MUSIC, ART & LITERATURE / ಸಂಗೀತ, ಕಲೆ, ಸಾಹಿತ್ಯ
Friday, December 12, 2025
ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...
Wednesday, October 8, 2025
Birthday song/ Lyrics - Jagadeesha Chandra / N S Nalini / ಗಾಯಕಿ - ಏನ್ ಎಸ...
ಹುಟ್ಟಿದ ಹಬ್ಬ - ಜಗದೀಶ ಚಂದ್ರ ಬಿ ಎಸ್
ಜನುಮದಿನ ಅಥವಾ ಹುಟ್ಟಿದ ಹಬ್ಬ ಎಲ್ಲರಿಗೂ ಪರಿಚಿತವೇ. ನಾವು ಚಿಕ್ಕವರಿದ್ದಾಗ ಅದು ಅಷ್ಟಿಲ್ಲವಾದರೂ ಈಗ ಮಕ್ಕಳೇ ಕೇಳಿ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಏನಾದರೂ ಉಡುಗೊರೆ ಬರುತ್ತದೆ, ಅಂದು ಸಿಹಿತಿಂದು, ಉಂಡು ಅರಾಮವಾಗಿರಬಹುದು ಎಂಬುದು. ಈ ಜನುಮದಿನದಲ್ಲೂ ವ್ಯತ್ಯಾಸಗಳುಂಟು. ಇಂಗ್ಲಿಷ್ ಕ್ಯಾಲೆಂಡರ್‍ದು, ಹಿಂದೂ ಪಂಚಾಂಗದ್ದು, ನಿಜವಾದ ಜನ್ಮದಿನ, ಶಾಲೆಗೆ ಸೇರಿಸುವಾಗ ಕೊಟ್ಟಿದ್ದು ಇತ್ಯಾದಿ. ಇದನ್ನು ಜನ್ಮದಿನ ಆಚರಿಸುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಇಲ್ಲಿ ನನ್ನ ಮಿತ್ರರೊಬ್ಬರಿದ್ದಾರೆ. ಅವರು, ಜನ್ಮದಿನ ಆಚರಿಸಿದರೆ ಇನ್ನೆಲ್ಲಿ ಖರ್ಚಾಗುವುದೋ ಎಂದು ಇಂಗ್ಲಿಷ್‍ದು ಬಂದರೆ ಹಿಂದೂ ಪಂಚಾಂಗ ಎಂದು, ಹಿಂದೂದು ಬಂದಾಗ ಇಂಗ್ಲಿಷ್‍ದು ಎಂದು ಯಾಮಾರಿಸಿಬಿಡುತ್ತಾರೆ. ಇನ್ನೊಬ್ಬರದಂತೂ ಏಕಮಾರ್ಗ. ಉಡುಗೊರೆಗೆ ಎರಡೂ ಇರುತ್ತದೆ. ಆಚರಣೆಗೆ ಯಾವುದಾದರೂ ಒಂದು ಮಾತ್ರ. ಒಮ್ಮೊಮ್ಮೆ ಅದೂ ಇಲ್ಲ. ಕೆಲವು ಸಿರಿವಂತರು ಅಥವಾ ಮೆರೆಯುವ ಸ್ವಭಾವವಿರುವವರು ಎಲ್ಲವನ್ನೂ ಆಚರಿಸುತ್ತಾರೆ. ಅವರಿಗೆ ದುಡ್ಡು ಖರ್ಚಾದರೂ ಚಿಂತಿಲ್ಲ, ತಾವು ಮಾತ್ರ ಅಲಂಕಾರ ಮಾಡಿಕೊಂಡು, ಆಡಂಬರದಿಂದ ಎಲ್ಲರ ಮುಂದೆ ಮೆರೆಯಬೇಕು.
ಹುಟ್ಟಿದ ಹಬ್ಬದ ಆಚರಣೆಯೂ ಒಬ್ಬೊಬ್ಬರದು ಒಂದೊಂದು ರೀತಿ. ಕೆಲವರು ಅಂದು ತಲೆಗೆ ಸ್ನಾನ ಮಾಡಿ ಎರೆದುಕೊಂಡು, ದೇವರಿಗೆ, ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ನಂತರ ದೇವರಿಗೆ ಅರ್ಚನೆ ಮಾಡಿಸಿ ನಂತರ ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಮಾಡಿಸಿ ಎಲ್ಲರಿಗೂ ಬಡಿಸಿ, ತಾವೂ ತಿಂದು ತೃಪ್ತರಾಗುತ್ತಾರೆ. ಇನ್ನು ಕೆಲವರು ಜನ್ಮದಿನವೂ ಎಂದಿನಂತೆ ಇನ್ನೊಂದು ದಿನ ಎನ್ನುವಂತೆ ನಿರ್ಲಿಪ್ತರಾಗಿರುತ್ತಾರೆ. ನಾವು ಚಿಕ್ಕವರಿದ್ದಾಗ ನಮಗೆ ನಮ್ಮ ಹುಟ್ಟಿದ ಹಬ್ಬ ಬಂತು ಎಂದು ಗೊತ್ತಾಗುತ್ತಲೇ ಇರಲಿಲ್ಲ. ಮನೆಯಲ್ಲಿ ಅಮ್ಮ ಅಂದು ಸಿಹಿತಿಂಡಿಯನ್ನು ಮಾಡಿ ಹೇಳಿದಾಗಲೇ ಗೊತ್ತಾಗುತ್ತಿದ್ದುದು. ಉಳಿದವರಾರೂ ಇಂದಿನಂತೆ ಭರ್ಜರಿಯಾಗಿ ಆಚರಣೆ ಮಾಡಿಕೊಳ್ಳುತ್ತಿರಲಿಲ್ಲವಾದ್ದರಿಂದ ನಮ್ಮಿಂದ ಆಕ್ಷೇಪಣೆಗೆ ಅವಕಾಶವೇ ಇರುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಒಂದು ವರ್ಷದಿಂದಲೇ ಅದ್ದೂರಿಯಾಗಿ ಹುಟ್ಟಿದ ಹಬ್ಬವನ್ನು ಆಚರಿಸುವ ಪರಿಪಾಠ ಬೆಳೆಸಿಬಿಡುತ್ತಾರೆ. ಮಕ್ಕಳಿಗೂ ಉಡುಗೊರೆಯ ಹುಚ್ಚು ಬೆಳೆದು, ನಂತರ ಆಡಂಬರ, ಮೆರೆದಾಟ ಎಲ್ಲವೂ ಸೇರಿ ಹುಟ್ಟಿದ ಹಬ್ಬವೆಂದರೆ ಹೀಗೇ ಇರಬೇಕು ಎಂದು ತಾವೇ ಒಂದು ಪರಿಧಿಯನ್ನು ನಿರ್ಮಿಸಿಕೊಂಡುಬಿಡುತ್ತಾರೆ.
ಅಂದು ಕೆಲವು ಶಾಲೆಗಳಲ್ಲೂ ಹುಟ್ಟುಹಬ್ಬ ಆಚರಿಸುವವರಿಗೆ ಸಮವಸ್ತ್ರದಿಂದ ರಿಯಾಯಿತಿ. ಅವರು ಬಣ್ಣದ ಬಟ್ಟೆ ತೊಡಬಹುದು. ಹಾಗಿದ್ದಲ್ಲಿ ಮನೆಯಲ್ಲಿ ಇರುವ ಬಟ್ಟೆಯನ್ನೇ ತೊಡಲಾಗುತ್ತದೆಯೇ? ಇಲ್ಲ, ಅವರಿಗೆ ಅಂದು ಹೊಸಬಟ್ಟೆಯೇ ಆಗಬೇಕು. ಇದ್ದುದರಲ್ಲೇ ಹೊಸ ಬಟ್ಟೆ ಹಾಕಿದರೂ, ಗೆಳೆಯ ಗೆಳತಿಯರು ನಕ್ಕುಬಿಟ್ಟರೆ? ಜನ್ಮದಿನಕ್ಕೂ ಹೊಸಬಟ್ಟೆ ತೆಗೆದುಕೊಳ್ಳುವುದಿಲ್ಲ ಎಂದು ಆಡಿಕೊಂಡು ಬಿಟ್ಟರೆ? ಹೀಗೆ ಏನೇನೋ ಕಾರಣದಿಂದ ಅಂದು ಹೊಸಬಟ್ಟೆಯೇ ಆಗಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಹಟ, ರಾದ್ಧಾಂತ, ರಾಮಾಯಣ ಇದ್ದದ್ದೇ. ದೊಡ್ಡ ಹೆಸರು ಪಡೆದಿರುವ ಆಡಂಬರದ ಶಾಲೆಗೆ ಕಷ್ಟಪಟ್ಟು ಸೇರಿಸಿರುವ ಬಡ ತಂದೆತಾಯಿಗಳಿಗೆ ಇದರ ಪೆಟ್ಟು ಬೀಳುವುದು ಖಂಡಿತಾ. ಅಲ್ಲಿ ಓದುವ ಮಕ್ಕಳಿಗೆ ತಂದೆ ತಾಯಿಗಳ ಪರದಾಟ ಗೊತ್ತಾಗುವುದಿಲ್ಲ, ಕೆಲವರಿಗೆ ಗೊತ್ತಾದರೂ ಅವರ ಮಕ್ಕಳಾಗಿ ಹುಟ್ಟಿದ್ದಕ್ಕೆ ನಮಗಾಗಿ ಖರ್ಚು ಮಾಡಲೀ ಎಂಬ ಧೋರಣೆಯೂ ಇರುತ್ತದೆ. ಹೀಗಾಗಿ ಮನೆಯಲ್ಲಿ ಜಗಳ, ಮನಸ್ತಾಪ, ಆಕ್ಷೇಪಣೆ, ಮಕ್ಕಳಿಗಾಗಿ ತಂದೆತಾಯಿಗಳಲ್ಲಿ ಜಗಳ ಹೀಗೆ ಏನೇನೋ ರೀತಿಯಲ್ಲಿ ರಾಮಾಯಣ, ಮಹಾಭಾರತಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಅದು ತಾತ್ಕಾಲಿಕವಾಗಿಯೂ ಇರಬಹುದು, ಕೆಲವೊಮ್ಮೆ ಅದು ಹಾಗೆಯೇ ಮುಂದುವರೆದು ಸಂಬಂಧಗಳು ಎಣ್ಣೆಸೀಗೆಕಾಯಿಯಾಗಿಯೇ ಉಳಿದಿರುವ ಉದಾಹರಣೆಗಳೂ ಇವೆ.
ಕಾಲೇಜಿನ ವಿದ್ಯಾರ್ಥಿಗಳು ಆಚರಿಸುವ ಹುಟ್ಟಿದ ಹಬ್ಬ ಮಕ್ಕಳದ್ದಕ್ಕಿಂತ ಭಿನ್ನ. ಅವರದು ಹೋಟೆಲ್, ಸಿನಿಮಾ ಇತ್ಯಾದಿ. ಇಲ್ಲಿ ಮತ್ತೆ ಬಡವರ ಮಕ್ಕಳಿಗೆ ಒಂದು ರೀತಿಯ ಪೀಕಲಾಟ. ನನಗೆ ಇವೆಲ್ಲ ಆಗುವುದಿಲ್ಲ ಎಂದೂ ಹೇಳಲಾರರು, ಮಾಡಬೇಕು ಎಂದರೆ ಕೈಲಾಗುವುದಿಲ್ಲ. ಈ ಸಂದಿಗ್ಧದಿಂದ ಅವರ ಮಾನಸಿಕ ತೊಳಲಾಟ ಹೇಳಲಸಾಧ್ಯ. ನನಗೆ ಅನ್ನಿಸುವ ಮಟ್ಟಿಗೆ ಗೆಳೆಯರಿಗೆ ಇದ್ದುದನ್ನು ಹೇಳಿ, ತಮ್ಮ ಮನೆಯ ಸ್ಥಿತಿಯನ್ನು ಹೇಳಿಬಿಟ್ಟರೆ ನೆಮ್ಮದಿ, ನಿರಾಳ. ಅವರ ಮುಂದೆ ಇಲ್ಲದ ಸೋಗು ಹಾಕಿಕೊಂಡು ಒದ್ದಾಡುವ ಪ್ರಮೇಯ ಇರುವುದಿಲ್ಲ. ಒಂದು ಬಾರಿ ಹೇಳಿದ ನಂತರ ಮುಂದೆ ಯಾರೂ ಇಂತಹ ವಿಷಯಗಳಲ್ಲಿ ಬಲವಂತ ಮಾಡುವುದಿಲ್ಲ. ಆದರೆ ನಾವಿರುವುದೇ ಹೀಗೆ ಎಂಬ ದೃಢಮನಸ್ಸು ಇರಬೇಕು. ಈ ಕಾಲೇಜು ಹುಡುಗರಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಅದು ಜನ್ಮದಿನ ಆಚರಿಸುವ ಹುಡುಗನನ್ನು ನಾಲ್ಕು ಜನ ಕೈ ಕಾಲು ಹಿಡಿದು ಎತ್ತಿ ಉಳಿದ ಹುಡುಗರು ಕಾಲುಗಳಿಂದ ಒದೆಯುವುದು. (ಹುಟ್ಟಿದ ಹಬ್ಬದ ಒದೆಗಳು) ಈ ಅಮಾನುಷ ಪದ್ಧತಿಯನ್ನು ಅದ್ಯಾರು ತಂದರೋ, ಅದನ್ನು ಹಾಗೆಯೇ ಆಚರಿಸುವ ಈ ಹುಡುಗರಿಗೆ ಅದೆಂದು ಬುದ್ಧಿ ಬರುತ್ತದೋ ದೇವರೇ ಬಲ್ಲ. ನಾವು ಶುಭಕಾರ್ಯಗಳಿಗೆ ದೀಪ ಹಚ್ಚುವ ಕೆಲಸ ಮಾಡಿದರೆ ಈ ಪಾಶ್ಚಾತ್ಯ ರೀತಿಯಲ್ಲಿ ದೀಪ ಆರಿಸುವ ಹಾಗೂ ಹೀಗೆ ಕತ್ತೆಗಳಂತೆ ಒದೆಯುವ ಪದ್ಧತಿ.
ಬಲು ಚಿಕ್ಕ ಮಕ್ಕಳ ಜನ್ಮದಿನವೇ ಬೇರೆಯ ರೀತಿ. ಅವಕ್ಕೆ ಬುದ್ದಿ ಬಲಿತಿರುವುದಿಲ್ಲ. ನಿದ್ದೆ ಬಂದರೆ ನಿದ್ದೆ ಮಾಡಿಬಿಡುತ್ತವೆ. ದುಃಖವಾದರೆ ಜೋರಾಗಿ ಅತ್ತುಬಿಡುತ್ತವೆ. ಅದರ ಅಪ್ಪ ಅಮ್ಮಂದಿರೋ ಅನೇಕ ಜನರನ್ನು ಹಚ್ಚಿಕೊಂಡು ಅವರನ್ನು ಉಪಚರಿಸುವುದರಲ್ಲೇ ಮಗ್ನರಾಗಿ ಮಕ್ಕಳನ್ನೇ ಮರೆತುಬಿಟ್ಟಿರುತ್ತಾರೆ. ಆ ಮಕ್ಕಳಿಗೆ ಅಪ್ಪ ಅಮ್ಮಂದಿರ ಒಡನಾಟ ತಪ್ಪಿದ ದುಃಖ, ಬಂದವರೆಲ್ಲಾ ಮಾತಾಡಿಸುವಾಗ ಆಗುವ ಭಯ, ಮುಜುಗರ (ಕೆಲವರಂತೂ ಆ ಮಕ್ಕಳಿಗೆ ರಾಕ್ಷಸರಂತೆ ಕಾಣಿಸುತ್ತಾರೇನೋ?) ಹೀಗಾಗಿ ಗೊಳೋ ಎಂದು ಸೂರು ಕಿತ್ತುಹೋಗುವಂತೆ ಕಿರುಚಿ ಅಳುತ್ತಿರುತ್ತವೆ. ಅದನ್ನು ಸಮಾಧಾನ ಪಡಿಸಲು ಅದರ ಚಿಕ್ಕ ಅಕ್ಕನೋ, ಅಣ್ಣನೋ ಏನೇನೋ ಕೋತಿ ಚೇಷ್ಟೆಗಳನ್ನು ಮಾಡಿ ಮತ್ತಷ್ಟು ಕಿರುಚಿರುತ್ತಿರುತ್ತವೆ. ಅವುಗಳನ್ನು ಸುಮ್ಮನಿರೋ ಎಂದು ಅದರ ಅಜ್ಜಿಯೋ, ದೊಡ್ಡಮ್ಮನೋ ಇನ್ನಷ್ಟು ಕಿರುಚಾಡುತ್ತಿರುತ್ತಾರೆ. ಹೀಗೆ ಅಲ್ಲಿ ನಡೆಯುವ ರಂಪ, ರಾದ್ಧಾಂತಗಳಿಂದ ಬಂದವರಿಗೆ, ಆ ಮಗುವಿಗೆ, ಅದರ ಅಪ್ಪ ಅಮ್ಮನಿಗೆ ತಲೆ ಚಿಟ್ಟು ಹಿಡಿದುಬಿಟ್ಟಿರುತ್ತದೆ. ಜೊತೆಗೆ ಇತರ ಮಕ್ಕಳ ಕಿರುಚಾಟ, ಅರಚಾಟ, ಆಟ, ಓಟ, ದೊಡ್ಡವರ ಸಡಗರ, ಸಂಭ್ರಮ, ಗಡಿಬಿಡಿ. ಒಟ್ಟಿನಲ್ಲಿ ಅದು ಹುಟ್ಟಿದ ಹಬ್ಬವೋ ಗದ್ದಲದ ಗೊಂದಲ ಕೂಟವೋ ಎಂದು ಅನುಮಾನ ಬಂದುಬಿಡುತ್ತದೆ. ಆದರೂ ಅದು ಅನೇಕರಿಗೆ ಬೇಕು. ಎಷ್ಟಾದರೂ ಅದು ತಮ್ಮ ದೌಲತ್ತನ್ನು ತೋರ್ಪಡಿಸಲು ಸಿಗುವ ಒಂದು ಅವಕಾಶವಲ್ಲವೇ. ಕೆಲವರಂತೂ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿಯುವ ಜಾತಿಯವರು. ತಮ್ಮ ಕುಟುಂಬದ ಇನ್ನಾರೋ ಮಾಡಿದರು, ನಾನೇನು ಕಡಿಮೆ ಎಂದು ಸ್ಪರ್ಧೆಗೆ ನಿಂತು ಹಣ ಸುರಿಯುತ್ತಾರೆ. ಉಳಿತಾಯ, ಸರಳತೆ ಎಂಬ ಪದಗಳಿಗೆ ಇಲ್ಲಿ ಜಾಗವೇ ಇಲ್ಲ.
ನನಗಂತೂ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡದ್ದು ನೆನಪೇ ಇಲ್ಲ. ಹುಡುಗರೆಲ್ಲಾ ನನ್ನ ಹುಟ್ಟಿದ ಹಬ್ಬದ ದಿನಾಂಕವನ್ನು ಕೇಳಿದಾಗ ಮಾತು ಮರೆಸಿ ತಪ್ಪಿಸಿಕೊಂಡು ಬಿಡುತ್ತಿದ್ದೆ. ಆದರೆ ನಾನು ವಿಭಾಗ ಮುಖ್ಯಸ್ಥನಾದಮೇಲೆ ಮೇಲೆ, ನನ್ನ ಸಹೋದ್ಯೋಗಿಗಳು ನನ್ನ ಹುಟ್ಟಿದ ಹಬ್ಬದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ತಾವೇ ಕೇಕುತಂದು ಆಚರಿಸುತ್ತಿದ್ದರು. ನನಗೋ ಒಂದು ರೀತಿಯ ಮುಜುಗರ. ಇನ್ನು ಕೆಲವು ಬಾರಿ ಒಂದೇ ತಿಂಗಳಲ್ಲಿ ಹುಟ್ಟಿದ ಮೂರುನಾಕು ಜನರನ್ನು ಒಟ್ಟಿಗೆ ಕಲೆಹಾಕಿ ಅವರೆಲ್ಲರೂ ಸೇರಿ ಯಾವುದಾದರೂ ಭರ್ಜರಿ ಹೊಟೆಲ್‍ನಲ್ಲಿ ಊಟ ಹಾಕಿಸಬೇಕು ಎಂದು ತಾಕೀತುಮಾಡಿದ್ದರು. ಅದೂ ಒಂದೆರಡುಬಾರಿ ನಡೆಯಿತು. ಅಂತೂ ಹುಟ್ಟಿದ ಹಬ್ಬದ ನೆಪದಲ್ಲಿ ಸಂಭ್ರಮವೋ ಸಂಭ್ರಮ. ನನ್ನ ಅರವತ್ತರ ಹುಟ್ಟುಹಬ್ಬವಂತೂ ಹುಡುಗರು, ಸಹೋದ್ಯೋಗಿಗಳು ಸೇರಿ ಭರ್ಜರಿಯಾಗಿಯೇ ಮಾಡಿಬಿಟ್ಟರು. ಒಂದು ದೊಡ್ಡ ಕೇಕು, 60 ಎಂದು ಬರೆದಿರುವ ಒಂದು ಮೇಣದ ಬತ್ತಿ, ಹುಡುಗರಿಗೆಲ್ಲಾ ತಿಂಡಿ, ಹೀಗೆ ಏನೇನೋ. ನಾವು ಉಳಿತಾಯ, ಸರಳತೆ ಎಂದು ವೇದಾಂತ ನುಡಿಯುತ್ತಿದ್ದರೆ ಅವರು ಹೌದು ಹೌದು ಎಂದು ಗೋಣಾಡಿಸುತ್ತಲೇ, ತಮಗೆ ಏನು ಬೇಕೋ ಅವೆಲ್ಲವನ್ನು ನನಗೆ ತಿಳಿಯದಂತೆ ಮಾಡಿ, ಮೆಲ್ಲಗೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ನನಗೆ ಆಘಾತ (ಅವರಿಗೆ ಸರ್‍ಪ್ರೈಜ್ó) ತಂದಿಟ್ಟುಬಿಟ್ಟರು. ಇನ್ನು ಕೆಲವು ಹುಡುಗರಂತೂ ಸರ್, ನಿಮ್ಮನ್ನು ಎತ್ತಿ ಹುಟ್ಟಿದ ಹಬ್ಬದ ಒದೆಗಳನ್ನು ಕೊಡಬಹುದೆ? ಎಂದು ಕೇಳಿದರು. ನಾನು, "ನನಗೆ 60ವರ್ಷಕ್ಕೇ ಶಾಂತಿಮಾಡಿ, ಸ್ವರ್ಗಕ್ಕೋ ನರಕಕ್ಕೋ ಕಳುಹಿಸಬೇಕೆಂದಿದ್ದರೆ ಮಾಡಿ" ಎಂದೆ. ಸದ್ಯ ಅವರು ಮನಸ್ಸು ಮಾಡಲಿಲ್ಲ. ಎಲ್ಲರೂ ಸೇರಿ ನಾವು ಮಾಡಿಯೇ ತೀರುತ್ತೇವೆ ಎಂದಿದ್ದರೆ ನನಗೇನೂ ಮಾಡಲಾಗುತ್ತಿರಲಿಲ್ಲ. ಒದೆಸಿಕೊಂಡು ಬಿದ್ದಿರಬೇಕಿತ್ತು ಅಥವಾ ಹುಟ್ಟಿದ ದಿನವೇ ಸ್ವರ್ಗಕ್ಕೆ (ನರಕಕ್ಕೂ ಇರಬಹುದು) ಹೋದ ಪ್ರೊಫೆಸರ್ ಮಹಾಶಯ ಎಂದು ಖ್ಯಾತನಾಗುತ್ತಿದ್ದೆನೋ ಏನೋ. ಆದರೆ ನಮ್ಮ ಹುಡುಗ, ಹುಡುಗಿಯರು ತುಂಬಾ ಒಳ್ಳೆಯವರು, ನಾನೆಂದರೆ ತುಂಬಾ ಗೌರವ. ಹೀಗಾಗಿ ತಪ್ಪಿಸಿಕೊಂಡೆ. ಜೊತೆಗೆ ಅವರು ನನಗೆ ತಿಳಿಯದ ಹಾಗೆ ಒಂದು ಪೋóಟೋ ಹಿಡಿದು ಅದನ್ನು ನೋಡಿಕೊಂಡು ಒಂದು ಸುಂದರವಾದ ಚಿತ್ರವನ್ನು ಪೆನ್ಸಿಲಿನಿಂದ ಬರೆದು ಅದಕ್ಕೆ ಕಟ್ಟು ಹಾಕಿಸಿ ನನಗೆ ಕೊಟ್ಟಿದ್ದಾರೆ. ಜೊತೆಗೆ ತಾವೇ ಮಾಡಿದ ಒಂದು ಸುಂದರ ಕಲಾಕೃತಿಯನ್ನು ನೀಡಿದ್ದಾರೆ. ಒಂದು ದೊಡ್ಡ ಶುಭಾಶಯ ಪತ್ರ ಬರೆದು ಅದರಲ್ಲಿ ಎಲ್ಲರೂ ತಮ್ಮ ಸುಂದರವಾದ ಬರವಣಿಗೆಯಲ್ಲಿ ನನ್ನನ್ನು ಹೊಗಳಿದ್ದಾರೆ. ಇದು ನಿಜವೇನ್ರೋ ಎಂದರೆ ನೂರಕ್ಕೆ ನೂರು ಸರ್ ಎನ್ನುತ್ತಾರೆ. ನಾನಂತೂ ಅವರಿಗೆ ಎಂದೂ ಕೆಟ್ಟದ್ದು ಮಾಡಿಲ್ಲ, ಕೇಡೂ ಬಯಸಿಲ್ಲ, ತಪ್ಪು ಮಾಡಿದಾಗ ಮಾತ್ರ ಒಂದಿಷ್ಟು ಬಯ್ದಿರಬಹುದು, ಆದ್ದರಿಂದ ಅದು ನಿಜವಿರಲೂಬಹುದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ.
ಇನ್ನು ಹುಟ್ಟಿದ ಹಬ್ಬ ಎಂದಾಗ ಈ ಒಂದು ನೀತಿಕತೆ ನೆನಪಾಗುತ್ತದೆ. ಒಬ್ಬ ಶ್ರೀಮಂತನಿರುತ್ತಾನೆ. ಅವನು ತನ್ನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾನೆ. ಅವಳ ಹುಟ್ಟಿದ ಹಬ್ಬದಂದು ಒಂದು ಸುಂದರವಾದ ಹೂಗುಚ್ಛವನ್ನು ನೀಡಿದರೆ ತನ್ನ ಕರ್ತವ್ಯ ಮುಗಿಯಿತು ಎಂದುಕೊಂಡಿರುತ್ತಾನೆ. ತನ್ನ ತಾಯಿಯ ಭಾವನೆಗಳನ್ನು ಅವನು ಎಂದಿಗೂ ಅರ್ಥಮಾಡಿಕೊಂಡೇ ಇರುವುದಿಲ್ಲ. ಹೀಗೆ ಒಮ್ಮೆ ಅವನು ಹೂಗುಚ್ಛವನ್ನು ಕೊಳ್ಳುತ್ತಿರುವಾಗ ಬಡತನವೇ ಮೈವೆತ್ತಿದಂತಹ ಒಬ್ಬ ಪುಟ್ಟ ಬಾಲಕಿ ಬಂದು ತನಗೆ ಕೇವಲ ಒಂದು ಗುಲಾಬಿಯನ್ನು ಕೊಡಿಸಿ ಎಂದು ದುಂಬಾಲು ಬೀಳುತ್ತಾಳೆ. ಅವನು ಒಲ್ಲದ ಮನಸ್ಸಿನಿಂದ ಅದನ್ನು ಕೊಡಿಸಿ, ಅದನ್ನು ಏನು ಮಾಡುತ್ತಾಳೋ ಎಂದು ಕುತೂಹಲದಿಂದ ಅವಳನ್ನು ಹಿಂಬಾಲಿಸಿ ನೋಡಿದಾಗ, ಆ ಹುಡುಗಿ ಅದನ್ನು ತೆಗೆದುಕೊಂಡು ಹೋಗಿ ತನ್ನ ತಾಯಿಯ ಗೋರಿಯಮೇಲೆ ಇಟ್ಟು ತನ್ನ ಪ್ರೇಮವನ್ನು ತೋರಿಸುತ್ತಾಳೆ. ಆಗ ಇವನಿಗೆ ಬದುಕಿರುವ ತನ್ನ ತಾಯಿಯ ಬಗ್ಗೆ ಪಶ್ಚಾತ್ತಾಪವಾಗಿ, ತಾಯಿಯ ಬಳಿಗೆ ತಾನೇ ಹೋಗಿ ಶುಭಾಶಯವನ್ನು ಕೋರಿ ನಂತರ ಅವಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುತ್ತಾನೆ. ಅಂತೂ ಒಂದು ಹುಟ್ಟಿದಹಬ್ಬ ಅವನ ಕಣ್ಣನ್ನು ತೆರೆಸುತ್ತದೆ.
ಇನ್ನು ಕೆಲವರು ಹುಟ್ಟಿದ ಹಬ್ಬದ ನೆನಪಿಗೆ ಯಾವುದಾದರೂ ಅನಾಥಾಶ್ರಮಕ್ಕೆ ಅವರ ಹೆಸರಿನಲ್ಲಿ ಅನ್ನದಾನ ಮಾಡಲು ಹಣವನ್ನು ನೀಡಿರುತ್ತಾರೆ. ಕೆಲವರು ಬದುಕಿಲ್ಲದ ತಮ್ಮ ತಂದೆ ತಾಯಿಯರ ಹುಟ್ಟಿದ ಹಬ್ಬಕ್ಕೂ ಇಂತಹ ದಾನ ಮಾಡುತ್ತಾರೆ. ಇಂತಹವರು ಇರುವುದರಿಂದಲೇ ನಮ್ಮ ಭಾರತೀಯತೆ, ಸಂಸ್ಕøತಿ ಇವುಗಳು ಇಂದಿಗೂ ಉಳಿದುಕೊಂಡಿರುವುದು.
ಸಿನಿಮಾಗಳಲ್ಲಿ ಹುಟ್ಟಿದ ಹಬ್ಬವನ್ನು ಆಚರಿಸುವುದೇ ಒಂದು ರೀತಿ. ಅಂದು ನಾಯಕ ಪಿಯಾನೋ ನುಡಿಸುತ್ತಾ ಒಂದು ವಿರಹ ಗೀತೆಯನ್ನು ಹೇಳುತ್ತಾನೆ. ನಾಯಕಿ ಯಾರಿಗೂ ಕಾಣದ ಹಾಗೆ ದುಃಖವನ್ನು ನುಂಗಿ ಒಳಗೊಳಗೆ ಅಳುತ್ತಾಳೆ. ಮಕ್ಕಳ ಹುಟ್ಟಿದ ಹಬ್ಬವಾದರೆ ಎಲ್ಲಾ ಮಕ್ಕಳನ್ನೂ ಸೇರಿಸಿ ಹಾಡಿಸಿ, ಕುಣಿಸಿ ಎಲ್ಲಾ ಮಕ್ಕಳು ಹುಟ್ಟಿದ ಹಬ್ಬವನ್ನು ಹಾಗೆಯೇ ಆಚರಿಸುವಂತೆ ಒಂದು ಪದ್ಧತಿಯನ್ನು ತಂದು ಬಿಡುತ್ತಾರೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಹುಟ್ಟಿದ ಹಬ್ಬ ಎಂದರೆ ಗೋಳು, ಆಡಂಬರ, ವೇದನೆ, ವಿರಹ, ಹುಡುಗಾಟ, ಕುಣಿದಾಟ ಎಲ್ಲವೂ ಮೇಳೈಸಿರುತ್ತದೆ.
ಹುಟ್ಟಿದ ಹಬ್ಬದ ದಿನ ಏಕೆ ಮೇಣದ ಬತ್ತಿ ಹಚ್ಚಿ ನಂತರ ಅದನ್ನು ಆರಿಸುತ್ತಾರೆ ಎಂದು ನಾನು ಅನೇಕರನ್ನು ಕೇಳಿದೆ. ಎಲ್ಲರೂ ಗೊತ್ತಿಲ್ಲ, ಏಲ್ಲರೂ ಹಾಗೇ ಮಾಡುತ್ತಾರೆ ನಾವೂ ಹಾಗೇ ಮಾಡುತ್ತೇವೆ ಎಂದರೇ ಹೊರತು ಒಬ್ಬರೂ ಸರಿಯಾದ ಉತ್ತರ ನೀಡಲಿಲ್ಲ. ಅಂತೂ ಅದರ ಕಾರಣವನ್ನು ನಾನೇ ಶೋಧಿಸಬೇಕಾಯಿತು. ನಿಮಗೇನಾದರೂ ಗೊತ್ತೇ? ಖಂಡಿತ ಗೊತ್ತಿರಲಿಕ್ಕಿಲ್ಲ. ನಾನೇ ಹೇಳಿಬಿಡುತ್ತೇನೆ, ಕೇಳಿ ನಕ್ಕುಬಿಡಿ. ದೀಪ ಹಚ್ಚಿದ ಕೂಡಲೇ ಏನಾದರೂ ಪ್ರಾರ್ಥಿಸಿ ನಂತರ ದೀಪ ಆರಿಸಿದಾಗ ಬರುವ ಹೊಗೆಯು ನಿಮ್ಮ ಪ್ರಾರ್ಥನೆಯನ್ನು ದೇವರಬಳಿಗೆ ತೆಗೆದುಕೊಂಡು ಹೋಗುತ್ತದೆಯಂತೆ. ಇದು ನಮ್ಮ ಭಾರತೀಯ ಪದ್ಧತಿಯಾಗಿದ್ದಿದ್ದರೆ ಇದೆಂಥ ಮೂಢನಂಬಿಕೆ ಎಂದು ಗೇಲಿಮಾಡಿ, ಅದಕ್ಕೆ ಒಂದಿಷ್ಟು ಕೊಂಕುನುಡಿದು ರಂಪ ಮಾಡಿರುತ್ತಿದ್ದರು, ನಮ್ಮ ಬುದ್ಧಿಜೀವಿಗಳು. ಆದರೆ ಅದೇ ಜನ ಈಗಲೂ ಇದನ್ನೇ ಕುರಿಗಳಂತೆ ಅನುಸರಿಸುತ್ತಿದ್ದಾರೆ. ಒಬ್ಬರಾದರೂ ಇದರ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಇದಕ್ಕಿಂತಾ ದೀಪ ಹಚ್ಚುವುದು ಎಂದರೆ ಕತ್ತಲನ್ನು ದೂರಮಾಡುವುದು ಅಂದರೆ, ಕತ್ತಲೆಂಬ ನಮ್ಮ ಅಜ್ಞಾನವು ಬೆಳಕೆಂಬ ಜ್ಞಾನದಿಂದ ದೂರವಾಗಲಿ ಎಂಬ ಸಂಕೇತವೂ ಸರಿಯಲ್ಲವೇ. ಇದು ಯಾವ ಧರ್ಮದವರೂ ಒಪ್ಪಬಹುದು ಏಕೆಂದರೆ ದೀಪಕ್ಕೆ, ಅದು ನೀಡುವ ಬೆಳಕಿಗೆ ಯಾವುದೇ ಧರ್ಮದ ನಂಟಿಲ್ಲ.
ಈ ಪ್ರಪಂಚದಲ್ಲಿ, ನಮ್ಮ ದೇಶದಲ್ಲಿ ಅನೇಕ ಪುಣ್ಯಾತ್ಮರು ಹುಟ್ಟಿ ತಮ್ಮ ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ. ಅಂತಹವರ ಹುಟ್ಟಿದ ದಿನವನ್ನು ನೆನೆವುದು ನಮ್ಮ ಕರ್ತವ್ಯ. ನಾವು ಅಷ್ಟು ದೊಡ್ಡವರಾಗುತ್ತೇವೆಯೋ ಇಲ್ಲವೋ ಆದರೂ ಅವರ ಆದರ್ಶಗಳನ್ನು ನೆನೆದಾದರೂ ರವೆಯಷ್ಟು ಒಳ್ಳೆಯ ಕೆಲಸ ಮಾಡೋಣ ಅಲ್ಲವೆ. ಅದಕ್ಕಾಗಿಯೇ ಅಂತಹವರ ಹುಟ್ಟಿದ ಹಬ್ಬಗಳನ್ನು ಜಯಂತಿ ಎಂದು ಆಚರಿಸುತ್ತಾರೆ. ಶಂಕರ ಜಯಂತಿ, ಬುದ್ಧ ಜಯಂತಿ, ಬಸವ ಜಯಂತಿ, ಗುರುನಾನಕ್ ಜಯಂತಿ, ಗಾಂಧಿ ಜಯಂತಿ, ರಾಮಕೃಷ್ಣ ಜಯಂತಿ ಇತ್ಯಾದಿ. ದೇವರು ಹುಟ್ಟಿದ ದಿನವನ್ನು ಹಬ್ಬವಾಗಿ ಆಚರಿಸುತ್ತೇವೆ. ರಾಮನವಮಿ, ಕೃಷ್ಣ ಜನ್ಮಾಷ್ಟಮಿ ಇತ್ಯಾದಿ. ಇನ್ನು ಕೆಲವು ಗಣ್ಯರು ಹುಟ್ಟಿದ ದಿನವನ್ನು ಒಂದು ಒಳ್ಳೆಯ ಸಾಮಾಜಿಕ ಅಥವಾ ಇತರ ಯಾವುದಾದರೂ ಕಾರ್ಯಕ್ಕೆ ಹೊಂದಿಸಿ ಆಚರಿಸುತ್ತಾರೆ. ನಮ್ಮ ನೆಚ್ಚಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರ ಹುಟ್ಟಿದ ಹಬ್ಬವನ್ನು ಅಧ್ಯಾಪಕರ ದಿನವನ್ನಾಗಿ, ಮಾಜಿ ಪ್ರಧಾನಿಗಳಾದ ನೆಹರುರವರದನ್ನು ಮಕ್ಕಳದಿನವನ್ನಾಗಿ, ಚರಣ್‍ಸಿಂಗ್ ಅವರದನ್ನು ರೈತದಿನವನ್ನಾಗಿ, ರಾಜೀವ್‍ಗಾಂಧಿ ಅವರದನ್ನು ಸದ್ಭಾವನಾ ದಿನವನ್ನಾಗಿ, ವಲ್ಲಭಭಾಯಿ ಪಟೇಲ್ ಅವರದನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ, ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸಿ ವಿ ರಾಮನ್ ಅವರದನ್ನು ವಿಜ್ಞಾನದ ದಿನವನ್ನಾಗಿ, ಸರ್ ಎಂ ವಿಶ್ವೇಶ್ವರಯ್ಯ ಅವರದನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸುತ್ತೇವೆ. ಅಂತೂ ಹುಟ್ಟಿದ ಹಬ್ಬಕ್ಕೆ ಎಷ್ಟು ಬೆಲೆ ಇದೆ ಅಲ್ಲವೇ? ಹೀಗೆಯೆ ಆಗಸ್ಟ್ 15 ಹಾಗೂ ನವೆಂಬರ್ 1 ಈ ದಿನಗಳನ್ನು ಸ್ವತಂತ್ರ ಭಾರತ ಹುಟ್ಟಿದ ಹಾಗೂ ಕರ್ನಾಟಕ ಹುಟ್ಟಿದ ದಿನವೆಂದೂ ಕರೆಯಬಹುದಲ್ಲವೇ.
ಅಮೆರಿಕಾದಲ್ಲಿ ವಾಷಿಂಗ್ಟನ್ ಅವರ ಹುಟ್ಟಿದ ಹಬ್ಬವನ್ನು ರಾಷ್ಟ್ರಾಧ್ಯಕ್ಷರ ದಿನವನ್ನಾಗಿ ಫೆಬ್ರುವರಿಯ ಮೂರನೇ ಸೋಮವಾರದಂದು ಅಚರಿಸುತ್ತಾರೆ. ಹಳೆಯ ಕ್ಯಾಲೆಂಡರ್, ಹೊಸ ಕ್ಯಾಲೆಂಡರ್ ಇವುಗಳಲ್ಲಿ ಅದು ಬೇರೆ ಬೇರೆ ದಿನಗಳಂದು ಬರುವುದರಿಂದ ಅವರು ಬಲು ಸುಲಭವಾಗಿ ಬಗೆಹರಿಸಿಬಿಟ್ಟಿದ್ದಾರೆ. ನಮ್ಮಲ್ಲಾದರೋ ಹೀಗಾದರೆ ಅದಕ್ಕಾಗಿ ಚರ್ಚೆ, ಕಾದಾಟ, ಕಿರಿಚಾಟ, ರಾಜಕಾರಣ, ರಾಮಾಯಣಗಳನ್ನು ಮಾಡಿ ರಾದ್ಧಾಂತ ಮಾಡಿಬಿಟ್ಟಿರುತ್ತಿದ್ದರು. ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬದಂದು ಮದ್ಯದ ಅಂಗಡಿಗಳು ಮುಚ್ಚಿರಬೇಕು ಎಂದು ಸರಕಾರ ಆಜ್ಞೆ ಹೊರಡಿಸಿದೆ. ಈ ಒಂದು ದಿನ ಬಿಟ್ಟು ವರ್ಷದ ಉಳಿದ ದಿನದಂದು ಕುಡಿದುಕೊಂಡು ಬಿದ್ದಿರಿ, ಈ ಒಂದುದಿನ ಹೇಗಾದರೂ ಮಾಡಿ ತಡೆದುಕೊಳ್ಳಿ ಸಾಕು ಎಂದು ನಮ್ಮ ರಾಜಕಾರಣಿಗಳ ಅನಿಸಿಕೆ. ಹೀಗೆ ಮಾಡಿಬಿಟ್ಟರೆ ಗಾಂಧಿಯವರ ಆತ್ಮಕ್ಕೆ ಶಾಂತಿ ಸಿಗುವುದು ಎಂದು ಅವರ ಅಂಬೋಣ.
ಇವೆಲ್ಲವುಗಳ ಅಂದರೆ ಜನ್ಮದಿನ ಆಚರಿಸುವುದರ ಉದ್ದೇಶವೇನೋ ಒಳ್ಳೆಯದೆ. ಆದರೆ ನಾವು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತೇವೆ ಎಂದು ಎಲ್ಲರೂ ಮನನ ಮಾಡಿಕೊಂಡರೆ ಒಳ್ಳೆಯದು. ಗಾಂಧಿ ಜಯಂತಿ ಆಚರಿಸಿದ ಎಷ್ಟು ಜನ ಸತ್ಯಕ್ಕೆ, ಅಹಿಂಸೆಗೆ, ಕುಡಿತ ನಿರ್ಮೂಲನೆಗೆ ಬೆಲೆ ಕೊಡುತ್ತಾರೆ? ಬಸವ ಜಯಂತಿ ಆಚರಿಸಿದ ಎಷ್ಟು ಜನ ಅಯ್ಯಾ ಎಂದರೆ ಸ್ವರ್ಗ, ಕಾಯಕವೇ ಕೈಲಾಸ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ತತ್ವಗಳಿಗೆ ಬೆಲೆ ನೀಡುತ್ತಾರೆ? ಸದ್ಭಾವನೆಯ ದಿನವನ್ನು ಆಚರಿಸಿ ಮನದಲ್ಲಿ ದುರ್ಭಾವನೆಗಳನ್ನೇ ತುಂಬಿ ಕೊಂಡಿರುವವರು ಅದೆಷ್ಟೋ! ಅಂದ ಮೇಲೆ ಜನ್ಮದಿನವನ್ನು ಅಚರಿಸಿದ್ದಕ್ಕೆ ಬೆಲೆಯೇನು ಬಂತು? ಕೇವಲ ಕಾಟಾಚಾರಕ್ಕೆ ಅಥವಾ ಜನರ ಮುಂದೆ ಧರಿಸಿದ ಹುಸಿ ಮುಖವಾಡ ಅಲ್ಲವೇ?
ಈ ಹುಟ್ಟಿದ ಹಬ್ಬಕ್ಕೆ ರಜೆ ಕೊಡುವುದು ನನಗೇನೋ ಸರಿ ಎನ್ನಿಸುವುದಿಲ್ಲ. ಇದರಿಂದ ಜನ ಸುಮ್ಮನೆ ಕಾಲ ಕಳೆದು ಆ ರಜೆಯ ಮೂಲ ಉದ್ದೇಶವನ್ನೇ ಮರೆತುಬಿಡುತ್ತಾರೆ. ಅದೇನಾದರೂ ವಾರದ ಕೊನೆಯಲ್ಲಿ ಬಂದರೆ ಅದಕ್ಕೆ ಹಿಂದೊಂದು, ಮುಂದೊಂದು ಸೇರಿಸಿ ತಮ್ಮ ಸ್ವಂತದ ಕೆಲಸಗಳಿಗೆ ಉಪಯೋಗಿಸುತ್ತಾರೆ. ಹುಟ್ಟಿದ ಹಬ್ಬಕ್ಕೆ ರಜಾ ಕೊಡುವುದು ಇದಕ್ಕಾಗಿಯೇ? ಅದಕ್ಕೆ ಬದಲು ಅಂದು ಎಂದಿನಂತೆ ಪಾಠ ಮಾಡಿ ಅಥವಾ ಕಚೇರಿಯಲ್ಲಿ ಕೆಲಸ ಮಾಡಿ, ಅಂದಿನ ಒಂದು ಗಂಟೆಯ ಕಾಲ ಅಂದು ಹುಟ್ಟಿದವರ ಬಗ್ಗೆ ಒಂದು ಕಾರ್ಯಕ್ರಮ, ಅವರ ಬಗ್ಗೆ ಒಂದೆರೆಡು ಮಾತು, ಅವರಿಂದ ಕಲಿಯಬಹುದಾದ ನೀತಿ, ಇತ್ಯಾದಿಗಳನ್ನು ಅಳವಡಿಸಿಕೊಂಡರೆ ಒಳ್ಳೆಯದಲ್ಲವೇ.
ಈ ಹುಟ್ಟಿದ ಹಬ್ಬದ ದಿನದ ಬಗ್ಗೆ ಮಾತನಾಡುವಾಗ ಈ ಒಂದು ವಿಚಿತ್ರವನ್ನೂ ಗಮನಿಸಬಹುದು. ಕೆಲವರ ಹುಟ್ಟಿದ ದಿನ ಮತ್ತು ಮರಣದ ದಿನ ಒಂದೇ ಆಗಿರುವುದು. ಇದು, ಅಶ್ಚರ್ಯ, ವಿಚಿತ್ರ, ದುಃಖ ಎಲ್ಲವನ್ನೂ ತರಿಸುತ್ತದೆ. ಹುಟ್ಟಿದ ದಿನಕ್ಕೆ ಸಂತೋಷ ಪಡುವುದೋ, ಸತ್ತದಿನ ಎಂದು ದುಃಖ ಪಡುವುದೋ ಗೊತ್ತಾಗುವುದಿಲ್ಲ. ವಿಲಿಯಂ ಶೇಕ್ಸ್‍ಪಿಯರ್ ಎಲ್ಲರಿಗೂ ಚಿರಪರಿಚಿತ. ಅವರ ಪುಸ್ತಕಗಳು ಇಂದಿಗೂ ಅತ್ಯಧಿಕವಾಗಿ ಮಾರಾಟವಾಗುತ್ತವೆ. ಈಗಾಗಲೇ ಸುಮಾರು 4 ಬಿಲಿಯನ್ ಪುಸ್ತಕಗಳು ಮಾರಾಟವಾಗಿವೆ. ಅವರ ಹುಟ್ಟಿದ ದಿನ, ಮರಣದ ದಿನ ಒಂದೇ, ಅದು ಏಪ್ರಿಲ್ 23. ಅವರ 52ನೆಯ ಹುಟ್ಟಿದ ಹಬ್ಬದ ದಿನದಂದೇ ಅವರು ಮರಣ ಹೊಂದಿದರು. ಅಮೆರಿಕಾದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಜ್ವೆಲ್ಟ್ ಅವರ 5ನೆಯ ಮಗ, ಅಮೆರಿಕಾದ ಪ್ರಸಿದ್ಧ ಲಾಯರ್ ಹಾಗೂ ರಾಜಕಾರಣಿಯಾಗಿದ್ದ ಫ್ರಾಂಕ್ಲಿನ್ ಡಿಲೆನೋ ರೂಜವೆಲ್ಟ್ ಅವರೂ ಸಹ ಅವರ 74ನೆಯ ಹುಟ್ಟಿದ ಹಬ್ಬ ಆಗಸ್ಟ್ 17ರಂದು ನಿಧನರಾದರು. ಪ್ರಸಿದ್ಧ ಚಿತ್ರಕಲಾವಿದ, ರೆನೈಸಾನ್ಸ್ ಕಾಲದ ವಾಸ್ತುಕಲಾ ನಿಪುಣ ರಾಫೇಲ್ ಸಹ ಅವರ 37ನೆಯ ಹುಟ್ಟಿದ ಹಬ್ಬದಂದೆ ನಿಧನರಾದರು. ಅವರು ಹುಟ್ಟಿದ ಹಾಗೂ ಮರಣಿಸಿದ ದಿನ ಏಪ್ರಿಲ್ 6.
ಹುಟ್ಟಿದ ಹಬ್ಬದ ದಿನದ ಕೆಲವು ನಂಬಿಕೆಗಳು ಆಚರಣೆಗಳು ವಿವಿಧ ದೇಶಗಳಲ್ಲಿ ಬೇರೆ ಬೇರೆ ರೀತಿ ಇವೆ. ಅಮೆರಿಕಾ ಮತ್ತು ಕೆನಡಾದಲ್ಲಿ ಹುಡುಗಿಗೆ ಹದಿನಾರು ತುಂಬಿದರೆ ಅದನ್ನು "ಸಿಹಿ ಹದಿನಾರು" ಎಂದು ಆಚರಿಸುತ್ತಾರೆ. ಸ್ಪೇನ್ ಮತ್ತು ಪೋರ್ಚುಗೀಸರಲ್ಲಿ ಹುಡುಗಿಗೆ 15 ತುಂಬಿದಾಗ ಭರ್ಜರಿಯಾಗಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಹಿಂದೂಗಳಲ್ಲಿ ಮೊದಲನೆಯ ವರ್ಷ ಮಗುವಿಗೆ ಜುಟ್ಟುಬಿಡಿಸಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಫಿಲಿಪಿನ್ನರಲ್ಲಿ ಹುಡುಗಿಗೆ 18 ತುಂಬಿದಾಗ, ಹುಡುಗನಿಗೆ 21 ತುಂಬಿದಾಗ ಹುಟ್ಟಿದ ಹಬ್ಬ ಆಚರಿಸುವುದು ಶ್ರೇಷ್ಠವಂತೆ. ಹೀಗೇ ಒಂದೊಂದು ಕಡೆ ಒಂದೊಂದು ತರಹ.
ನನ್ನ ಗೆಳೆಯರೊಬ್ಬರಿದ್ದಾರೆ. ಅವರು ಈ ಕೇಕು ಕತ್ತರಿಸುವ, ದೀಪ ಆರಿಸುವ, ಆಂಗ್ಲ ಭಾಷೆಯಲ್ಲಿ ಹಾಡುವ ಹುಟ್ಟಿದ ಹಬ್ಬವನ್ನು ಕಂಡರೆ ಉರಿದು ಬೀಳುತ್ತಾರೆ. ನಾವು ಕನ್ನಡಿಗರು, ಕನ್ನಡ ಭಾಷೆಯಲ್ಲಿ ಹಾಡೋಣ, ನಮ್ಮದೇ ಆದ ರೀತಿಯಲ್ಲಿ ಆಚರಿಸೋಣ ಎಂದು ತಮ್ಮ ಮಗನ ಹುಟ್ಟಿದ ಹಬ್ಬವನ್ನು ಹೊಸರೀತಿಯಲ್ಲಿ ಆಚರಿಸಿದ್ದರು. ಅಂದು ಸಿಹಿತಿಂಡಿಗಳನ್ನು ಮಾಡಿ ಅವನ್ನು ದೀಪದ ಮುಂದೆ ಇಟ್ಟು ದೀಪವನ್ನು ಬೆಳಗಿಸಿ, ಹತ್ತು ಹಣತೆಗಳನ್ನು (ಅವರ ಮಗನ 10ನೇ ವರ್ಷದ ಹುಟ್ಟಿದ ಹಬ್ಬ) ಹಚ್ಚಿ, ಕನ್ನಡದ ಪದ್ಯವೊಂದನ್ನು ಹಾಡಿಸಿ ಎಲ್ಲರ ಮನಗೆದ್ದರು. ಎಲ್ಲರೂ ಹೀಗೇ ಮಾಡಿದರೆ ನಮ್ಮತನವನ್ನು ಕಾಯ್ದುಕೊಳ್ಳಬಹುದು. ಅಂದು ಅವರು ಹಾಡಿಸಿದ ಪದ್ಯ ನೆನಪಿಲ್ಲವಾದರೂ, ನಾನು ಬರೆದಿರುವ ಈ ಕೆಳಗಿನ ಎರಡು ಪದ್ಯಗಳನ್ನೂ ಸುಲಭವಾದ ರಾಗದಲ್ಲಿ ಎಲ್ಲರೂ ಹೇಳಬಹುದು.ಪ್ರೀತಿಯ ಅಮ್ಮನಿಗೆ
ಶುಭಾಶಯ ಶುಭಾಶಯ ಶುಭಾಶಯ ಶುಭಾಶಯ //
ಇಂದಿನ ಶುಭದಿನವು
ನೆಮ್ಮದಿ ಸುಖವನ್ನೂ
ಶಾಂತಿ ಆರೋಗ್ಯವನೂ
ದೇವರು ಕೊಡಲೆಂದೂ //
ಬಯಸುವೆವೂ ನಾವೂ ಹರಸುವೆವೂ ನಾವೂ //
ಮೊದಲ ಸಾಲಿನ 'ಅಮ್ಮನಿಗೆ' ಎಂಬುದನ್ನು ಅಪ್ಪನಿಗೆ, ಅಣ್ಣನಿಗೆ, ಅಕ್ಕನಿಗೆ, ಸೋದರಿಗೆ, ತಮ್ಮನಿಗೆ, ಮಿತ್ರನಿಗೆ, ಗೆಳೆಯನಿಗೆ, ಬಂಧುವಿಗೆ, ಗುರುಗಳಿಗೆ ಎಂದು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಹಾಡನ್ನೂ ಪ್ರಾಸಬದ್ಧವಾಗಿ ಯಾವುದಾದರೂ ಮಕ್ಕಳ ಪದ್ಯದಂತೆ, ಮಧುರವಾದ ಚಿತ್ರಗೀತೆಯ ರಾಗದಂತೆ ಹೇಳಬಹುದು. ನಮ್ಮ ಕನ್ನಡಿಗರು ಮೊದಲು ಇಂತಹವನ್ನು ಅಳವಡಿಸಿಕೊಂಡು ಇಂಗ್ಲಿಷ್ ಮೋಹದಿಂದ ಹೊರಬಂದು ದುರಭಿಮಾನವಿಲ್ಲದೆ ಅಭಿಮಾನದಿಂದ ಹಾಡುವರು ಎಂದೇ ನನ್ನ ಬಲವಾದ ನಂಬಿಕೆ. ಈ ಇನ್ನೊಂದುಹುಟ್ಟುಹಬ್ಬದ ಹಾಡು ಸ್ವಲ್ಪ ದೊಡ್ಡದಾದರೂ ಸುಲಭವಾಗಿ ಎರಡು ನಿಮಿಷದೊಳಗೆ ಹಾಡಬಹುದು. ಸಾಹಿತ್ಯ ಹೀಗಿದೆ . ಇಲ್ಲಿ ನಿಮಗೆ ಎಂದರೆ ಯಾರು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದರೋ ಅವರಿಗೆ ಅನ್ವಯವಾಗುತ್ತದೆ.
ಹುಟ್ಟಿದ ಹಬ್ಬದ ಶುಭದಿನದಂದು
ದೇವರು ನಿಮಗೆ ಎಲ್ಲವ ಕೊಡಲಿ
ಗಜಮುಖ ನಿಮಗೆ ಸಿದ್ದಿಯ ಕೊಡಲಿ
ನರಹರಿ ನಿಮಗೆ ಸಂಪದ ಕೊಡಲಿ
ಶಂಕರ ನಿಮಗೆ ಮುಕ್ತಿಯ ಕೊಡಲಿ
ಬ್ರಹ್ಮನು ನಿಮಗೆ ದೀರ್ಘಾಯುವ ಕೊಡಲಿ //
ಹುಟ್ಟಿದ ಹಬ್ಬದ ಶುಭದಿನದಂದು
ಸಕಲ ಇಷ್ಟಾರ್ಥವು ನೆರವೇರಲಿ
ಪಾರ್ವತಿ ನಿಮಗೆ ಸಶಕ್ತಿಯ ಕೊಡಲಿ
ವಾಣಿಯು ನಿಮಗೆ ಜ್ಞಾನವ ಕೊಡಲಿ
ಗುರುಗಳ ಅನುಗ್ರಹ ನಿಮಗಿರಲಿ //
ಹುಟ್ಟಿದ ಹಬ್ಬದ ಶುಭದಿನದಂದು
ಆಯುರಾರೋಗ್ಯವು ನಿಮಗಿರಲಿ
ಸಕಲ ಇಷ್ಟಾರ್ಥವು ನೆರವೇರಲಿ
ಜಗದೊಡೆಯನ ಕೃಪೆ ಶಾಶ್ವತ ವಿರಲಿ
ಅವರ ಅನುಗ್ರಹ ನಿಮಗಿರಲಿ //
ಈ ಹಾಡಿಗೆ ನಾನೇ ರಾಗ ಸಂಯೋಜಿಸಿ ಜಗದೊಡೆಯ ಅಂಕಿತದಲ್ಲಿ ಬರೆದಿರುವ ಹಾಡನ್ನು ಮೇಲೆ ಲಿಂಕಿನಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಎಲ್ಲರೂ ಇದನ್ನು ಹುಟ್ಟಿದ ಹಬ್ಬದ ದಿನದಂದು ಹಾಡಿ, ಹಾಡಿಸಿ. ಇದನ್ನು ಬರೆದ ನನ್ನ ಹೆಸರನ್ನೂ ಹೇಳಿದರೆ ನಾನು ಧನ್ಯ. ಇದನ್ನು ಓದುವ ಎಲ್ಲರಿಗೂ ನನ್ನ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.
ಹುಟ್ಟುಹಬ್ಬದ ಹಾಡು / ರಚನೆ - ಜಗದೀಶ ಚಂದ್ರ , ಗಾಯಕಿ - ನಳಿನಿ ಏನ್ ಎಸ್
Friday, August 15, 2025
Krishna Janmashtami - Recite Krishna's name and be happy
DEVOTIONAL SONG - KRISHNA ENABARADE (RECITE KRISHNA'S NAME) - PURANDARA DASA
According to Purandara Dasa, if the name of God is spoken every day (the name 'Krishna' in the devotional song "Krishna Enabardhe"), it will bring good fortune. The ability to speak well has been bestowed upon man. Thus, don't waste your words; think of Krishna and talk kindly, and all of your problems will be answered.
The ability to speak well has been bestowed upon man. Thus, don't waste your words; think of Krishna and talk kindly, and all of your problems will be answered.
Occasionally, when you're moving around, think of Krishna's name. when your body feels weak, think of it again; if you're having a disagreement while speaking, focus on Krishna; if you're carrying something heavy, saying Krishna's name makes it easier to lift. Repeating the name of Krishna brings us good, whether we are happy or sad. Although we have thousands of things to do every day, remembering the name of Krishna brings us calm. He has given several examples and extolled the virtues of the name.
As you play with children, remember the name of Krishna; even when you are sitting on a soft bed and relaxing, remember the name of God; and since we believe that God is both the cause and the end of our problems, remember his name and exalt the name of Krishna, who is also Purandara Vittala, the Garuda-riding deity.
One might gain merit by singing songs like these in a melodic or listened manner. In a nutshell, this divine name aims for everyone to be nice by speaking effectively or utilising their tongue appropriately.
This song was adopted in Kannada film "Devadasi", music scored by G K Venkatesh and melociously sung by Vani Jayram.
"ಕೃಷ್ಣ ಎನಬಾರದೆ" - ಪುರಂದರ ದಾಸರ ದೇವರ ನಾಮ
ಪುರಂದರ ದಾಸರ "ಕೃಷ್ಣ ಎನಬಾರದೆ" ಎಂಬ ದೇವರನಾಮ ದಲ್ಲಿ ಕೃಷ್ಣನ ಹೆಸರನ್ನು ದಿನ ನಿತ್ಯ ಆಗಾಗ್ಗೆ ಹೇಳುತ್ತಿದ್ದರೆ ಪುಣ್ಯ ಸಿಗುತ್ತದೆ ಎಂದಿದ್ದಾರೆ. ಮನುಷ್ಯ ಜನ್ಮ ನಮಗೆ ಬಂದಿದೆ, ದೇವರು ಮಾತನಾಡಲು ನಾಲಿಗೆ ಕೊಟ್ಟಿದ್ದಾನೆ. ಹಾಗಿದ್ದಮೇಲೆ ಮಾತುಗಳನ್ನು ವ್ಯರ್ಥಮಾಡಬೇಡಿ, ಒಳ್ಳೆಯ ಮಾತುಗಳನ್ನು ಆಡಿ, ಕೃಷ್ಣ ಎಂದು ನೆನೆಯಿರಿ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುವುದು ಎನ್ನುತ್ತಾರೆ.
ಅಲ್ಲಿ ಇಲ್ಲಿ ಓಡಾಡುವಾಗ ಆಗಾಗ್ಗೆ ಕೃಷ್ಣ ಎನ್ನಿ; ಮೈಮುರಿದು ಏಳುವಾಗ ಕೃಷ್ಣ ಎಂದುಕೊಂಡು ಏಳಿ; ಮಾತು ವಿಕೋಪಕ್ಕೆ ಹೋಗುತ್ತಿದೆ ಎನ್ನಿಸಿದಾಗ ಕೃಷ್ಣ ಎಂದು ಧ್ಯಾನಿಸಿ ಬಿಡಿ; ಏನಾದರೂ ಭಾರ ಹೊರುವಾಗ ಕೃಷ್ಣ ಎನ್ನುತ್ತಾ ಎತ್ತಿಕೊಳ್ಳಿ ಸುಲಭವಾಗುತ್ತದೆ; ದುಃಖವಿದ್ದಾಗಲೂ, ತಮಾಷೆ ಮಾಡುವಾಗಲೂ ಕೃಷ್ಣನ ನಾಮ ನಮಗೆ ಒಳ್ಳೆಯದನ್ನೇ ಮಾಡುತ್ತದೆ; ಪ್ರತಿನಿತ್ಯ ಸಾವಿರಾರು ಕೆಲಸಗಳಿರುತ್ತದೆ, ಆಗಲೂ ಕೃಷ್ಣನ ನಾಮಸ್ಮರಣೆ ನಮಗೆ ಶಮನ ನೀಡುತ್ತದೆ; ಹೀಗೆ ಹಲವಾರು ಉದಾಹರಣೆಗಳನ್ನು ಕೊಟ್ಟು ಕೃಷ್ಣನ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ.
ಮಕ್ಕಳನ್ನು ಮುದ್ದಾಡುವಾಗಲೂ ಕೃಷ್ಣನ ನಾಮಸ್ಮರಣೆಯಾಗಲಿ; ಮೆತ್ತನೆಯ ಹಾಸಿಗೆಯ ಮೇಲೆ ಕುಳಿತು ವಿರಮಿಸುವಾಗಲೂ ದೇವನ ನಾಮಸ್ಮರಣೆ ಬರಲಿ; ಕಷ್ಟಗಳನ್ನು ಕೊಡುವವನೂ, ನಿವಾರಿಸುವವನೂ ದೇವರೇ ಎಂಬ ನಂಬಿಕೆಯಿಂದ ದೇವರ ನಾಮಸ್ಮರಣೆ ಮಾಡಿ, ಆ ಗರುಡವಾಹನನಾದ ಪುರಂದರ ವಿಠಲನೂ ಕೃಷ್ಣನೇ ಎಂದು ಕೃಷ್ಣನ ನಾಮದ ಮಹಿಮೆಯನ್ನು ಎತ್ತಿ ಹಿಡಿದ್ದಾರೆ. ಇಂತಹ ಹಾಡುಗಳನ್ನು ಇಂಪಾಗಿ ಹಾಡಿದರೆ, ಹಾಡಲಾಗದಿದ್ದರೆ ಕೇಳಿಯಾದರೂ ಪುಣ್ಯ ಕಟ್ಟಿಕೊಳ್ಳಬಹುದಲ್ಲವೇ? ಒಟ್ಟಾಗಿ ಹೇಳಬೇಕೆಂದರೆ ನಾಲಿಗೆಯನ್ನು ಅಂದರೆ ಮಾತುಗಳನ್ನು ಸರಿಯಾಗಿ ಆಡಿ ಎಲ್ಲರೂ ಚೆನ್ನಾಗಿ ಇರಬೇಕು ಎಂಬುದೇ ಈ ದೇವರ ನಾಮದ ಉದ್ದೇಶ.
ಈ ದೇವರನಾಮವನ್ನು ಕನ್ನಡದ ದೇವದಾಸಿ ಎಂಬ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಸಂಗೀತಜ್ಞ ಜಿ.ಕೆ. ವೆಂಕಟೇಶ್ ಹಾಗೂ ಮಧುರವಾಗಿ ಹಾಡಿರುವವರು ವಾಣಿ ಜಯರಾಮ್ ಅವರು.
ಬಿ ಎಸ್ ಜಗದೀಶ ಚಂದ್ರ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಶ್ರೀ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ ಮುದ್ದು ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ದುರಿತರಾಶಿಗಳನು ತರಿದು ಬಿಸಾಡುವ ಕೃಷ್ಣ ಎನಬಾರದೆ ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆKrishna Enabarade/Purandaradasa /Keyboard - Jagadeesha Chandra /ದೇವದಾಸಿ ...
DEVOTIONAL SONG - KRISHNA ENABARADE (RECITE KRISHNA'S NAME) - PURANDARA DASA
According to Purandara Dasa, if the name of God is spoken every day (the name 'Krishna' in the devotional song "Krishna Enabardhe"), it will bring good fortune. The ability to speak well has been bestowed upon man. Thus, don't waste your words; think of Krishna and talk kindly, and all of your problems will be answered.
The ability to speak well has been bestowed upon man. Thus, don't waste your words; think of Krishna and talk kindly, and all of your problems will be answered.
Occasionally, when you're moving around, think of Krishna's name. when your body feels weak, think of it again; if you're having a disagreement while speaking, focus on Krishna; if you're carrying something heavy, saying Krishna's name makes it easier to lift. Repeating the name of Krishna brings us good, whether we are happy or sad. Although we have thousands of things to do every day, remembering the name of Krishna brings us calm. He has given several examples and extolled the virtues of the name.
As you play with children, remember the name of Krishna; even when you are sitting on a soft bed and relaxing, remember the name of God; and since we believe that God is both the cause and the end of our problems, remember his name and exalt the name of Krishna, who is also Purandara Vittala, the Garuda-riding deity.
One might gain merit by singing songs like these in a melodic or listened manner. In a nutshell, this divine name aims for everyone to be nice by speaking effectively or utilising their tongue appropriately.
This song was adopted in Kannada film "Devadasi", music scored by G K Venkatesh and melociously sung by Vani Jayram.
"ಕೃಷ್ಣ ಎನಬಾರದೆ" - ಪುರಂದರ ದಾಸರ ದೇವರ ನಾಮ
ಪುರಂದರ ದಾಸರ "ಕೃಷ್ಣ ಎನಬಾರದೆ" ಎಂಬ ದೇವರನಾಮ ದಲ್ಲಿ ಕೃಷ್ಣನ ಹೆಸರನ್ನು ದಿನ ನಿತ್ಯ ಆಗಾಗ್ಗೆ ಹೇಳುತ್ತಿದ್ದರೆ ಪುಣ್ಯ ಸಿಗುತ್ತದೆ ಎಂದಿದ್ದಾರೆ. ಮನುಷ್ಯ ಜನ್ಮ ನಮಗೆ ಬಂದಿದೆ, ದೇವರು ಮಾತನಾಡಲು ನಾಲಿಗೆ ಕೊಟ್ಟಿದ್ದಾನೆ. ಹಾಗಿದ್ದಮೇಲೆ ಮಾತುಗಳನ್ನು ವ್ಯರ್ಥಮಾಡಬೇಡಿ, ಒಳ್ಳೆಯ ಮಾತುಗಳನ್ನು ಆಡಿ, ಕೃಷ್ಣ ಎಂದು ನೆನೆಯಿರಿ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುವುದು ಎನ್ನುತ್ತಾರೆ.
ಅಲ್ಲಿ ಇಲ್ಲಿ ಓಡಾಡುವಾಗ ಆಗಾಗ್ಗೆ ಕೃಷ್ಣ ಎನ್ನಿ; ಮೈಮುರಿದು ಏಳುವಾಗ ಕೃಷ್ಣ ಎಂದುಕೊಂಡು ಏಳಿ; ಮಾತು ವಿಕೋಪಕ್ಕೆ ಹೋಗುತ್ತಿದೆ ಎನ್ನಿಸಿದಾಗ ಕೃಷ್ಣ ಎಂದು ಧ್ಯಾನಿಸಿ ಬಿಡಿ; ಏನಾದರೂ ಭಾರ ಹೊರುವಾಗ ಕೃಷ್ಣ ಎನ್ನುತ್ತಾ ಎತ್ತಿಕೊಳ್ಳಿ ಸುಲಭವಾಗುತ್ತದೆ; ದುಃಖವಿದ್ದಾಗಲೂ, ತಮಾಷೆ ಮಾಡುವಾಗಲೂ ಕೃಷ್ಣನ ನಾಮ ನಮಗೆ ಒಳ್ಳೆಯದನ್ನೇ ಮಾಡುತ್ತದೆ; ಪ್ರತಿನಿತ್ಯ ಸಾವಿರಾರು ಕೆಲಸಗಳಿರುತ್ತದೆ, ಆಗಲೂ ಕೃಷ್ಣನ ನಾಮಸ್ಮರಣೆ ನಮಗೆ ಶಮನ ನೀಡುತ್ತದೆ; ಹೀಗೆ ಹಲವಾರು ಉದಾಹರಣೆಗಳನ್ನು ಕೊಟ್ಟು ಕೃಷ್ಣನ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ.
ಮಕ್ಕಳನ್ನು ಮುದ್ದಾಡುವಾಗಲೂ ಕೃಷ್ಣನ ನಾಮಸ್ಮರಣೆಯಾಗಲಿ; ಮೆತ್ತನೆಯ ಹಾಸಿಗೆಯ ಮೇಲೆ ಕುಳಿತು ವಿರಮಿಸುವಾಗಲೂ ದೇವನ ನಾಮಸ್ಮರಣೆ ಬರಲಿ; ಕಷ್ಟಗಳನ್ನು ಕೊಡುವವನೂ, ನಿವಾರಿಸುವವನೂ ದೇವರೇ ಎಂಬ ನಂಬಿಕೆಯಿಂದ ದೇವರ ನಾಮಸ್ಮರಣೆ ಮಾಡಿ, ಆ ಗರುಡವಾಹನನಾದ ಪುರಂದರ ವಿಠಲನೂ ಕೃಷ್ಣನೇ ಎಂದು ಕೃಷ್ಣನ ನಾಮದ ಮಹಿಮೆಯನ್ನು ಎತ್ತಿ ಹಿಡಿದ್ದಾರೆ. ಇಂತಹ ಹಾಡುಗಳನ್ನು ಇಂಪಾಗಿ ಹಾಡಿದರೆ, ಹಾಡಲಾಗದಿದ್ದರೆ ಕೇಳಿಯಾದರೂ ಪುಣ್ಯ ಕಟ್ಟಿಕೊಳ್ಳಬಹುದಲ್ಲವೇ? ಒಟ್ಟಾಗಿ ಹೇಳಬೇಕೆಂದರೆ ನಾಲಿಗೆಯನ್ನು ಅಂದರೆ ಮಾತುಗಳನ್ನು ಸರಿಯಾಗಿ ಆಡಿ ಎಲ್ಲರೂ ಚೆನ್ನಾಗಿ ಇರಬೇಕು ಎಂಬುದೇ ಈ ದೇವರ ನಾಮದ ಉದ್ದೇಶ.
ಈ ದೇವರನಾಮವನ್ನು ಕನ್ನಡದ ದೇವದಾಸಿ ಎಂಬ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಸಂಗೀತಜ್ಞ ಜಿ.ಕೆ. ವೆಂಕಟೇಶ್ ಹಾಗೂ ಮಧುರವಾಗಿ ಹಾಡಿರುವವರು ವಾಣಿ ಜಯರಾಮ್ ಅವರು.
ಬಿ ಎಸ್ ಜಗದೀಶ ಚಂದ್ರ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಶ್ರೀ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ ಮುದ್ದು ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ದುರಿತರಾಶಿಗಳನು ತರಿದು ಬಿಸಾಡುವ ಕೃಷ್ಣ ಎನಬಾರದೆ ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆKRISHNA ENABARADE (RECITE KRISHNA'S NAME) - PURANDARA DASA
https://youtu.be/lPqQcAwSWk8?si=Ap29wJH-9uQn-XQT
DEVOTIONAL SONG - KRISHNA ENABARADE (RECITE KRISHNA'S NAME) - PURANDARA DASA
According to Purandara Dasa, if
the name of God is spoken every day (the name 'Krishna' in the devotional song
"Krishna Enabardhe"), it will bring good fortune. The ability to speak
well has been bestowed upon man. Thus, don't waste your words; think of Krishna
and talk kindly, and all of your problems will be answered.
The ability to speak well has
been bestowed upon man. Thus, don't
waste your words; think of Krishna and talk kindly, and all of your problems
will be answered.
Occasionally, when you're moving
around, think of Krishna's name. when your body feels weak, think of it again;
if you're having a disagreement while speaking, focus on Krishna; if you're
carrying something heavy, saying Krishna's name makes it easier to lift. Repeating the name of Krishna brings us good,
whether we are happy or sad. Although we have thousands of things to do every
day, remembering the name of Krishna brings us calm. He has given several
examples and extolled the virtues of the name.
As you play with children,
remember the name of Krishna; even when you are sitting on a soft bed and
relaxing, remember the name of God; and since we believe that God is both the
cause and the end of our problems, remember his name and exalt the name of
Krishna, who is also Purandara Vittala, the Garuda-riding deity.
One might gain merit by singing
songs like these in a melodic or listened manner. In a nutshell, this divine name aims for
everyone to be nice by speaking effectively or utilising their tongue
appropriately.
This song was adopted in Kannada film "Devadasi", music scored by G K Venkatesh and melociously sung by Vani Jayram.
"ಕೃಷ್ಣ ಎನಬಾರದೆ" - ಪುರಂದರ ದಾಸರ ದೇವರ ನಾಮ
ಪುರಂದರ ದಾಸರ "ಕೃಷ್ಣ ಎನಬಾರದೆ" ಎಂಬ ದೇವರನಾಮ ದಲ್ಲಿ ಕೃಷ್ಣನ ಹೆಸರನ್ನು ದಿನ ನಿತ್ಯ ಆಗಾಗ್ಗೆ ಹೇಳುತ್ತಿದ್ದರೆ ಪುಣ್ಯ ಸಿಗುತ್ತದೆ ಎಂದಿದ್ದಾರೆ. ಮನುಷ್ಯ ಜನ್ಮ ನಮಗೆ ಬಂದಿದೆ, ದೇವರು ಮಾತನಾಡಲು ನಾಲಿಗೆ ಕೊಟ್ಟಿದ್ದಾನೆ. ಹಾಗಿದ್ದಮೇಲೆ ಮಾತುಗಳನ್ನು ವ್ಯರ್ಥಮಾಡಬೇಡಿ, ಒಳ್ಳೆಯ ಮಾತುಗಳನ್ನು ಆಡಿ, ಕೃಷ್ಣ ಎಂದು ನೆನೆಯಿರಿ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುವುದು ಎನ್ನುತ್ತಾರೆ.
ಅಲ್ಲಿ ಇಲ್ಲಿ ಓಡಾಡುವಾಗ ಆಗಾಗ್ಗೆ ಕೃಷ್ಣ ಎನ್ನಿ; ಮೈಮುರಿದು ಏಳುವಾಗ ಕೃಷ್ಣ ಎಂದುಕೊಂಡು ಏಳಿ; ಮಾತು ವಿಕೋಪಕ್ಕೆ ಹೋಗುತ್ತಿದೆ ಎನ್ನಿಸಿದಾಗ ಕೃಷ್ಣ ಎಂದು ಧ್ಯಾನಿಸಿ ಬಿಡಿ; ಏನಾದರೂ ಭಾರ ಹೊರುವಾಗ ಕೃಷ್ಣ ಎನ್ನುತ್ತಾ ಎತ್ತಿಕೊಳ್ಳಿ ಸುಲಭವಾಗುತ್ತದೆ; ದುಃಖವಿದ್ದಾಗಲೂ, ತಮಾಷೆ ಮಾಡುವಾಗಲೂ ಕೃಷ್ಣನ ನಾಮ ನಮಗೆ ಒಳ್ಳೆಯದನ್ನೇ ಮಾಡುತ್ತದೆ; ಪ್ರತಿನಿತ್ಯ ಸಾವಿರಾರು ಕೆಲಸಗಳಿರುತ್ತದೆ, ಆಗಲೂ ಕೃಷ್ಣನ ನಾಮಸ್ಮರಣೆ ನಮಗೆ ಶಮನ ನೀಡುತ್ತದೆ; ಹೀಗೆ ಹಲವಾರು ಉದಾಹರಣೆಗಳನ್ನು ಕೊಟ್ಟು ಕೃಷ್ಣನ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ.
ಮಕ್ಕಳನ್ನು ಮುದ್ದಾಡುವಾಗಲೂ ಕೃಷ್ಣನ ನಾಮಸ್ಮರಣೆಯಾಗಲಿ; ಮೆತ್ತನೆಯ ಹಾಸಿಗೆಯ ಮೇಲೆ ಕುಳಿತು ವಿರಮಿಸುವಾಗಲೂ ದೇವನ ನಾಮಸ್ಮರಣೆ ಬರಲಿ; ಕಷ್ಟಗಳನ್ನು ಕೊಡುವವನೂ, ನಿವಾರಿಸುವವನೂ ದೇವರೇ ಎಂಬ ನಂಬಿಕೆಯಿಂದ ದೇವರ ನಾಮಸ್ಮರಣೆ ಮಾಡಿ, ಆ ಗರುಡವಾಹನನಾದ ಪುರಂದರ ವಿಠಲನೂ ಕೃಷ್ಣನೇ ಎಂದು ಕೃಷ್ಣನ ನಾಮದ ಮಹಿಮೆಯನ್ನು ಎತ್ತಿ ಹಿಡಿದ್ದಾರೆ. ಇಂತಹ ಹಾಡುಗಳನ್ನು ಇಂಪಾಗಿ ಹಾಡಿದರೆ, ಹಾಡಲಾಗದಿದ್ದರೆ ಕೇಳಿಯಾದರೂ ಪುಣ್ಯ ಕಟ್ಟಿಕೊಳ್ಳಬಹುದಲ್ಲವೇ? ಒಟ್ಟಾಗಿ ಹೇಳಬೇಕೆಂದರೆ ನಾಲಿಗೆಯನ್ನು ಅಂದರೆ ಮಾತುಗಳನ್ನು ಸರಿಯಾಗಿ ಆಡಿ ಎಲ್ಲರೂ ಚೆನ್ನಾಗಿ ಇರಬೇಕು ಎಂಬುದೇ ಈ ದೇವರ ನಾಮದ ಉದ್ದೇಶ.
ಈ ದೇವರನಾಮವನ್ನು ಕನ್ನಡದ ದೇವದಾಸಿ ಎಂಬ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಸಂಗೀತಜ್ಞ ಜಿ.ಕೆ. ವೆಂಕಟೇಶ್ ಹಾಗೂ ಮಧುರವಾಗಿ ಹಾಡಿರುವವರು ವಾಣಿ ಜಯರಾಮ್ ಅವರು.
ಬಿ ಎಸ್ ಜಗದೀಶ ಚಂದ್ರ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಶ್ರೀ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ ಮುದ್ದು ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ದುರಿತರಾಶಿಗಳನು ತರಿದು ಬಿಸಾಡುವ ಕೃಷ್ಣ ಎನಬಾರದೆ ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆWednesday, August 13, 2025
Homage to the brave soldiers who dedicated their lives for the country /...
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ವೀರಯೋಧರಿಗೆ ನಮಿಸುತ್ತಾ ಈ ಒಂದು ಕವನ ರಚನೆ - ಜಗದೀಶ ಚಂದ್ರ, "ಅಯ್ ಮೇರೇ ವತನ್ ಕೆ" ಎಂಬ ಹಾಡಿನಿಂದ ಪ್ರೇರಿತ
ದೇಶಕ್ಕಾಗಿ ಎಷ್ಟೊಂದು ಜನ ಬಲಿದಾನ ಮಾಡಿದ್ದಾರೆ. ನಮ್ಮ ವೀರಯೋಧರು, ಸ್ವಾತಂತ್ರ ಹೋರಾಟಗಾರರು ಪಡಬಾರದ ಕಷ್ಟಗಳನ್ನು ಪಟ್ಟಿದ್ದರ ಫಲವನ್ನು ನಾವು ಇಂದು ಅನುಭವಿಸಿ ಸುಖವಾಗಿ ಇದ್ದೇವೆ.
ವೀರಯೋಧರಿಗೆ ಶ್ರದ್ಧಾಂಜಲಿ
ಓ ಭಾರತ ದೇಶದ ಜನರೇ ಮನಮಿಡಿಯುವ ಈ ಕಥೆಯನ್ನು ಕೇಳಿ, ನಮ್ಮ ದೇಶವನ್ನು ಕಾಯುತ್ತಾ ಮಡಿದ ವೀರ ಯೋಧರ ಕಥೆಯನ್ನು ಕೇಳಿ
ಓ ಭಾರತ ದೇಶದ ಜನರೇ ದೇಶಕ್ಕಾಗಿ ಹೋರಾಡುತ್ತಾ ಯುದ್ಧದಲ್ಲಿ ಮಡಿದು ವೀರ ಸ್ವರ್ಗವನ್ನು ಪಡೆದ ನಮ್ಮ ಯೋಧರ ಶೌರ್ಯವನ್ನು ಕೊಂಡಾಡೋಣ ನಮ್ಮ ಎರಡು ನೆರೆಹೊರೆ ದೇಶಗಳು ನಮ್ಮ ಗಡಿಗಳ ತಂಟೆಗೆ ಬಂದವು. ಆಗ ದೇಶವನ್ನು ಕಾಯಲು ಉಸಿರಿರುವರೆಗೂ ನಮ್ಮ ಯೋಧರು ಹೋರಾಡಿದರು. ಹೋರಾಡುತ್ತಾ ಕೆಲವರು ಪ್ರಾಣವನ್ನೇ ತೆತ್ತರು. ಮಾತೃ ಭೂಮಿಯ ಋಣ ತೀರಿಸಲು ತಮ್ಮ ಆತ್ಮ ಸಮರ್ಪಣೆ ಮಾಡಿಕೊಂಡ, ತಾಯಿನಾಡಿಗೆ ಬಲಿಯಾದವರ ಈ ವೀರಯೋಧರ ವೀರಗಾಥೆಯನ್ನು ಮರೆಯದೆ ಕೇಳಿ. ಓ ಭಾರತ ದೇಶದ ಜನರೇ, ಬಂಧು ಬಳಗ ಮಿತ್ರರು ಎಲ್ಲರನ್ನೂ ತೊರೆದು ತಾಯ್ನಾಡಿಗೆ ದೇಹವನ್ನು ತೆತ್ತ ನಮ್ಮ ವೀರ ಯೋಧರ ಕಥೆಯನ್ನು ಮರೆಯದೆ ಕೇಳಿ.
ಜಯಹಿಂದ್ ಜಯಹಿಂದ್ ಜೈ ಭಾರತ್ ಜೈ ಭಾರತ್
ಕುಲ. ಜಾತಿ. ಮತ ಭಾಷೆ, ರಾಜ್ಯಗಳ ಬೇಧವಿಲ್ಲದೆ ಎಲ್ಲರು ಒಂದಾದರು . ಘೋರ ಯುದ್ಧವನ್ನು ಮಾಡುತ್ತ ಮಡಿದ ನಮ್ಮ ಹೆಮ್ಮೆಯ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸೋಣ. ಆ ವೈರಿಗಳ ಜೊತೆ ಹೋರಾಡಿ ಮೈಯೆಲ್ಲವೂ ರಕ್ತ ಸಿಕ್ತವಾಯಿತು. ಆದರೂ ಛಲ ಬಿಡದೇ ಯುದ್ಧವನ್ನು ಮಾಡಿ ತಾಯಿಯ ಮಡಿಲಲ್ಲಿ ಬಸವಳಿದು ಬಿದ್ದರು. ಇಂತಹ ಪರಿಸ್ಥಿತಿಯಲ್ಲಿಯೂ ಕೊನೆಯ ಉಸಿರನ್ನು ಹಿಡಿದಿಟ್ಟುಕೊಂಡು "ಸುಖವಾಗಿರಿ ದೇಶದ ಜನರೇ" ಎಂದು ಜನಹಿತವನ್ನು ಬಯಸುತ್ತ ದೇಹಾರ್ಪಣೆ ಮಾಡಿದರು.
ಜಯಹಿಂದ್ ಜಯಹಿಂದ್ ಜೈ ಭಾರತ್ ಜೈ ಭಾರತ್
Paying homage to the brave soldiers who dedicated their lives for the country, here is a poem. Lyrics - Jagadeesha Chandra, Inspired by the song "Oh my homeland'
For the country, so many people have made sacrifices. We are grateful to be enjoying today the rewards of our heroes' and freedom fighters' unspeakable suffering.
Tribute to martyrs
Our enemies were nearing the brink of our boundaries. Our troops fought to keep the nation safe. The violence claimed the lives of some. Remember to hear the inspiring tale of these courageous warriors who gave their life to settle Mother Earth's debt.
Listen to the tale of our valiant soldiers who sacrificed everyone and carried their remains back to the homeland, O Indians, brothers and sisters.
Jai Hind Jai Bharat Salutations to India
Regardless of caste, creed, or language, all warriors are one. We honour these valiant warriors who died in the conflict. Some wounded warriors continued to fight until their last breath. They prayed for the welfare of their country's citizens even amid such dire circumstances and until the day they died.
Jai Hind Jai Bharat Salutations to India
ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...
ಬೀಸುವ ಪದ Folk song sung while grinding grains. Folk song of Karnataka ಕನ್ನಡ ಜಾನಪದ ಹಾಡು ಕೀಬೋರ್ಡ್ - ಜಗದೀಶ ಚಂದ್ರ Keyboard - Jagadeesha ...
-
ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣ...
-
ಭೀಮನ ಅಮಾವಾಸ್ಯೆ Bhimana Amavasye ಆಷಾಢ ಮಾಸದ ಕಡೆಯ ದಿನ ಅಂದರೆ ಅಮಾವಾಸ್ಯೆಯೇ ಭೀಮನ ಅಮಾವಾಸ್ಯೆ. ಇಲ್ಲಿಗೆ ಆಷಾಢ ಮಾಸದ ಗಾಳಿಯ ಆರ್ಭಟ ಕಡಿಮೆಯಾಗಿ ಶ್ರಾವಣ ಮಾಸದ ...
-
ದೀನ ದಲಿತರ ಸೇವೆ ದೇವರ ದರ್ಶನಕ್ಕಿಂತ ಮಿಗಿಲು - ಜಗದೀಶ ಚಂದ್ರ ಬಿ ಎಸ್ - ಕಷ್ಟದಲ್ಲಿದ್ದವರಿಗೆ, ಅಸಹಾಯಕರಿಗೆ ಸಹಾಯ ಮಾಡಿದರೆ ಅದು ದೇವರ ದರ್ಶನಕ್ಕಿಂತ ಮಿಗಿಲು ಎಂಬ...