ಹೂವು ಚೆಲುವೆಲ್ಲ ನಂದೆಂದಿತು
Huvu cheluvella nandenditu
(A flower said I am the most beautiful)
ಸಾಹಿತ್ಯ - ಆರ್ ಏನ್ ಜಯಗೋಪಾಲ್ / ಸಂಗೀತ - ಎಂ ರಂಗರಾವ್ /ಗಾಯಕಿ - ಪಿ ಸುಶೀಲ / ಕೀಬೋರ್ಡ್ ನಲ್ಲಿ ಜಗದೀಶ ಚಂದ್ರ
Film - Hannele Chiguridaga / Lyrics - R N Jayagopal / Music - M Rangarao / Singer - P Sushila / Keyboard - B S Jagadeesha Chandra
This popular song from the movie "Hannele Chiguridaga" was written by R N Jayagopal and composed by M Ranga Rao. The movie is based on the same-titled novel by Smt. Triveni. Kalpana, Rajkumar, Nagendra Rao, Arunkumar, and others were among the actors.
Rag Bhimpalas have been adopted to tune the song. P Sushila sings the song quite well, through her sweet and pleasant voice. The song describes a lady's attractiveness and abilities. The poet R. N. Jayagopal illustrates the worth of a lady or female with these instances. The song's main message is that while flowers are lovely, a lady who has flowers is far more gorgeous. Although Cuckoo is renowned for its lovely voice, Goddess Saraswati is the music queen. While Peacocks are renowned for their beauty and ability to dance, Goddess Parvati is both stunning and the monarch of all dances. Rain is brought by clouds; however, the Ganga goddess not only provides water but also atones for all of our sins.
ಹಣ್ಣೆಲೆ ಚಿಗುರಿದಾಗ ಚಿತ್ರದ ಆರ್ ಏನ್ ಜಯಗೋಪಾಲ್ ಅವರು ಬರೆದಿರುವ ಈ ಗೀತೆ ಬಹಳ ಇಂಪಾಗಿದೆ ಅಷ್ಟೇ ಅರ್ಥಪೂರ್ಣವಾಗಿದೆ. ಅವರು ಹೆಣ್ಣನ್ನು ಎಷ್ಟು ವೈಭವೀಕರಿಸಿದ್ದಾರೆ ಎಂದು ಊಹಿಸಲೂ ಅಸಾಧ್ಯ. ಬಹಳ ಸರಳವಾಗಿ, ಅಂದಚಂದಗಳನ್ನು ವಿವರಿಸದೆ ನವಿರಾಗಿ ಹೆಣ್ಣನ್ನು ಹೊಗಳಿದ್ದಾರೆ. ಹೂವು ತಾನೇ ಚೆಲುವೆಂದರೆ ಹೆಣ್ಣೊಬ್ಬಳು ಅದನ್ನು ಮುಡಿದು ನಾನು ಇನ್ನೂ ಚೆಲುವೆ ಎನ್ನುತ್ತಾಳೆ. ಕೋಗಿಲೆ ತಾನು ಗಾನ ಕೋಗಿಲೆ ಎಂದರೆ ವೀಣೆ ಹಿಡಿದು ಹಾಡುವ ಗಾನವಿಶಾರದೆ ಹೆಣ್ಣಲ್ಲವೇ ಎನ್ನುತ್ತಾಳೆ. ನವಿಲು ತನ್ನ ನೋಟ, ನರ್ತನ ಚೆಲುವು ಎಂದು ಬೀಗಿದರೆ ನಾಟ್ಯದರಸಿ ಪಾರ್ವತಿಯೂ ಹೆಣ್ಣಲ್ಲವೇ ಎನ್ನುತ್ತಾಳೆ. ಮುಗಿಲು ತಾನೇ ಮಿಗಿಲೆಂದರೆ ಪಾಪ ತೊಳೆವ ಸುರಗಂಗೆ ಹೆಣ್ಣಲ್ಲವೇ ಎನ್ನುತ್ತಾಳೆ. ತ್ರಿವೇಣಿ ಅವರ ಕಾದಂಬರಿ ಆಧಾರಿತ ಚಿತ್ರಕಥೆ , ಕಲ್ಪನಾ ಅವರ ಅಭಿನಯ ಎಲ್ಲವೂ ನೆನಪಿನಲ್ಲಿ ಉಳಿಯುತ್ತದೆ.
ಬಹಳ ಅರ್ಥಗರ್ಭಿತವಾದ ಹಾಡು. ಭೀಮ್ ಪಲಾಸ್ ರಾಗದಲ್ಲಿ ಎಂ ರಂಗರಾವ್ ಅವರ ಸುಶ್ರಾವ್ಯ ಸಂಗೀತ, ಪಿ ಸುಶೀಲಾ ಅವರ ಮಧುರ ಕಂಠ.
ಹೂವು ಚೆಲುವೆಲ್ಲ ನಂದೆಂದಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು //
ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು //
ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆಂದಿತು //
ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು //
6 45 137 329 Da 291 240 77VSa 95
No comments:
Post a Comment