Thursday, May 22, 2025

Kogile hadide kelideya / S Janaki, Rajkumar / M Rangarao /Keyboard - Jag...


ಕೋಗಿಲೆ ಹಾಡಿದೆ ಕೇಳಿದೆಯ / KOGILE HAADIDE KELIDEYA
ಚಿತ್ರ - ಸಮಯದ ಗೊಂಬೆ / ಎಸ್ ಜಾನಕಿ, ಡಾ. ರಾಜಕುಮಾರ್ / ಚಿ ಉದಯಶಂಕರ / ಎಂ ರಂಗರಾವ್ / ಕೀಬೋರ್ಡ್ - ಜಗದೀಶ ಚಂದ್ರ Film: SAMAYADA GOMBE / Singer: Dr RAJKUMAR, S JANAKI / Lyrics: CHI UDAYASHANKAR / Music: M RANGA RAO / Keyboard - Jagadeesha Chandra
M Rangarao's work in the Rag Kalyani (Yaman) is lovely and melodic. Chi Udayashankar penned a song that is inspiring. Although the song is sung by the child's mother to celebrate their birthday, it eventually becomes a brother's remembrance of his early years spent with his parents and sister. One of Yaman's or Rag Kalyani's greatest songs. Rajkumar and S Janaki are the singers.
ಎಂ ರಂಗರಾವ್ ಅವರು ಕಲ್ಯಾಣಿ ಅಥವಾ ಯಮನ್ ರಾಗದಲ್ಲಿ ರಾಗ ಸಂಯೋಜಿಸಿರುವ ಮನಮೋಹಕ ಗೀತೆ. ಸುಶ್ರಾವ್ಯವಾಗಿ ಹಾಡಿದ್ದಾರೆ. ಎಸ್ ಜಾನಕಿ ಮತ್ತು ರಾಜಕುಮಾರ್ ಅವರು. ಇದು ತಾಯಿಯು ಮಗಳ ಹುಟ್ಟು ಹಬ್ಬದ ದಿನ ಹಾಡುವ ಹಾಡಾದರೂ, ನಂತರ ಅಣ್ಣನು ತನ್ನ ತಂಗಿ, ತಂದೆ ತಾಯಿಯರ ನೆನಪು ಮಾಡಿಕೊಂಡು ಹಾಡುವ ಹಾಡಾಗಿ ಬಿಡುತ್ತದೆ. ಮನಮುಟ್ಟುವ ಸಾಹಿತ್ಯ ಕೊಟ್ಟಿರುವ ಚಿ ಉದಯಶಂಕರ್ ಅಭಿನಂದನಾರ್ಹರು.


ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ ।೨। ಹೊಸ ಹೊಸ ಭಾವ ಕುಣಿಸುತ ಜೀವ ।೨। ಮರೆಸುತ ನೋವ ಪ್ರೇಮವ ತುಂಬಿ ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದೆ ಕೊಳಲಿಂದ ಹೊರಬಂದ ಸಂಗೀತದಂತೆ /ಕೋಗಿಲೆ / ಕಾಣದ ಸಿರಿಯ ನೋಡಿದ ಹಾಗೆ, ಸ್ವರಗಳ ಮಾಣಿಕ್ಯ ದೊರಕಿದ ಹಾಗೆ ಬಾಳಲಿ ಬೆಳಕು ಮೂಡಿದ ಹಾಗೆ, ಸಡಗರ ಬದುಕಲಿ ತುಂಬುವ ಹಾಗೆ ಬಾಡಿದ ಬಳ್ಳಿ ಚಿಗುರಿದ ಹಾಗೆ, ಇರುಳಲಿ ಜ್ಯೋತಿ ಬೆಳಗಿದ ಹಾಗೆ ಸವಿಯಾಗಿ ಇಂಪಾಗಿ ಆನಂದದಿಂದ /ಕೋಗಿಲೆ / ಕಂಗಳು ಕನಸು ಕಾಣುವ ಹಾಗೆ, ತಿಂಗಳ ಬೆಳಕು ತುಂಬಿದ ಹಾಗೆ ಹೃದಯದ ನೈದಿಲೆ ಅರಳಿದ ಹಾಗೆ, ಹರುಷದ ಹೊನಲು ಹೊಮ್ಮಿದ ಹಾಗೆ ನೆನಪಿನ ಅಲೆಯಲಿ ತೇಲಿದ ಹಾಗೆ, ನೋವೋ ನಲಿವೋ ತಿಳಿಯದ ಹಾಗೆ ಸಂಗೀತ ಸುಧೆಯಿಂದ ಸುಖ ನೀಡುವಂತೆ /ಕೋಗಿಲೆ /

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...