Wednesday, July 2, 2025

Kopaveke Ajji?/ B K Sumitra, B Latha / Vijayabhaskar / R N Jayagopal / K...


ಕೋಪವೇಕೆ ಕೋಪವೇಕೆ ಅಜ್ಜಿ / ಬಿ ಕೆ ಸುಮಿತ್ರಾ, ಬಿ ಲತಾ / ವಿಜಯಭಾಸ್ಕರ್ / ಪತಿಯೆದೈವ / ಕೀಬೋರ್ಡ್ - ಜಗದೀಶ ಚಂದ್ರ 

ಅಜ್ಜಿಗೆ ಮೊಮ್ಮೊಕ್ಕಳು ಎಂದರೆ ಬಲು ಪ್ರೀತಿ. ಕಿಟ್ಟು,  ಪುಟ್ಟು ಎಂಬ ಈ ಎರಡು ಮಕ್ಕಳಿಗೂ ಅಜ್ಜಿ ಎಂದರೆ ಪಂಚಪ್ರಾಣ. ಆದರೆ ಮಕ್ಕಳು ಮಕ್ಕಳೇ. ಏನೋ ತರಲೆ ಮಾಡಿ ಅಜ್ಜಿಯನ್ನು ಸಿಟ್ಟಿಗೆಬ್ಬಿಸಿಬಿಟ್ಟಿವೆ. ಅದಕ್ಕೆ ಅಜ್ಜಿ ಮುಖ ಊದಿಸಿ ಕೂತಿದ್ದಾಳೆ. ಕಿಟ್ಟು ಪುಟ್ಟು ತಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಅಜ್ಜಿಯನ್ನು ರಮಿಸಲು, ಕೋಪ ತಾಪ ಸಾಕು, ಬಿಗುಮಾನ ಬಿಟ್ಟು ಮೊದಲಿನಂತಿರು ಎನ್ನುತ್ತಿದ್ದಾರೆ. ತಟ್ಟೆ ತುಂಬಾ ಸಿಹಿ ತಂದಿದ್ದೇವೆ, ಯಾರಿಗೂ ಕಾಣದಂತೆ ಗುಟ್ಟಾಗಿ ತಿನ್ನು, ತಪ್ಪನ್ನೆಲ್ಲ ಒಪ್ಪಿಕೊಂಡು ನಿನ್ನ ಕೈಲಿ ಕೆನ್ನೆಗೆ ಏಟು ತಿಂದು ನಿನ್ನ ಸೇವೆ ಮಾಡುತ್ತೇವೆ ಎಂದೆಲ್ಲಾ ಹೇಳಿ ರಮಿಸಲು ನೋಡುತ್ತಿದ್ದಾರೆ. ಇದೇ ಹಾಡಿನ ಭಾವಾರ್ಥ. ಹಿಂದೆ ಮಕ್ಕಳ ಹಾಡು ಹಾಡಲು ಬಿ ಕೆ ಸುಮಿತ್ರಾ ಹಾಗು ಬೆಂಗಳೂರು ಲತಾ ಅವರನ್ನು ಆಯ್ಕೆ ಮಾಡುತ್ತಿದ್ದರು. ಇಲ್ಲಿಯೂ ಅವರಿಬ್ಬರೇ ಬಹಳ ಮಧುರವಾಗಿ ಹಾಡಿದ್ದಾರೆ. ಸಂಗೀತ ವಿಜಯಭಾಸ್ಕರ್ ಅವರದು, ಸಾಹಿತ್ಯ ಆರ್ ಏನ್ ಜಯಗೋಪಾಲ್ ಅವರದು, ಚಿತ್ರ ಪತಿಯೇ ದೈವ. ಇದೆ ಹಾಡನ್ನು ಹಿಂದಿಯಲ್ಲಿ ದಾದಿಯಮ್ಮ ದಾದಿಯಮ್ಮ ಮಾನ್ ಜಾವ್ ಎಂದು ಆಶಾ ಭೊಂಸ್ಗೆ ಹಾಗು ಕಮಲ್ ಬರೋಟ್ ಅವರು ಹಾಡಿದ್ದಾರೆ. ಸಂಗೀತ ನೀಡಿರುವವರು ರವಿ ಅವರು.  

Kopaveke Ajji? Grandkids' song / B K Sumitra, B Latha / Vijayabhaskar / R N Jayagopal / Keyboard - Jagadeesha Chandra

Grandma adores her grandchildren.  Kittu and Puttu are the two children she is the grandmother to.  However, kids can be incredibly mischievous.  The grandmother has become irate due to some mischievous behaviour.  Grandma's red face is an expression of her rage.  To satisfy their grandmother, Kittu Puttu goes to great lengths.  Grandmother is kindly asked to restrain her temper.   They ask that she return to her regimen and get over her stubbornness.  They bring a sweet, which they beg Grandmother to eat.   Grandmother is asked to consume the sweets in secret so that no one can see her because she is not allowed to eat sweets.  By striking their cheeks, they also ask their grandmother to forgive them for their errors.   This is the song's main idea. 
This adorable song, which was composed by R N Jayagopal and sung by B K Sumitra and Bengaluru Latha in the film "Patiye Daiva," is about children attempting to convince their grandma to stop being so stubborn.
Renowned vocalists Bengaluru Latha and BK Sumitra were selected to perform children's tunes.  Both of them did a fantastic job rendering this song.  Vijayabaskar is the composer, and R. N. Jayagopal is the one who wrote of the lyrics. 
 Asha Bhosle and Kamal Barot sing the same song from the film Gharanaa.  Ravi is the music director. The song title is "Dadiyamma Dadiyamma maan jaav".


ಕೋಪವೇಕೆ ಕೋಪವೇಕೆ ಅಜ್ಜಿ 
ಈ ತಾಪವೇಕೆ ಮನಸಿಗೆ ಅಜ್ಜಿ 
ಬಿಡು ನಿನ್ನ ಕೋಪ ,  ತಾಳು ಶಾಂತ ರೂಪಾ 
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ //

ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು 
ತಟ್ಟೆ ತುಂಬಾ ಸಿಹಿ ತಿಂಡಿ ಕೊಂಡು  ಬಂದೆವು 
ಸೊಟ್ಟ ಮುಖವನ್ನು ಬಿಟ್ಟು    ಕಿಟ್ಟು ಪುಟ್ಟ ಮಾತ ಕೇಳಿ 
ಗುಟ್ಟಿನಿಂದ ಹೊಟ್ಟೆ ತುಂಬಾ ತಿಂದು ಬಿಡಜ್ಜಿ // 

ತಪ್ಪುಗಳನ್ನೆಲ್ಲ ನಾವು ಒಪ್ಪಿಕೊಂಡೆವು 
ನಮ್ಮ ತಪ್ಪನೆಲ್ಲ ಮನ್ನಿಸೆಂದು ಬೇಡಿಕೊಂಬೆವು 
ನಿನ್ನ ಮಾತ ಕೇಳುವೆವು ,  ನಿನ್ನ ಸೇವೆ ಮಾಡುವೆವು 
ಕೆನ್ನೆಗೇಟು ಹಾಕು ಎಂದು ಕೇಳಿಕೊಂಬೆವು 

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...