ಸೋದರರಿಂದು ಬರುತಾರೆ / ನಾಗರಪಂಚಮಿ
Sodaratindu Barutare (Brothers are coming today) / Nagara Panchami
Sodaratindu Barutare (Brothers are coming today) / Nagara Panchami
ಸೋದರರಿಂದು ಬರುತಾರೆ / ನಾಗರಪಂಚಮಿ ಹಾಡು
Sodaratindu Barutare (Brothers are coming today) / Nagara Panchami
Sodaratindu Barutare (Brothers are coming today) / Nagara Panchami
Lyrics, Music - Jagadeesha Chandra / ರಚನೆ , ಸಂಗೀತ - ಜಗದೀಶ ಚಂದ್ರ
ಅಣ್ಣನು ಮನೆಗೆ ಬರುತಾನೆ
ಸಂತಸ ಹೊತ್ತು ತರುತಾನೆ
ಕಾಡಿಸಿ ರೇಗಿಸ ಬೇಕು
ಮುಯ್ಯಿಯ ತೀರಿಸಬೇಕು //
ಸಂತಸ ಹೊತ್ತು ತರುತಾನೆ
ಕಾಡಿಸಿ ರೇಗಿಸ ಬೇಕು
ಮುಯ್ಯಿಯ ತೀರಿಸಬೇಕು //
ಅವ ಕೊಡಿಸಿದ್ದ ಸಿಹಿ ಖಾದ್ಯಕ್ಕೆ
ದುಪ್ಪಟ್ಟು ಸಿಹಿಯನ್ನು ಕೊಡಬೇಕು
ನನಗಾಗಿ ಪಟ್ಟ ಕಷ್ಟಕೆ ಇಂದು
ಪ್ರತಿ ಕಾಣಿಕೆಯ ಕೊಡಬೇಕು
ತಂದೆಯ ಸ್ಥಾನದಿ ನಿಂತ ಅವಗೆ
ನಮಿಸುತ ಅಕ್ಕರೆ ಕೊಡಬೇಕು //
ದುಪ್ಪಟ್ಟು ಸಿಹಿಯನ್ನು ಕೊಡಬೇಕು
ನನಗಾಗಿ ಪಟ್ಟ ಕಷ್ಟಕೆ ಇಂದು
ಪ್ರತಿ ಕಾಣಿಕೆಯ ಕೊಡಬೇಕು
ತಂದೆಯ ಸ್ಥಾನದಿ ನಿಂತ ಅವಗೆ
ನಮಿಸುತ ಅಕ್ಕರೆ ಕೊಡಬೇಕು //
ತಮ್ಮನು ಮನೆಗೆ ಬರುತ್ತಾನೆ
ಸವಿ ನೆನಪನ್ನು ತರುತಾನೆ
ಸಿಟ್ಟನು ತೋರಿಸಬೇಕು
ಮುದ್ದಿಸಿ ಕಾಡಿಸಬೇಕು //
ನಾ ಮಾಡಿರುವ ಸಿಹಿ ತಿಂಡಿಯನು
ಮುದ್ದಿಸಿ ಬಾಯಿಗೆ ಇಡಬೇಕು
ಬಾಲ್ಯದ ನೆನಪನು ನೆನಪಿಸಿ ಅವಗೆ
ಅಮ್ಮನ ಪ್ರೀತಿಯ ಕೊಡಬೇಕು
ನಾಗರ ಪಂಚಮಿ ಹಬ್ಬಕೆ ಎಂದು
ನೆನಪಿನ ಕಾಣಿಕೆ ಕೊಡಬೇಕು //
ಮುದ್ದಿಸಿ ಬಾಯಿಗೆ ಇಡಬೇಕು
ಬಾಲ್ಯದ ನೆನಪನು ನೆನಪಿಸಿ ಅವಗೆ
ಅಮ್ಮನ ಪ್ರೀತಿಯ ಕೊಡಬೇಕು
ನಾಗರ ಪಂಚಮಿ ಹಬ್ಬಕೆ ಎಂದು
ನೆನಪಿನ ಕಾಣಿಕೆ ಕೊಡಬೇಕು //
Sodaratindu Barutare (Brothers are coming today) / Nagara Panchami song
Lyrics, Music - Jagadeesha Chandra
Lyrics, Music - Jagadeesha Chandra
My older brother, who offers joy and happiness,
is coming to my home today
He made fun of me when I was younger.
Now is the moment for retribution
When I was a kid, he used to buy me candy;
now, I have to double the amount and give it to him
The amount of effort he put forth earlier
To be given back
When I was a kid, he played the role of a father.
It is my responsibility to express my appreciation and regard
My younger brother will be returning home today,
bringing joy and happy memories with him.
I used to tease him when he was younger,
I used to tease him when he was younger,
but now is the ideal time to let him know how much I value him.
Today, I prepared his favourite dish,
Today, I prepared his favourite dish,
which I like to serve to him with affection.
I ought to assist him in recalling his childhood.
Give him a special present.
I want to show how much a mother loves
I ought to assist him in recalling his childhood.
Give him a special present.
I want to show how much a mother loves
On this Nagara Panchami, the Brothers' Festival.
ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಯಾವ ಹಬ್ಬ, ಮದುವೆ ಇತ್ಯಾದಿಗಳನ್ನು ಮಾಡುವುದಿಲ್ಲ. ಅದು ಮುಗಿದ ನಂತರ ಶ್ರಾವಣ ಮಾಸ ಎಂದರೆ ಹಬ್ಬಗಳ ಆರಂಭ ಎಂದರ್ಥ. ಆರಂಭವಾದ ೫ ನೇ ದಿನ ಬರುವ ಹಬ್ಬವೇ ನಾಗರಪಂಚಮಿ. ಹಿಂದೂಗಳು ಅಥವಾ ಸನಾತನ ಧರ್ಮವನ್ನು ಪಾಲಿಸುವವರು, ಇತರರಲ್ಲಿಯೂ, ಇತರ ಸಸ್ಯ ಹಾಗೂ ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವವರು. ಇದನ್ನು ಕೆಲವರು ವ್ಯಂಗ್ಯವಾಗಿ ಆಡಿಕೊಳ್ಳುವರು ಇದ್ದಾರೆ. ಆದರೆ ಅದರ ಹಿಂದಿನ ಗೂಡಾರ್ಥವನ್ನು ನೋಡಿದರೆ , ಅದು ಎಲ್ಲರಿಗೂ ಜೀವಿಸುವ ಹಕ್ಕು ಇದೆ, ಅದನ್ನು ಕಿತ್ತುಕೊಳ್ಳಬೇಡಿ ಎಂದು ಅರ್ಥ. ಸುಮ್ಮನೆ, ಕೊಲ್ಲಬೇಡಿ, ಹಾಳು ಮಾಡಬೇಡಿ ಎಂದರೆ ಜನರ ತಲೆಗೆ ಹೋಗುವುದಿಲ್ಲ. ಹೀಗಾಗಿ ಸರಿಯಾದ ಸಂದರ್ಭದಲ್ಲಿ ಅದಕ್ಕೆ ಸ್ವಲ್ಪ ಆದ್ಯಾತ್ಮ, ಭಕ್ತಿಗಳನ್ನು ಸೇರಿಸಿ ಅವು ಹಾಳಾಗದಂತೆ ನೋಡಿಕೊಂಡಿದ್ದಾರೆ. ಅದಕ್ಕೆ ಕೆಲವು ಕತೆಗಳೂ ಇರಬಹುದು, ನಂಬುವುದು ಬಿಡುವುದು ವೈಯುಕ್ತಿಕ ಅಭಿಪ್ರಾಯ. ಆದರೆ ಅದರ ಹಿಂದಿನ ಅರ್ಥವನ್ನು ಗ್ರಹಿಸಬೇಕು. ನಾಗರಪಂಚಮಿ ಯಂದು ನಾಗನನ್ನು ಪೂಜಿಸಬೇಕು ಎಂದರೆ ಅಂದು ಮಾತ್ರ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಪೂಜೆ ಮಾಡಿದರೆ ಸಾಲದು , ಹಾವುಗಳನ್ನೂ ಬದುಕಲು ಬಿಡಬೇಕು ಎಂದರ್ಥ. ನಾಗರಕಲ್ಲಿಗೆ ಪೂಜಿಸುವುದು, ನಿಜವಾದ ಹಾವು ಬಂದರೆ ಅದನ್ನು ಹೊಡೆದು ಕೊಳ್ಳುವುದು ಸರಿಯಲ್ಲ, ಅದನ್ನು ಎಲ್ಲಿಯಾದರೂ ಸೂಕ್ತವಾದ ಸ್ಥಳದಲ್ಲಿ ಬದುಕಲು ಬಿಡಬೇಕು. ಇದು ನಿಜವಾದ ನಾಗರ ಪೂಜೆ ಎನಿಸಿಕೊಳ್ಳುತ್ತದೆ.
ಹಾವು ಕಡಿಮೆಯಾದರೆ ಇಲಿಗಳು, ಗೆದ್ದಲುಗಳು ಹೆಚ್ಚಾಗುತ್ತದೆ. ಇಲಿ, ಗೆದ್ದಲು ಹೆಚ್ಚಾದರೆ ಅದರಿಂದ ಬೇರೆ ರೀತಿಯ ತೊಂದರೆಗಳು ಆರಂಭವಾಗುತ್ತದೆ. ಈ ಪರಿಸರ ಸಮತೋಲನವನ್ನು ಕಾಪಾಡಲು ಪ್ರಕೃತಿಯೇ ಒಂದು ಪದ್ದತಿಯನ್ನು ಅಳವಡಿಸಿದೆ. ಹೀಗಾಗಿ ಈ ಒಂದು ಪರಿಸರ ಸಮತೋಲನವನ್ನು ಕಾಪಾಡುವುದು ನಮ್ಮ ಕರ್ತವ್ಯ. ಪೂಜೆ ಎನ್ನುವುದು ಕೇವಲ ಸಾಂಕೇತಿಕ, ಆದರೆ ಹಾವುಗಳನ್ನು ಕೊಲ್ಲದೆ ಅದನ್ನು ಹಿಡಿದು ಬೇರೆಕಡೆ ಬಿಡುವುದು ನಿಜವಾದ ಪೂಜೆಯಾಗುತ್ತದೆ.
ಸ್ಕಂದ ಪುರಾಣದಲ್ಲಿ ಈಶ್ವರನ ಮಗ ಸುಬ್ರಹ್ಮಣ್ಯನು ನಾಗರ ಪಂಚಮಿಯನ್ನು ಯಾಕೆ ಆಚರಿಸಬೇಕು ಎಂಬ ಪ್ರಶ್ನೆಗೆ ಒಂದು ಕಥೆಯನ್ನು ಹೇಳುತ್ತಾನೆ.
ಹಿಂದೆ ದೇವಶರ್ಮ ಎಂಬಾತನಿದ್ದನು. ಆತನಿಗೆ ಒಂಬತ್ತು ಮಕ್ಕಳು, 8 ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಮಗಳ ಬಳಿ ಆಶ್ರಯ ಕೇಳುತ್ತದೆ. ಆ ಹುಡುಗಿ ಆ ಹಾವಿಗೆ ಆಹಾರವನ್ನು ಕೊಟ್ಟು ಪ್ರೀತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ಹಾವು ಪ್ರತಿದಿನ ಆಕೆಗೆ ಸ್ವಲ್ಪ ಚಿನ್ನವನ್ನು ನೀಡುತ್ತಿರುತ್ತದೆ. ಇದನ್ನು ಅರಿತ ಅವಳ ಒಬ್ಬ ಅಣ್ಣ ಇನ್ನು ಹೆಚ್ಚು ಚಿನ್ನವನ್ನು ತರಬೇಕೆಂದು ತಂಗಿಯನ್ನು ಪೀಡಿಸುತ್ತಾನೆ. ಇಷ್ಟೇ ಅಲ್ಲದೆ ಆ ಹಾವನ್ನು ಹೆದರಿಸಿ ಅದಕ್ಕೆ ಕೋಲಿನಿಂದ ಹೊಡೆಯುತ್ತಾನೆ. ದ್ವೇಷದಿಂದ ಆ ಹಾವು ಅವಳ ಏಳು ಜನ ಅಣ್ಣಂದಿರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೆನಲ್ಲ ಎಂದು ಆ ಹುಡುಗಿ ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾಗುತ್ತಾಳೆ. ಆಗ ದೇವರು ಪ್ರತ್ಯಕ್ಷನಾಗಿ ಹಾವಿನ ರಾಜ ವಾಸುಕಿಗೆ ಆ ಸತ್ತ ಅಣ್ಣಂದಿರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಹುಡುಗಿ ಯಶಸ್ವಿಯಾದ ದಿನವೇ ಶ್ರಾವಣ ಮಾಸದ ಪಂಚಮಿಯ ದಿನವಾಗಿರುತ್ತದೆ. ಹೀಗಾಗಿ ಆ ದಿನವನ್ನು ನಾಗರಪಂಚಮಿ ಎಂದು ಆಚರಿಸಿ, ಸೋದರರು ಸೋದರಿಯರ ಮನೆಗೆ ಹೋಗಿ ನಾಗನಿಗೆ ಪೂಜಿಸಿದ ಹಾಲಿನ ತನಿ ಎರೆಸಿಕೊಳ್ಳಬೇಕು ಎಂಬ ಪದ್ಧತಿ ಜಾರಿಗೆ ಬಂತು. ಇದು ನಾಗರಪಂಚಮಿಯ ಕಥೆ. ಜನಮೇಜಯನು ಸರ್ಪಗಳ ಯಜ್ಞವನ್ನು ನಿಲ್ಲಿಸಿದ್ದು ಇದೇ ಪಂಚಮಿಯ ದಿನ ಎಂಬ ನಂಬಿಕೆ ಇದೆ.
ಇದನ್ನು ಕೇವಲ ಕಟ್ಟುಕತೆ ಎಂದು ಮೂಗೆಳೆಯುವುದನ್ನು ಬಿಟ್ಟು, ಇದರಿಂದಾಗಿ ಹಾವುಗಳು ಬದುಕಿಕೊಂಡವು, ಅಣ್ಣ ತಂಗಿಯರ ಬಾಂಧವ್ಯವೂ ವೃದ್ಧಿಯಾಯಿತು ಎಂದು ಅಂದುಕೊಂಡು ಹಬ್ಬವನ್ನು ಆಚರಿಸಬಹುದು ಅಲ್ಲವೇ? ಅಂದು ಸೋದರರು, ಸೋದರಿಯರ ಮನೆಗೆ ಸುಮ್ಮನೆ ಹೋಗುವುದಿಲ್ಲ, ಅವರಿಗೆ ಏನಾದರೂ ಉಡುಗೊರೆಯನ್ನು ಕೊಡುತ್ತಾರೆ, ಸೋದರಿಯರೂ ಸೋದರರಿಗೆ ವಿಶೇಷ ತಿನಿಸುಗಳನ್ನು ಕೊಟ್ಟು ಅವರಿಗೂ ಏನಾದರೂ ಉಡುಗೊರೆಯನ್ನು ಕೊಡುತ್ತಾರೆ. ಕೆಲವು ಸೋದರರು ನಾಗರಪಂಚಮಿಯಂದು ಉಡುಗೊರೆ ನೀಡದಿದ್ದರೂ, ಮುಂದೆ ಬರುವ ಗೌರಿ ಹಬ್ಬಕ್ಕೆ ಏನಾದರೂ ಉಡುಗೊರೆ ಕೊಡುತ್ತಾರೆ.
ಭಾರತ ಸಂಸ್ಕೃತಿಯಲ್ಲಿ ನಾಗರಹಾವಿಗೆ ವಿಶೇಷ ಸ್ಥಾನವಿದೆ. ನಾಗ ಎಂಬ ಜನಾಂಗ ಇಂದಿಗೂ ಉಳಿದುಕೊಂಡಿದೆ. ನಾಗಮಂಡಲ ಪೂಜೆ, ನಾಗಾರಾಧನೆ ಇಂದಿಗೂ ಕೆಲವರು ಆಚರಿಸುತ್ತಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸುತ್ತಾರೆ.
ನಮ್ಮ ಪುರಾಣಗಳಲ್ಲಿ ಜನಮೇಜಯ ಮಾಡಿದ ಸರ್ಪಯಾಗ, ವಾಸುಕಿ, ಆದಿಶೇಷ, ತಕ್ಷಕ, ಅನಂತ ಮೊದಲಾದ ನಾಗರಾಜರ ಪ್ರಸಂಗಗಳು, ಎಲ್ಲಾ ಹಳ್ಳಿಗಳಲ್ಲೂ, ದೇವಸ್ಥಾನಗಳಲ್ಲೂ ಕಂಡುಬರುವ ನಾಗರಕಲ್ಲುಗಳು, ಶಿವನ ಆಭರಣ, ಗಣೇಶ ಹೊಟ್ಟೆಗೆ ಸುತ್ತಿಕೊಂಡಿರುವ ಹಾವು, ವಿಷ್ಣುವಿನ ಹಾಸಿಗೆಯಾದ ಆದಿಶೇಷ, ನಾಗಕನ್ಯೆಯರು, ನಾಗಲೋಕ, ನಾಗಲೋಕದ ಕಥೆಗಳು, ಉಲೂಪಿಯ ಕಥೆ, ಕರ್ಣ ಬಳಸಿದ ಸರ್ಪಾಸ್ತ್ರ, ಇವೆಲ್ಲವೂ ಮನುಷ್ಯರಿಗೂ ಸರ್ಪಗಳಿಗೂ ಇರುವ ಸಂಬಂಧಗಳನ್ನು ತೋರಿಸುತ್ತದೆ. ಹಾವಿಗೆ ಹಿಂಸೆ ಮಾಡಿದರೆ ಅದು ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತದೆ ಎಂಬ ನಂಬಿಕೆ ಬಹುಷಃ ಹಾವುಗಳನ್ನು ಉಳಿಸಲು ಮಾಡಿರುವ ತಂತ್ರವೇ ಇರಬೇಕು.
ಇವೆಲ್ಲವನ್ನೂ ನಕಾರಾತ್ಮಕವಾಗಿ ನೋಡದೆ ಸಕಾರಾತ್ಮಕವಾಗಿ ನೋಡಿ, ಕಟ್ಟುಕತೆ ಎಂದು ಹೀಗಳೆಯದೆ ಅದರ ಹಿಂದಿರುವ ಸಂಕೇತವನ್ನು ಮೆಚ್ಚಿಕೊಳ್ಳಿ. ನಾಗರಪಂಚಮಿಯಂದು ಪೂಜೆ ಮಾಡುತ್ತಿರೋ ಬಿಡುತ್ತೀರೋ ನಿಮಗೆ ಬಿಟ್ಟದ್ದು, ಆದರೆ ಹಾವುಗಳನ್ನು ಉಳಿಸುತ್ತೇವೆ ಎಂಬ ನಿರ್ಧಾರ ಕೈಗೊಳ್ಳಿ, ಪರಿಸರವನ್ನು ಕಾಪಾಡಿ. ಸೋದರ ಸೋದರಿಯರ ಸಂಬಂಧ ಹಿತವಾಗಿರಲಿ.
ಎಲ್ಲರಿಗೂ ನಾಗರಪಂಚಮಿಯ ಶುಭಾಶಯಗಳು.
Generally speaking, no festivals, marriages, etc. are observed during the month of Ashadha. Following this, the festival season begins with the start of the month of Shravana. Nagara Panchami is celebrated on the fifth day of Shravana. Sanatana Dharma adherents perceive God in other people, animals, and plants. Some people might ridicule it. But if you look at connotation behind it, the meaning behind is that "everyone has the right to live". The general public might not comprehend these facts if they are presented in simplistic ways. As a result, this is given a philosophical touch to guarantee that people conduct appropriately. A lot of stories are written in order to be well understood. It is preferable to comprehend its meaning or symbolism rather than dismissing it as a narrative.
During the Nag Panchami festival, cobras are worshipped. This worship's justification suggests that killing snakes is wrong. Snakes are entitled to exist in this world as well. Worshippers of snakes may harm or kill living snakes. This is unacceptable. However, saving rather than killing is the true worship of snakes.
Rats and mice will proliferate if snake populations decline. Additional environmental issues arise when termites and rats proliferate. To preserve this ecological equilibrium, nature has developed a mechanism. It is our responsibility to contribute to preserving this ecological equilibrium. The true act of snake worship is to capture and release a snake in a forest without killing it; worshipping snakes is merely symbolic.
There was a man named Devasharma in the past. Eight of his nine children are boys, and one is a girl. A cobra, terrified by Garuda, asks this daughter for protection one day. The snake was lovingly fed and housed by the girl. The snake provides her some gold each day in exchange.
One of her brothers encourages her sister to bring additional gold after realising this. Additionally, he scares the snake by striking it with a stick. The snake kills her seven brothers in a fit of wrath and leaves. The girl felt horrible since she thought she was to blame for her brothers' deaths. She attempted suicide. This was stopped by the appearance of God. Later, he commanded "Vasuki," the king of snakes, to bring the deceased brothers back to life. The day of Panchami in the month of Shravan was the day the girl was able to save her brothers' lives. As a result, it is usual for brothers to visit sisters' homes and present milk to the god Nagaraja on this day, which is known as Nagpanchami.
It is believed that on this Panchami day, King Janamejaya put an end to the snake sacrifice.
Consider the moral and relevance of the narrative before concluding that it is not a story worth believing. In this case, the sister fought for her brothers' welfare. Despite the fact that some snakes are dangerous, they should not be killed because their presence contributes to maintaining natural equilibrium.
It becomes common for brothers to visit their sisters as a result of this event. Giving brothers presents further strengthens the bondage. Sisters also cook delectable meals and offer them to their brothers. On the day of Gouri pooja, brothers give their sisters gifts as a form of restitution.
Consider the moral and relevance of the narrative before concluding that it is not a story worth believing. In this case, the sister fought for her brothers' welfare. Despite the fact that some snakes are dangerous, they should not be killed because their presence contributes to maintaining natural equilibrium.
It becomes common for brothers to visit their sisters as a result of this event. Giving brothers presents further strengthens the bondage. Sisters also cook delectable meals and offer them to their brothers. On the day of Gouri pooja, brothers give their sisters gifts as a form of restitution.
In India, there is a unique significance to snakes. 'Naga' is a sect that still exists today. Even today, people celebrate festivals like Nagamandala Pooja and snake worship. On Nagapanchami Day, the residents of Battis Shiral, a village in Maharashtra's Sangli district, worship real snakes.
In our epics we can observe many instances of snakes. King Janamejaya performed a snake sacrifice ceremony. Cobras are known by a variety of names, including Vasuki, Adishesha, Takshaka, and Ananta, and there are many legends about them. In all communities and temples Snake stones (Nagara Kallu) can be spotted. The relationship between men and snakes is demonstrated by instances such as Ganesh wearing a snake belt, Nagakanye (Lady snakes), Naga Loka (Land of Snakes), Shiva wearing a snake as an ornament, Ulupi in the Mahabharata, and Karna using a snake arrow during the Mahabharat war.
In our epics we can observe many instances of snakes. King Janamejaya performed a snake sacrifice ceremony. Cobras are known by a variety of names, including Vasuki, Adishesha, Takshaka, and Ananta, and there are many legends about them. In all communities and temples Snake stones (Nagara Kallu) can be spotted. The relationship between men and snakes is demonstrated by instances such as Ganesh wearing a snake belt, Nagakanye (Lady snakes), Naga Loka (Land of Snakes), Shiva wearing a snake as an ornament, Ulupi in the Mahabharata, and Karna using a snake arrow during the Mahabharat war.
It is said that if you attempt to hurt a snake, it will retaliate. It is also believed that snakes retaliate after remembering such incidences for a period of twelve years. Whether true or not, all of these ideas subtly stop people from hurting snakes. This could be the concept underlying all of these kinds of beliefs.
Therefore, rather than dismissing as rubbish, view all of the aforementioned examples favourably. They are significant because of their meaning or concept. Never kill a snake, whether you worship them or not. Despite the fact that some are toxic, they save us by preserving the natural equilibrium. Make a vow to protect snakes on this auspicious day. Allow the bondage between siblings to deepen through this celebration.
To everyone, a Happy Nagara Panchami.
Therefore, rather than dismissing as rubbish, view all of the aforementioned examples favourably. They are significant because of their meaning or concept. Never kill a snake, whether you worship them or not. Despite the fact that some are toxic, they save us by preserving the natural equilibrium. Make a vow to protect snakes on this auspicious day. Allow the bondage between siblings to deepen through this celebration.
To everyone, a Happy Nagara Panchami.
No comments:
Post a Comment