A brief on World Environment Day 2025 is given below.
ವಿಶ್ವ ಪರಿಸರ ದಿನ 2025 - ಇದರ ಬಗ್ಗೆ ಕಿರು ವಿವರಣೆಯನ್ನು ಕೆಳಗೆ ಕೊಟ್ಟಿದೆ.
ಪರಿಸರ ಗೀತೆ - ಜಲಪಾತ / Environment song /Waterfalls
ರಾಗ ಸಂಯೋಜನೆ, ರಚನೆ - ಜಗದೀಶ ಚಂದ್ರ / Lyrics, Music -Jagadeesha Chandra
ಹರಿಯುವ ನದಿಯಾ ಜುಳುಜುಳು ಅನ್ನೋ ಸದ್ದು
ನದಿಯು ಮೇಲಿಂದ ದಬದಬ ಧುಮುಕುವ ಸದ್ದು
ದಬದಬ ಧುಮುಕುವ ಸದ್ದು
ಸೆಳೆಯಿತು ನನ್ನನ್ನು ಹತ್ತಿರ ಬಾ ಬಾ ಎಂದು
ಕರೆಯಿತು ನನ್ನನ್ನು ಆಡೋಣ ಬಾಬಾ ಎಂದು,
ನಲಿಯೋಣ ಬಾಬಾ ಎಂದು ನಲಿಯೋಣ ಬಾಬಾ ಎಂದು
xxxxxxx
ಕಿವಿಗಿಂಪಾಯಿತು ನೀರು ಸುರಿಯುವ ಸದ್ದು
ಕಿವಿ ತಂಪಾಯಿತು ಮೋಡ ಮಂಜು ಹಾದು
ಸೆಳೆಯಿತು ನನ್ನನ್ನು ಕೇಳಲು ಬಾ ಬಾ ಎಂದು
ಹನಿ ಪಿಸುಗುಟ್ಟಿತು ಕಲರವ ಕೇಳು ಎಂದು,
ಕಣ್ಣಿಗೆ ಹಿತವಾ ತಂದೀತಲ್ಲಿನ ನೋಟ
ವೇಗದಿ ಹರಿದು ಧುಮುಕೋ ನೀರಿನ ಆಟ
ನೀರಿನ ಚೆಲ್ಲಾಟ
ಗರಬಡಿಸೆನ್ನನು ನೋಡು ನೋಡು ಅಂತು
ನೀರನು ಚಿಮುಕಿಸಿ ಎಚ್ಚರ ಗೊಳ್ಳು ಅಂತು
ಆಸ್ವಾದಿಸು ಅಂತು ಆಸ್ವಾದಿಸು ಅಂತು
xxxxxx
ಮನಸಿಗೆ ಮುದತಂತು ನೀರಿನ ಕಲರವದಾಟ
ಕುಣಿವಂತೆ ಮಾಡಿತು ಮಂಜಿನ ಹನಿಗಳ ಆಟ
ಸಡಗರ ತಂದಿತು ಕವಿದಾ ಮಂಜಿನ ಆಟ
ಮಂಜಿನ ನಡುವೆ ಕಂಡಿತು ಅರೆಬರೆ ನೋಟ
ಬೇಸರ ಸರಿಸಿತು ಪ್ರಕೃತಿಯ ರಮ್ಯ ದೃಶ್ಯ
ಮೈಮನ ಅರಳಿ ಮೂಡಿತು ಈ ಹೊಸ ಕಾವ್ಯ
ಪರಿಸರ ಸಿಹಿ ಕಾವ್ಯ
ಹಿಗ್ಗನು ತಂದಿತು ಪ್ರಕೃತಿಯ ಈ ಹೊಸ ಲಾಸ್ಯ
ಅರಳಿತು ಮನದಲಿ ಪರಿಸರ ಪ್ರೇಮದ ಪಠ್ಯ
ಪರಿಸರ ದೀ ಸಖ್ಯ ಪರಿಸರ ದೀ ಸಖ್ಯ
- ಜಗದೀಶ ಚಂದ್ರ ಬಿ ಎಸ್ -
World Environment Day 2025
The theme for World Environment Day 2025 is "Ecological Restoration".
The importance of World Environment Day:
- To raise awareness about environmental issues and promote sustainable living.
- To encourage individuals, organizations, and governments to take action to protect the environment.
- To promote sustainable practices and reduce human impact on the environment.
The theme "Ecological Restoration" focuses on:
- Restoring degraded ecosystems, such as forests, wetlands, and oceans.
- Conserving biodiversity and promoting ecological balance.
- Mitigating the impacts of climate change through ecological restoration.
- The goal is to inspire individuals, communities, and organizations to take action to restore ecosystems and promote a healthier environment.
ವಿಶ್ವ ಪರಿಸರ ದಿನ 2025
2025 ರ ವಿಶ್ವ ಪರಿಸರ ದಿನದ ವಿಷಯ - "ಪರಿಸರ ಪುನಃಸ್ಥಾಪನೆ".
ವಿಶ್ವ ಪರಿಸರ ದಿನದ ಮಹತ್ವ
- ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸುವುದು.
- ಪರಿಸರವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳನ್ನು ಪ್ರೋತ್ಸಾಹಿಸುವುದು.
- ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಪರಿಸರದ ಮೇಲೆ ಮಾನವ ಪ್ರಭಾವವನ್ನು ಕಡಿಮೆ ಮಾಡುವುದು.
"ಪರಿಸರ ಪುನಃಸ್ಥಾಪನೆ" - ಉದ್ದೇಶ
- ಅರಣ್ಯಗಳು, ತೇವಾಂಶವುಳ್ಳ ಪ್ರದೇಶಗಳು ಮತ್ತು ಸಾಗರಗಳಂತಹ ಹಾಳಾಗುತ್ತಿರುವ ಪರಿಸರ ವ್ಯವಸ್ಥೆಗಳ ಮರುಸ್ಥಾಪನೆ.
- ಜೀವವೈವಿಧ್ಯವನ್ನು ಸಂರಕ್ಷಿಸುವುದು ಹಾಗು ಪರಿಸರ ಸಮತೋಲನವನ್ನು ಕಾಪಾಡಲು ಉತ್ತೇಜಿಸುವುದು.
- ಪರಿಸರ ಪುನಃಸ್ಥಾಪನೆಯ ಮೂಲಕ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುವುದು.
- ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಆರೋಗ್ಯಕರ ಪರಿಸರವನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳಲು ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳನ್ನು ಪ್ರೇರೇಪಿಸುವುದು
+1Latin3D spd 110 vol40 P5 str20 Gui 25 acord3
No comments:
Post a Comment