತದೆ. ಇಲ್ಲಿ ಸಂಸ್ಕೃತ ಮಿಶ್ರಿತ ಕನ್ನಡವು ಪ್ರಯೋಗವಾಗಿ ಒಂದು ರೀತಿಯ ಗಾಂಭೀರ್ಯವನ್ನು ತಂದಿದೆ. ಇಬ್ಬರು ಪ್ರಣಯಿಗಳು, ಶ್ರೀನಾಥ್ ಮತ್ತು ಸತ್ಯಪ್ರಿಯ ಹಾಡುವ ಪ್ರಣಯ ಗೀತೆ ಇದು. 
ನಮ್ಮ ಪ್ರೇಮ ಸಂಭಾಷಣೆಯು ಹೊಸದಾಗಿಯೂ, ರಸಭರಿತ ಕಾವ್ಯದಂತೆಯೂ ಮಧುರವಾಗಿದೆ. 
ನಮ್ಮ ಹಾಡು ಗಾನ ಗಂಗೆಯಾಗಿ,  ಲಾಸ್ಯ,  ಹಾಸ್ಯದಿಂದಲೂ ಶೃಂಗಾರಭರಿತವಾಗಿ ಮಧುರವಾಗಿದೆ. 
ನಮ್ಮ ಈ ಹಾಡು ಅಬ್ಬರದ ಕಡಲಿನಂತೆ ಮೆರೆದು,  ಮೊರೆದು, ಹೊಸದಾದ ರಾಗಾಧಾರೆಯಂತೆ ಹರಿದು ಜೇನುತುಂಬಿದಂತಿದೆ. 
ನಮ್ಮ ಹಾಡು ಚೈತ್ರಮಾಸದ ಚಿಗುರಿನ ಚೆಲುವಂತೆ, ಸೌಂದರ್ಯದ ಅಲೆಯಂತೆ, ನಿರ್ಮಲವಾಗಿಯೂ,  ಕೋಮಲವಾಗಿಯೂ ಇದೆ. 
ಹೀಗೆ ಈ ಹಾಡಿನಲ್ಲಿ, ಗಾಯನ ಶೈಲಿ,  ಸಾಹಿತ್ಯ ಮತ್ತು ರಾಗಸಂಯೋಜನೆ ಎಲ್ಲವು ಮಿಳಿತವಾಗಿ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಮೋಹನ ಅಥವಾ ಭೂಪಾಲಿ ರಾಗವನ್ನು ಆಧರಿಸಿ ಉಪೇಂದ್ರಕುಮಾರ್ ಅವರು ಸೊಗಸಾದ ಹಾಡನ್ನು ಸಂಗೀತ ಪ್ರಿಯರಿಗೆ ನೀಡಿದ್ದಾರೆ. 

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ || ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ ಪ್ರೇಮ ಗಾನ ಕದಲಾಸ್ಯ ಮೃದುಹಾಸ್ಯ ಶೃಂಗಾರ ಭಾವ ಗಂಗ ಸುಂದರ ಸುಲಲಿತ ಮಧುರ ಮಧುರ ಮಧುರ ಧೀರ ಶರದಿ ಮೆರೆವಂತೆ ಮೊರೆವಂತೆ ಹೊಸ ರಾಗ ಧಾರೆಯಂತೆ ಮಂಜುಳ ಮಧುಮಯ ಮಧುರ ಮಧುರ ಮಧುರ ಚೈತ್ರ ತಂದ ಚಿಗುರಂತೆ ಚೆಲುವಂತೆ ಸೌಂದರ್ಯ ಲಹರಿಯಂತೆ ನಿರ್ಮಲ ಕೋಮಲ ಮಧುರ ಮಧುರ ಮಧುರ



Friday, May 30, 2025

Kannada enuvudu /ಕನ್ನಡ ಎನ್ನುವುದು ಜೀವನದಿ / ಎಚ್ ಎಸ್ ವೆಂಕಟೇಶಮೂರ್ತಿ /ಸಂಗೀತ -...


ಕನ್ನಡ ಎನ್ನುವುದು ಜೀವನದಿ 
ಎಚ್ ಎಸ್ ವೆಂಕಟೇಶಮೂರ್ತಿ  
ಸಂಗೀತ - ಆಶಾ ಬದರಿನಾಥ್ ಕೀಬೋರ್ಡ್ - ಜಗದೀಶ ಚಂದ್ರ 
Kannada enuvudu Jeevanadi / H S Venkatesha Murthy
Music - Asha Badarinath,  Keyboard - Jagadeesha Chandra

In this poem, H S V likens the Kannada language to a river that has forests and mountains on either side. He contrasts Karnataka's characteristics with those of well-known ancient poets. He likens Harihara to the water falls, Kumara Vyasa to the Mansoon rains, Ratnakara Varni to lakes with lotus blossoms, Pampa and Ranna to the heights, and Vachanakara to pleateau. He also talks about the other significant aspects of Karnataka, such as the rainy season over Sahyadri, the coastline region's beauty with its waves, and Mysore's well-known jasmine garland. He has made every effort to include the most significant aspects, despite the fact that it is impossible to include all of them in a single poem. The music includes a catchy melody composed by Smt. Asha Badarinath. I tried using my keyboard in the same style. 
ಇಲ್ಲಿ ವೆಂಕಟೇಶ ಮೂರ್ತಿ ಅವರು ಕರ್ನಾಟಕ ಹಾಗು  ಕನ್ನಡ ಭಾಷೆಯ ಅಭಿಮಾನವನ್ನು ಕವನದ ಮೂಲಕ ಹಂಚಿಕೊಂಡಿದ್ದಾರೆ. ಕನ್ನಡ ಭಾಷೆಯು ಒಂದು ಜೀವನದಿ ಇದ್ದಂತೆ,  ಎಂದಿಗೂ ಬತ್ತದು,  ಅದರ ಎರಡೂ ಬದಿಯಲ್ಲಿ ಸೊಗಸಾದ ಗಿರಿವನಗಳು ಹರಡಿಕೊಂಡಿವೆ ಎನ್ನುತ್ತಾರೆ. ಪಂಪ ರನ್ನರು ಕರ್ನಾಟಕದ ಮೇರು ಶಿಖರಗಳಾದರೆ,  ವಚನಕಾರರು ವಿಸ್ತಾರವಾದ ಬಯಲು ಪ್ರದೇಶದಂತೆ, ರತ್ನಾಕರವರ್ಣಿಯು ತಾವರೆಯ ಕೊಳದಂತೆ,  ಹರಿಹರನು ಧುಮುಕುವ ಜಲಪಾತದಂತೆ ಹಾಗೂ ಕುಮಾರವ್ಯಾಸನು ಮುಂಗಾರಿನ ಮಳೆಯಂತೆ ಕಾವ್ಯಧಾರೆಯನ್ನೇ ಹರಿಸಿದ್ದಾನೆ ಎನ್ನುತ್ತಾರೆ. ಕರ್ನಾಟಕದ ಸಹ್ಯಾದ್ರಿಯ ಮೇಲೆ ಸುರಿವ ಮಳೆ,  ಕರಾವಳಿಯಲ್ಲಿನ ಸಮುದ್ರ,  ಅದರ ಅಲೆಗಳು,  ಘಮಘಮ ಮೈಸೂರಿನ ಮಲ್ಲಿಗೆಯ ಹಾರ ಇವೆಲ್ಲವನ್ನೂ ಕವನದಲ್ಲಿ ಮೂಡಿಸಿ ಅಭಿಮಾನ ಮೆರೆದಿದ್ದಾರೆ.  ಇಡೀ ಕರ್ನಾಟಕದ ಎಲ್ಲ ಸೊಗಸನ್ನು ಒಂದು ಪುಟ್ಟ ಪದ್ಯದಲ್ಲಿ ತರಲು ಸಾಧ್ಯವಿಲ್ಲದಿದ್ದರೂ ಮುಖ್ಯವಾದ ಎಲ್ಲವನ್ನೂ ವರ್ಣಿಸಿದ್ದಾರೆ.  ಇದಕ್ಕೆ ಶ್ರೀಮತಿ ಆಶಾ ಬದರಿನಾಥ್ ಅವರು ಸುಶ್ರಾವ್ಯವಾದ ಸಂಗೀತವನ್ನು ಒದಗಿಸಿದ್ದಾರೆ.  ಅದನ್ನೇ ನಾನು ಕೀಬೋರ್ಡ್ ನಲ್ಲಿ ನುಡಿಸಲು ಪ್ರಯತ್ನಿಸಿದ್ದೇನೆ.  

ಕನ್ನಡ ಎನ್ನುವುದು ಜೀವನದಿ   ಗಿರಿವನ ಸಂಪದ ಎಂಬುದು ಎರಡು ಬದಿ 
ಆ ಆ ಆ s s s  ...   ಆ ಆ ಆ s s s  ... ಆ ಆ ಆ s s s  ...//
ಪಂಪ ಮಹಾಚಲ ಜೋಡಿ ಶಿಖರಗಳು  ರನ್ನನ ಉನ್ನತ ಧವಳಗಿರಿ 
ಶಿವಶರಣರ ವಿಸ್ತಾರದ ಬಯಲು  ಧುಮ್ಮಿಕ್ಕುವ ಹರಿಹರನ ಝರಿ 
ಧುಮ್ಮಿಕ್ಕುವ ಹರಿಹರನ ಝರಿ  ಆ ಆ ಆ s s s  .... //
ಸುಳಿ ಮಿಂಚಿನ ಸೆಳೆ ಮುಂಗಾರಿನ ಮಳೆ   ಕುಮಾರವ್ಯಾಸನ ರಸಧಾರೆ 
ಎದೆಯಗಲಕು ಕೆಂದಾವರೆ ಅರಳಿದ  ಕವಿವರ ರತ್ನಾಕರನ ಕೆರೆ ಆ ಆ ಆ s s s  ...//
ಸಹ್ಯಾದ್ರಿಯ ಮಲೆ  ಧಾರಾಪುರಿ ಹೊಳೆ  ಕಡಲ ತಡಿಯ ಘನ ವಿಸ್ತಾರ 
ಮಲೆ ಘಟ್ಟದ ತುದಿ  ಕಡಲಿನ ಅಬ್ಬರ  ಮೈಸೂರಿನ ಮಲ್ಲಿಗೆ ಹಾರ 
ಮೈಸೂರಿನ ಮಲ್ಲಿಗೆ ಹಾರ    ಆ ಆ ಆ s s s  ...//

Wednesday, May 28, 2025

Dehake Usire / Salil Choudhary / SPB & Anita Choudhary/ Keyboard - Jagad...


ದೇಹಕೆ ಉಸಿರೇ ಸದಾ ಭಾರಾ / Body is valuable as long as it can breathe

ಚಿತ್ರ - ಚಿನ್ನ ನಿನ್ನ ಮುದ್ದಾಡುವೆ / ಸಂಗೀತ - ಸಲೀಲ್ ಚೌಧರಿ / ಗಾಯಕರು - ಎಸ್ ಪಿ ಬಿ ಮತ್ತು ಅನಿತಾ ಚೌಧರಿ / ಸಾಹಿತ್ಯ - ಆರ್ ಏನ್ ಜಯಗೋಪಾಲ್ / ಕೀಬೋರ್ಡ್ - ಜಗದೀಶ ಚಂದ್ರ 

Film: Chinna Ninna Muddaduve; Music: Salil Choudhary; Singers: SPB & Anita Choudhary; Lyrics: R N Jayagopal; Keyboard: Jagadeesha Chandra

RN Jayagopal has penned a song to open the hearts of the impoverished people who were born into this earth. The music was composed by Salil Chowdhury. Raga Natabhairav and Keeravani make a lovely combination. Here, you can enjoy the flavour of harmonium and singing without the noisy background instruments. The song is rendered by Anitha Chowdary and SP Balasubrahmanyam. The titular characters are Indira and Ambareesh. This is a song that people who rely on charity by a girl dancing to it and singing catchily in the streets sing. 

The body is valuable as long as it can breathe. The impoverished also view their possessions, jewellery, and gold as a source of self-worth. 

Despite the wind, the life lamp continues to glow. Desire and hope endure even when poverty causes the tears to dry up. 

No one in this world is impoverished, according to what the Creator has said. When God sees the inequality of our own creation—the rich and the poor—he laughs. 

There is so much poverty that the impoverished use threads from outdated clothing. They continue to live a challenging existence in the hopes of finding happiness.

ಈ ಲೋಕದಲ್ಲಿ ಹುಟ್ಟಿದ ಬಡವರ ಮನದಾಳದ ಮಾತನ್ನು ಹಾಡಿನ ರೂಪದಲ್ಲಿ ತೆರೆದಿಟ್ಟಿದ್ದಾರೆ, ಆರ್ ಏನ್ ಜಯಗೋಪಾಲ್ ಅವರು. ಸಾಹಿತ್ಯಕ್ಕೆ ಸಮನಾಗಿ ಸಲೀಲ್ ಚೌಧರಿ ಅವರು ಸೊಗಸಾದ ಸಂಗೀತ ಒದಗಿಸಿದ್ದಾರೆ. ರಾಗ ನಟಭೈರವ್ ಹಾಗೂ ಕೀರವಾಣಿ ರಾಗಗಳ ಮಿಶ್ರಣದ ರಾಗ ಮನಮೋಹಕವಾಗಿದೆ. ಅಬ್ಬರದ ಹಿನ್ನೆಲೆ ವಾದ್ಯಗಳಿಲ್ಲದೆ ಗಾಯನ, ಹಾಗೂ ಹಾರ್ಮೋನಿಯಂ ವಾದ್ಯದ ಸವಿಯನ್ನು ಇಲ್ಲಿ ಸವಿಯಬಹುದು. ಹಾಡಿರುವ ಕಲಾವಿದರು ಎಸ್ ಪಿ ಬಾಲಸುಬ್ರಮಣ್ಯಂ ಹಾಗು ಬಾಲ ಕಲಾವಿದೆ ಅನಿತಾ ಚೌಧರಿ ಅವರು. ನಟನೆ ಅಂಬರೀಷ್ ಹಾಗೂ ಬಾಲನಟಿ ಇಂದಿರಾ ಅವರು. ರಸ್ತೆಗಳಲ್ಲಿ ಸುಶ್ರಾವ್ಯವಾಗಿ ಹಾಡುತ್ತ ಅದಕ್ಕೆ ತಕ್ಕಂತೆ ಬಾಲಕಿಯೊಬ್ಬಳು ನರ್ತಿಸುತ್ತಾ ಅದರಿಂದ ಸಿಗುವ ಭಿಕ್ಷೆಯಿಂದ ಜೀವನ ಸಾಗಿಸುವವರು ಹಾಡುವ ಹಾಡು ಇದು.

ದೇಹಕ್ಕೆ ಉಸಿರಿದ್ದರೆ ಬೆಲೆ ಇಲ್ಲವಾದಲ್ಲಿ ಅದಕ್ಕೆ ಬೆಲೆಯೇ ಇಲ್ಲ. ಹಾಗೆಯೆ ಬಡವರಾದರೂ ಅವರಿಗೆ ಸ್ವಾಭಿಮಾನವೇ ಆಸ್ತಿ, ಒಡವೆ ಬಂಗಾರ ಎಲ್ಲವು.

ಗಾಳಿ ಇದ್ದರೂ ಬದುಕೆಂಬ ಹಣತೆ ಉರಿಯುತ್ತಲೇ ಇರುತ್ತದೆ. ಹಾಗೆಯೆ ಕಣ್ಣೀರು ಬತ್ತಿಹೋದರೂ ಆಸೆ ಎಂಬುದು ಚಿಗುರುತ್ತಲೇ ಇರುತ್ತದೆ.

ಈ ಲೋಕದಲ್ಲಿ ಯಾರೂ ಬಡವರಲ್ಲ, ಯಾರೂ ಶ್ರೀಮಂತರಲ್ಲ ಎಂದು ಸೃಷ್ಟಿಕರ್ತ ಬರೆದರೂ ನಾವೇ ಬೇಧಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ನೋಡಿ ಮೇಲೆ ಕುಳಿತ ಭಗವಂತ ನಗುತ್ತಾನೆ.

ಬಟ್ಟೆ ಹರಿದರೂ ಅದರಿಂದ ಸಿಗುವ ದಾರವನ್ನು ಉಪಯೋಗಿಸುವಷ್ಟು ಬಡವರು ಇದ್ದಾರೆ. ಹುಟ್ಟಿದ ಮೇಲೆ ಬದುಕಲೇ ಬೇಕು ಬದುಕನ್ನು ಹಸನಾಗಿಸಬೇಕು ಎಂಬ ಆಸೆಯಿಂದ ಕಷ್ಟ ಪಟ್ಟು ಬದುಕುತ್ತಾರೆ.


ದೇಹಕೇ ಉಸಿರೇ.. ಸದಾ ಭಾರ ಇಲ್ಲ ಆ..ಧಾ...ರ sss
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ //
ಬದುಕಿನ ಹಣತೆ ಗಾಳಿಯಲ್ಲು ಉರಿದಿದೇ ಏಕೋ
ಬತ್ತಿದಾ ಕಣ್ಣೀರಲೂ ಆಸೆ ಇದೆ ಇನ್ನೇಕೋ //
ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ
ಬಡವ ಶ್ರೀಮಂತರ ಮಾಡಿದವರು ನಾ..ವೇನೇ..//
ಹರಿದ ಉಡುಪಿಂದ ನೂಲ ತೆಗೆದು ಹೊಲಿವ ಬಡವ ತಾನೇ
ಬದುಕ ಬೇಕಾ..ಗಿದೆ ಬದುಕುವೆವು ಹೀಗೇನೇ //

+6 Sa Ballad3D Spd115 Vol35 St20 A3

Sunday, May 25, 2025

Aluvudyatako Ranga / Purandaradasaru /ಅಳುವುದು ಯಾತಕೊ ರಂಗ / ಪುರಂದರದಾಸರು


ಅಳುವುದು ಯಾತಕೊ ರಂಗ / ಪುರಂದರದಾಸರು
Aluvudyatako Ranga (Ranga, why are you crying?) / Purandaradasaru
Purandaradasa states that this devotional song was composed in honour of Beluru Chennakesava. This serves as both a lullaby and a way to comfort the weeping Balakrishna. The song's lyrics describe the birth of Krishna, his early years spent with Yashoda, and the miracle he accomplished. Purandara Dasa asks whether he experienced any bad visions for his bravery, if he fractured his leg dancing on the snake Kalinga, if he hurt his finger raising Govardhan Hill, etc. These were all from his childhood adventures. Purandara Dasa wonders if the factors mentioned above are the source of his tears.

ಬೇಲೂರಿನ ಚೆನ್ನಕೇಶವ ದೇವರ ಮೇಲೆ ಪುರಂದರದಾಸರು ಬರೆದಿರುವ ದೇವರನಾಮ ಇದು. ಆದರೆ ಈ ದೇವರನಾಮವನ್ನು ಜೋಗುಳವನ್ನಾಗಿ ಮಾಡಿ, ಹಾಗೆಯೇ ಅಳುವ ಬಾಲಕೃಷ್ಣನನ್ನು ಸಮಾಧಾನ ಮಾಡುವ ಹಾಡನ್ನಾಗಿಯೂ ಪರಿವರ್ತಿಸಿದ್ದಾರೆ. ಈ ಮೂಲಕ ಕೃಷ್ಣನ ಹುಟ್ಟು, ಯಶೋದೆಯ ಬಳಿ ಕಳೆದ ಬಾಲ್ಯದಿನಗಳು, ಪುಟ್ಟ ಮಗುವಾಗಿ ಮಾಡಿದ ಪವಾಡ ಎಲ್ಲವನ್ನು ಚಿತ್ರಿಸಿದ್ದಾರೆ. ಈ ಬಾಲ್ಯದ ಕಾಲದಲ್ಲಿ ಮಾಡಿದ ಸಾಹಸ ಕೃತ್ಯಗಳಿಂದ ದೃಷ್ಟಿ ತಾಕಿತೇ, ಕಾಳಿಂಗನ ಮೇಲೆ ನರ್ತಿಸಿದುದಕ್ಕೆ ಕಾಲು ಉಳುಕಿತೇ, ಗೋವರ್ಧನ ಗಿರಿಯನ್ನು ಬೆರಳಲ್ಲಿ ಎತ್ತಿದುದಕ್ಕೆ ಬೆರಳು ನೋವಾಯಿತೇ ಎಂದು ಪ್ರಶ್ನಿಸಿ ಅದಕ್ಕಾಗಿ ಅಳುತ್ತಿರುವಿಯೇನೋ ಎಂದು ಕೇಳುತ್ತಾರೆ. ಸಮಯದ ಅಭಾವದಿಂದಾಗಿ ಮೂರು ಚರಣಗಳನ್ನು ನುಡಿಸಿಲ್ಲ. ನುಡಿಸಿರುವ ಉಳಿದ ಚರಣದಂತೆಯೇ ಅದನ್ನೂ ಹಾಡಬಹುದು.

ಅಳುವದು ಯಾತಕೊ ರಂಗಾ | ಅತ್ತರೆ ಅಂಜಿಸುವನೋ ಗುಮ್ಮಾ |ಪ| ಜೋ ಜೋ ಜೋ ಜೋ ಪುಟ್ಟಿದ ಏಳು ದಿನದಲ್ಲಿ ಕೊಂದೆ ದುಷ್ಟ ಪೂತನಿಯಾ /
ವಿಷ ಮೊಲೆ ಹಾಲನು ಉಂಡಾ ಕಾರಣ ದೃಷ್ಟಿ ಯು ತಾಕಿತೆ ಕಂದಯ್ಯ // ಜೋ ಜೋ ಜೋ ಜೋ ಶರಣು ವೇಲಾಪುರದ ಚೆಲುವ ಚೆನ್ನಿಗರಾಯ /
ಶರಣರ ಸಲಹುವ ದೊರೆ ನೀನಲ್ಲವೇ ಪುರಂದರ ವಿಠಲ ಗೋವಿಂದ // ಜೋ ಜೋ ಜೋ ಜೋ ಈ ಚರಣಗಳನ್ನು ನುಡಿಸಿಲ್ಲ ಬಾಲ್ಯದಿ ಗೋಪಾಲರ ಒಡಗೂಡಿ ಕಾಳಿಂಗನ ಮಡುವನ್ನೂ ಕಲಕಿದ ಕಾರಣ | ಕಾಲು ಉಳುಕಿತೆ ರಂಗಯ್ಯ // ತುರುವ ಕಾಯಲು ಪೋಗಿ | ಭರದಿಂದ ಮಳೆಗೆರೆಯೆ ಬೆರಳಲ್ಲಿ ಬೆಟ್ಟವನೆತ್ತಿದ ಕಾರಣ | ಬೆರಳು ಉಳುಕಿತೇ ಕಂದಯ್ಯ // ವಸುದೇವ ಸುತನಾಗಿ | ಅಸುರರನೂ ಮರ್ದಿಸಿದೆ ಬಸುರಲಿ ಬೊಮ್ಮನ ಪಡೆದ ಕಾರಣ | ಕಿಸರು ತಾಕಿತೆ ರಂಗಯ್ಯ // +9 T280 L291 R65 spd85

Saturday, May 24, 2025

 ದೀನ ದಲಿತರ ಸೇವೆ ದೇವರ ದರ್ಶನಕ್ಕಿಂತ ಮಿಗಿಲು 

- ಜಗದೀಶ ಚಂದ್ರ ಬಿ ಎಸ್ -

ಕಷ್ಟದಲ್ಲಿದ್ದವರಿಗೆ, ಅಸಹಾಯಕರಿಗೆ ಸಹಾಯ ಮಾಡಿದರೆ ಅದು ದೇವರ ದರ್ಶನಕ್ಕಿಂತ ಮಿಗಿಲು ಎಂಬುದು ಈ ಕಥೆಯ ಸಾರಾಂಶ. ಎಲ್ಲ ಧರ್ಮಗಳೂ ಇದನ್ನೇ ಸಾರುತ್ತವೆ. ಇಷ್ಟಾದರೂ ಇನ್ನೂ ಉಗ್ರರು, ಭಯೋತ್ಪಾದನೆ, ರಾಜಕೀಯ ದ್ವೇಷ ಇವೆಲ್ಲವೂ ಶ್ರೀಸಾಮಾನ್ಯನನ್ನು ತತ್ತರ ಗೊಳಿಸುತ್ತಿವೆ. ಇಂಥವರಿಗೆ ಇಂತಹ ಸರಳ ಸತ್ಯ ಎಂದಿಗೆ ಅರಿವಾಗುತ್ತದೋ ದೇವರೇ ಬಲ್ಲ. 

ಈ ಹಿಂದೆ ವಾಟ್ಸಾಪ್ ನಲ್ಲಿ, ಕಷ್ಟದಲ್ಲಿದ್ದವರಿಗೆ, ಅಗತ್ಯವಿದ್ದವರಿಗೆ ಸಹಾಯ ಮಾಡುವುದು ದೇವರಲ್ಲಿ ಭಕ್ತಿ ತೋರಿಸಿದಂತೆ ಎಂಬ ಒಂದು ಸಂದೇಶ ಬಂತು. ನಾನು ಅದಕ್ಕೆ ಉತ್ತರಿಸಿ ಲಿಯೋ ಟಾಲ್ಸ್ಟಾಯ್ ಅವರ ಕಥೆಯೊಂದನ್ನು ನೆನಪಿಸಿದ್ದೆ. ಅದಕ್ಕೆ ನನ್ನ ಸಹಪಾಠಿ ಸನ್ಮತಿ ಉತ್ತರಿಸಿ ನನಗೆ ಆ ಕಥೆಯ ಬಗ್ಗೆ ತಿಳಿದೇ ಇಲ್ಲ ಎಂದಿದ್ದಳು. ಆಗ ನಾನು ಆ ಕಥೆಯನ್ನು ಅವಳಿಗೆ ಕಳಿಸಬೇಕು ಎಂದುಕೊಂಡೆ. ಅಷ್ಟು ದೊಡ್ಡ ಕಥೆಯನ್ನು ಕಳಿಸುವ ಬದಲು ನಾನೇ ಏಕೆ ಅದನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ಬರೆಯಬಾರದು ಎನ್ನಿಸಿತು. ಆ ಕಥೆಯನ್ನು ಕನ್ನಡಲ್ಲಿ ಬರೆಯಬೇಕೆಂಬ ಅಸೆ ಮುಂಚಿನಿಂದಲೂ ಇತ್ತು. ಈ ನೆಪದಲ್ಲಿ ಆ ಕಥೆಯ ಸಾರಾಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಸಂಸ್ಕೃತಿಗೆ ಹೊಂದುವಂತೆ ಬರೆದೆ. ಆದರೆ ಅದನ್ನು ಕಳಿಸುವಷ್ಟರಲ್ಲಿ ಸನ್ಮತಿ ಈ ಲೋಕವನ್ನು ಬಿಟ್ಟು ಹೋಗಿದ್ದಳು. 

ಇಂದು ಅದೇ ಕಥೆಯನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ, ಸ್ನೇಹಿತೆ ಸನ್ಮತಿಯ ನೆನಪಿನೊಂದಿಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, 


ನಾನು ಹೇಳುತ್ತಿರುವುದು ಸುಮಾರು ಎಂಭತ್ತು ವರ್ಷಗಳ ಹಿಂದಿನ ಕಥೆ. ಆಗ ಕಾಲ ಇಂದಿನಷ್ಟು ಮುಂದುವರೆದಿರಲಿಲ್ಲ.

ಬೆಂಗಳೂರಿನ ಬಳಿಯ ಊರೊಂದರಲ್ಲಿ ರಾಮಪ್ಪ, ಭೀಮಪ್ಪ ಎಂಬ ಇಬ್ಬರು ಹಿರಿಯರು ವಾಸಿಸುತ್ತಿದ್ದರು. ರಾಮಪ್ಪ ಶ್ರೀಮಂತ, ಬೇಕಾದಷ್ಟು ಭೂಮಿ ಇತ್ತು. ಹಾಗೆಂದು ಹಣದ ಮದವಿರಲಿಲ್ಲ, ಜೊತೆಗೆ ಬಹಳ ದೈವ ಭಕ್ತ. ದಯಾಳು. ಅವನ ಮಿತ್ರನಾದ ಭೀಮಪ್ಪ ಅಂತ ಸ್ಥಿತಿವಂತನೇನೂ ಅಲ್ಲ. ತಿನ್ನಲು ಉಣ್ಣಲು ಕೊರತೆ ಇರಲಿಲ್ಲ. ಅವನೂ ಸಹ ದೈವಭಕ್ತ, ಕರುಣಾಳು. ಈ ರಾಮಪ್ಪ ಭೀಮಪ್ಪ ಇಬ್ಬರಿಗೂ ಒಂದು ಅಸೆ ಇತ್ತು. ಅದೇನೆಂದರೆ "ಕಾಲ್ನಡಿಗೆಯಲ್ಲಿ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರಬೇಕು" ಎಂದು. ಆಗ ತಿರುಪತಿಗೆ ಹೋಗಬೇಕು ಎಂದರೆ ಇಂದಿನಂತೆ ಕಾರು, ಬಸ್ಸು ಇರುತ್ತಿರಲಿಲ್ಲ. ದುಡ್ಡಿದ್ದವರಿಗೆ ಎತ್ತಿನ ಗಾಡಿ, ಇಲ್ಲದವರಿಗೆ ಕಾಲ್ನಡಿಗೆ. ನಡೆದು ಹೋಗುವವರು ಕನಿಷ್ಠ ಬಟ್ಟೆ ಬರೆ, ಪಾತ್ರೆ ಗಳನ್ನೂ ಇಟ್ಟುಕೊಂಡು ದಾರಿಯಲ್ಲಿ ತಂಗುತ್ತಾ ಸಾಗುತ್ತಿದ್ದರು. ಕಡೆಗೂ ರಾಮಪ್ಪ, ಭೀಮಪ್ಪನ ಅಸೆ ಈಡೇರುವ ಕಾಲ ಬಂತು. ಇಬ್ಬರೂ ತಿರುಪತಿಗೆ ಹೊರಟರು.

ರಾಮಪ್ಪನ ಬಳಿ ಸಾಕಷ್ಟು ಹಣ ಇತ್ತು. ಭೀಮಪ್ಪ ಸ್ವಲ್ಪವೇ ಹಣ ಇಟ್ಟುಕೊಂಡು ಹೊರಟಿದ್ದ. ಕಾಲ್ನಡಿಗೆ ಯಲ್ಲಿ ಸಾಗುವಾಗ ದಾರಿಯಲ್ಲಿ ಸಂಜೆಯ ವೇಳೆ ಸಿಗುವ ಹಳ್ಳಿಯಲ್ಲಿ ಅವರು ತಂಗುತ್ತಿದ್ದರು. ಹಾಗೆಯೆ ಅಲ್ಲಿನ ಬಡಬಗ್ಗರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಆಗ ಇಂದಿನಂತೆ ಹೋಟೆಲ್ಗಳು ಇರುತ್ತಿರಲಿಲ್ಲ. ಮನೆಯವರೂ ಉದಾರವಾಗಿ ಅತಿಥಿಗಳಿಗೆ ಊಟ ನೀಡುತ್ತಿದ್ದರು. ಅದರಲ್ಲೂ ತಿರುಪತಿಗೆ ಹೊರಟಿದ್ದಾರೆ ಎಂದರೆ ಅವರಿಗೆ ಇನ್ನೂ ಹೆಚ್ಚಿನ ಮರ್ಯಾದೆ ಕೊಡುತ್ತಿದ್ದರು. ದುಡ್ಡಿದ್ದವರು ತಮ್ಮಲ್ಲಿದ್ದ ಸ್ವಲ್ಪ ಹಣವನ್ನು ಹಳ್ಳಿಯ ಜನರಿಗೆ ಇನ್ಯಾವುದೋ ರೂಪದಲ್ಲಿ ಹಿಂತಿರುಗಿಸುತ್ತಿದ್ದರು. ಹೀಗೆ ರಾಮಪ್ಪ, ಭೀಮಪ್ಪ ಇಬ್ಬರ ಪ್ರಯಾಣ ಸುಖವಾಗಿ ಸಾಗಿತ್ತು.

ಅವರು ಹೀಗೆಯೇ ಮುಂದೆ ಸಾಗಿದಾಗ ಸಂಜೆ ಸಿಕ್ಕಿದ ಒಂದು ಸಣ್ಣ ಹಳ್ಳಿಯಲ್ಲಿ ಬಹಳ ಬಡತನ ಇತ್ತು. ಬದುಕು ನಡೆಸಲು ಜನ ಕಷ್ಟ ಪಡುತ್ತಿದ್ದರು. ಇದನ್ನು ಕಂಡ ರಾಮಪ್ಪ ಭೀಮ್ಮಪ್ಪ ಇಬ್ಬರಿಗೂ ಮನ ಕರಗಿತು. ತಮ್ಮ ಹಣದಿಂದ ತಾವೇ ಬೇರೆಕಡೆಯಿಂದ ಊಟ ತರಿಸಿ ಸಹಾಯ ಮಾಡಿದರು ಆದರೆ ಎಷ್ಟು ದಿನ ಮಾಡಲು ಸಾಧ್ಯ? ರಾಮಪ್ಪ ತಾನು ಮುಂದೆ ಹೊರಡುವೆ ಎಂದು ನಿರ್ಧರಿಸಿದ. ಆದರೆ ಭೀಮಪ್ಪನಿಗೆ ಅಲ್ಲಿನ ಜನರ ಬಡತನ ಕಂಡು ಕಣ್ತುಂಬಿ ಬಂದಿತ್ತು. ಅವನು ನಾನು ಇನ್ನೂ ಸ್ವಲ್ಪ ದಿನ ಇಲ್ಲೇ ಇದ್ದು ಬರುವೆ ಎಂದ. ರಾಮಪ್ಪನಿಗೆ ತನ್ನ ಬಳಿ ಇದ್ದ ಸ್ವಲ್ಪ ಹಣವನ್ನು ಕೊಟ್ಟು ಇದನ್ನು ತಿರುಪತಿ ತಿಮ್ಮಪ್ಪನಿಗೆ ತಲುಪಿಸಿಬಿಡು, ನಾನೂ ಸಾಧ್ಯವಾದರೆ ಬರುತ್ತೇನೆ, ಎಲ್ಲವೂ ದೈವೇಚ್ಛೆ ಯಂತೆ ಆಗುತ್ತದೆ ಎಂದ. ರಾಮಪ್ಪ ತಿರುಪತಿಗೆ ಹೊರಟ, ಭೀಮಪ್ಪ ಅಲ್ಲಿಯೇ ನಿಂತ.

ಭೀಮಪ್ಪ ಆ ಹಳ್ಳಿಯಲ್ಲಿಯೇ ಇದ್ದು ಜನಕ್ಕೆ ಅನೇಕ ಉಪಯುಕ್ತ ಕೆಲಸಗಳನ್ನು ಹೇಳಿಕೊಟ್ಟು, ಅವರಿಗೆ ಗೊತ್ತಿಲ್ಲದ ಅನೇಕ ಸಲಹೆಗಳನ್ನು ಹೇಳಿಕೊಟ್ಟ. ತಾನು ಇದ್ದ ಮನೆಯವರೆಲ್ಲ ಆರೋಗ್ಯವಂತರಾಗುವವರೆಗೂ ಅವರನ್ನು ನೋಡಿಕೊಂಡ. ಅವರಿಗೂ ಅನೇಕ ಉಪಯುಕ್ತ ಸಲಹೆಗಳನ್ನು ಹೇಳಿಕೊಟ್ಟು ತನ್ನ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ. ಇಷ್ಟೆಲ್ಲಾ ಮಾಡುವ ವೇಳೆಗೆ ಹಲವಾರು ದಿನಗಳು ಕಳೆದಿದ್ದವು. ಅವನ ಬಳಿ ಇದ್ದ ಹಣವೂ ಖಾಲಿಯಾಗಿ ತಿರುಪತಿಗೆ ಹೋಗುವ ಕನಸು ಕನಸಾಗಿಯೇ ಉಳಿಯಿತು. ರಾಮಪ್ಪ ತಾನು ಕೊಟ್ಟ ಹಣವನ್ನು ದೇವರಿಗೆ ಕೊಟ್ಟಿರುತ್ತಾನೆ, ತಿರುಪತಿಗೆ ಹೋಗುವ ನೆಪದಲ್ಲಿ ತಾನು ಬಡವರಿಗೆ ಸಹಾಯ ಮಾಡಿದೆನಲ್ಲ ಅಷ್ಟೇ ಸಾಕು ಎಂದು ತನ್ನ ಊರಿಗೆ ಹೊರಟ.

ಊರಿಗೆ ಹೋದಾಗ ರಾಮಪ್ಪ ತಿರುಪತಿ ಪ್ರವಾಸ ಮುಗಿಸಿಕೊಂಡು ಬಂದಿದ್ದ. ಭೀಮಪ್ಪ ನನ್ನು ಕಂಡು "ನೀನು ತಿರುಪತಿಯಿಂದ ಈಗ ಬರುತ್ತಿದ್ದೀಯಾ?" ಎಂದ. ಆಗ ಭೀಮಪ್ಪ ನಡೆದ ಕತೆಯನ್ನೆಲ್ಲಾ ಹೇಳಿದ. ಆಗ ರಾಮಪ್ಪ "ದೇವರ ದರ್ಶನ ಮುಖ್ಯ, ಅದು ಬಿಟ್ಟು ನೀನು ಅಲ್ಲೇ ಏಕೆ ಉಳಿದೆ, ಅವರನ್ನು ಬಿಟ್ಟು ಬಂದುಬಿಡಬೇಕಿತ್ತು" ಎಂದ. ಆಗ ಭೀಮಪ್ಪ "ದೇವರ ದರ್ಶನದ ಭಾಗ್ಯ ನನಗಾಗಲಿಲ್ಲ, ಆದರೆ ಬಡವರ ಸೇವೆ ಮಾಡಲು ಕಲ್ಪಿಸಿಕೊಟ್ಟ ಆ ದೇವರಿಗೆ ನಾನು ಸದಾ ಋಣಿ" ಎಂದ. ರಾಮಪ್ಪ ನಕ್ಕ, ಆದರೆ ಭೀಮಪ್ಪ ನಗಲಿಲ್ಲ, ಮನದಲ್ಲೇ ತಿರುಪತಿ ತಿಮ್ಮಪ್ಪನಿಗೆ ಕೈ ಮುಗಿದ. 


A HELPING HAND IS MORE THAN JUST GOD'S DARSHAN 

– B S Jagadeesha Chandra

The Darshan of God is just one aspect of helping the poor and defenceless. This is the main idea of the narrative. All religions say the same thing, so why do we still have terrorists, retaliation, and religious conflicts? When will these problematic individuals be reached by this straightforward solution? 

I wrote this tale for Architect Sanmathy, a classmate and close friend. We kept in touch with our WhatsApp group. I once brought up Leo Tolstoy's narrative when someone spoke about the value of helping the poor. I was unable to share the original tale with her, and she was unaware of it. Rather than translating the story exactly, I wrote a brief Kannada version. Unfortunately, she passed away before I could send her the same story. 

This story is being presented in memory of my friend Sanmathy, in Kannada and English

I am recounting an incident that occurred almost eight decades ago.  Our nation was not as developed at the time as it is now.

 The town where Ramappa and Bhimappa lived was close to Bangalore.  Ramappa was wealthy, unconcerned with money, and an ardent devotee of God.  Bhimappa, his ally, was an ordinary person—not particularly wealthy, but also not impoverished.  He was a kind and spiritual man.

The goal of both Ramappa Bhimappa's lives was "to visit Tirupati on foot and make a Darshan of God."  Travelling to Tirupati was one of the most difficult tasks at the time.  One needs to make savings enough cash and clothes.  Only the wealthy used to travel on bullock carts because there were not any automobiles.  In the past, people who preferred to walk would stop at villages along the route.  Villagers were also quite courteous and used to pay extra attention to pilgrims travelling to Tirupati.  The time has finally come to grant Ramappa and Bhimappa their aspirations.  They headed out on their pilgrimage.

Because he was wealthy, Ramappa had plenty of money, while Bhimappa just kept a small amount.  On their journey, they would spend the night in locales.  They used to aid the underprivileged in communities as part of their pilgrimage.   Hotels did not exist as they do now.  The guests were lavishly fed by farmers.  Those who could afford it were giving back a portion of their service fees.  Consequently, Ramappa and Bhimappa's travel proceeded successfully.

They chose to rest when they arrived at a little settlement in the late evening.  The village was in dreadful shape, and the residents were struggling for their lives.  In exchange for donating some cash, Ramappa and Bheemappa were able to obtain some food.  Ramappa prepared to start his journey the following day because his goal was to reach Tirupathi.  However, Bheemappa was deeply moved by the villagers' plight and made the decision to remain for a few more days in order to assist them.  Ramappa received a sum of money from Bheemappa for offering to God on his behalf.  Bheemappa remained in the village when Ramappa left.

It brought Bheemappa joy to serve those impoverished villagers.  He helped sick people recover, provided them lifestyle advice, and encouraged them to take charge of their own lives.  After a few days, the villagers were much better thanks to Bheemappa's assistance.  His desire of visiting Thirupathi was not realised since he used the majority of his leftover funds to help the locals.

Ramappa was already at his village when he returned.  He made the pilgrimage to Thirupathi successfully.  He accused Bheemappa of remaining in that impoverished area after learning that he had not travelled to Thirupathi.  He informed Bheemappa that the most important thing is God's darshan.  However, Bheemappa never felt regret because, in his view, helping the underprivileged was far more important than receiving God's blessing.  He presented his Pranams to God Thimmappa of Thirupathi and conveyed a heartfelt thanks to God for providing the chance to help the underprivileged.


Friday, May 23, 2025

ಹಂಚಿ ತಿನ್ನೋಣ , Let's eat and share

 

ಹಂಚಿ ತಿನ್ನೋಣ - ಜಗದೀಶ ಚಂದ್ರ ಬಿ ಎಸ್ -

"ಅಮ್ಮ ಇಂದು ನೀನು ಕೊಟ್ಟ ತಿಂಡಿಯನ್ನು ನಾನೊಬ್ಬಳೆ ತಿಂದು ಬಿಟ್ಟೆ. ಅದು ತುಂಬಾ ಚೆನ್ನಾಗಿತ್ತು, ಅದಕ್ಕೆ ನಾನು ಯಾರಿಗೂ ಕೊಡಲೇ ಇಲ್ಲ" ಎಂದು ಪುಟ್ಟಿ ಮುಗ್ಧವಾಗಿ ನಿಜ ಹೇಳಿದಾಗ, ಅಮ್ಮ, "ಕಂದ ಕೊಟ್ಟಿದ್ದನ್ನು ಹಂಚಿಕೊಂಡು ತಿನ್ನಬೇಕು, ನಿಜ ಹೇಳಿದೆಯಲ್ಲ ಜಾಣೆ ನೀನು" ಎಂದು ಹೇಳಿದಳು.

ಇನ್ನೊಂದು ದಿನ, ಮನೆಯಲ್ಲಿ ಕೆಲಸದವಳ ಮಗು ಹಸಿವು ಹಸಿವು ಎಂದು ಅವಳ ಅಮ್ಮನನ್ನು ಕಾಡುತ್ತಿತ್ತು. ಮನೆಯಲ್ಲಿ ತಿಂಡಿ ಬೇಕಾದಷ್ಟು ಇದ್ದರೂ ಅಮ್ಮ ಸುಮ್ಮನೆ ಇದ್ದಾಳಲ್ಲ ಎಂದು ಪುಟ್ಟಿ ಯೋಚಿಸಿ, ಅಮ್ಮನ ಬಳಿ ಹೋಗಿ, "ಅಮ್ಮ ಇಂದು ನನಗೆ ತಿಂಡಿಯನ್ನು ಡಬ್ಬಿಯಲ್ಲಿ ಹಾಕಿಕೊಡು, ನಾನು ತಿನ್ನಬೇಕು" ಎಂದಳು. ಅಮ್ಮ "ಇಂದು ರಜಾ, ಡಬ್ಬಿ ಏಕೆ" ಎಂದಾಗ, ಪುಟ್ಟಿ "ನೀನು ಡಬ್ಬಿಯಲ್ಲಿ ಕೊಟ್ಟರೆ ತಾನೆ ಹಂಚಿಕೊಂಡು ತಿನ್ನುವುದು, ಅದಕ್ಕೆ ನನಗೆ ಡಬ್ಬಿಯಲ್ಲೇ ಬೇಕು" ಎಂದು ಹಠ ಮಾಡಿದಳು. "ಸಧ್ಯ ತಾನೇ ಕೇಳಿ ತಿಂಡಿ ತಿನ್ನಲು ಒಪ್ಪಿದ್ದಾಳಲ್ಲ, ನೋಡೋಣ, ತಿಂಡಿಯನ್ನು ಯಾರೊಂದಿಗೆ ಹಂಚಿಕೊಂಡು ತಿನ್ನುತ್ತಾಳೋ ನಮ್ಮ ಮುದ್ದು ಪುಟ್ಟಿ" ಎಂದು ಅಮ್ಮ ಸ್ವಲ್ಪ ಹೆಚ್ಚು ತಿಂಡಿಯನ್ನು ಡಬ್ಬಿಗೆ ಹಾಕಿ ಕೊಟ್ಟಳು. ಕೂಡಲೇ ಪುಟ್ಟಿ ಸಂತೋಷದಿಂದ ಓಡಿಹೋಗಿ ಕೆಲಸದವಳ ಮಗುವನ್ನು ಬಾ, ನಾವು ಶಾಲೆ ಆಟ ಆಡೋಣ ಎಂದು ಕರೆದು, ಆಟವಾಡಿದ ನಂತರ ಮಗುವಿಗೂ ತನ್ನ ಡಬ್ಬಿಯಲ್ಲಿನ ತಿಂಡಿಯನ್ನು ಹಂಚಿಕೊಂಡಾಗ, ಪುಟ್ಟಿಯ ಅಮ್ಮನ ಕಣ್ಣಲ್ಲಿ ನೀರಾಡಿತ್ತು. ಮಕ್ಕಳಾಗಿದ್ದಾಗಿನ ಇಂತಹ ಒಳ್ಳೆಯ ಬುದ್ಧಿಗಳು ನಂತರ ಎಲ್ಲಿ ಹೋಗಿಬಿಡುತ್ತದೋ ಎಂದು ನಿಟ್ಟುಸಿರು ಬಿಟ್ಟಳು.

 Let's eat and share  - Jagadish Chandra B.S - 

The adorable child, Putty, naively informed her mother, "Mom, I ate all of today's goodies by myself since they were so delicious.  I kept it from all of my friends.  "You're a good girl, aren't you? Haven't I told you to share and eat with your friends?" Mom then said to Putty.  Feeling guilty, Putty said, "I'm sorry, mom. I promise not to do this again."

A few days went by.  The maid's child once haunted her mother because she was starving.  As Putty saw this, she began to think and reflect.  Why is Mom not providing that poor girl with any snacks when there are so many snacks available at home?   Following this, Putty made the decision to take action to address the issue.  "Mom, please give me some tiffin in my tiffin box," she asked as she approached her mom.  "Why do you want tiffin in the tiffin box when today is a holiday?" said the surprised mother.   Putty then retorted, "I can share with others and eat as you mentioned the other day if you give in a tiffin box."  Mom was wondering what would happen after she put the snacks in her tiffin box.

Putty was thrilled and hurried to the garden right away to invite the maid's youngster to play.  Puttty informed the child, "Today, let's play 'school drama,' in which we are both classmates," as she approached her.  A short while later, Putty said to the child, "Let's eat together; it's lunchtime."  She gave the child some of her mother's goodies, and they both had fun playing together.  The hungry small child was overjoyed.  When Mom saw her kid acting so sweet and innocent, her eyes welled up with tears.

"At this age, innocent children are so pure and good, but as they grow older, they completely change their behaviour with the influence of surroundings," she muttered to herself.   Isn't what she said right? 

Thursday, May 22, 2025

Kogile hadide kelideya / S Janaki, Rajkumar / M Rangarao /Keyboard - Jag...


ಕೋಗಿಲೆ ಹಾಡಿದೆ ಕೇಳಿದೆಯ / KOGILE HAADIDE KELIDEYA
ಚಿತ್ರ - ಸಮಯದ ಗೊಂಬೆ / ಎಸ್ ಜಾನಕಿ, ಡಾ. ರಾಜಕುಮಾರ್ / ಚಿ ಉದಯಶಂಕರ / ಎಂ ರಂಗರಾವ್ / ಕೀಬೋರ್ಡ್ - ಜಗದೀಶ ಚಂದ್ರ Film: SAMAYADA GOMBE / Singer: Dr RAJKUMAR, S JANAKI / Lyrics: CHI UDAYASHANKAR / Music: M RANGA RAO / Keyboard - Jagadeesha Chandra
M Rangarao's work in the Rag Kalyani (Yaman) is lovely and melodic. Chi Udayashankar penned a song that is inspiring. Although the song is sung by the child's mother to celebrate their birthday, it eventually becomes a brother's remembrance of his early years spent with his parents and sister. One of Yaman's or Rag Kalyani's greatest songs. Rajkumar and S Janaki are the singers.
ಎಂ ರಂಗರಾವ್ ಅವರು ಕಲ್ಯಾಣಿ ಅಥವಾ ಯಮನ್ ರಾಗದಲ್ಲಿ ರಾಗ ಸಂಯೋಜಿಸಿರುವ ಮನಮೋಹಕ ಗೀತೆ. ಸುಶ್ರಾವ್ಯವಾಗಿ ಹಾಡಿದ್ದಾರೆ. ಎಸ್ ಜಾನಕಿ ಮತ್ತು ರಾಜಕುಮಾರ್ ಅವರು. ಇದು ತಾಯಿಯು ಮಗಳ ಹುಟ್ಟು ಹಬ್ಬದ ದಿನ ಹಾಡುವ ಹಾಡಾದರೂ, ನಂತರ ಅಣ್ಣನು ತನ್ನ ತಂಗಿ, ತಂದೆ ತಾಯಿಯರ ನೆನಪು ಮಾಡಿಕೊಂಡು ಹಾಡುವ ಹಾಡಾಗಿ ಬಿಡುತ್ತದೆ. ಮನಮುಟ್ಟುವ ಸಾಹಿತ್ಯ ಕೊಟ್ಟಿರುವ ಚಿ ಉದಯಶಂಕರ್ ಅಭಿನಂದನಾರ್ಹರು.


ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ ।೨। ಹೊಸ ಹೊಸ ಭಾವ ಕುಣಿಸುತ ಜೀವ ।೨। ಮರೆಸುತ ನೋವ ಪ್ರೇಮವ ತುಂಬಿ ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದೆ ಕೊಳಲಿಂದ ಹೊರಬಂದ ಸಂಗೀತದಂತೆ /ಕೋಗಿಲೆ / ಕಾಣದ ಸಿರಿಯ ನೋಡಿದ ಹಾಗೆ, ಸ್ವರಗಳ ಮಾಣಿಕ್ಯ ದೊರಕಿದ ಹಾಗೆ ಬಾಳಲಿ ಬೆಳಕು ಮೂಡಿದ ಹಾಗೆ, ಸಡಗರ ಬದುಕಲಿ ತುಂಬುವ ಹಾಗೆ ಬಾಡಿದ ಬಳ್ಳಿ ಚಿಗುರಿದ ಹಾಗೆ, ಇರುಳಲಿ ಜ್ಯೋತಿ ಬೆಳಗಿದ ಹಾಗೆ ಸವಿಯಾಗಿ ಇಂಪಾಗಿ ಆನಂದದಿಂದ /ಕೋಗಿಲೆ / ಕಂಗಳು ಕನಸು ಕಾಣುವ ಹಾಗೆ, ತಿಂಗಳ ಬೆಳಕು ತುಂಬಿದ ಹಾಗೆ ಹೃದಯದ ನೈದಿಲೆ ಅರಳಿದ ಹಾಗೆ, ಹರುಷದ ಹೊನಲು ಹೊಮ್ಮಿದ ಹಾಗೆ ನೆನಪಿನ ಅಲೆಯಲಿ ತೇಲಿದ ಹಾಗೆ, ನೋವೋ ನಲಿವೋ ತಿಳಿಯದ ಹಾಗೆ ಸಂಗೀತ ಸುಧೆಯಿಂದ ಸುಖ ನೀಡುವಂತೆ /ಕೋಗಿಲೆ /

Wednesday, May 21, 2025

Huvu cheluvella nandenditu / R N Jayagopal/ M Rangarao/ P Sushila/ Keybo...


ಹೂವು ಚೆಲುವೆಲ್ಲ ನಂದೆಂದಿತು

Huvu cheluvella nandenditu

(A flower said I am the most beautiful)

ಸಾಹಿತ್ಯ - ಆರ್ ಏನ್ ಜಯಗೋಪಾಲ್ / ಸಂಗೀತ - ಎಂ ರಂಗರಾವ್ /ಗಾಯಕಿ - ಪಿ ಸುಶೀಲ / ಕೀಬೋರ್ಡ್ ನಲ್ಲಿ ಜಗದೀಶ ಚಂದ್ರ Film - Hannele Chiguridaga / Lyrics - R N Jayagopal / Music - M Rangarao / Singer - P Sushila / Keyboard - B S Jagadeesha Chandra

This popular song from the movie "Hannele Chiguridaga" was written by R N Jayagopal and composed by M Ranga Rao. The movie is based on the same-titled novel by Smt. Triveni. Kalpana, Rajkumar, Nagendra Rao, Arunkumar, and others were among the actors.
Rag Bhimpalas have been adopted to tune the song. P Sushila sings the song quite well, through her sweet and pleasant voice. The song describes a lady's attractiveness and abilities. The poet R. N. Jayagopal illustrates the worth of a lady or female with these instances. The song's main message is that while flowers are lovely, a lady who has flowers is far more gorgeous. Although Cuckoo is renowned for its lovely voice, Goddess Saraswati is the music queen. While Peacocks are renowned for their beauty and ability to dance, Goddess Parvati is both stunning and the monarch of all dances. Rain is brought by clouds; however, the Ganga goddess not only provides water but also atones for all of our sins.

ಹಣ್ಣೆಲೆ ಚಿಗುರಿದಾಗ ಚಿತ್ರದ ಆರ್ ಏನ್ ಜಯಗೋಪಾಲ್ ಅವರು ಬರೆದಿರುವ ಈ ಗೀತೆ ಬಹಳ ಇಂಪಾಗಿದೆ ಅಷ್ಟೇ ಅರ್ಥಪೂರ್ಣವಾಗಿದೆ. ಅವರು ಹೆಣ್ಣನ್ನು ಎಷ್ಟು ವೈಭವೀಕರಿಸಿದ್ದಾರೆ ಎಂದು ಊಹಿಸಲೂ ಅಸಾಧ್ಯ. ಬಹಳ ಸರಳವಾಗಿ, ಅಂದಚಂದಗಳನ್ನು ವಿವರಿಸದೆ ನವಿರಾಗಿ ಹೆಣ್ಣನ್ನು ಹೊಗಳಿದ್ದಾರೆ. ಹೂವು ತಾನೇ ಚೆಲುವೆಂದರೆ ಹೆಣ್ಣೊಬ್ಬಳು ಅದನ್ನು ಮುಡಿದು ನಾನು ಇನ್ನೂ ಚೆಲುವೆ ಎನ್ನುತ್ತಾಳೆ. ಕೋಗಿಲೆ ತಾನು ಗಾನ ಕೋಗಿಲೆ ಎಂದರೆ ವೀಣೆ ಹಿಡಿದು ಹಾಡುವ ಗಾನವಿಶಾರದೆ ಹೆಣ್ಣಲ್ಲವೇ ಎನ್ನುತ್ತಾಳೆ. ನವಿಲು ತನ್ನ ನೋಟ, ನರ್ತನ ಚೆಲುವು ಎಂದು ಬೀಗಿದರೆ ನಾಟ್ಯದರಸಿ ಪಾರ್ವತಿಯೂ ಹೆಣ್ಣಲ್ಲವೇ ಎನ್ನುತ್ತಾಳೆ. ಮುಗಿಲು ತಾನೇ ಮಿಗಿಲೆಂದರೆ ಪಾಪ ತೊಳೆವ ಸುರಗಂಗೆ ಹೆಣ್ಣಲ್ಲವೇ ಎನ್ನುತ್ತಾಳೆ. ತ್ರಿವೇಣಿ ಅವರ ಕಾದಂಬರಿ ಆಧಾರಿತ ಚಿತ್ರಕಥೆ , ಕಲ್ಪನಾ ಅವರ ಅಭಿನಯ ಎಲ್ಲವೂ ನೆನಪಿನಲ್ಲಿ ಉಳಿಯುತ್ತದೆ.
ಬಹಳ ಅರ್ಥಗರ್ಭಿತವಾದ ಹಾಡು. ಭೀಮ್ ಪಲಾಸ್ ರಾಗದಲ್ಲಿ ಎಂ ರಂಗರಾವ್ ಅವರ ಸುಶ್ರಾವ್ಯ ಸಂಗೀತ, ಪಿ ಸುಶೀಲಾ ಅವರ ಮಧುರ ಕಂಠ.

ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು // ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು // ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆಂದಿತು // ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು // 6 45 137 329 Da 291 240 77VSa 95

Monday, May 19, 2025

Unko ye shikayat / Rag Malgunji / उनको ए शिकायत है की हम/ Lata M / Mada...


ಉನಕೋ ಏ ಶಿಕಾಯತ್ ಹೈ ಕಿ ಹಮ್ / ರಾಗ - ಮಾಲಗುಂಜಿ 
उनको ए  शिकायत है की हम / लता मंगेष्कर / मदन मोहन / राग - मालगुंजी 
Unko ye shikaayat hai ki ham / Lata M / Madan Mohan / Rajendra Krishn 

Beautiful, heart-touching lyrics & lovely music. 
This is an outstanding ghazal from the film Adalat, and listeners feel proud of compositions like this. Music director Madanmohan and singer Lata Mangeshkar are worth acknowledging. Heart-touching song immortalised by the golden voice of Lata and the histrionic performance of Nargis.  It is a classical Rag-based song in Rag Malgunji. 
The meaning of this great song touches the heart and takes you to people you loved but could not be with. This deep pain is expressed through this song. Living for somebody, loving somebody and waiting for somebody. 
ನಾವು ಮನಸಾರೆ ಪ್ರೀತಿಸಿದವರೊಂದಿಗೆ ಬದುಕಿರಲು ಆಗದ ಪರಿಸ್ಥಿತಿ,  ಆಗ ಮನದೊಳಗೆ ಉದ್ಭವಿಸುವ ಅಗಾಧ ನೋವಿನ ಅನುಭವ, ಯಾರಿಗಾಗಿಯೋ ಬದುಕಿರುವುದು,  ಯಾರಿಗಾಗಿಯೋ ಕಾಯುತ್ತ ಕುಳಿತಿರುವುದು,  ವಿರಹದ ನೋವು ಇವೆಲ್ಲವನ್ನು ಹಾಡಿನ ಮೂಲಕ ವ್ಯಕ್ತ ಪಡಿಸಲಾಗಿದೆ.  ಅಷ್ಟೇ ಸುಂದರವಾಗಿ ರಾಗ ಸಂಯೋಜನೆ, ನಟನೆ, ಹಾಡುಗಾರಿಕೆ ಎಲ್ಲವೂ ಮೇಳೈಸಿದೆ.  ಮಾಲಗುಂಜಿ ಎಂಬ ಸುಮಧುರ ರಾಗವನ್ನು ಈ ಹಾಡಿಗೆ ಅಳವಡಿಸಲಾಗಿದೆ .  

Unko Yeh Shikayat Hai Ke Hum Kuchh Nahi Kehte

Apni Tho Yeh Aadat Hai Ke Hum Kuchh Nahi Kehte

Kuchh Nahi Kehte, Unko Yeh Shikayat Hai

They have this complaint that I Do Not Say Anything

But Its My Nature That I Do Not Say Anything



Majboor Bahut Karta Hai Yeh Dil Tho Zubaan Ko

Yeh Dil Tho Zubaan Ko

Kuchh Aisi Hi Haalat Hai Ke Hum Kuchh Nahi Kehte

Kuchh Nahi Kehte, Unko Yeh Shikayat Hai

My Heart Compels My Tongue To Speak Several Times

But My Situation Doesnt Allow Me To Say Anything



Kehne Ko Bahut Kuchh Tha Agar Kehnepe Aate

Kehnepe Aate

Duniya Ki Inaayat Hai Ke Hum Kuchh Nahi Kehte

Kuchh Nahi Kehte, Unko Yeh Shikayat Hai

There Were Several Things To Say If I Wanted to Say

The World's Kindness That I Do Not Say Anything



Kuchh Kehne Pe Toofan Utha Leti Hai Duniya

Utha Leti Hai Duniya

Ab Ispe Qayamat Hai Ke Hum Kuchh Nahi Kehte

Kuchh Nahi Kehte

If I Say Something, The World Would Turn Into A Storm

Yet Its A Catastrophe That I Am Keeping Quite 


Thursday, May 15, 2025

Bhagyavantaru / PBS, S Janaki, SPB / Rajan Nagendra / Keyboard - Jagadee...


ಅಂತರಾಷ್ಟ್ರೀಯ ಕುಟುಂಬದ ದಿನ
INTERNATIONAL FAMILY DAY

International Family Day is the ideal occasion for this song. The family members are all singing along to this song. Among the actors are Rajkumar, Ashok, Sarojadevi, and others. SPB, S Janaki, and P B Srinivas are the singers. Chi Udayashankar wrote the script, and Rajan Nagendra composed the music.

The kids say that having their father's affection and mother's care is a great blessing. Their mother and father are compared to the gods Shiva and Parvati. They also claim that having parents like these is a blessing.
The father recalls how his wife gifted him these children out of love and affection. "Today is an unforgettable day," he says. Regardless of the film's plot, the song, acting, and lyrics are all worthy of praise.
Wishing you all a happy international family Day.

ಈ ದಿನಕ್ಕೆ ಹೇಳಿ ಬರೆದಂತಹ ಹಾಡು ಇದಾಗಿದೆ. ಭಾಗ್ಯವಂತರು ಚಿತ್ರದಲ್ಲಿ ಕುಟುಂಬದವರೆಲ್ಲರೂ ಕೂಡಿ ಸಂತೋಷದಿಂದ ಹಾಡುವ ಹಾಡು ಇದು. ನಟನೆ, ರಾಜಕುಮಾರ್, ಸರೋಜಾದೇವಿ, ಅಶೋಕ್ ಮತ್ತು ಇತರರು. ಗಾಯಕರು ಪಿ ಬಿ ಶ್ರೀನಿವಾಸ್, ಎಸ್ ಜಾನಕಿ ಹಾಗು ಎಸ್ ಪಿ ಬಿ ಅವರು. ಸಾಹಿತ್ಯ ಚಿ ಉದಯಶಂಕರ್ ಅವರದು ಹಾಗೂ ಸಂಗೀತ ರಾಜನ್ ನಾಗೇಂದ್ರ ಅವರದು.
ತಾಯಿಯ ಮಮತೆ, ತಂದೆಯ ಪ್ರೀತಿ ಗಳಿಸಿರುವ ನಾವೇ ಭಾಗ್ಯವಂತರು ಎಂದು ಮಕ್ಕಳು ಹಾಡುತ್ತಾರೆ. ತಂದೆ ತಾಯಿಯರು ಈಶ್ವರ ಪಾರ್ವತಿಯಂತೆ ನಮ್ಮೊಂದಿಗಿದ್ದಾರೆ, ಅವರ ಹರಕೆಯು ನಮ್ಮ ಮೇಲೆ ಸದಾ ಇರಲಿ ಎಂದು ಮಕ್ಕಳು ಬಯಸುತ್ತಾರೆ. ತಂದೆಯು ತನ್ನ ಪತ್ನಿಯನ್ನು ಮೆಚ್ಚುತ್ತಾ ಅವಳು ಇಂತಹ ಮುದ್ದಿನ ಮಕ್ಕಳನ್ನು ನನಗೆ ಕಾಣಿಕೆಯಾಗಿ ತಂದಿದ್ದಾಳೆ, ಇಂತಹ ಸುದಿನ ಮರೆಯಲಾಗದ ದಿನ ಎಂದು ಹಾಡುತ್ತಾನೆ. ಸಿನೆಮಾ ಕಥೆ ಏನಾದರೂ ಇರಲಿ ಹಾಡು, ಹಾಡಿಗೆ ನಟನೆ, ಹಾಡಿನ ಸಾಹಿತ್ಯ, ರಾಗಸಂಯೋಜನೆ ಎಲ್ಲವೂ ಒಂದಕ್ಕಿಂತ ಒಂದು ಮೆಚ್ಚುವಂತಿದೆ.



ಚಿತ್ರ - ಭಾಗ್ಯವಂತರು / ಗಾಯಕರು - ಪಿ ಬಿ ಎಸ್, ಎಸ್ ಜಾನಕಿ, ಎಸ್ ಪಿ ಬಿ / ಸಂಗೀತ - ರಾಜನ್ ನಾಗೇಂದ್ರ / ಸಾಹಿತ್ಯ - ಚಿ ಉದಯಶಂಕರ್ / ಕೀಬೋರ್ಡ್ - ಜಗದೀಶ ಚಂದ್ರ
Film - Bhagyavantaru / Singers - P B Srinivas, S Janaki, S P Balasubramanyam / Music - Rajan Nagendra / Lyrics - Chi Udayashankar / Keyboard - Jagadeesha Chandra ಭಾಗ್ಯವಂತರು ನಾವೇ ಭಾಗ್ಯವಂತರು... ತಾಯಿ ಮಮತೆಯ ತಂದೆ ಪ್ರೀತಿಯಾ ಪಡೆದ ನಾವುಗಳೇ ಪುಣ್ಯವಂತರೂ ಎಂದೂ ನಾವುಗಳೇ ಪುಣ್ಯವಂತರೂ // ಚಿನ್ನದ ಗೌರಿ ಕರುಣೆಯ ತೋರಿ ಹರಸಲು ನಮ್ಮೆಲ್ಲರ ಬಂದ ಹಾಗಿದೇ ಕಾಣದೇ ಗೌರಿ ಆತುರ ತೋರಿ ಹುಡುಕುತ ಮಹೇಶ್ವರ ನೊಂದ ಹಾಗಿದೆ... ಶಿವನು ಪಾರ್ವತಿಯು ಒಂದಾ..ಗಿ ಸೇರಿದ ಆನಂದ, ಈ ಅನುಬಂಧ ನಮ್ಮ ಮನೆಯಲ್ಲಿ ತುಂಬಿರಲಿ ಎಂದೆಂದಿಗೂ.. // ಸ್ನೇಹದಿ ಬಂದೇ ಪ್ರೀತಿಯ ತಂದೇ ಪ್ರಣಯದ ಗಂಗೆಯಲಿ ತಾವರೆಯಾದೆ ಜೀವದ ಜೀ...ವ ನೀ ನನಗಾದೇ ನಲಿಯುವ ಮಕ್ಕಳನೇ ಕಾಣಿಕೆ ತಂದೇ ಇಂತಹ ಸುದಿನವನು ನಾನೆಂದು ಕಾಣೆನು
ಸಂತೋಷ .. ಈ ಸೌಭಾಗ್ಯ ನಮ್ಮ ಬಾಳಲ್ಲಿ ತುಂಬಿರಲಿ ಎಂದೆಂದಿಗೂ //
ಭಾಗ್ಯವಂತರು ನಾವೇ ಭಾಗ್ಯವಂತರು.. ನಗುವ ಸಂಸಾರ ಬದುಕು ಬಂಗಾರ... ನಾವೇ ಈ ಜಗದಿ ಪುಣ್ಯವಂತರೂ //

Wednesday, May 14, 2025

Manave Mandira /P B Srinivas /Vijayabhaskar /Nanjaraj Urs /Thoogu Deepa ...


ಮನವೇ ಮಂದಿರ ನ್ಯಾಯ ದೇಗುಲ / Manave Mandira

ಗಾಯಕರು: ಪಿ.ಬಿ.ಶ್ರೀನಿವಾಸ್ / ಸಂಗೀತ : ವಿಜಯಭಾಸ್ಕರ್ / ಸಾಹಿತ್ಯ: ನಂಜರಾಜ್ ಅರಸ್ / ಚಿತ್ರ: ತೂಗುದೀಪ / ಕೀಬೋರ್ಡ್ - ಜಗದೀಶ ಚಂದ್ರ 
P B Srinivas / Music - Vijaya Bhaskar /Lyrics - Nanjaraj Urs / Film - Thoogu Deepa / Keyboard - Jagadeesha Chandra 

P B Srinivas, who has a melodic voice in some of the oldest melody songs, sings this song, which was composed as well by Vijaya Bhaskar.  Nanjaraja Aras is the lyricist.  This song is based on the Kalawati raga.  It is equivalent to the Valachi Raga in Carnatic music.  The lyrics is equally appropriate to a very appealing tune. 
This poem advises us how to be a good person to lead an excellent life.  We should be mentally calm, and our good deeds are like a temple, our inner beauty is like God, and our love and devotion are like lamps. 
We should value mercy, love, affection, and proper norms and regulations in order to have a decent life. Our body and mind turn into a temple when we are away from distrust, envy, and fraud aggression.
If we believe that everyone around us is equal, our hearts will be filled with love for God. This is what the poem wishes to convey.

ಹಳೆಯ ಕೆಲವು ಮಧುರ ಹಾಡುಗಳಲ್ಲಿ ಮಧುರ ಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಅವರು ಹಾಡಿರುವ, ವಿಜಯಭಾಸ್ಕರ್ ಅವರು ಸಂಗೀತ ನೀಡಿರುವ ಈ ಹಾಡು ಸಹ ಒಂದು. ಸಾಹಿತ್ಯ ನಂಜರಾಜ ಅರಸ್ ಅವರದು. ಇದು ಕಲಾವತಿ ಎಂಬ ರಾಗದ ಆಧಾರಿತ ಹಾಡು. ಕರ್ನಾಟಕ ಸಂಗೀತದಲ್ಲಿ ಇದು ವಲಚಿ ಎಂಬ ರಾಗಕ್ಕೆ ಸಮಾನಾಂತರವಾಗಿದೆ. ಬಹಳ ಮಧುರವಾದ ರಾಗ ಅಷ್ಟೇ ಸೊಗಸಾಗಿ ಹಾಡಿಗೆ ಅಳವಡಿಸಿದ್ದಾರೆ. 
ಒಳ್ಳೆಯ ಬದುಕನ್ನು ಸಾಗಿಸಲು ನಾವು ಹೇಗೆ ಇರಬೇಕು ಎಂಬ ಸಂದೇಶವನ್ನು ಈ ಕವನ ನೀಡುತ್ತದೆ. ಮನಸ್ಸು ಚೆನ್ನಾಗಿರಬೇಕು, ನ್ಯಾಯಯುತವಾದ ನಡವಳಿಕೆ ಮಂದಿರವಾದರೆ ನಮ್ಮ ಅಂತರಂಗದ ಚೆಲುವು ದೇವರಾಗಿ ನಾವು ತೋರುವ ಪ್ರೀತಿಯೇ ನಂದಾದೀಪವಾಗುತ್ತದೆ. 
ಜೀವನದಲ್ಲಿ ಕರುಣೆಗೆ ಮಮತೆಗೆ, ಒಳ್ಳೆಯ ನೀತಿ ನಿಯಮಗಳಿಗೆ ಸ್ಥಾನವಾಗಿದ್ದರೆ ಅದು ಸಿಹಿ ತುಂಬಿದ ಜೇನುಗೂಡಾಗುತ್ತದೆ. ಸಂಶಯ, ಅಸೂಯೆ, ವಂಚನೆ ಹಿಂಸೆ ಇವುಗಳಿಂದ ದೂರವಿದ್ದರೆ ನಮ್ಮ ದೇಹ ಮನಸ್ಸುಗಳೇ ಒಂದು ದೇವಾಲಯವಾಗುತ್ತದೆ. 
ನಮ್ಮ ಸುತ್ತಮುತ್ತಲಿರುವ ಎಲ್ಲರೂ ಒಂದೇ ಎಂಬ ಭಾವವು ನಮ್ಮಲ್ಲಿದ್ದರೆ ಆಗ ನಮ್ಮ ಹೃದಯವೇ ದೇವನಿರುವ ಪ್ರೇಮಮಂದಿರವಾಗುತ್ತದೆ. ಇದೆ ಈ ಕವನದ ಆಶಯ. 

ಮನವೇ ಮಂದಿರ ನ್ಯಾಯ ದೇಗುಲ ಚೆಲುವೆ ದೇವರು ಒಲವೇ ದೀವಿಗೆ ಮನವೇ ಮಂದಿರ.......ಆಆಆ ಕರುಣೆ ಮಮತೆ ನೀತಿ ನಿಯಮ ಇರಲು ಬದುಕು ಜೇ..ನು ಗೂಡು ಬೇಡ ಸಂಶಯ ಭ್ರಾಂತಿ ವಂಚನೆ ಹಿಂಸೆ ತುಂಬಿದ ವಿಷದ ವಚನ ಮನವೇ ಮಂದಿರ.......ಆಆಆ ನಾನು ನೀನು ಅವನು ಇವಳು ಎಲ್ಲ ಒಂದೇ ತಾಯ ಸುತರು ಎಂಬ ಭಾವವು ಬಂದ ಹೃದಯವು ದೇವನಿರುವ ಪ್ರೇಮ ನಿಲಯ ಮನವೇ ಮಂದಿರ....ಆಆಆ....ಆಆಆ 6 45 137 329 Da 291 240 77VSa 85

ये मेरा दीवानापन है / मुखेष / यहूदी / Yeh Mera Deewanapan Hai / Mukhesh ...


Yeh Mera Deewanapan Hai / ये मेरा दीवानापन है 


Film: Yahudi / Singer: Mukesh / Lyrics: Shailendra / Music: Shankar - Jaikishan 

चित्र - यहूदी / गायक - मुखेष / साहित्य - शैलेन्द्र / संगीत - शंकर, जयकिशन 

You don't want to give in to your emotions.  It fills my heart with pride.  People will undoubtedly believe that, regardless of your belief.  This is my extreme happiness of love or my craziness.  Because your view is different, you are unable to identify who I am.  I'm going crazy over this. 

My heart yearns for you alone.  You are the only person I love.  I'm going to wait for you whether you show up or not.  I'm going crazy over this.

ನನ್ನ ತುಂಬು ಹೃದಯದ ಅಭಿಮಾನ, ಪ್ರೀತಿಯನ್ನು ನೀನು ಒಪ್ಪಿಕೊಳ್ಳುತ್ತಿಲ್ಲ ,  ನನ್ನ ಹೃದಯದ ತುಂಬಾ ನಿನ್ನ ಮೇಲಿನ ಪ್ರೀತಿ  ಅಭಿಮಾನವೇ ತುಂಬಿದೆ. ನೀನು ನಂಬಿದರೂ ಸರಿ, ನಂಬದಿದ್ದರೂ ಸರಿ  ಜನರು ಇದನ್ನು ನಂಬುತ್ತಾರೆ. ಇದೆ ನನ್ನ ಹುಚ್ಚು ಅಭಿಮಾನ ಹಾಗು ಅತಿರೇಕದ  ಹುಚ್ಚು ಅಭಿಮಾನ. ನೀನು ನನ್ನನ್ನು ಯಾರೆಂದು ಗುರುತಿಸದಿರಲು ಕಾರಣ ನೀನು ನೋಡುವ ದೃಷ್ಟಿಯೇ  ಇರಬೇಕು.   

ನನ್ನ ಹೃದಯವು ಸದಾ ನಿನಗಾಗಿ ಮಿಡಿಯುತ್ತಿರುತ್ತದೆ. ನನ್ನ ಹೃದಯದಲ್ಲಿ ನಿನಗೆ ಮಾತ್ರ ಸ್ಥಾನವಿದೆ. ನೀನು ಬರುವಿಯೋ ಬಿಡುವಿಯೋ, ಏನೇ ಆದರೂ ನಾನು ನಿನಗಾಗಿ ಕಾಯುತ್ತಲೇ ಇರುತ್ತೇನೆ. ಇದೆ ನನ್ನ ಹುಚ್ಚು ಅಭಿಮಾನ. 


Mujh Ko Hai Dil Ka Garoor
Tu Yeh Maane Ya Na Maane
Log Maanenge Zaroor
Yeh Mera Deewanapan Hai //

Yaan Mohabbat Ka Suroor
Tu Na Pechaane Tau Hai Yeh
Teri Nazaron Ka Kasoor
Yeh Mera Deewanapan Hai //

Dil Ko Teri Hi Tamanna
Dil Ko Hai Tujh Se Hi Pyar
Chahe Tu Aaye, Na Aaye
Hum Karenge Intezaar
Yeh Mera Deewanapan Hai //

Nature is Heaven / Lyrics - Jagadeesha Chandra/ ಕವನ - ನಿಸರ್ಗವೇ ಸ್ವರ್ಗ -...


ಕವನ - ನಿಸರ್ಗವೇ ಸ್ವರ್ಗ - ರಚನೆ - ಜಗದೀಶ ಚಂದ್ರ
Nature is Heaven / Lyrics - Jagadeesha Chandra

My journey across the Himalayas and the tune of the popular Hindi song "Quab Ho Tum" served as the inspiration for the poems I wrote.
Green hills, flowing water, flying birds, and other natural features always remind us of a happy life. This category can also include innocent children. Youngsters play joyfully and fearlessly. We may appreciate nature, which is nothing more than heaven and a paradise on earth, just like these kids and birds do.

ಈ ಕವನಕ್ಕೆ ಸ್ಫೂರ್ತಿ ನನ್ನ ಹಿಮಾಲಯ ಪ್ರವಾಸ ಹಾಗು ಈ ಹಾಡಿನ ರಾಗಕ್ಕೆ ಸ್ಫೂರ್ತಿ "ಕ್ವಾಬ್ ಹೊ ತುಮ್ " ಎಂಬ ಜನಪ್ರಿಯ ಹಿಂದಿ ಚಿತ್ರಗೀತೆ.
ಸ್ವಚ್ಛಂದ ಜೀವನ ಎಂದರೆ ಮೊದಲು ನೆನಪಿಗೆ ಬರುವುದು ಪ್ರಕೃತಿ, ಸ್ವಚ್ಛಂದವಾಗಿ ಹರಡುತ್ತಿರುವ ಹಕ್ಕಿಗಳು, ಹರಿಯುವ ನೀರು, ಹಸಿರು ಬೆಟ್ಟಗಳು ಇತ್ಯಾದಿ. ಮುಗ್ಧ ಮಕ್ಕಳನ್ನು ಇದರಲ್ಲಿ ಸೇರಿಸಬಹುದು. ಯಾರದೇ ಹಂಗಿಲ್ಲದೆ ನಿರ್ಭಯವಾಗಿ ಮಕ್ಕಳು ಆಡಿಕೊಂಡಿರುತ್ತಾರೆ. ನಾವು ಈ ಮಕ್ಕಳಂತೆ, ಹಕ್ಕಿಯಂತೆ ನಿಸರ್ಗವನ್ನು ಸವಿದರೆ ಸ್ವರ್ಗವೇ ನಮ್ಮದಾಗುತ್ತದೆ ಅಂತಹ ಜೀವನ ಎಷ್ಟು ಚೆನ್ನ ಎಂಬ ಭಾವನೆ ಈ ಕವನದಲ್ಲಿ ಮೂಡಿದೆ.
ಮಕ್ಕಳಂತೆ ಅಡಿ ಕುಣಿದು ಸ್ವರ್ಗ ಸವಿಯುವ ಬನ್ನಿ ಹಕ್ಕಿಯಂತೆ ಮೇಲೆ ಹಾರಿ ನಿಸರ್ಗ ಸವಿಯುವ ಬನ್ನಿ // ಜುಳುಜುಳನೆ ಹರಿಯುತಿಹಾ ನದಿಯಲ್ಲಿ ಈಜಾಡಿ ಅಲೆಅಲೆಯು ಮೂಡುತಿರೆ ಚೆಲ್ಲಾಟಾ ಆಡುತಿರೆ ಪುಳಕದಲಿ ಓಲಾಡಿ ಮನದಲ್ಲೇ ನಲಿದಾಡಿ ಮೀನಂತೇ ಹರಿದಾಡಿ ತನುಮನಕೆ ಸವಿ ನೀಡಿ // ದೂರದಲಿ ಹಸಿರಾಗಿ ಕಾಣುತಿಹ ಗಿರಿ ನೋಡಿ ಗಿರಿಯಲ್ಲಿ ಮೂಡಿರುವಾ ಬನಸಿರಿಯಾ ಕಣ್ತುಂಬಿ ಅದರೊಳಗೆ ಓಡಾಡಿ ಹತ್ತಿಳಿದು ಪರದಾಡಿ ಸೊಬಗನ್ನು ಸೆರೆ ಹಿಡಿದು ಮನಕ್ಕಿಷ್ಟು ಮುದನೀಡಿ //

Sunday, May 11, 2025

Banda simha narasimha banda node / Music -Jagadeesha Chandra /ಬಂದ ಸಿಂಹ ನ...


ಬಂದ ಸಿಂಹ ನಾರಸಿಂಹ / Banda Simha Narasimha

ಪುರಂದರದಾಸ / ಸಂಗೀತ - ಜಗದೀಶ ಚಂದ್ರ
Purandara Dasa / Music -Jagadeesha Chandra

ಬಂದ ಸಿಂಹ ನಾರಸಿಂಹ ಬಂದ ನೋಡೇ ಇಂದಿರೇಶ ಕಂಬ ಒಡೆದು ಬಂದ ನೋಡೇ ಅಕೋ ಬಂದ ನೋಡೇ, ಇಕೋ ಬಂದ ನೋಡೇ ।। ಎಲ್ಲಿ ನೋಡಿ ಅಲ್ಲಿ ನಾರ ಸಿಂಹ ನೋಡೇ ಎಲ್ಲರಲ್ಲಿ ಮೇಲೆಂಬ ಚೆಲುವ ನೋಡೇ ಎಲ್ಲರನ್ನು ಹರಿಗೆಂದು ದಾನ ಮಾಡೇ ।।೧।। ಕಂದನ ಕರೆಗೋಡಿ ಬಂದ ನೋಡೇ ಧರಿಸಲಿಲ್ಲ ಪೂರ್ಣಸಿಂಹ ವೇಷ ನೋಡೇ ಹರಿ ಪಾದಕೆ ನಮ್ಸಿ ಅಂದದಿ ಭಿಕ್ಷೆ ನೀಡೇ ।।೨।। ಚರಣ ಕಮಲನೀತ ಚಂದ್ರನ ನೋಡೇ ಭಕ್ತ ಪ್ರಿಯ ಪುರಂದರ ವಿಠಲನ ನೋಡೇ ಮುಕ್ತಿ ಕೊಡೊ ದಾತ ಮನೆಗೆ ಬಂದ ನೋಡೇ ।।೩।।

Saturday, May 10, 2025

Song dedicated to mother/Usko nahin dekha / Mannade & Mahendra Kapoor /R...


O Mother, I realise that you are God and nothing more 

ಅಮ್ಮಾ ನಿನ್ನನ್ನು ನೋಡಿದ ಮೇಲೆ ಆ ದೇವರು ಬೇರೆ, ನೀನು ಬೇರೆ ಅಲ್ಲ.  

ऐ माँ तेरी सूरत से अलग भगवान की सूरत क्या होगी

उसको नहीं देखा हमने कभी / फिल्म - दादी माँ / संगीत - रौशन / साहित्य - मजरूह सुल्तानपुरी / गायक - महेंद्र कपूर, मन्ना डे Usko nahi dekha / Singers - Manna de and Mahendra Kapoor / Music - Roshan / Lyrics - Majrooh Sultanpuri / Film - Dadi Maa

God has never been seen by us. As long as you are with us, we don't want to see. After seeing you, O Mother, I realise that you are God and nothing more.

All people, regardless of other gods, consider their mother to be their god. Everything is heaven at your feet. The love that no God can provide is being poured out of your eyes. After seeing you, O Mother, I realise that you are God and nothing more.

There can be obstacles and a wave of sorrow. We are being saved from them by your benevolent hands. We don't even need sunlight if you're with us. After seeing you, O Mother, I realise that you are God and nothing more.

We cannot express how much we admire you. The cost of your love is too great even for God to bear. The world's greatest treasure is you. O Mother, I realise that you are God and nothing more.

ನಾವು ದೇವರನ್ನು ನೋಡಿಲ್ಲ, ನೋಡುವುದೂ ಬೇಕಿಲ್ಲ; ಅಮ್ಮಾ ನಿನ್ನನ್ನು ನೋಡಿದ ಮೇಲೆ ಆ ದೇವರು ಬೇರೆ, ನೀನು ಬೇರೆ ಅಲ್ಲ. 

ಎಲ್ಲಾ ಮನುಷ್ಯರಿಗೂ ದೇವರಿಗೂ ತಾಯಿಯೇ ದೇವರು. ನಿನ್ನ ಪಾದದ ಬಳಿ ಸ್ವರ್ಗವೇ ಇದೆ. ಯಾವ ದೇವರೂ ನೀಡಲಾಗದ ಪ್ರೀತಿಯನ್ನು ನಿನ್ನ ಕಣ್ಣುಗಳು ಹರಿಸುತ್ತಿದೆ. ಅಮ್ಮಾ ನಿನ್ನನ್ನು ನೋಡಿದ ಮೇಲೆ ಆ ದೇವರು ಬೇರೆ, ನೀನು ಬೇರೆ ಅಲ್ಲ. 

ಕಷ್ಟ ಕಾರ್ಪಣ್ಯಗಳ ಬಿಸಿ ಇರಬಹುದು,  ದುಃಖ ದುಮ್ಮಾನಗಳ ಸುರಿಮಳೆಯೇ ಇರಬಹುದು, ನಿನ್ನ ಹರಸುವ ಕೈಗಳೇ ನಮ್ಮನ್ನು ಅವುಗಳಿಂದ ಪಾರುಮಾಡುತ್ತಿವೆ.  ನೀನು ಇದ್ದರೆ ನಮಗೆ ಸೂರ್ಯನ ಬೆಳಕೇ ಬೇಕಿಲ್ಲ; ಅಮ್ಮಾ ನಿನ್ನನ್ನು ನೋಡಿದ ಮೇಲೆ ಆ ದೇವರು ಬೇರೆ,  ನೀನು ಬೇರೆ ಅಲ್ಲ. 

ನಿನ್ನನ್ನು ಹೊಗಳಲು ನಮ್ಮಲ್ಲಿ ಪದಗಳೇ ಇಲ್ಲ, ಆ ದೇವರೂ ಸಹ ನಿನ್ನ ಪ್ರೀತಿಗೆ ಬೆಲೆ ಕಟ್ಟಲಾರ, ನಿನಗಿಂತ ದೊಡ್ಡ ನಿಧಿ ಈ ಪ್ರಪಂಚದಲ್ಲಿ ಮತ್ತೆಲ್ಲೂ ಇಲ್ಲ, ಅಮ್ಮಾ ನಿನ್ನನ್ನು ನೋಡಿದ ಮೇಲೆ ಆ ದೇವರು ಬೇರೆ, ನೀನು ಬೇರೆ ಅಲ್ಲ. 

Friday, May 9, 2025

Idu Bhagya ... Narasimhana Naama / ಇದು ಭಾಗ್ಯವಯ್ಯ... ನಾರಸಿಂಹನ ನಾಮ /K...


ಇದು ಭಾಗ್ಯವಯ್ಯ ನಾರಸಿಂಹನ ನಾಮ / Idu Bhagya Idu Bhagya

Sri Narasimha Jayanti is the auspicious appearance day of Lord Narasimha, the half-man, half-lion incarnation of Lord Vishnu. Lord Narasimha appeared at dusk on the Shukla Chaturdashi, the fourteenth day of the month of Vaishakha.

The Supreme Lord appeared as Narasimha to protect His dear devotee Prahlada from the persecutions of his demoniac father, Hiranyakashipu. By performing severe penances, Hiranyakashipu had received a benediction from Lord Brahma that he could not be killed by any living entity created by Brahma (whether demigod, demon, human being, or animal), within or outside a residence, during the day or at night, on the land or in the sky, by any weapon.

Endowed with this special benediction, Hiranyakashipu became extremely powerful. He conquered all directions and established his supremacy over everyone else. He was inimical towards Lord Vishnu and His devotees. On the contrary, his son Prahlada was a great devotee of the Lord Vishnu from the beginning of his life. Hence, Hiranyakashipu made several attempts to kill his son in different ways, but every time, the Lord rescued him.

Finally, the Lord assumed a unique half-man half-lion form (this form is neither a human being nor an animal) by emerging from a pillar. He killed Hiranyakashipu in the evening (neither day nor night), in the doorway of the assembly hall (neither within nor outside any residence), keeping the demon on His lap (neither land nor sky) and tearing the demon’s body to pieces with His nails (neither by a weapon nor by any entity – dead or alive). Thus, the Lord effortlessly killed Hiranyakashipu while satisfying all the conditions of Brahma’s boon.

Through this wonderful pastime, the Supreme Lord showed that no one can surpass His intelligence and cheat Him. If the Lord wants to kill someone, nobody can save him, however intelligent and powerful he may be. Similarly, if the Lord wants to save someone, nobody can kill him.

Devotees observe fasting till dusk and offer prayers to Lord Narasimha to seek His mercy and protection from all kinds of dangers and disturbances in their spiritual path. An elaborate abhisheka is performed to the Lord in the early morning and the evening. 

ಶ್ರೀ ನರಸಿಂಹ ಜಯಂತಿಯು ಭಗವಾನ್ ವಿಷ್ಣುವಿನ ಅರ್ಧ ಮನುಷ್ಯ ಅರ್ಧ ಸಿಂಹ ರೂಪದ ಭಗವಾನ್ ನರಸಿಂಹನ ಪವಿತ್ರ ಅವತಾರ ದಿನವಾಗಿದೆ. ವೈಶಾಖ ಮಾಸದ ಶುಕ್ಲ ಚತುರ್ದಶಿಯಂದು (ಹದಿನಾಲ್ಕನೇ ದಿನ) ಮುಸ್ಸಂಜೆಯಲ್ಲಿ ಭಗವಾನ್ ನರಸಿಂಹನು ಕಾಣಿಸಿಕೊಂಡನು.

ತನ್ನ ಪ್ರಿಯ ಭಕ್ತ ಪ್ರಹ್ಲಾದನನ್ನು ತನ್ನ ರಾಕ್ಷಸ ತಂದೆ ಹಿರಣ್ಯಕಶಿಪುವಿನ ಕಿರುಕುಳದಿಂದ ರಕ್ಷಿಸಲು ಪರಮಾತ್ಮನು ನರಸಿಂಹನಾಗಿ ಕಾಣಿಸಿಕೊಂಡನು. ಕಠಿಣ ತಪಸ್ಸು ಮಾಡುವ ಮೂಲಕ, ಹಿರಣ್ಯಕಶಿಪು ಭಗವಾನ್ ಬ್ರಹ್ಮನಿಂದ ವರವನ್ನು ಪಡೆದಿದ್ದನು, ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಯಾವುದೇ ಜೀವಿ (ಅರ್ಧದೇವತೆ, ರಾಕ್ಷಸ, ಮನುಷ್ಯ ಅಥವಾ ಪ್ರಾಣಿ), ಮನೆಯ ಒಳಗೆ ಅಥವಾ ಹೊರಗೆ, ಹಗಲು ಅಥವಾ ರಾತ್ರಿ, ಭೂಮಿಯಲ್ಲಿ ಅಥವಾ ಆಕಾಶದಲ್ಲಿ, ಯಾವುದೇ ಆಯುಧದಿಂದ ಅವನನ್ನು ಕೊಲ್ಲುವಂತಿರಲಿಲ್ಲ. 

ಈ ವಿಶೇಷ ವರದಾನದಿಂದ, ಹಿರಣ್ಯಕಶಿಪು ಅತ್ಯಂತ ಶಕ್ತಿಶಾಲಿಯಾದನು. ಅವನು ಎಲ್ಲಾ ದಿಕ್ಕುಗಳನ್ನು ಗೆದ್ದನು ಮತ್ತು ಎಲ್ಲರ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದನು. ಅವನು ವಿಷ್ಣು ಮತ್ತು ಅವನ ಭಕ್ತರ ಮೇಲೆ ದ್ವೇಷಿಯಾಗಿದ್ದನು. ಇದಕ್ಕೆ ವಿರುದ್ಧವಾಗಿ, ಅವನ ಮಗ ಪ್ರಹ್ಲಾದನು ತನ್ನ ಜೀವನದ ಆರಂಭದಿಂದಲೂ ವಿಷ್ಣುವಿನ ಮಹಾನ್ ಭಕ್ತನಾಗಿದ್ದನು. ಆದ್ದರಿಂದ, ಹಿರಣ್ಯಕಶಿಪು ತನ್ನ ಮಗನನ್ನು ವಿವಿಧ ರೀತಿಯಲ್ಲಿ ಕೊಲ್ಲಲು ಹಲವಾರು ಪ್ರಯತ್ನಗಳನ್ನು ಮಾಡಿದನು, ಆದರೆ ಪ್ರತಿ ಬಾರಿಯೂ, ಭಗವಂತ ಅವನನ್ನು ರಕ್ಷಿಸಿದನು.

ಕೊನೆಗೆ, ಭಗವಂತನು ಒಂದು ಕಂಬದಿಂದ ಹೊರಬಂದು ವಿಶಿಷ್ಟವಾದ ಅರ್ಧ-ಮನುಷ್ಯ ಅರ್ಧ-ಸಿಂಹ ರೂಪವನ್ನು (ಈ ರೂಪವು ಮನುಷ್ಯನೂ ಅಲ್ಲ ಅಥವಾ ಪ್ರಾಣಿಯೂ ಅಲ್ಲ) ಧರಿಸಿದನು. ಅವನು ಸಂಜೆ (ಹಗಲು ಅಥವಾ ರಾತ್ರಿಯೂ ಅಲ್ಲ), ಸಭೆಯ ದ್ವಾರದಲ್ಲಿ (ಯಾವುದೇ ನಿವಾಸದ ಒಳಗೆ ಅಥವಾ ಹೊರಗೆ ಅಲ್ಲ) ಹಿರಣ್ಯಕಶಿಪುವನ್ನು ಕೊಂದನು, ರಾಕ್ಷಸನನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡನು (ಭೂಮಿ ಅಥವಾ ಆಕಾಶವಲ್ಲ) ಮತ್ತು ರಾಕ್ಷಸನ ದೇಹವನ್ನು ತನ್ನ ಉಗುರುಗಳಿಂದ (ಆಯುಧದಿಂದ ಅಥವಾ ಯಾವುದೇ ಅಸ್ತಿತ್ವದಿಂದ - ಸತ್ತ ಅಥವಾ ಜೀವಂತ) ಹರಿದು ಹಾಕಿದನು. ಹೀಗೆ, ಭಗವಂತನು ಬ್ರಹ್ಮನ ವರದ ಎಲ್ಲಾ ಷರತ್ತುಗಳನ್ನು ಪೂರೈಸಿ ಹಿರಣ್ಯಕಶಿಪುವನ್ನು ಸುಲಭವಾಗಿ ಕೊಂದನು.

ಈ ಅದ್ಭುತ ಕಾಲಕ್ಷೇಪದ ಮೂಲಕ, ಪರಮಾತ್ಮನು ತನ್ನ ಬುದ್ಧಿಶಕ್ತಿಯನ್ನು ಮೀರಿಸಿ ಮೋಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತೋರಿಸಿದನು. ಭಗವಂತ ಯಾರನ್ನಾದರೂ ಕೊಲ್ಲಲು ಬಯಸಿದರೆ, ಅವನು ಎಷ್ಟೇ ಬುದ್ಧಿವಂತ ಮತ್ತು ಶಕ್ತಿಶಾಲಿಯಾಗಿದ್ದರೂ ಯಾರೂ ಅವನನ್ನು ಉಳಿಸಲು ಸಾಧ್ಯವಿಲ್ಲ. ಅದೇ ರೀತಿ, ಭಗವಂತ ಯಾರನ್ನಾದರೂ ಉಳಿಸಲು ಬಯಸಿದರೆ, ಯಾರೂ ಅವನನ್ನು ಕೊಲ್ಲಲು ಸಾಧ್ಯವಿಲ್ಲ.

ಭಕ್ತರು ಮುಸ್ಸಂಜೆಯವರೆಗೆ ಉಪವಾಸ ಆಚರಿಸುತ್ತಾರೆ ಮತ್ತು ತಮ್ಮ ಆಧ್ಯಾತ್ಮಿಕ ಹಾದಿಯಲ್ಲಿ ಎಲ್ಲಾ ರೀತಿಯ ಅಪಾಯಗಳು ಮತ್ತು ತೊಂದರೆಗಳಿಂದ ಆತನ ಕರುಣೆ ಮತ್ತು ರಕ್ಷಣೆಯನ್ನು ಪಡೆಯಲು ನರಸಿಂಹ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮುಂಜಾನೆ ಮತ್ತು ಸಂಜೆ ಭಗವಂತನಿಗೆ ವಿಸ್ತಾರವಾದ ಅಭಿಷೇಕವನ್ನು ಮಾಡಲಾಗುತ್ತದೆ. 

ಇದು ಭಾಗ್ಯವಯ್ಯ ನಾರಸಿಂಹನ ನಾಮ / Idu Bhagya Idu Bhagya

ರಚನೆ - ಶ್ರೀಚಂದ್ರ / ಸಂಗೀತ - ನರಸಿಂಹ ನಾಯಕ್ / ಕೀಬೋರ್ಡ್ - ಜಗದೀಶ ಚಂದ್ರ Lyrics - Sri Chandra / Music - Narasimha Nayak / Keyboard - Jagadeesha Chandra ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ನಾರಸಿಂಹನ ನಾಮ ಸ್ಮರಣೆ ಹಿತವಯ್ಯಾ / ಯೋಗ ನರಸಿಂಹನಿವ ಲಕ್ಷ್ಮಿ ನರಸಿಂಹನಿವ ಭೋಗ ನರಸಿಂಹನಿವ ಶಾರದೆಯ ಮಾವನಿವ ಆದಿ ಶಂಕರಗೊಲಿದ ಹತ್ತು ಅವತಾರದವ ನರಸಿಂಹ ಎಂದಾಗ ಓಡೋಡಿ ತಾ ಬರುವ // ಸಿರಿಯ ವರಿಸಿದ ಸ್ವಾಮಿ ಸಿರಿ ಭಾಗ್ಯ ಕರುಣಿಸುವ ಗ್ರಹ ಚೇಷ್ಟೆಗಳ ಕಳೆದು ಮಂಗಳವ ತರುವ ಶನಿಕಾಟ ಕಳೆಯುವನು ಶಂಕರನ ಸಖನಿವನು ಭಕ್ತರುದ್ಧಾರಕನು ನರಸಿಂಹನಿವನು // ಬ್ರಹ್ಮ ನಾ ವಾರದಿಂದ ಕೊಬ್ಬಿದಾ ದುರುಳರನು ನಿರ್ನಾಮ ಮಾಡಿದ ಸುಮಶರನ ಪಿತನು ಭಜಿಸಿದರೆ ಅನುದಿನ ಭವಬಂಧ ಕಳೆಯುವಾ ಶ್ರೀಹರಿ ಶ್ರೀಹರಿ ದ್ವಾರಪಾಲರ ಶಾಪ ಕಳೆದಂಥ ಸುರನು //

Thursday, May 8, 2025

Dhanalakshmi daye tori baamma / P B Srinivas / ಧನಲಕ್ಷ್ಮೀ ದಯೆ ತೋರಿ ಬಾಮ್ಮ ...


ಧನಲಕ್ಷ್ಮೀ ದಯೆ ತೋರಿ ಬಾಮ್ಮ

ಚಿತ್ರ - ಧನಲಕ್ಷ್ಮಿ/ ಸಂಗೀತ - ಎಂ ರಂಗರಾವ್ / ಗಾಯಕ - ಪಿ ಬಿ ಶ್ರೀನಿವಾಸ್ / ಸಾಹಿತ್ಯ - ಚಿ ಉದಯಶಂಕರ

Dhanalakshmi daye tori baamma

Singer - P B Srinivas / Music - M Rangarao / Lyrics - Chi Udayashankara / Film - Dhanalakshmi

This song is from the Kannada movie Dhanalakshmi, which starred Manjula and Srinath. P B Srinivas is the singer, and M Rangarao has composed the music. Chi Udayashankar wrote the song's lyrics. The actor for this song is Srinath. The devotional song of Godess Dhanalakshmi is extremely significant, regardless of the film's plot and setting. Rangarao, who composed excellent music, and P B Srinivas, who sang the melody, should both be commended at the same time. I've tried playing this song on the keyboard. 

ಶ್ರೀನಾಥ್ ಮಂಜುಳಾ ನಟಿಸಿರುವ ಧನಲಕ್ಷ್ಮೀ ಎಂಬ ಚಿತ್ರದ ಹಾಡು ಇದು. ಹಾಡಿರುವವರು ಪಿ ಬಿ ಶ್ರೀನಿವಾಸ್, ಸಂಗೀತ ನೀಡಿದ್ದಾರೆ ಎಂ ರಂಗರಾವ್ ಅವರು. ಹಾಡಿನ ಸಾಹಿತ್ಯ ಚಿ ಉದಯಶಂಕರ ಅವರದು. ಹಾಡಿಗೆ ನಟಿಸಿದ್ದಾರೆ ಶ್ರೀನಾಥ್ ಅವರು. ಚಿತ್ರದ ಕಥೆ , ಸಂದರ್ಭ ಏನೇ ಇರಬಹುದು ಆದರೆ ಧನಲಕ್ಷ್ಮಿಯ ಸುಂದರ ವರ್ಣನೆ ಇರುವ ಹಾಡಿನ ಸಾಹಿತ್ಯವನ್ನು ಮೆಚ್ಚಲೇ ಬೇಕು ಹಾಗೆಯೆ ಮಧುರವಾಗಿ ಹಾಡಿರುವ ಪಿ ಬಿ ಶ್ರೀನಿವಾಸ್ ಅವರಿಗೂ ಹಾಗು ಉತ್ತಮ ಸಂಗೀತ ಸಂಯೋಜನೆ ನೀಡಿರುವ ರಂಗರಾವ್ ಅವರಿಗೂ ಅಭಿನಂದನೆ ಸಲ್ಲಿಸಬೇಕು .

ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ | ಕರವೀರ ಪುರದಲ್ಲಿ ಬಂದು ನೆಲೆಸಿ ಗತಿ ನೀನೇ ಎಂದವರ ಕೈ ಬಿಡದೆ ಹರಸಿ | ಕಾಪಾಡುವ ತಾಯೆ ಬಾರೆ ಕನಿಕರಿಸಿ || ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ | ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ | ಸಿರಿವಂತರ ಸೆರೆಯ ತೊರೆದು ಬಾರಮ್ಮ || ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ | ದಿವ್ಯ ದರುಶನ ನೀಡೆ ಒಲಿದು ಬಾರಮ್ಮ | ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ ತಡೆದರದಿ ಪೂರೈಸಿ ಬೇಗ ಸಲಹಮ್ಮ ||ಧನಲಕ್ಷ್ಮೀ|| ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ ಸುರಲೋಕದ ಪಾರಿಜಾತ ಅರ್ಪಿಸುವೆ | ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು | ಸಿರಿ ಪಾದ ಕಮಲಗಳಿಂದೆ ಪೂಜಿಸುವೆ ||ಧನಲಕ್ಷ್ಮೀ||

Wednesday, May 7, 2025

An Ideal Student /Lyrics & Music - Jagadeesh Chandra /ಆದರ್ಶ ವಿದ್ಯಾರ್ಥಿ /...


ಆದರ್ಶ ವಿದ್ಯಾರ್ಥಿ / An Ideal Student

ಸಾಹಿತ್ಯ , ಸಂಗೀತ - ಜಗದೀಶ ಚಂದ್ರ / Lyrics & Music - Jagadeesha Chandra

Subhashitas in Sanskrit are like treasures. Some of the previously read Subhashitas served as the inspiration for this poem. The students of today are not the same as those of the past. Many students today merely wish to pass in order to somehow acquire a government job. Few other students are wealthy and apathetic in their academics. For them, student life consists solely of enjoyment. A true student is one who actively pursues knowledge. Therefore, each student should adhere to specific rules to become a true citizen. Students must have a strong desire to learn. He should avoid being lazy and taking a wrong path. He needs to be pure and understand that knowledge, not wealth, is what matters most.

ಸಂಸ್ಕೃತದ ಸುಭಾಷಿತಗಳು ಎಂದರೆ ಅದು ನಿಧಿಯಿದ್ದಂತೆ. ಅದರಲ್ಲಿ ಈ ಹಿಂದೆ ಓದಿದ್ದ ಕೆಲವು ಸುಭಾಷಿತಗಳನ್ನು ಆಧಾರವಾಗಿಟ್ಟುಕೊಂಡು ಈ ಪದ್ಯವನ್ನು ಬರೆದಿದ್ದೇನೆ. ಹಿಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು. ಇಂದು ಅನೇಕ ವಿದ್ಯಾರ್ಥಿಗಳು ಕೇವಲ ತೇರ್ಗಡೆ ಹೊಂದಿ, ಹೇಗಾದರೂ ಮಾಡಿ ಒಂದು ಸರ್ಕಾರೀ ಕೆಲಸವನ್ನು ಗಿಟ್ಟಿಸಬೇಕೆಂಬ ಆತುರದಲ್ಲಿರುತ್ತಾರೆ. ಇನ್ನು ಕೆಲವರಿಗೆ ಹೇರಳವಾದ ಆಸ್ತಿಯಿದ್ದು ಅವರಿಗೆ ವಿದ್ಯೆಯಲ್ಲಿ ಆಸಕ್ತಿಯೇ ಇರುವುದಿಲ್ಲ. ವಿದ್ಯಾರ್ಥಿ ಜೀವನ ಎಂದರೆ ಅವರಿಗೆ ಕೇವಲ ಮೋಜು.
ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರಸಿ ಬಂದವನು ಎಂದರ್ಥ. ವಿದ್ಯಾರ್ಥಿಗಳಿಗೆ ಯಾವುದೇ ಮತ ಅಥವಾ ಧರ್ಮಗಳ ಕಟ್ಟುಪಾಡಿಗಿಂತ ಜ್ಞಾನವನ್ನು ಸಂಪಾದಿಸುವುದೇ ಧರ್ಮವಾಗಿರಬೇಕು. ಹೀಗಾಗಿ ವಿದ್ಯಾರ್ಥಿಯು ಕೆಲವು ಪಾಲನೆಗಳನ್ನು ಪಾಲಿಸಿದರೆ ಒಬ್ಬ ಸತ್ಪ್ರಜೆಯಾಗುವುದರಲ್ಲಿ ಸಂದೇಹವೇ ಇಲ್ಲ. ವಿದ್ಯಾರ್ಥಿಯು ಜ್ಞಾನ ಸಂಪಾದಿಸಲು ಹಾತೊರೆಯುತ್ತಿರಬೇಕು. ಸೋಮಾರಿಯಾಗಿ ದುರ್ಮಾರ್ಗಕ್ಕೆ ಹೋಗಬಾರದು. ಅಂತರಂಗ ಹಾಗು ಬಹಿರಂಗದಲ್ಲಿ ಶುದ್ಧನಾಗಿರಬೇಕು. ವಿದ್ಯಾರ್ಥಿಯಾಗಿರುವಾಗ ಜ್ಞಾನ ಮುಖ್ಯ ಹಣವಲ್ಲ ಎಂಬುದನ್ನು ಅರಿತಿರಬೇಕು.


ಆದರ್ಶ ವಿದ್ಯಾರ್ಥಿ / An Ideal Student

ವಿದ್ಯೆಯನ್ನು ಅರಸಿ ಬಂದ ಮಕ್ಕಳು
ಗುರು ಹಿರಿಯರನ್ನು ಆದರಿಸಬೇಕು ಜ್ಞಾನಕೆ ಹಾತೊರೆಯುತ್ತಿರಬೇಕು ಜ್ಞಾನ ಸುಧಾರಕ ನಾಗಬೇಕು // ಕಲಿಯುವುದಷ್ಟೇ ಧ್ಯೇಯ ವಾಗಬೇಕು ಸೋಮಾರಿತನವನ್ನು ಕಿತ್ತೊಗೆ ಬೇಕು ತೇಜವಂತ ನಾಗಲು ಪಣ ತೊಡಬೇಕು ಕೆಟ್ಟ ಕೆಲಸ ಮಾಡೆನೆಂದು ಸಾರಬೇಕು // ಅಂತರಂಗ ಬಹಿರಂಗ ಶುದ್ಧಿ ಇರಬೇಕು ಆಸ್ತಿಪಾಸ್ತಿ ಹಣದಾಸೆ ದೂರವಿಡಬೇಕು ಜಗದೊಡೆಯನಿಗೆ ಋಣಿಯಾಗಬೇಕು ಸಹಬಾಳ್ವೆ ಪುಣ್ಯವೆಂದು ಅರಿಯಬೇಕು //

Monday, May 5, 2025

Yun Hasraton Ke Daag | Lata Mangeshkar | Madanmohan / यूँ हसरतोंके / लता...


यूँ हसरतोंके / लता मंगेशकर / मदन मोहन /
Yun Hasraton Ke Daag - Lata Mangeshkar - Madan Mohan - Rajendra Krishn / Rag Khamaj
Beautiful, heart-touching lyrics & lovely music. I can say this is an outstanding gazal from the film Adalat; listeners feel proud of compositions like this. Music director Madanmohan and singer Lata Mangeshkar are worth acknowledging. Heart-touching song immortalised by the golden voice of Lata and the histrionic performance of Nargis.

ಮನಮುಟ್ಟುವ ಸಂಗೀತ ನೀಡಿರುವ ಮದನ್ ಮೋಹನ್ ಹಾಗೂ ಗಾಯಕಿ ಲತಾ ಮಂಗೇಶ್ಕರ್, ಗಝಲ್ ಸಾಹಿತ್ಯ ಬರೆದಿರುವ ರಾಜೇಂದ್ರ ಕೃಷ್ಣ ಅವರು ಅಭಿನಂದನಾರ್ಹರು. ಇದು ಕಮಾಜ್ ರಾಗದ ಆಧಾರಿತ ಗೀತೆ. Yun Hasrton Ke Daag - Rag Khamaj, Keyboard - Jagadeesha Chandra Yun hasaraton ke daag mohabbat men dho liye Khud dil se dil ki baat kahi aur ro liye Ghar se chale the ham to khushi ki talaash men Gam raah men khade the wo hi saath ho liye Khud dil se dil ki baat kahi aur ro liye Murajha chuka hai fir bhi ye dil ful hi to hai Ab ap ki khushi ise kaanton men toliye Khud dil se dil ki baat kahi aur ro liye Hothhon ko si chuke to zamaane ne ye kaha Ye chup si kyon lagi hai aji kuchh to boliye Khud dil se dil ki baat kahi aur ro liye +3,60,10, 414 splt Ni2, 72, 29

Radha Madhava vinoda hasaa /TG Lingappa / TG Lingappa, P Sushila /K Prab...


ರಾಧಾ ಮಾಧವ ವಿನೋದ ಹಾಸಾ / Radha Madhava Vinoda Haasaa


In the Kannada cinema industry, the classic movie School Master gained a lot of recognition. The film, which was directed by BR Pantulu, stars B R Pantulu, Udayakumar, B Sarojadevi, Sowkar Janaki, Shivaji Ganesan, and Gemini Ganeshan. The movie has been remade in Hindi, Telugu, Tamil, and Malayalam. In the same mohana raga, this song, Radhamadhava Vinodhahasa, is available in several languages. The Kannada version has vocals by TG Lingappa and P. Suisha. Kanagal Prabhakar Shastri penned the song. T. G. Lingappa is the composer. In this song, lovers perceive themselves as Radha and Madhava. For his own compositions, TG Lingappa has performed alongside Susheela. One craves to listen to the catchy song in Mohana raga repeatedly. I played the keyboard. Please listen to.

ಸ್ಕೂಲ್ ಮಾಸ್ಟರ್ ಎಂಬ ಹಳೆಯ ಚಿತ್ರ ಆ ಕಾಲದಲ್ಲಿ ಬಹಳ ಹೆಸರು ಮಾಡಿತ್ತು. ಬಿ. ಆರ್. ಪಂತಲು ಅವರು ನಿರ್ದೇಶಿಸಿ ನಟಿಸಿದ್ದ ಆ ಚಿತ್ರದಲ್ಲಿ ಬಿ ಆರ್ ಪಂತುಲು, ಉದಯಕುಮಾರ್, ಸರೋಜಾದೇವಿ, ಸಾವ್ಕಾರ್ ಜಾನಕಿ, ಶಿವಾಜಿ ಗಣೇಶನ್ ಮತ್ತು ಜೆಮಿನಿ ಜೆಮಿನಿಗಣೇಶನ್ ಅವರು ನಟಿಸಿದ್ದರು. ಈ ಸಿನೆಮಾ ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ರಿಮೇಕ್ ಆಯಿತು. ರಾಧಾಮಾಧವ ವಿನೋದಹಾಸ ಎಂಬ ಈ ಹಾಡು ಅದೇ ಮೋಹನ ರಾಗದಲ್ಲಿ ಇತರ ಭಾಷೆಗಳಲ್ಲಿಯೂ ಕೇಳಬಹುದು. ಕನ್ನಡದಲ್ಲಿ ಟಿ ಜಿ ಲಿಂಗಪ್ಪ ಹಾಗು ಪಿ ಸುಶೀಲ ಹಾಡಿದ್ದಾರೆ. ಸಾಹಿತ್ಯ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರದ್ದು. ಸಂಗೀತ ಟಿ ಜಿ ಲಿಂಗಪ್ಪ. ಪ್ರೇಮಿಗಳು ತಮ್ಮನ್ನು ರಾಧಾ ಮಾಧವರಾಗಿ ಕಲ್ಪಿಸಿಕೊಂಡು ಪ್ರೇಮಲೋಕದಲ್ಲಿ ತೇಲಾಡುವ ಗೀತೆ ಇದು. ಟಿ ಜಿ ಲಿಂಗಪ್ಪನವರು ತಮ್ಮದೇ ಸಂಗೀತಕ್ಕೆ ಸುಶೀಲಾ ಅವರೊಂದಿಗೆ ಹಾಡಿದ್ದಾರೆ. ಮತ್ತೆ ಮತ್ತೆ ಕೇಳಬೇಕೆನಿಸುವ ಮೋಹನ ರಾಗದ ಮಧುರ ಗೀತೆ. ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಕೇಳಿ.


ರಾಧಾ ಮಾಧವ ವಿನೋದ ಹಾಸಾ / ಸಂಗೀತ - ಟಿ ಜಿ ಲಿಂಗಪ್ಪ , ಗಾಯಕರು - ಟಿ ಜಿ ಲಿಂಗಪ್ಪ , ಪಿ ಸುಶೀಲ , ಚಿತ್ರ - ಸ್ಕೂಲ್ ಮಾಸ್ಟರ್ / ಸಾಹಿತ್ಯ - ಕಣಗಾಲ್ ಪ್ರಭಾಕರ ಶಾಸ್ತ್ರಿ / ಕೀಬೋರ್ಡ್ - ಜಗದೀಶ ಚಂದ್ರ

Music - T G Lingappa / Singers - T G Lingappa, P Sushila / Lyrics - Kanagal Prabhakara Shastri / Keyboard - Jagadeesha Chandra ರಾಧಾ ಮಾಧವ ವಿನೋದ ಹಾಸ ಯಾರೂ ಮರೆಯದ ಪ್ರೇಮ ವಿಲಾಸ // ಮಾಗಿ ಮಲ್ಲಿಗೆ ಹೂ ಬನದಲ್ಲಿ ಭೋಗಿ ಹುಣ್ಣಿಮೆ ರಾತ್ರಿಯಲಿ ಸ್ವರ್ಗ ಭೂಮಿ ಎಲ್ಲಾ ದಾಟಿ ಆಡಿದ ಮಾತೇ ರಾಗ ವಿಲಾಸ // ಜೀವನವೆಲ್ಲ ಗೋಕುಲವಾಗಿ ಒಲವೇ ಯಮುನಾ ನದಿಯಾಗಿ ನಾವೇ ರಾಧಾ ಮಾಧವರಾಗಿ ಆಡುವ ಮಾತೇ ಪ್ರೇಮ ವಿಲಾಸ //

T280 L291 Split T054, L148 R77 Spd100

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...