Monday, July 28, 2025

Nagara Panchami / Sodararu barutare / ನಾಗರಪಂಚಮಿ ಹಾಡು / ಸೋದರರು ಬರುತಾರೆ

ಸೋದರರಿಂದು  ಬರುತಾರೆ  / ನಾಗರಪಂಚಮಿ ಹಾಡು 
Sodaratindu Barutare (Brothers are coming today) / Nagara Panchami 

ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಯಾವ ಹಬ್ಬ, ಮದುವೆ ಇತ್ಯಾದಿಗಳನ್ನು ಮಾಡುವುದಿಲ್ಲ. ಅದು ಮುಗಿದ ನಂತರ ಶ್ರಾವಣ ಮಾಸ ಎಂದರೆ ಹಬ್ಬಗಳ ಆರಂಭ ಎಂದರ್ಥ. ಆರಂಭವಾದ ೫ ನೇ ದಿನ ಬರುವ ಹಬ್ಬವೇ ನಾಗರಪಂಚಮಿ. ಹಿಂದೂಗಳು  ಅಥವಾ ಸನಾತನ ಧರ್ಮವನ್ನು ಪಾಲಿಸುವವರು, ಇತರರಲ್ಲಿಯೂ, ಇತರ ಸಸ್ಯ ಹಾಗೂ ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವವರು. ಇದನ್ನು ಕೆಲವರು ವ್ಯಂಗ್ಯವಾಗಿ ಆಡಿಕೊಳ್ಳುವರು ಇದ್ದಾರೆ. ಆದರೆ ಅದರ ಹಿಂದಿನ ಗೂಡಾರ್ಥವನ್ನು ನೋಡಿದರೆ ,  ಅದು ಎಲ್ಲರಿಗೂ ಜೀವಿಸುವ ಹಕ್ಕು ಇದೆ, ಅದನ್ನು ಕಿತ್ತುಕೊಳ್ಳಬೇಡಿ ಎಂದು ಅರ್ಥ. ಸುಮ್ಮನೆ, ಕೊಲ್ಲಬೇಡಿ, ಹಾಳು ಮಾಡಬೇಡಿ ಎಂದರೆ ಜನರ ತಲೆಗೆ ಹೋಗುವುದಿಲ್ಲ. ಹೀಗಾಗಿ ಸರಿಯಾದ ಸಂದರ್ಭದಲ್ಲಿ ಅದಕ್ಕೆ ಸ್ವಲ್ಪ ಆದ್ಯಾತ್ಮ, ಭಕ್ತಿಗಳನ್ನು ಸೇರಿಸಿ ಅವು ಹಾಳಾಗದಂತೆ ನೋಡಿಕೊಂಡಿದ್ದಾರೆ. ಅದಕ್ಕೆ ಕೆಲವು ಕತೆಗಳೂ ಇರಬಹುದು, ನಂಬುವುದು ಬಿಡುವುದು ವೈಯುಕ್ತಿಕ ಅಭಿಪ್ರಾಯ. ಆದರೆ ಅದರ ಹಿಂದಿನ ಅರ್ಥವನ್ನು ಗ್ರಹಿಸಬೇಕು. ನಾಗರಪಂಚಮಿ ಯಂದು ನಾಗನನ್ನು ಪೂಜಿಸಬೇಕು ಎಂದರೆ ಅಂದು ಮಾತ್ರ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಪೂಜೆ ಮಾಡಿದರೆ ಸಾಲದು ,  ಹಾವುಗಳನ್ನೂ ಬದುಕಲು ಬಿಡಬೇಕು ಎಂದರ್ಥ. ನಾಗರಕಲ್ಲಿಗೆ ಪೂಜಿಸುವುದು, ನಿಜವಾದ ಹಾವು ಬಂದರೆ ಅದನ್ನು ಹೊಡೆದು ಕೊಳ್ಳುವುದು ಸರಿಯಲ್ಲ, ಅದನ್ನು ಎಲ್ಲಿಯಾದರೂ ಸೂಕ್ತವಾದ ಸ್ಥಳದಲ್ಲಿ ಬದುಕಲು ಬಿಡಬೇಕು. ಇದು ನಿಜವಾದ ನಾಗರ ಪೂಜೆ ಎನಿಸಿಕೊಳ್ಳುತ್ತದೆ.  
ಹಾವು ಕಡಿಮೆಯಾದರೆ ಇಲಿಗಳು, ಗೆದ್ದಲುಗಳು ಹೆಚ್ಚಾಗುತ್ತದೆ. ಇಲಿ, ಗೆದ್ದಲು ಹೆಚ್ಚಾದರೆ ಅದರಿಂದ ಬೇರೆ ರೀತಿಯ ತೊಂದರೆಗಳು ಆರಂಭವಾಗುತ್ತದೆ.  ಈ ಪರಿಸರ ಸಮತೋಲನವನ್ನು ಕಾಪಾಡಲು ಪ್ರಕೃತಿಯೇ ಒಂದು ಪದ್ದತಿಯನ್ನು ಅಳವಡಿಸಿದೆ. ಹೀಗಾಗಿ ಈ ಒಂದು ಪರಿಸರ ಸಮತೋಲನವನ್ನು ಕಾಪಾಡುವುದು ನಮ್ಮ ಕರ್ತವ್ಯ. ಪೂಜೆ ಎನ್ನುವುದು ಕೇವಲ ಸಾಂಕೇತಿಕ, ಆದರೆ ಹಾವುಗಳನ್ನು ಕೊಲ್ಲದೆ ಅದನ್ನು ಹಿಡಿದು ಬೇರೆಕಡೆ ಬಿಡುವುದು ನಿಜವಾದ ಪೂಜೆಯಾಗುತ್ತದೆ. 

ಸ್ಕಂದ ಪುರಾಣದಲ್ಲಿ ಈಶ್ವರನ ಮಗ ಸುಬ್ರಹ್ಮಣ್ಯನು  ನಾಗರ ಪಂಚಮಿಯನ್ನು ಯಾಕೆ ಆಚರಿಸಬೇಕು ಎಂಬ ಪ್ರಶ್ನೆಗೆ ಒಂದು ಕಥೆಯನ್ನು ಹೇಳುತ್ತಾನೆ.
ಹಿಂದೆ ದೇವಶರ್ಮ ಎಂಬಾತನಿದ್ದನು. ಆತನಿಗೆ  ಒಂಬತ್ತು ಮಕ್ಕಳು,  8 ಗಂಡು ಮಕ್ಕಳು ಹಾಗೂ ಒಬ್ಬಳು  ಹೆಣ್ಣು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಮಗಳ ಬಳಿ  ಆಶ್ರಯ ಕೇಳುತ್ತದೆ. ಆ ಹುಡುಗಿ ಆ ಹಾವಿಗೆ ಆಹಾರವನ್ನು ಕೊಟ್ಟು ಪ್ರೀತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ಹಾವು ಪ್ರತಿದಿನ ಆಕೆಗೆ ಸ್ವಲ್ಪ ಚಿನ್ನವನ್ನು ನೀಡುತ್ತಿರುತ್ತದೆ. ಇದನ್ನು ಅರಿತ ಅವಳ ಒಬ್ಬ ಅಣ್ಣ ಇನ್ನು ಹೆಚ್ಚು ಚಿನ್ನವನ್ನು ತರಬೇಕೆಂದು ತಂಗಿಯನ್ನು ಪೀಡಿಸುತ್ತಾನೆ. ಇಷ್ಟೇ ಅಲ್ಲದೆ ಆ ಹಾವನ್ನು ಹೆದರಿಸಿ  ಅದಕ್ಕೆ ಕೋಲಿನಿಂದ ಹೊಡೆಯುತ್ತಾನೆ.  ದ್ವೇಷದಿಂದ ಆ ಹಾವು ಅವಳ ಏಳು ಜನ ಅಣ್ಣಂದಿರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೆನಲ್ಲ ಎಂದು ಆ ಹುಡುಗಿ ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾಗುತ್ತಾಳೆ. ಆಗ ದೇವರು ಪ್ರತ್ಯಕ್ಷನಾಗಿ ಹಾವಿನ ರಾಜ ವಾಸುಕಿಗೆ ಆ ಸತ್ತ ಅಣ್ಣಂದಿರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಹುಡುಗಿ ಯಶಸ್ವಿಯಾದ ದಿನವೇ ಶ್ರಾವಣ ಮಾಸದ ಪಂಚಮಿಯ ದಿನವಾಗಿರುತ್ತದೆ. ಹೀಗಾಗಿ ಆ ದಿನವನ್ನು ನಾಗರಪಂಚಮಿ ಎಂದು ಆಚರಿಸಿ, ಸೋದರರು ಸೋದರಿಯರ ಮನೆಗೆ ಹೋಗಿ ನಾಗನಿಗೆ ಪೂಜಿಸಿದ ಹಾಲಿನ ತನಿ ಎರೆಸಿಕೊಳ್ಳಬೇಕು ಎಂಬ ಪದ್ಧತಿ ಜಾರಿಗೆ ಬಂತು.  ಇದು ನಾಗರಪಂಚಮಿಯ ಕಥೆ. ಜನಮೇಜಯನು ಸರ್ಪಗಳ ಯಜ್ಞವನ್ನು ನಿಲ್ಲಿಸಿದ್ದು ಇದೇ ಪಂಚಮಿಯ ದಿನ ಎಂಬ ನಂಬಿಕೆ ಇದೆ. 
ಇದನ್ನು ಕೇವಲ ಕಟ್ಟುಕತೆ ಎಂದು ಮೂಗೆಳೆಯುವುದನ್ನು ಬಿಟ್ಟು, ಇದರಿಂದಾಗಿ ಹಾವುಗಳು ಬದುಕಿಕೊಂಡವು, ಅಣ್ಣ ತಂಗಿಯರ ಬಾಂಧವ್ಯವೂ ವೃದ್ಧಿಯಾಯಿತು ಎಂದು ಅಂದುಕೊಂಡು ಹಬ್ಬವನ್ನು ಆಚರಿಸಬಹುದು ಅಲ್ಲವೇ? ಅಂದು ಸೋದರರು, ಸೋದರಿಯರ ಮನೆಗೆ ಸುಮ್ಮನೆ ಹೋಗುವುದಿಲ್ಲ, ಅವರಿಗೆ ಏನಾದರೂ ಉಡುಗೊರೆಯನ್ನು ಕೊಡುತ್ತಾರೆ, ಸೋದರಿಯರೂ ಸೋದರರಿಗೆ ವಿಶೇಷ ತಿನಿಸುಗಳನ್ನು ಕೊಟ್ಟು ಅವರಿಗೂ ಏನಾದರೂ ಉಡುಗೊರೆಯನ್ನು ಕೊಡುತ್ತಾರೆ. ಕೆಲವು ಸೋದರರು ನಾಗರಪಂಚಮಿಯಂದು ಉಡುಗೊರೆ ನೀಡದಿದ್ದರೂ, ಮುಂದೆ ಬರುವ ಗೌರಿ ಹಬ್ಬಕ್ಕೆ ಏನಾದರೂ ಉಡುಗೊರೆ ಕೊಡುತ್ತಾರೆ. 
ಭಾರತ ಸಂಸ್ಕೃತಿಯಲ್ಲಿ ನಾಗರಹಾವಿಗೆ ವಿಶೇಷ ಸ್ಥಾನವಿದೆ. ನಾಗ ಎಂಬ ಜನಾಂಗ ಇಂದಿಗೂ ಉಳಿದುಕೊಂಡಿದೆ. ನಾಗಮಂಡಲ ಪೂಜೆ, ನಾಗಾರಾಧನೆ ಇಂದಿಗೂ ಕೆಲವರು ಆಚರಿಸುತ್ತಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸುತ್ತಾರೆ. 
ನಮ್ಮ ಪುರಾಣಗಳಲ್ಲಿ ಜನಮೇಜಯ ಮಾಡಿದ ಸರ್ಪಯಾಗ, ವಾಸುಕಿ, ಆದಿಶೇಷ, ತಕ್ಷಕ, ಅನಂತ ಮೊದಲಾದ ನಾಗರಾಜರ ಪ್ರಸಂಗಗಳು,  ಎಲ್ಲಾ ಹಳ್ಳಿಗಳಲ್ಲೂ,  ದೇವಸ್ಥಾನಗಳಲ್ಲೂ ಕಂಡುಬರುವ ನಾಗರಕಲ್ಲುಗಳು, ಶಿವನ ಆಭರಣ,  ಗಣೇಶ ಹೊಟ್ಟೆಗೆ ಸುತ್ತಿಕೊಂಡಿರುವ ಹಾವು,  ವಿಷ್ಣುವಿನ ಹಾಸಿಗೆಯಾದ ಆದಿಶೇಷ, ನಾಗಕನ್ಯೆಯರು, ನಾಗಲೋಕ, ನಾಗಲೋಕದ ಕಥೆಗಳು,  ಉಲೂಪಿಯ ಕಥೆ, ಕರ್ಣ ಬಳಸಿದ ಸರ್ಪಾಸ್ತ್ರ, ಇವೆಲ್ಲವೂ ಮನುಷ್ಯರಿಗೂ ಸರ್ಪಗಳಿಗೂ ಇರುವ ಸಂಬಂಧಗಳನ್ನು ತೋರಿಸುತ್ತದೆ. ಹಾವಿಗೆ ಹಿಂಸೆ ಮಾಡಿದರೆ ಅದು ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತದೆ ಎಂಬ ನಂಬಿಕೆ ಬಹುಷಃ ಹಾವುಗಳನ್ನು ಉಳಿಸಲು ಮಾಡಿರುವ ತಂತ್ರವೇ ಇರಬೇಕು.  
ಇವೆಲ್ಲವನ್ನೂ ನಕಾರಾತ್ಮಕವಾಗಿ ನೋಡದೆ ಸಕಾರಾತ್ಮಕವಾಗಿ ನೋಡಿ, ಕಟ್ಟುಕತೆ ಎಂದು ಹೀಗಳೆಯದೆ ಅದರ ಹಿಂದಿರುವ ಸಂಕೇತವನ್ನು ಮೆಚ್ಚಿಕೊಳ್ಳಿ. ನಾಗರಪಂಚಮಿಯಂದು ಪೂಜೆ ಮಾಡುತ್ತಿರೋ ಬಿಡುತ್ತೀರೋ ನಿಮಗೆ ಬಿಟ್ಟದ್ದು, ಆದರೆ ಹಾವುಗಳನ್ನು ಉಳಿಸುತ್ತೇವೆ ಎಂಬ ನಿರ್ಧಾರ ಕೈಗೊಳ್ಳಿ, ಪರಿಸರವನ್ನು ಕಾಪಾಡಿ. ಸೋದರ ಸೋದರಿಯರ ಸಂಬಂಧ ಹಿತವಾಗಿರಲಿ. 
ಎಲ್ಲರಿಗೂ ನಾಗರಪಂಚಮಿಯ ಶುಭಾಶಯಗಳು. 

Generally speaking, no festivals, marriages, etc. are observed during the month of Ashadha. Following this, the festival season begins with the start of the month of Shravana. Nagara Panchami is celebrated on the fifth day of Shravana. Sanatana Dharma adherents perceive God in other people, animals, and plants. Some people might ridicule it. But if you look at connotation behind it, the meaning behind is that "everyone has the right to live". The general public might not comprehend these facts if they are presented in simplistic ways. As a result, this is given a philosophical touch to guarantee that people conduct appropriately. A lot of stories are written in order to be well understood. It is preferable to comprehend its meaning or symbolism rather than dismissing it as a narrative. 
During the Nag Panchami festival, cobras are worshipped. This worship's justification suggests that killing snakes is wrong. Snakes are entitled to exist in this world as well. Worshippers of snakes may harm or kill living snakes. This is unacceptable. However, saving rather than killing is the true worship of snakes.
Rats and mice will proliferate if snake populations decline. Additional environmental issues arise when termites and rats proliferate. To preserve this ecological equilibrium, nature has developed a mechanism. It is our responsibility to contribute to preserving this ecological equilibrium. The true act of snake worship is to capture and release a snake in a forest without killing it; worshipping snakes is merely symbolic.
There was a man named Devasharma in the past. Eight of his nine children are boys, and one is a girl. A cobra, terrified by Garuda, asks this daughter for protection one day. The snake was lovingly fed and housed by the girl. The snake provides her some gold each day in exchange. 
One of her brothers encourages her sister to bring additional gold after realising this. Additionally, he scares the snake by striking it with a stick. The snake kills her seven brothers in a fit of wrath and leaves. The girl felt horrible since she thought she was to blame for her brothers' deaths. She attempted suicide. This was stopped by the appearance of God. Later, he commanded "Vasuki," the king of snakes, to bring the deceased brothers back to life. The day of Panchami in the month of Shravan was the day the girl was able to save her brothers' lives. As a result, it is usual for brothers to visit sisters' homes and present milk to the god Nagaraja on this day, which is known as Nagpanchami.
It is believed that on this Panchami day, King Janamejaya put an end to the snake sacrifice.
Consider the moral and relevance of the narrative before concluding that it is not a story worth believing. In this case, the sister fought for her brothers' welfare. Despite the fact that some snakes are dangerous, they should not be killed because their presence contributes to maintaining natural equilibrium.
It becomes common for brothers to visit their sisters as a result of this event. Giving brothers presents further strengthens the bondage. Sisters also cook delectable meals and offer them to their brothers. On the day of Gouri pooja, brothers give their sisters gifts as a form of restitution. 
In India, there is a unique significance to snakes. 'Naga' is a sect that still exists today. Even today, people celebrate festivals like Nagamandala Pooja and snake worship. On Nagapanchami Day, the residents of Battis Shiral, a village in Maharashtra's Sangli district, worship real snakes.
In our epics we can observe many instances of snakes. King Janamejaya performed a snake sacrifice ceremony. Cobras are known by a variety of names, including Vasuki, Adishesha, Takshaka, and Ananta, and there are many legends about them. In all communities and temples Snake stones (Nagara Kallu) can be spotted. The relationship between men and snakes is demonstrated by instances such as Ganesh wearing a snake belt, Nagakanye (Lady snakes), Naga Loka (Land of Snakes), Shiva wearing a snake as an ornament, Ulupi in the Mahabharata, and Karna using a snake arrow during the Mahabharat war. 

It is said that if you attempt to hurt a snake, it will retaliate. It is also believed that snakes retaliate after remembering such incidences for a period of twelve years. Whether true or not, all of these ideas subtly stop people from hurting snakes. This could be the concept underlying all of these kinds of beliefs.
Therefore, rather than dismissing as rubbish, view all of the aforementioned examples favourably. They are significant because of their meaning or concept. Never kill a snake, whether you worship them or not. Despite the fact that some are toxic, they save us by preserving the natural equilibrium. Make a vow to protect snakes on this auspicious day. Allow the bondage between siblings to deepen through this celebration.
To everyone, a Happy Nagara Panchami. 

Lyrics, Music - Jagadeesha Chandra / ರಚನೆ ,  ಸಂಗೀತ - ಜಗದೀಶ ಚಂದ್ರ 

ಅಣ್ಣನು ಮನೆಗೆ  ಬರುತಾನೆ 
ಸಂತಸ ಹೊತ್ತು  ತರುತಾನೆ 

ಕಾಡಿಸಿ ರೇಗಿಸ ಬೇಕು 
ಮುಯ್ಯಿಯ  ತೀರಿಸಬೇಕು //
ಅವ ಕೊಡಿಸಿದ್ದ ಸಿಹಿ ಖಾದ್ಯಕ್ಕೆ  
ದುಪ್ಪಟ್ಟು ಸಿಹಿಯನ್ನು ಕೊಡಬೇಕು 
ನನಗಾಗಿ ಪಟ್ಟ ಕಷ್ಟಕೆ ಇಂದು 
ಪ್ರತಿ ಕಾಣಿಕೆಯ ಕೊಡಬೇಕು 
ತಂದೆಯ ಸ್ಥಾನದಿ ನಿಂತ ಅವಗೆ 
ನಮಿಸುತ ಅಕ್ಕರೆ ಕೊಡಬೇಕು  //

ತಮ್ಮನು  ಮನೆಗೆ ಬರುತ್ತಾನೆ 
ಸವಿ ನೆನಪನ್ನು  ತರುತಾನೆ
 
ಸಿಟ್ಟನು ತೋರಿಸಬೇಕು 
ಮುದ್ದಿಸಿ ಕಾಡಿಸಬೇಕು  //
ನಾ ಮಾಡಿರುವ ಸಿಹಿ ತಿಂಡಿಯನು 
ಮುದ್ದಿಸಿ ಬಾಯಿಗೆ ಇಡಬೇಕು  
ಬಾಲ್ಯದ ನೆನಪನು  ನೆನಪಿಸಿ ಅವಗೆ 
ಅಮ್ಮನ ಪ್ರೀತಿಯ  ಕೊಡಬೇಕು 
ನಾಗರ ಪಂಚಮಿ ಹಬ್ಬಕೆ ಎಂದು 
ನೆನಪಿನ ಕಾಣಿಕೆ ಕೊಡಬೇಕು // 

Sodaratindu Barutare (Brothers are coming today) / Nagara Panchami song 
Lyrics, Music - Jagadeesha Chandra 

My older brother, who offers joy and happiness, 
is coming to my home today 

He made fun of me when I was younger.
Now is the moment for retribution 

When I was a kid, he used to buy me candy; 
now, I have to double the amount and give it to him 

The amount of effort he put forth earlier
To be given back 

When I was a kid, he played the role of a father.
It is my responsibility to express my appreciation and regard 

My younger brother will be returning home today, 
bringing joy and happy memories with him.

I used to tease him when he was younger, 
but now is the ideal time to let him know how much I value him.

Today, I prepared his favourite dish, 
which I like to serve to him with affection.

I ought to assist him in recalling his childhood.
Give him a special present.

I want to show how much a mother loves 
On this Nagara Panchami, the Brothers' Festival.

Wednesday, July 23, 2025

Brothers are coming today/ ಸೋದರರಿಂದು ಬರುತಾರೆ / ನಾಗರಪಂಚಮಿ

ಸೋದರರಿಂದು  ಬರುತಾರೆ  / ನಾಗರಪಂಚಮಿ 
Sodaratindu Barutare (Brothers are coming today) / Nagara Panchami  

ಸೋದರರಿಂದು  ಬರುತಾರೆ  / ನಾಗರಪಂಚಮಿ ಹಾಡು 

Sodaratindu Barutare (Brothers are coming today) / Nagara Panchami 

Lyrics, Music - Jagadeesha Chandra / 
ರಚನೆ ,  ಸಂಗೀತ - ಜಗದೀಶ ಚಂದ್ರ 

Monday, July 21, 2025

Bhimana Amavasye song / Lyrics & Music – Jagadeesha Chandra/ ಭೀಮನ ಅಮಾವಾಸ...

ಭೀಮನ ಅಮಾವಾಸ್ಯೆ Bhimana Amavasye

ಆಷಾಢ ಮಾಸದ ಕಡೆಯ ದಿನ ಅಂದರೆ ಅಮಾವಾಸ್ಯೆಯೇ ಭೀಮನ ಅಮಾವಾಸ್ಯೆ. ಇಲ್ಲಿಗೆ ಆಷಾಢ ಮಾಸದ ಗಾಳಿಯ ಆರ್ಭಟ ಕಡಿಮೆಯಾಗಿ ಶ್ರಾವಣ ಮಾಸದ ಮಳೆಯ ಆರಂಭವನ್ನು ಸೂಚಿಸುತ್ತದೆ.  ಈ ಶುಭದಿನದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸಿ ಮನೆಯ ಗಂಡಸರಿಗೆ ಒಳ್ಳೆಯದಾಗಲಿ ಎಂದು ಪೂಜೆಯನ್ನು ಮಾಡುತ್ತಾರೆ. ಈ ದಿನದಂದೇ ಶಿವನು ಪಾರ್ವತಿಯ ತಪಸ್ಸಿಗೆ ಒಲಿದು ಸ್ವೀಕರಿಸಿದ ಎಂದು ಹೇಳುತ್ತಾರೆ.  ಭೀಮನು ಹುಟ್ಟಿದ ದಿನವೂ ಇದೇ ದಿನವಾಗಿದೆ. ಹೀಗಾಗಿ ಭೀಮ ಈಶ್ವರ ಇಬ್ಬರೂ ಸೇರಿ ಭೀಮೇಶ್ವರ ಎಂಬ ಹೆಸರಾಗಿ ಅಂದು ಜ್ಯೋತಿಯನ್ನು ಇಟ್ಟು ಪೂಜೆ ಮಾಡುವುದರಿಂದ ಅದು ಜ್ಯೋತಿ ಭೀಮೇಶ್ವರ ವ್ರತ ಎಂಬ ಹೆಸರನ್ನು ಪಡೆದು ಕೊಂಡಿದೆ. ಮುಖ್ಯವಾಗಿ ಮಹಿಳೆಯರು ತಮ್ಮ ಮನೆಯ ಪುರುಷ ಸದಸ್ಯರ ಯೋಗಕ್ಷೇಮಕ್ಕೆ ಬೇಡಿಕೊಳ್ಳುವ ವ್ರತ ಇದಾಗಿರುತ್ತದೆ. 

ಮಣ್ಣಿನಿಂದ ಮಾಡಿದ ಅಥವಾ ತಂಬಿಟ್ಟಿನಿಂದ ಮಾಡಿದ ದೀಪವನ್ನು ಪೂಜೆಗೆಂದು ಹಚ್ಚುತ್ತಾರೆ. ಆ ದೀಪದ ಜೋಡಿಯೇ ಶಿವ ಪಾರ್ವತಿಯರ ಸಾಂಕೇತಿಕ ರೂಪವಾಗಿರುತ್ತದೆ. ಸನಾತನ ಧರ್ಮದ ನಂಬಿಕೆಯಂತೆ ದೀಪಗಳು ಕತ್ತಲನ್ನು ಅಂದರೆ ಕೆಟ್ಟದ್ದನ್ನು ತೊಲಗಿಸಿ ಬೆಳಕನ್ನು ಅಂದರೆ ಒಳ್ಳೆಯದ್ದನ್ನು ಕೊಡಲಿ ಎಂಬ ಅರ್ಥವೇ ಇಲ್ಲೂ ಇದೆ. 

ಕೆಲವರು ಈ ದಿನದಂದು ಕಡುಬನ್ನು ಮಾಡಿ ಅದರೊಳಗೆ ನಾಣ್ಯಗಳನ್ನು ಇಟ್ಟಿರುತ್ತಾರೆ. ಚಿಕ್ಕ ಹುಡುಗರು ಇದನ್ನು ಒಡೆಯುತ್ತಾರೆ.  ಹೀಗೆ ಒಡೆಯುವುದನ್ನು ಭಂಡಾರ ಒಡೆಯುವುದು ಎನ್ನುತ್ತಾರೆ. ಈ ಪೂಜೆ ಮಾಡಿ ಶಿವನನ್ನು ಒಲಿಸಿಕೊಂಡು ಮೃತನಾದ ಗಂಡನನ್ನು ಮರಳಿ ಪಡೆದಳು ಎಂಬ ಕಥೆಯೂ ಈ ಹಬ್ಬಕ್ಕಿದೆ. 

ಆಚರಣೆ ಪದ್ದತಿಗಳು ಏನೇ ಇದ್ದರೂ ಮೂಲ ಉದ್ದೇಶ ಮನೆಯ ಮಂದಿಯನ್ನು ಒಟ್ಟುಗೂಡಿಸುವುದು. ಇದು ಹಬ್ಬವೊಂದರ ಆಚರಣೆಯ ಮೂಲಕ ನೆರವೇರುತ್ತದೆ. ವ್ರತಕ್ಕೆಂದು ಒಂದು ಕಥೆಯೂ ಇರುತ್ತದೆ. ಅದನ್ನು ಓದಿದಾಗ ವ್ರತದ ಆಚರಣೆಯ ಉದ್ದೇಶ ಅರ್ಥವಾಗುತ್ತದೆ, ಆ ಘಟನೆ ಮನದಲ್ಲಿಯೂ ಉಳಿಯುತ್ತದೆ. ಮನೆಯ ಗಂಡಸರು ಹೆಂಗಸರ ಹಾಗು ಮನೆಮಂದಿಯ ಒಳಿತಿಗಾಗಿ ಜೀವನವೆಲ್ಲವನ್ನು ಸವೆಸುತ್ತಾರೆ, ಇದಕ್ಕೆ ಹೆಂಗಸರು ತೋರಿಸುವ ಗೌರವ ಈ ವ್ರತವಾಗಿರುತ್ತದೆ. ಅಂದರೆ ಮನೆಯ ಎಲ್ಲಾ ಸದಸ್ಯರೂ ಒಬ್ಬರಿಗೊಬ್ಬರು ಗೌರವ ಅದರಗಳನ್ನು ಕೊಟ್ಟು ಬದುಕಬೇಕು ಎಂಬುದೇ ಇದರ ಉದ್ದೇಶ. 

ಭೀಮನ ಅಮಾವಾಸ್ಯೆ ಹಬ್ಬವು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. 

The last day of the month of Ashadha is Amavasya. Shravan, the rainy season, officially begins at this time. Women fast on this auspicious day and offer prayers for their husbands' health. On this day, Parvati is said to have been married by Lord Shiva after he accepted her penance. Additionally, Bhima was born on this day. As a result, the name Jyothi Bhimeswara Vrata comes from the combination of the names Bhimeshwara and Eshwara. On this auspicious day, women offer prayers for the overall wellness of the male household members.

For worship, two clay or tambittu (sweet made from wheat flour) lamps are lit.  The lamps represent the goddess Parvati and the god Shiva.  In Hinduism, light is defined as the ability to bring about good and banish darkness.

Some folks keep coins inside the sweets on this day.  It is broken down by the young guys in the family.  "Bhandara breaking" is the term for this method of breaking.  According to the festival tale, the wife brought her deceased husband back to life on this auspicious day by worshipping Lord Shiva.

The primary goal of all the rituals is to foster positive relationships among the members of the household.  A festival is held to honour it.  This festival has a backstory.  You will comprehend the 'vrata''s aim after reading it.  We will remember the occasion for a very long time because of this story.  The women express their thanks to the males of the house who dedicate their entire lives to the well-being of the women and the household.  This suggests that everyone in the family ought to show respect for one another.

May the festival of  Bhimana Amavasya bring good luck to all.  

ಭೀಮನ ಅಮಾವಾಸ್ಯೆ

ರಚನೆ , ಸಂಗೀತ - ಜಗದೀಶ ಚಂದ್ರ ಬಿ ಎಸ್ / ರಾಗ ಭೀಮಪಲಾಸ್

Lyrics & Music - Jagadeesha Chandra / Rag Bhimpalas

ಆಷಾಡ ಮಾಸದ ಕೊನೆಯ ದಿನವಿದು ಭೀಮನ ಅಮಾವಾಸ್ಯೆಯು ಭಕ್ತಿಯಿಂದ ಪೂಜಿಸಿದರೆ ಶಿವನು ಕೊಡುವನು ಶುಭವನು // ಉಪವಾಸ ಮಾಡಿ ಹೆಣ್ಣು ಮಕ್ಕಳು ಬಂಧುಗೊಳಿತನು ಕೇಳ್ವರು ಗಂಡನಿಗೆ ಅರೋಗ್ಯ ಕರುಣಿಸು ಎಂದು ವನಿತೆಯು ಬೇಡುವಳು // ಭೀಮ ಹುಟ್ಟಿದ ದಿನವು ಇಂದು ಎಲ್ಲರವನನ ನೆನೆವರು ದುಷ್ಟ ದುರುಳರ ದಮನ ಮಾಡಿ ರಕ್ಷಿಸಿದ ಆ ದೇವನು // ಪಾರ್ವತಿಯ ತಪವನ್ನು ಮೆಚ್ಚಿ ಶಿವನು ಒಲಿದಾ ದಿನವಿದು ಜ್ಯೋತಿ ಭೀಮೇಶ್ವರ ಜಗದ ಒಡೆಯ ಎಲ್ಲರಿಗು ಶುಭ ನೀಡಲಿ //

Friday, July 11, 2025

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ  

Folk song sung while grinding grains. 

Folk song of Karnataka    ಕನ್ನಡ ಜಾನಪದ ಹಾಡು 

ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha Chandra 

Grinding stone folksong (Beesuva Kallina pada)
Folk tunes can be heard in any community across our nation.  People in our hamlet write these folk songs as part of their everyday tasks, or those who have heard someone write them continue to sing them.  Keep in mind that this village's residents are illiterate.
Stone grinding
In our culture, grinding stone is very essential.  They regard this stone as divine.  A miniature of the grinding stone is brought and worshipped as Lakshmi and Parvati, despite the fact that it is no longer in use.  Additionally, the entire stone is revered as Lord Shiva. 
The bottom stone rests securely on the ground.  In the centre is a wooden peg.  This must be covered by the upper stone.  It may be turned by hand thanks to its handle and protruding portion.  The centre has a hole in it.  The bottom stone's peg emerges from the hole when the upper stone is set on top of it.  A fistful of rice, millet, pulses, etc. is poured between two stones, where it grinds into flour.
In the song it is mentioned that "you will get the right speed and smoothness if you sing in a high pitch and loud voice like a nagaswaram."
Speed and posture when sitting are crucial.  More energy is needed as you rotate in order to reach the desired speed.  When we sing a high note in a song, we use more energy.  The same idea aids in speeding up the grinding process.  The folk song indicates that "you will get the right speed and smoothness if you sing in a high pitch and loud voice like a nagaswaram." 
About the folk song
'Beesokullu' is used to create flour for millet, rice, and other crops. A village girl sings about it in the following folk song.  She prays the grinding stone, which she regards as the Goddess Kallamma, to rotate smoothly and yield the necessary amount of flour. If you do so, I'll ignite the aarti with jaggery was her assurance to God. This implies that one must rotate correctly and take the appropriate amount of grain. 
Subhadra, Krishna's sister, sang this folk tune.  There is also a lot of devotion in the song. An assurance is given like, “Don't worry if you don't know the folk song; simply give yourself over to God”.  
In your dream in which you see the foot of the Guru, when you wake up you will see nothing. This is all glory. The song reveals more about God and demonstrates devotion. According to the song, remembering and seeing the Sharanas with devotion is like presenting God with a coral garland and a jasmine flower since witnessing God's followers is like witnessing God. 
To put it briefly, this grinding stone forces us to perform everyday tasks, sing songs, work out, and remember God. A respect for God's followers’ (Sharanas) teaches many principles and lessons. Folk songs without script are still in use today and benefit in education for those who are illiterate.

ಬೀಸುವ ಕಲ್ಲಿನ ಪದ 
ನಮ್ಮ ದೇಶದ ಯಾವುದೇ ಹಳ್ಳಿಗೆ ಹೋಗಿ, ಅಲ್ಲಿ ನಿಮಗೆ ಜನಪದ ಹಾಡುಗಳು ಕಂಡುಬರುತ್ತದೆ. ನಮ್ಮ ಹಳ್ಳಿಯಲ್ಲಿ  ವಾಸಿಸುವ ಜನ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತ ಇಂತಹ ಜನಪದ ಹಾಡುಗಳನ್ನು ರಚಿಸಿ ಅಥವಾ ಯಾರೋ ರಚಿಸಿದ್ದನ್ನು ಕೇಳಿದ ಹಳ್ಳಿಗರು ಅದನ್ನು ಹಾಡುತ್ತಾ ಮುಂದುವರೆಸುತ್ತಾರೆ. ನೆನಪಿರಲಿ, ಈ ಹಳ್ಳಿಯ ಜನಕ್ಕೆ ಓದಲು, ಬರೆಯಲು ಬರುವುದಿಲ್ಲ. 
ಹಿಟ್ಟು ಬಿಸುವುದು 
ನಮ್ಮ ಜಾನಪದದಲ್ಲಿ ಬೀಸುವ ಕಲ್ಲಿಗೆ ಬಹಳ ಮಹತ್ವವಿದೆ. ಬೀಸುವ ಕಲ್ಲನ್ನು ದೇವರೆಂದೇ ಪೂಜಿಸುತ್ತಾರೆ. ಇಂದು ಬೀಸುವ ಕಲ್ಲನ್ನು ಉಪಯೋಗಿಸದಿದ್ದರೂ ಒಂದು ಸಣ್ಣ ಗಾತ್ರದ ಬೀಸುವ ಕಲ್ಲನ್ನು ತಂದು ಅದನ್ನು ಲಕ್ಷ್ಮಿ, ಪಾರ್ವತಿ ಎಂದು ನಂಬಿ ಪೂಜಿಸುತ್ತಾರೆ. ಇಡೀ ಕಲ್ಲನ್ನು ಶಿವನೆಂದೂ ಪೂಜಿಸುತ್ತಾರೆ. 
ಬೀಸುವ ಕಲ್ಲಿನಲ್ಲಿ ಕೆಳಗಿನ ಕಲ್ಲು ನೆಲದಮೇಲೆ ಭದ್ರವಾಗಿ ಕುಳಿತಿರುತ್ತದೆ. ಅದಕ್ಕೆ ಮಧ್ಯದಲ್ಲಿ ಒಂದು ಮರದ ಗೂಟ ಇರುತ್ತದೆ. ಅದರ ಮೇಲೆ ಇಡಲು ಇನ್ನೊಂದು ಕಲ್ಲು ಇರುತ್ತದೆ. ಅದಕ್ಕೆ ತಿರುಗಿಸಲು ಒಂದು ಹಿಡಿ ಹಾಗೂ ಉಬ್ಬಿದ ಭಾಗವಿರುತ್ತದೆ. ಮಧ್ಯದಲ್ಲಿ ಒಂದು ರಂಧ್ರ ಇರುತ್ತದೆ. ಈ ಮೇಲಿನ ಕಲ್ಲನ್ನು ಕೆಳಗಿನ ಕಲ್ಲಿನ ಮೇಲೆ ಇಟ್ಟಾಗ, ಕೆಳಗಿನ ಕಲ್ಲಿನ ಗೂಟ ರಂಧ್ರದಿಂದ ಮೇಲೆ ಬಂದಿರುತ್ತದೆ. ಅಲ್ಲಿ ಅಕ್ಕಿ, ರಾಗಿ, ಕಾಳು ಇತ್ಯಾದಿಯನ್ನು ಮುಷ್ಟಿಗಾತ್ರದಲ್ಲಿ ಹಾಕುತ್ತ ತಿರುಗಿಸಿದರೆ ಅವು ಎರಡು ಕಲ್ಲಿನ ಮಧ್ಯೆ ಬಂದು ಪುಡಿಯಾಗಿ ಹಿಟ್ಟಾಗುತ್ತದೆ. 
ಬೀಸುವಾಗ ಕುಳಿತುಕೊಳ್ಳುವ ಭಂಗಿ, ತಿರುಗಿಸುವ ವೇಗ ಇವೆಲ್ಲವೂ ಮುಖ್ಯವಾಗುತ್ತದೆ. ತಿರುಗಿಸುವಾಗ ಹಾಡಿಕೊಂಡು ತಿರುಗಿಸಿದರೆ ಹೊತ್ತೂ ಕಳೆಯುತ್ತದೆ, ವೇಗವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಲು ಅನುಕೂಲವನ್ನೂ ಮಾಡಿಕೊಡುತ್ತದೆ. ಹಾಡಿನಲ್ಲಿ ಎತ್ತರದ ಶ್ರುತಿ ಹಾಡುವಾಗ ಹೆಚ್ಚು ಶಕ್ತಿಯನ್ನು ವ್ಯಯಿಸುತ್ತೇವೆ. ಇದೆ ಶಕ್ತಿಯೇ ವೇಗವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಅದನ್ನೇ ಹಾಡಿನಲ್ಲಿ ನಾಗಸ್ವರದಂತೆ ದನಿಯೆತ್ತಿ ಹಾಡಿದರೆ ಗಮ್ಮನೆ ಬೀಳುವುದು ಈ ಕಲ್ಲು ಎಂದಿದ್ದಾರೆ. 
ಬೀಸುವ ಕಲ್ಲಿನ ಜಾನಪದ ಹಾಡು 
ಈ ಕೆಳಗಿನ 'ಬೀಸೋಕಲ್ಲಿನ ಪದ‘ ಹಳ್ಳಿಯ ಒಬ್ಬ ಹೆಣ್ಣು ಮಗಳು ರಾಗಿ, ಅಕ್ಕಿ ಇತ್ಯಾದಿಗಳನ್ನು ಹಿಟ್ಟುಮಾಡಲು ಉಪಯೋಗಿಸುವ ‘ಬೀಸುಕಲ್ಲಿನ' ಕುರಿತಾಗಿಯೇ ಹಾಡುವ ಹಾಡು. ಅವಳು, ಕಲ್ಲಮ್ಮ ತಾಯಿ, ನೀನು ರಾಗಿಯನ್ನು ಮೆಲ್ಲುತ್ತಾ ಜಲ್ಲಜಲ್ಲಾನೆ (ಪುಡಿಪುಡಿಯಾಗಿ) ಉದುರಮ್ಮ ನಾನು ನಿನಗೆ ಬೆಲ್ಲದ ಆರತಿಯನ್ನು ಬೆಳಗುತ್ತೇನೆ ಎನ್ನುವಳು. ಅಂದರೆ ಧಾನ್ಯವನ್ನು ಎರಡು ಕಲ್ಲುಗಳ ಮಧ್ಯೆ ತೆಗೆದುಕೊಂಡು ಹಿಟ್ಟು ಮಾಡಿ ಉದುರಿಸು ಎಂದರ್ಥ. 
ಈ ಹಾಡನ್ನು ಕೃಷ್ಣನ ತಂಗಿ ಸುಭದ್ರೆ ಹೇಳಿಕೊಟ್ಟಳು ಎನ್ನುತ್ತಾಳೆ. ಈ ಕಲ್ಲಮ್ಮ ಸುಮ್ಮನೆ ಬೀಸಿದರೆ ಕೆಲಸ ಮಾಡಿಬಿಡುವುದಿಲ್ಲ, ನಾವು ನಾಗಸ್ವರದಂತೆ ಜೋರಾಗಿ ಹಾಡಿದರೆ ಸಂತೋಷವಾಗಿ ಈ ಕಲ್ಲಮ್ಮ ಚೆನ್ನಾಗಿ ಬೀಸುತ್ತಾಳೆ. 
ಇಷ್ಟೇ ಅಲ್ಲದೆ ಹಾಡಿನಲ್ಲಿ ಭಕ್ತಿಯೂ ತುಂಬಿರುತ್ತದೆ. ಹಾಡು ಬಂದರೆ ಹೇಳು, ಬರದಿದ್ದರೆ ದೇವರಿಗೆ ಶರಣಾಗು, ನನ್ನ ಎದೆಯಲ್ಲೇ ಪದವಿದೆ ಅಂದರೆ ಬೀಸುವಾಗ ಮೂಡುವ ದನಿಯೇ ಪದವಾಗುತ್ತದೆ. ಕನಸಿನಲ್ಲಿ ಗುರುವಿನ ಪಾದ ಕಾಣುತ್ತದೆ, ಎದ್ದು ನೋಡಿದರೆ ಏನೂ ಕಾಣುವುದಿಲ್ಲ, ಬರಿಯಲಷ್ಟೇ ಕಾಣುತ್ತದೆ. ಇವೆಲ್ಲವೂ ರುದ್ರನ ಮಹಿಮೆ. ಆ ದೇವರ ಬಗ್ಗೆ ಇನ್ನಷ್ಟು ತಿಳಿಯೋಣ ಎಂದು ಹಾಡಿನ ಮೂಲಕ ದೈವ ಭಕ್ತಿಯನ್ನು ತೋರಿಸಲಾಗಿದೆ. ದೈವ ಭಕ್ತರನ್ನು ನೋಡಿದರೆ ದೇವರನ್ನು ನೋಡಿದಂತೆ, ಆದ್ದರಿಂದ ಶರಣರನ್ನು ನೆನೆ, ಅವರನ್ನು ಭಕ್ತಿಯಿಂದ ಕಾಣು, ಅದು ದೇವರಿಗೆ ಹವಳದ ಹಾರ, ಮಲ್ಲಿಗೆ ಅರ್ಪಿಸಿದಂತೆ ಎಂದು ಹಾಡಿನಲ್ಲಿ ವ್ಯಾಖ್ಯಾನಿಸಲಾಗಿದೆ. 
ಒಟ್ಟಿನಲ್ಲಿ ಹೇಳುವುದಾದರೆ ಈ ಬೀಸುವ ಕಲ್ಲು ನಮಗೆ ದಿನ ನಿತ್ಯದ ಕೆಲಸಗಳನ್ನು ಮಾಡಿಕೊಡುತ್ತದೆ, ಹಾಡನ್ನು ಹಾಡಿಸುತ್ತದೆ, ವ್ಯಾಯಾಮ ಮಾಡಿಸುತ್ತದೆ, ದೇವರನ್ನು ನೆನೆಯುವಂತೆ ಮಾಡುತ್ತದೆ, ದೈವ ಭಕ್ತರಿಗೆ ಗೌರವ ನೀಡುವಂತೆ ಪ್ರೇರೇಪಿಸುತ್ತದೆ, ಓದು ಬರೆಹ ಬರದಿದ್ದರೂ ಹಾಡಿನ ಮೂಲಕ ನೀತಿ, ಉಪದೇಶಗಳನ್ನು ಪಸರಿಸಲು ಸಹಾಯ ಮಾಡುತ್ತದೆ. ಅಂದಮೇಲೆ ಬೀಸುವ ಕಲ್ಲನ್ನು ದೇವರೆಂದು ನಂಬಿದ್ದು ಸರಿ ಅನ್ನಿಸುತ್ತದೆ ಅಲ್ಲವೇ? 

ಹಾಡಿನ ಸಾಹಿತ್ಯ 

ಕುಟ್ಟಿ ಬೀಸುವ ಹಾಡ ಯಾವಾಕಿ ಕಲಿಸ್ಯಾಳ 
ಕೃಷ್ಣನ ತಂಗಿ ಸೌಭದ್ರಿ   ಕಲಿಸ್ಯಾಳ 
ಕೃಷ್ಣನ ಮ್ಯಾಲ ಪದಗೋಳ //

ಸುಮ್ಮನೆ ಬಿಸಿದರ ಬೀಳದು ಈ ಕಲ್ಲು 
ನಾಗಸೊರದಂತೆ ದನಿಯೆತ್ತಿ   ಹಾಡಿದರ 
ಗಮ್ಮನೆ ಬೀಳುವುದು ಈ ಕಲ್ಲು //

ಪದ ಬಂದರ್ಹೇಳು ಬಾರದಿದ್ರ ಶರಣಾಗು 
ಪದವುಂಟು ನನ್ನ ಎದೆಯಲ್ಲಿ ತಾಮ್ರದ 
ತಾಯ್ತುಂಟು ನನ್ನ ತೋಳಲ್ಲಿ //

ಅಕ್ಕಿ ಬೀಸುವ ಕಲ್ಲೇ  ಸಕ್ಕರೆ ಒಡಗಲ್ಲೆ 
ಶೆಟ್ಟಿ ತಮ್ಮಯ್ಯ ಅರಮನೆ   ರಾಗಿ ಕಲ್ಲೇ 
ಹಟ್ಟಿ ಬಾಗಿಲಿಗೆ ದನಿ ತೋರೆ //

ರಾಗಿ ಬೀಸುವ ಕಲ್ಲೇ ರಾಜಾನ ಒಡಗಲ್ಲೆ 
ರಾಯ ಅಣ್ಣಯ್ಯನ ಅರಮನೆ  ರಾಗಿ ಕಲ್ಲೇ 
ರಾಜಬೀದಿಗೆ ದನಿ ತೋರೇ //

ಕಲ್ಲವ್ವ ಮಾ ತಾಯಿ  ಮೆಲ್ಲವ್ವ ರಾಜನವ 
ಜಲ್ಲಾಜಲ್ಲಾನೆ ಉದುರವ್ವ  ನಾ ನಿನಗೆ 
ಬೆಲ್ಲದಾರತಿಯ ಬೆಳಗೇನು //

ನಿದ್ದಿಗಣ್ಣಲಿ ಕಂಡ ಸುದ್ದ ಗುರುವಿನ ಪಾದ 
ಎದ್ದು ನೋಡಿದರೆ ನಿರ ಬಯಲ   ಗುರುರಾಯ 
ರುದ್ಧರನ ಮಯಮೆ ತಿಳಯಾವ //

ಶರಣರ ನೆನೆದರ ಸರಿಗೀಯ ಇಟ್ಟಂಗ 
ಹವಳ ಮಲ್ಲಿಗಿ ಮುಡಿದಂಗ   ಕಲ್ಯಾಣ 
ಶರಣರ ನೆನೆಯೋ ನನ ಮನವೇ //

Wednesday, July 9, 2025

Acharya Guruve / Lyrics & Music- Jagadeesha Chandra / ಆಚಾರ್ಯ ಗುರುವೇ / ರಚ...

Role of Acharya in our life 

A significant role in our faith is played by the guru.  In the Upanishad, Acharya Devo Bhava is mentioned.  The trinity—Brahma, Vishnu, and Maheshwara—are regarded as the Guru in our eternal shloka.  In addition, parents take the role of the guru.  Guru is everything to us after the parents.

To succeed in life, you must put in a lot of effort.  For this reason, a lot of people are honoured in our religion in lieu of the Guru.  A guru's teachings are a blessing for people seeking prosperity.  One who dispels darkness and introduces light is a great guru. 

A summary of the poem has been given below:

O Acharya, Sadguru, I admire your holy feet. May my gurus be the great sages of our past times, such as Vyasa, Saptarishi, Vasistha, and Valmiki, lead me to the path of salvation. 

Hold my hands, listen to me, and raise me up, O Guru, the world's ruler.  For salvation, I bow down to the feet of acharyas like Shankara, Ramanuja, Madhva, Buddha, Chinmayananda, Ramakrishna, Paramhansa, and Vivekananda.

ನಮ್ಮ ಜೀವನದಲ್ಲಿ ಗುರುವಿನ ಮಹತ್ವ 

ನಮ್ಮ ಸನಾತನ ಧರ್ಮದಲ್ಲಿ ಗುರುವಿಗೆ ಬಹಳ ಮಹತ್ವದ ಸ್ಥಾನವನ್ನು ಕೊಟ್ಟಿದ್ದಾರೆ. ಉಪನಿಷತ್ತಿನಲ್ಲಿ ಆಚಾರ್ಯದೇವೋ ಭವ ಎಂದಿದ್ದಾರೆ. ನಮ್ಮ ನಿತ್ಯ ಶ್ಲೋಕದಲ್ಲಿ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಎಂದು ತ್ರಿಮೂರ್ತಿಗಳನ್ನೂ ಗುರುವಿಗೆ ಹೋಲಿಸಿದ್ದಾರೆ. ತಂದೆ ತಾಯಿಯ ನಂತರ ಗುರುವೇ ನಮಗೆ ಎಲ್ಲವೂ ಆಗುತ್ತಾರೆ. ತಂದೆ ತಾಯಿಯರೂ ನಮಗೆ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. 

ಜೀವನದಲ್ಲಿ ಯಶಸ್ಸಿಗೆ ಗುರುಕೃಪೆ ಬೇಕು. ಹೀಗಾಗಿಯೇ ನಮ್ಮ ಧರ್ಮದಲ್ಲಿ ಅನೇಕರನ್ನು ಗುರುಸ್ಥಾನದಲ್ಲಿ ಕಲ್ಪಿಸಿಕೊಂಡು ಅವರ ಉಪದೇಶದಿಂದ ಉದ್ಧಾರರಾಗುತ್ತಾರೆ ಹಾಗು ಯಶಸ್ಸು ಕಾಣುತ್ತಾರೆ. ಕತ್ತಲೆಯನ್ನು ತೆಗೆದು ಹಾಕಿ ಬೆಳಕನ್ನು ನೀಡಿ,  ಅಜ್ಞಾನವನ್ನು ತೆಗೆದುಹಾಕಿ ಜ್ಞಾನವೆನ್ನುವ ಬೆಳಕನ್ನು ನೀಡುವವನೇ ನಿಜವಾದ ಗುರು. 

ಈ ಕೆಳಗಿನ ಕವನದ ಸಾರಾಂಶ ಹೀಗಿದೆ 

ಓ ಆಚಾರ್ಯನೇ, ಸದ್ಗುರುವೇ ನಿನ್ನ ಪವಿತ್ರ ಚಾರಣಕ್ಕೆ ನಮಿಸುತ್ತೇನೆ. ನಮ್ಮ ಹಿಂದಿನ ಮಹಾನ್ ಋಷಿಗಳಾದ ವ್ಯಾಸ, ವಾಲ್ಮೀಕಿ, ವಸಿಷ್ಠ, ಸಪ್ತಋಷಿಗಳು ಮೊದಲವರೆಲ್ಲ ನನ್ನ ಗುರುಗಳಾಗಲಿ. ಪಾಮರನಾದ ನನಗೆ ಮಾರ್ಗವನ್ನು ತೋರಿ, ಅಭಯವನಿತ್ತು ಉದ್ಧರಿಸಿ, ಮುಕ್ತಿಯನ್ನು ಕರುಣಿಸಿ ಗುರುಗಳೇ. 

ಆಚಾರ್ಯತ್ರಯರಾದ ಶಂಕರ, ರಾಮಾನುಜ ಮಧ್ವರ ರೂಪದ ಗುರುಗಳೇ, ಬುದ್ಧ, ಚಿನ್ಮಯಾನಂದ, ರಾಮಕೃಷ್ಣ ಪರಮಹಂಸ, ವಿವೇಕಾನಂದರ ರೂಪದ ಗುರುಗಳೇ ನನ್ನ ಈ ಮೊರೆಯನ್ನು ಆಲಿಸಿ ನನ್ನ ಕೈಗಳನ್ನು ಹಿಡಿದು ಉದ್ಧರಿಸಿ, ಓ ಜಗದೊಡೆಯ ಸ್ವರೂಪನಾದ ಗುರುವೇ. 

ಗುರುನಮನ 

ಆಚಾರ್ಯ ಗುರುವೇ ಸದ್ಗುರು ರಾಯ 
ಪರಮ ಪವಿತ್ರ ಚರಣಕೆ ನಮಿಪೆ //
 
ವಸಿಷ್ಠ ವ್ಯಾಸ  ವಾಲ್ಮೀಕಿ ನೀನೇ 
ಸಪ್ತರ್ಷಿ ಸದ್ಗುರು ರಾಜನು  ನೀನೇ 
ಪಾಮರ ನನಗೆ ಮಾರ್ಗವ ತೋರಿ  
ಅಭಯವನಿತ್ತು ಉದ್ಧರಿಸಯ್ಯ 
ಮುಕ್ತಿಯ ನೀಡು ಸದ್ಗುರು ರಾಯಾ ssss //

ಶಂಕರ ರಾಮಾನುಜ ಮಧ್ವನು ನೀನೇ 
ಚಿನ್ಮಯ ರಾಮಕೃಷ್ಣ ಬುದ್ಧನು  ನೀನೇ 
ತರಳನ ಮೊರೆಯನು ಆಲಿಸಿ ಬೇಗ 
ಕರಪಿಡಿದೆನ್ನ ಉದ್ಧರಿಸಯ್ಯ 
ಕಾಪಾಡುಗುರುವೆ  ಹೇ ಜಗದೊಡೆಯ sss //

Tuesday, July 8, 2025

Chennakeshava stuti/Ba Na Sundararao/ShantaJayatirtha / ವರಪುರಿಯ ಶ್ರೀ/ಬ ನ...

ವರಪುರಿಯ ಶ್ರೀ ಚೆನ್ನಕೇಶವ : -  ರಚನೆ - ಬ ನ ಸುಂದರರಾವ್ / ಸಂಗೀತ - ಶಾಂತಾ ಜಯತೀರ್ಥ

Varapuriya Sri Chennakeshava ;-  Lyrics - Ba Na Sundara Rao, Music - Shantra Jayatheertha 

ಈ ಭಕ್ತಿಗೀತೆಯನ್ನು ನನ್ನ ತಂದೆ ಬ ನ ಸುಂದರರಾವ್ ಅವರು ವರ್ತೂರಿನ ಚೆನ್ನರಾಯ ದೇವರ ಕುರಿತು ಬರೆದದ್ದು. ಹಿಂದೆ ವರ್ತೂರಿಗೆ ವರಪುರಿ ಎಂದು ಹೆಸರಿತ್ತು. ಈ ಭಕ್ತಿಗೀತೆಗೆ ಆಕಾಶವಾಣಿಯ ಸಂಗೀತಗಾರ್ತಿ ಶ್ರೀಮತಿ ಶಾಂತಾ ಜಯತೀರ್ಥ ಅವರು ಭೀಮಪಲಾಸ್ ರಾಗದಲ್ಲಿ ಸಂಗೀತ ಸಂಯೋಜಿಸಿಕೊಟ್ಟಿದ್ದಾರೆ. ಇದನ್ನು ನನ್ನ ತಾಯಿ, ಶ್ರೀಮತಿ ರತ್ನಮ್ಮ ಸುಂದರರಾವ್ ಹಾಗೂ ಅಕ್ಕ ಶ್ರೀಮತಿ ನೇತ್ರಾವತಿ ಅಭಿರಾಮಮೂರ್ತಿ ಅವರು ಹಾಡುತ್ತಿದ್ದರು. ಅದನ್ನು ನಾನು ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಕೇಳಿ, ನೀವೂ ಹಾಡಿ,  ಇತರರೊಂದಿಗೂ ಶೇರ್ ಮಾಡಿ. 

My father, B N Sundara Rao  penned this devotional song on Lord Chennaraya of Varthur. Varthur was formerly known as Varapuri. Mrs. Shanta Jayatirtha of All India Radio composed the music for this devotional song in the raga Bhimpalas. Smt. Ratnamma Sundararao, my mother, and Smt. Nethravathi Abhiramamurthy, my older sister, sang it. It was played on the keyboard by me. Sing, listen, and spread the word.

ವರಪುರಿಯ ಶ್ರೀ ಚೆನ್ನಕೇಶವ    

ವರಸುತರ ನೀ ಕಾಪಿಡೋ ದೇವಾ //

ನಿನ್ನ ಮಹಿಮೆಯ ನೋಡಿ    ನಿನ್ನ ಸೇವೆಯ ಮಾಡಿ  

ನಿನ್ನ ಭಕ್ತರ ಕೂಡಿ    ನಿನ್ನ ಗಾನವ ಪಾಡಿ    

ಆನಂದ ಸಾಗರದಲೋಲಾಡಿ ನಾನೂ //

ನಿತ್ಯ ನಲಿವೆನು ನಾನು   ಪರಮ ಮೂಢನು ನಾನು   

ತಾಯಿ ತಂದೆಯು ನೀನು   ಬಂಧು ಬಳಗವು ನೀನು   

ಎಮ್ಮ ಪಾಪವ ಹರಿಸಿ ಮುಕುತಿ ಕೊಡು ನೀನೂ //

ನಿನ್ನ ನಾಮವ ಭಜಿಸಿ   ನಿನ್ನ ಸ್ತೋತ್ರವ ಸ್ತುತಿಸಿ 

ಧನ್ಯನಾಗುವೆ ನಾನು   ಪುಣ್ಯ ಪಡೆಯುವೆ ನಾನು   

ಎಮ್ಮ ಪುರದಲಿ ನೆಲೆಸಿ ಮೆರೆಯುತಿಹೆ ನೀನೂ //

+1 T280L291 Split T131L355 R077 spd80

Thursday, July 3, 2025

Wife's Letter /K S Narasimha Swamy /C Ashwath /Keyboard - JagadeeshaChan...

ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ

ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣೆ, ಪದ್ದತಿಗಳು ಇಂದು ಬದಲಾಗುತ್ತಿವೆ ಅಥವಾ ಕಣ್ಮರೆಯಾಗುತ್ತಿದೆ. ಹಿಂದೆ ತವರುಮನೆಗೆ ಹೋಗುವುದು, ತಾಯಿಯೊಂದಿಗಿನ ಸಖ್ಯ ಇತ್ಯಾದಿಗಳು ಏನೋ ಆನಂದವನ್ನು ಕೊಡುತ್ತಿದ್ದವು, ಆದರೆ ಇಂದು ಹೊರದೇಶಗಳಲ್ಲಿರುವ ಮಗಳಿಗಾಗಿ ತವರೇ ಮಗಳ ಮನೆಗೆ ವರ್ಗಾವಣೆಯಾಗುತ್ತಿದೆ. ಮೊಬೈಲ್, ಮಿಂಚಂಚೆ ಇವುಗಳು ಕ್ರಾಂತಿಯನ್ನೇ ತಂದಿದೆ. ಈಗ ನಾವು ಚರ್ಚಿಸುತ್ತಿರುವುದು ಕೆ ಎಸ್ ನರಸಿಂಹ ಸ್ವಾಮಿ ಅವರ "ಹೆಂಡತಿಯ ಕಾಗದ" ಎಂಬ ಕವನದ ಬಗ್ಗೆ. ಹೆಂಡತಿಯ ಕಾಗದವು ಕವನದ ರೂಪದಲ್ಲಿ ಹೊರಹೊಮ್ಮಿದೆ. ಮದುವೆಯಾದ ನಂತರ ಮೊದಲ ಹೆರಿಗೆ ತವರು ಮನೆಯಲ್ಲೇ ಆಗಬೇಕು ಎಂಬ ಪದ್ಧತಿ ಹಿಂದೆ ಇತ್ತು. ಈಗಲೂ ಕೆಲವರು ಇದನ್ನೇ ಅನುಸರಿಸುತ್ತಾರೆ. ಒಂದು ರೀತಿಯಲ್ಲಿ ತಾಯಿ ಮಗಳ ಸಂಬಂಧಕ್ಕೆ ಒತ್ತು ಕೊಟ್ಟಿದೆ ಈ ಪದ್ಧತಿ. ಹೆರಿಗೆ ಎಂದರೆ ಹೆಣ್ಣಿಗೆ ಒಂದು ರೀತಿಯ ಕಷ್ಟದ ಹಾಗೆಯೆ ಸುಖದ ಸಮಯ. ಹೆರಿಗೆಯ ನೋವು, ಮುಂದಾಗುವ ಮಗುವಿನ ಕನಸು ಇವೆರಡೂ ಅವಳನ್ನು ತಬ್ಬಿಬ್ಬು ಮಾಡಿಬಿಡುತ್ತದೆ. ಅಂತಹ ಸಮಯದಲ್ಲಿ ತಾಯಿಯ ಸಖ್ಯ, ಸಾಂತ್ವನ ಇವೆರಡು ಅವಳನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ, ಧೈರ್ಯಕೊಡುತ್ತದೆ. ಇದನ್ನು ಒಂದು ಪದ್ದತಿಯ ಮೂಲಕ ಆಚರಣೆಗೆ ತಂದಿದ್ದಾರೆ ನಮ್ಮ ಹಿರಿಯರು. ಈ ಕವನದ ಸಾರಾಂಶ ಇದೇ . ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಸುಖ ಸಂತೋಷದಿಂದ ವಾಸವಿದ್ದಾರೆ . ಈಗ ಹೆಂಡತಿ ಗರ್ಭಿಣಿ . ಅವಳನ್ನು ನೋಡಿಕೊಳ್ಳುವರು ಯಾರು ? ಯಾವುದೇ ಹೆಣ್ಣಿಗೆ ತಾಯಿಯ ಬಳಿ ಹೋಗಿ ಇರಬೇಕೆಂಬ ಆಸೆ ಇದ್ದೆ ಇರುತ್ತದೆ . ಈಗ ಹೆರಿಗೆಯ ನೆಪದಲ್ಲಿ ತಾಯಿಯ ಮನೆಗೆ ಹೋಗುವ ಸಮಯ ಬಂದಿದೆ. ಅವಳಿಗೋ ತಾಯಿಯ ಮನೆಗೆ ಹೋಗುವ ಸಂಭ್ರಮ, ಸಂತೋಷ. ಗಂಡನಿಗೆ ? ಅವಳ ಸೇವೆಯನ್ನು ತಾನು ಮಾಡಲಾರ, ಅವಳನ್ನು ಬಿಟ್ಟೂ ಇರಲಾರ . ಆದರೆ ಬೇರೆ ದಾರಿ ಇಲ್ಲದೆ ಅವಳನ್ನು ತವರು ಮನೆಗೆ ಕಳಿಸುತ್ತಾನೆ. ಇಂದಿನಂತೆ ಅಂದು ವಾಟ್ಸಾಪ್, ವಿಡಿಯೋ ಕಾಲ್ ಬಿಡಿ, ಲ್ಯಾಂಡ್ ಲೈನ್ ಸಹ ಅಪರೂಪವೇ. ಹೀಗಾಗಿ ಅಂಚೆಯ ಮೂಲಕವೇ ಎಲ್ಲಾ ವ್ಯವಹಾರಗಳು. ಗಂಡ ತನ್ನ ತಂದೆ ತಾಯಿಯ ಜೊತೆ, ಸೋದರ ಸೋದರಿಯರ ಜೊತೆಗೆ ಇದ್ದರೆ ಹೆಂಡತಿಯ ಅಗಲುವಿಕೆ ಅಷ್ಟಾಗಿ ಗೊತ್ತಾವುದಿಲ್ಲ. ಆದರೆ ಏನೇನೋ ಕಾರಣಗಳಿಂದಾಗಿ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿದ್ದರೆ ಆಗ ಹೆಂಡತಿಯ ಅಗಲಿಕೆ ಬಹಳ ವೇದನೆಯನ್ನು ಕೊಡುತ್ತದೆ. ಸಾಮಾನ್ಯವಾಗಿ ಹೆರಿಗೆ ಎಂದರೆ ಮಗುವಿಗೆ ೫ ತಿಂಗಳಾಗುವವರೆಗೂ ಹೆಂಡತಿ ತವರಲ್ಲೇ ಇದ್ದು ಬರುತ್ತಾಳೆ. ವಿರಹಿ ಗಂಡನಿಗೆ ಒಂದೊಂದು ತಿಂಗಳು ಒಂದೊಂದು ವರ್ಷವಾದಂತೆ ಭಾಸವಾಗುತ್ತದೆ. ಹೆಂಡತಿಯಿಲ್ಲದ ಮನೆಯಲ್ಲಿ ಒಬ್ಬನೇ ಇರಬೇಕಾದ ಪರಿಸ್ಥಿತಿ ಗಂಡನಿಗೆ ಮೈ ಪರಚುಕೊಳ್ಳುವಂತಾಗುತ್ತದೆ. ಅದು ಸಿಟ್ಟಿನ ಮೂಲಕ ಹೆಂಡತಿಯ ಮೇಲೆ ತಿರುಗುತ್ತದೆ. ನೀನೇನು ಆರಾಮವಾಗಿ ಅಮ್ಮನ ಕೈಲಿ ಸೇವೆ ಮಾಡಿಸಿಕೊಂಡು ಚೆನ್ನಾಗಿ ತಿಂದುಕೊಂಡು ಸಂತೋಷವಾಗಿದ್ದಿಯ ಎಂದು ಅಸೂಯೆಯನ್ನು ತೆಗಳಿಕೆ, ಆಕ್ಷೇಪಣೆಯ ಮೂಲಕ ತೋರಿಸುತ್ತಾನೆ. ಆಗ ಹೆಂಡತಿಯು, ಹಾಗೆನ್ನಬೇಡಿ, ಹಗಲೆಲ್ಲಾ ನನಗೆ ನಿಮ್ಮದೇ ಚಿಂತೆ, ಕನಸಲ್ಲೂ ನಿಮ್ಮದೇ ನೆನಪು; ನೀಲಾಕಾಶದಲ್ಲಿ ಚಂದ್ರ ಹಾಗು ರೋಹಿಣಿ ನಕ್ಷತ್ರಗಳನ್ನು ನೋಡಿದಾಗ ಅದು ನಾವಿಬ್ಬರೇ ಎಂಬ ಭಾವ ಬರುತ್ತದೆ ಎನ್ನುತ್ತಾಳೆ. ಅಮ್ಮ ಮಾಡುವ ಅಡುಗೆಯ ಆಸೆಗೆ ನಾನು ಇಲ್ಲಿ ಕುಳಿತಿಲ್ಲ, ಮಗುವಿಗೆ ೫ ತಿಂಗಳು ತುಂಬುತ್ತಿದೆ, ಇನ್ನು ಕೆಲವೇ ದಿನದಲ್ಲಿ ತಂಗಿಯ ಮದುವೆಯೂ ಇದೆ ಅದಕ್ಕಾಗಿ ಒಂದೆರೆಡು ದಿನ ಇದ್ದು ಬಂದು ಬಿಡುತ್ತೇನೆ, ನಾನು ತವರು ಅನ್ನುವ ಪಂಜರದ ಗಿಣಿಯಲ್ಲ ಸ್ವಲ್ಪ ಸಹಿಸಿಕೊಳ್ಳಿ, ಬಂದುಬಿಡುತ್ತೇನೆ ಎಂದು ಸಮಾಧಾನ ಮಾಡುತ್ತಾಳೆ. ನಾನು ನಿಮ್ಮೊಂದಿಗೆ ಇದ್ದಾಗ ನೀವು ಎಷ್ಟು ಪ್ರಶಾಂತರಾಗಿ ನನ್ನ ಮೇಲೆ ಪ್ರೀತಿ ತೋರುತ್ತಿದ್ದಿರಿ, ಈಗ ಮಗುವಿನ ಹೆರಿಗೆಯ ಕಾರಣ ತವರಿಗೆ ಬಂದರೆ, ಹೂವನ್ನು ಹಾವಿನಂತೆ ಕಂಡು ನನ್ನ ಮೇಲೆ ಬಿರುನುಡಿಗಳನ್ನಾಡುವುದು ನಿಮಗೆ ತರವೇ? ಎಂದು ಪ್ರಶ್ನಿಸುತ್ತಾಳೆ. ಚಿತ್ರದುರ್ಗದ ರೈಲು ನಿತ್ಯ ಮೈಸೂರಿಗೆ ಓಡಾಡುತ್ತದೆ, ಇನ್ನೊಂದು ಎರಡು ದಿನ ಕಾದುಬಿಡಿ ಬಂದುಬಿಡುತ್ತೇನೆ. ಹೊರಡವಾಗ ನಮ್ಮ ಸಂಪ್ರಾಯದಂತೆ ಸೋಬಲಕ್ಕಿಯನ್ನು ಇಟ್ಟು, ನಮ್ಮ ಮುದ್ದು ಹೆಣ್ಣು ಮಗುವಿಗೆ ರೇಷ್ಮೆ ಜರಿಯ ಲಂಗವನ್ನು ಹೋಲಿಸಿ ಹಾಕಿ ಕಳಿಸಿಬಿಡುತ್ತಾರೆ, ನನ್ನ ಹೆತ್ತವರನ್ನು ಯಾವುದೊ ಸಿಟ್ಟಿಗೆ ದೂರಬೇಡಿ, ಬೇಕಿದ್ದರೆ ಅವರೇ ನನ್ನನ್ನು ಕರೆದುಕೊಂಡು ಬಂದು, ಅವರ ತಪ್ಪಿಲ್ಲದಿದ್ದರೂ ಕ್ಷಮೆ ಕೇಳುತ್ತಾರೆ, ಸರಿಯೇ ಎಂದು ಸಮಾಧಾನ ಮಾಡುತ್ತಾಳೆ. ಇಲ್ಲಿ ಹೆಣ್ಣಿನ ತಂದೆಯ ಪರಿಸ್ಥಿತಿಯನ್ನು ನೆನೆದರೆ ಕಣ್ದುಂಬಿ ಬರುತ್ತದೆ. ನಿಮ್ಮನ್ನು ಮರೆತುಬಿಟ್ಟಿದ್ದೇನೆ ಎಂದು ದೂರಬೇಡಿ. ನಮ್ಮ ಪುಟ್ಟ ಮಗು ಮುದ್ದಾಗಿ ಬೆಳೆದಿದೆ. ಅದನ್ನು ನೋಡಿದರೆ ನಿಮ್ಮ ಸಿಟ್ಟೆಲ್ಲವು ಕರಗಿಬಿಡುತ್ತದೆ. ಸಿಟ್ಟಾಗಬೇಡಿ, ಕೊರಗಬೇಡಿ, ಚುಚ್ಚು ಮಾತುಗಳಿಂದ ಆಕ್ಷೇಪಿಸಬೇಡಿ, ಇದೋ ಬಂದೆ ಬಿಡುತ್ತಿದ್ದೇನೆ ಎಂದು ಗಂಡನಿಗೆ ಮಾತುಕೊಡುತ್ತಾಳೆ.
ಬರೆಯುತ್ತ ಹೋದರೆ ಇನ್ನೂ ಸಾಕಷ್ಟು ಇವೆ. ಸಧ್ಯಕ್ಕೆ ಇಷ್ಟು ಇರಲಿ. ಒಂದು ಕವನದ ಮೂಲಕ ಎಷ್ಟೊಂದು ಸಂದೇಶಗಳು, ಎಷ್ಟೊಂದು ವಿಷಯಗಳ ಅರಿವು ನಮಗಾಗುವುದಲ್ಲವೇ? ಒಂದು ಸಂಸಾರದ ನೋವು ನಲಿವುಗಳನ್ನು ಕವನದ ಮೂಲಕ ತಿಳಿಯಪಡಿಸಿದ ಕೆ ಎಸ್ ನರಸಿಂಹಸ್ವಾಮಿ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು. - ಜಗದೀಶ ಚಂದ್ರ

THE LETTER FROM A WIFE

Our society has seen numerous transformations in recent years. Many of the customs that were prevalent fifty years or more ago are either changing or going extinct. Going to the mother's house to give birth to the first child was customary in the past. Additionally, it promoted a loving and caring attachment with the mother. The girl used to get some joy and contentment from this. However, in order to care for their daughter's pregnancy and delivery, the daughter's parents are now travelling overseas. At the time, landlines were a commodity, and neither mobile phones nor the internet were known. Letters sent through the post office were the only means of contact. At this point, we are talking about K. S. Narasimha Swamy's poetry "Wife's Letter". The letter from the wife ended up becoming a poetry. It used to be customary for the mother's house to be the site of the first birthing following marriage. This tradition is still observed by some. It does, in a sense, highlight the bond between mother and daughter. For a woman, pregnancy is a challenging period. She shudders at the thought of a future kid and the agony of childbirth. The mother's comfort and support in such a situation offers her incredible courage and mental strength. This circumstance has been established as a practice by our elders through a custom. This is the poem's main idea. A newlywed couple is content with their lives. The wife now need a lot of care because she is pregnant. Who is going to look after her? Every lady wants to be with her mother during this challenging period. Now is the time to visit her mother's house. Going to her mother's house makes her very happy. However, her absence makes the husband feel lonely. Being unable to assist her or leave her puts him in a helpless situation. He is compelled to send his wife to live with her mother. Emails, video calls, WhatsApp, and other services were unheard of during that time, and landlines were extremely uncommon. All correspondence was done through the post office. The wife doesn't notice the separation much if the husband lives with his parents and siblings. However, the wife's absence causes a great deal of anguish if, for some reason, only the husband and wife are at home. It is customary for a pregnant woman to remain at her mother's house until the baby is five months old. A long time apart makes the husband feel lonely and makes each month seem like a year. He experiences sadness, anger, and other uncomfortable emotions as a result of this feeling. He expresses all of his resentment and anxiety on his wife. He exhibits his jealousy by opposing and condemning his wife. He is envious because his wife is content at her mother's place, eating contentedly the delectable meal her mother has prepared, and not having to work. Her husband's annoying behaviour is causing her a great deal of misery. She responds to all of this in a letter. Don't argue that I've forgotten you; I think about you constantly throughout the day and even in my dreams. It feels like we are two when I see the moon and stars in the azure sky. Don't assume that I'm consuming my mother's delectable cooking while I sit here. Our child is just five months old, and I will be returning back home shortly after my sister's wedding, which is in a few days. You used to love me so peacefully when I was in our house with you, but now that I'm gone, you act like a snake against me. Only because of the birth and in accordance with tradition am I here at my mother's house. Wait another two days, and I'll be back. The train from Chitradurga travels to Mysore daily. According to our custom, they put Sobalakki and deliver it through our cherished daughter as I leave my mother's house. They also think the child wearing a silk zari skirt is adorable. Don't be angry with my father. Even if it wasn't his fault, he will beg for pardon when he comes to drop me and the child if you wish. (Anybody will start crying at this point if they see the girl's father's situation.) Don't think I've forgotten about you. Our baby has grown into a lovely child. All of your rage fades away when you see this adorable child. Don't worry, I'll be right back. Through poetry, don't we learn a great deal about human connections, values, and messages? We should extend our sincere gratitude to Sri K. S. Narasimhaswamy for using poetry to capture the traditions, customs, and relationships of an Indian family. - Jagadeesha Chandra ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ

ಸಂಗೀತ – ಸಿ ಅಶ್ವಥ್ / ಕೀಬೋರ್ಡ್ - ಜಗದೀಶ ಚಂದ್ರ
K S Narasimha Swamy / C Ashwath / Keyboard - Jagadeesha Chandra

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು ಬೃಂದಾವನದ ಹಣೆಗೆ ಕುಂಕುಮವನಿಡುವಾಗ ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ ನೀಲಾಂಬರದ ನಡುವೆ ಚಂದಿರನು ಬಂದಾಗ ರೋಹಿಣಿಯು ಬೆಳಗುವಳು ಸನ್ನಿಧಿಯಲಿ || ತೌರ || ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ ಇನ್ನು ತಂಗಿಯ ಮದುವೆ ತಿಂಗಳಿಹುದು ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ ಐದು ತಿಂಗಳ ಕಂದ ನಗುತಲಿಹುದು || ತೌರ ||

ಕಣ್ಣೆದುರಿಗಿರುವಾಗ ನಿಮ್ಮ ಮನ ಉಕ್ಕುವುದು
ಕ್ಷೀರ ಸಾಗರದಂತೆ ಶಾಂತಿಯೊಳಗೆ
ಕಣ್ಣು ಮರೆಯಾದಾಗ ಹೂವಲ್ಲ ಹಾವೆಂದು
ಬಿರುನುಡಿಯ ನಾಡುವುದು ನಿಮಗೆ ತರವೇ
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ ಮೈಸೂರ ಸೇರುವುದು ನಾನು ಬಲ್ಲೆ ನಾಳೆ ಮಂಗಳವಾರ ಮಾರನೆಯ ದಿನ ನವಮಿ ಆಮೇಲೆ ನಿಲ್ಲುವೇನೆ ನಾನು ಇಲ್ಲೇ || ತೌರ ||

ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳಿಸುವರು
ಕಂದನಿಗೆ ಹೊಸ ಜರಿಯ ಲಂಗವುಡಿಸಿ
ತಂದೆಯವರೇ ಬಂದು ತಪ್ಪಾಯಿತೆನ್ನುವರು
ಹೆಣ್ಣು ಹೆತ್ತವರನ್ನು ದೂರಬೇಡಿ

ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ ಅಚ್ಚಮಲ್ಲಿಗೆಯರಳು ಬಿರಿಯುತಿಹುದು ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ ಚುಚ್ಚದಿರಿ ಮೊನೆಯಾದ ಮಾತನೆಸೆದು || ತೌರ ||

Wednesday, July 2, 2025

Kopaveke Ajji?/ B K Sumitra, B Latha / Vijayabhaskar / R N Jayagopal / K...

ಕೋಪವೇಕೆ ಕೋಪವೇಕೆ ಅಜ್ಜಿ / ಬಿ ಕೆ ಸುಮಿತ್ರಾ, ಬಿ ಲತಾ / ವಿಜಯಭಾಸ್ಕರ್ / ಪತಿಯೆದೈವ / ಕೀಬೋರ್ಡ್ - ಜಗದೀಶ ಚಂದ್ರ 

ಅಜ್ಜಿಗೆ ಮೊಮ್ಮೊಕ್ಕಳು ಎಂದರೆ ಬಲು ಪ್ರೀತಿ. ಕಿಟ್ಟು,  ಪುಟ್ಟು ಎಂಬ ಈ ಎರಡು ಮಕ್ಕಳಿಗೂ ಅಜ್ಜಿ ಎಂದರೆ ಪಂಚಪ್ರಾಣ. ಆದರೆ ಮಕ್ಕಳು ಮಕ್ಕಳೇ. ಏನೋ ತರಲೆ ಮಾಡಿ ಅಜ್ಜಿಯನ್ನು ಸಿಟ್ಟಿಗೆಬ್ಬಿಸಿಬಿಟ್ಟಿವೆ. ಅದಕ್ಕೆ ಅಜ್ಜಿ ಮುಖ ಊದಿಸಿ ಕೂತಿದ್ದಾಳೆ. ಕಿಟ್ಟು ಪುಟ್ಟು ತಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಅಜ್ಜಿಯನ್ನು ರಮಿಸಲು, ಕೋಪ ತಾಪ ಸಾಕು, ಬಿಗುಮಾನ ಬಿಟ್ಟು ಮೊದಲಿನಂತಿರು ಎನ್ನುತ್ತಿದ್ದಾರೆ. ತಟ್ಟೆ ತುಂಬಾ ಸಿಹಿ ತಂದಿದ್ದೇವೆ, ಯಾರಿಗೂ ಕಾಣದಂತೆ ಗುಟ್ಟಾಗಿ ತಿನ್ನು, ತಪ್ಪನ್ನೆಲ್ಲ ಒಪ್ಪಿಕೊಂಡು ನಿನ್ನ ಕೈಲಿ ಕೆನ್ನೆಗೆ ಏಟು ತಿಂದು ನಿನ್ನ ಸೇವೆ ಮಾಡುತ್ತೇವೆ ಎಂದೆಲ್ಲಾ ಹೇಳಿ ರಮಿಸಲು ನೋಡುತ್ತಿದ್ದಾರೆ. ಇದೇ ಹಾಡಿನ ಭಾವಾರ್ಥ. ಹಿಂದೆ ಮಕ್ಕಳ ಹಾಡು ಹಾಡಲು ಬಿ ಕೆ ಸುಮಿತ್ರಾ ಹಾಗು ಬೆಂಗಳೂರು ಲತಾ ಅವರನ್ನು ಆಯ್ಕೆ ಮಾಡುತ್ತಿದ್ದರು. ಇಲ್ಲಿಯೂ ಅವರಿಬ್ಬರೇ ಬಹಳ ಮಧುರವಾಗಿ ಹಾಡಿದ್ದಾರೆ. ಸಂಗೀತ ವಿಜಯಭಾಸ್ಕರ್ ಅವರದು, ಸಾಹಿತ್ಯ ಆರ್ ಏನ್ ಜಯಗೋಪಾಲ್ ಅವರದು, ಚಿತ್ರ ಪತಿಯೇ ದೈವ. ಇದೆ ಹಾಡನ್ನು ಹಿಂದಿಯಲ್ಲಿ ದಾದಿಯಮ್ಮ ದಾದಿಯಮ್ಮ ಮಾನ್ ಜಾವ್ ಎಂದು ಆಶಾ ಭೊಂಸ್ಗೆ ಹಾಗು ಕಮಲ್ ಬರೋಟ್ ಅವರು ಹಾಡಿದ್ದಾರೆ. ಸಂಗೀತ ನೀಡಿರುವವರು ರವಿ ಅವರು.  

Kopaveke Ajji? Grandkids' song / B K Sumitra, B Latha / Vijayabhaskar / R N Jayagopal / Keyboard - Jagadeesha Chandra

Grandma adores her grandchildren.  Kittu and Puttu are the two children she is the grandmother to.  However, kids can be incredibly mischievous.  The grandmother has become irate due to some mischievous behaviour.  Grandma's red face is an expression of her rage.  To satisfy their grandmother, Kittu Puttu goes to great lengths.  Grandmother is kindly asked to restrain her temper.   They ask that she return to her regimen and get over her stubbornness.  They bring a sweet, which they beg Grandmother to eat.   Grandmother is asked to consume the sweets in secret so that no one can see her because she is not allowed to eat sweets.  By striking their cheeks, they also ask their grandmother to forgive them for their errors.   This is the song's main idea. 
This adorable song, which was composed by R N Jayagopal and sung by B K Sumitra and Bengaluru Latha in the film "Patiye Daiva," is about children attempting to convince their grandma to stop being so stubborn.
Renowned vocalists Bengaluru Latha and BK Sumitra were selected to perform children's tunes.  Both of them did a fantastic job rendering this song.  Vijayabaskar is the composer, and R. N. Jayagopal is the one who wrote of the lyrics. 
 Asha Bhosle and Kamal Barot sing the same song from the film Gharanaa.  Ravi is the music director. The song title is "Dadiyamma Dadiyamma maan jaav".

ಕೋಪವೇಕೆ ಕೋಪವೇಕೆ ಅಜ್ಜಿ 
ಈ ತಾಪವೇಕೆ ಮನಸಿಗೆ ಅಜ್ಜಿ 
ಬಿಡು ನಿನ್ನ ಕೋಪ ,  ತಾಳು ಶಾಂತ ರೂಪಾ 
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ //

ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು 
ತಟ್ಟೆ ತುಂಬಾ ಸಿಹಿ ತಿಂಡಿ ಕೊಂಡು  ಬಂದೆವು 
ಸೊಟ್ಟ ಮುಖವನ್ನು ಬಿಟ್ಟು    ಕಿಟ್ಟು ಪುಟ್ಟ ಮಾತ ಕೇಳಿ 
ಗುಟ್ಟಿನಿಂದ ಹೊಟ್ಟೆ ತುಂಬಾ ತಿಂದು ಬಿಡಜ್ಜಿ // 

ತಪ್ಪುಗಳನ್ನೆಲ್ಲ ನಾವು ಒಪ್ಪಿಕೊಂಡೆವು 
ನಮ್ಮ ತಪ್ಪನೆಲ್ಲ ಮನ್ನಿಸೆಂದು ಬೇಡಿಕೊಂಬೆವು 
ನಿನ್ನ ಮಾತ ಕೇಳುವೆವು ,  ನಿನ್ನ ಸೇವೆ ಮಾಡುವೆವು 
ಕೆನ್ನೆಗೇಟು ಹಾಕು ಎಂದು ಕೇಳಿಕೊಂಬೆವು 

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...