Thursday, July 3, 2025

Wife's Letter /K S Narasimha Swamy /C Ashwath /Keyboard - JagadeeshaChan...


ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ

ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣೆ, ಪದ್ದತಿಗಳು ಇಂದು ಬದಲಾಗುತ್ತಿವೆ ಅಥವಾ ಕಣ್ಮರೆಯಾಗುತ್ತಿದೆ. ಹಿಂದೆ ತವರುಮನೆಗೆ ಹೋಗುವುದು, ತಾಯಿಯೊಂದಿಗಿನ ಸಖ್ಯ ಇತ್ಯಾದಿಗಳು ಏನೋ ಆನಂದವನ್ನು ಕೊಡುತ್ತಿದ್ದವು, ಆದರೆ ಇಂದು ಹೊರದೇಶಗಳಲ್ಲಿರುವ ಮಗಳಿಗಾಗಿ ತವರೇ ಮಗಳ ಮನೆಗೆ ವರ್ಗಾವಣೆಯಾಗುತ್ತಿದೆ. ಮೊಬೈಲ್, ಮಿಂಚಂಚೆ ಇವುಗಳು ಕ್ರಾಂತಿಯನ್ನೇ ತಂದಿದೆ. ಈಗ ನಾವು ಚರ್ಚಿಸುತ್ತಿರುವುದು ಕೆ ಎಸ್ ನರಸಿಂಹ ಸ್ವಾಮಿ ಅವರ "ಹೆಂಡತಿಯ ಕಾಗದ" ಎಂಬ ಕವನದ ಬಗ್ಗೆ. ಹೆಂಡತಿಯ ಕಾಗದವು ಕವನದ ರೂಪದಲ್ಲಿ ಹೊರಹೊಮ್ಮಿದೆ. ಮದುವೆಯಾದ ನಂತರ ಮೊದಲ ಹೆರಿಗೆ ತವರು ಮನೆಯಲ್ಲೇ ಆಗಬೇಕು ಎಂಬ ಪದ್ಧತಿ ಹಿಂದೆ ಇತ್ತು. ಈಗಲೂ ಕೆಲವರು ಇದನ್ನೇ ಅನುಸರಿಸುತ್ತಾರೆ. ಒಂದು ರೀತಿಯಲ್ಲಿ ತಾಯಿ ಮಗಳ ಸಂಬಂಧಕ್ಕೆ ಒತ್ತು ಕೊಟ್ಟಿದೆ ಈ ಪದ್ಧತಿ. ಹೆರಿಗೆ ಎಂದರೆ ಹೆಣ್ಣಿಗೆ ಒಂದು ರೀತಿಯ ಕಷ್ಟದ ಹಾಗೆಯೆ ಸುಖದ ಸಮಯ. ಹೆರಿಗೆಯ ನೋವು, ಮುಂದಾಗುವ ಮಗುವಿನ ಕನಸು ಇವೆರಡೂ ಅವಳನ್ನು ತಬ್ಬಿಬ್ಬು ಮಾಡಿಬಿಡುತ್ತದೆ. ಅಂತಹ ಸಮಯದಲ್ಲಿ ತಾಯಿಯ ಸಖ್ಯ, ಸಾಂತ್ವನ ಇವೆರಡು ಅವಳನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ, ಧೈರ್ಯಕೊಡುತ್ತದೆ. ಇದನ್ನು ಒಂದು ಪದ್ದತಿಯ ಮೂಲಕ ಆಚರಣೆಗೆ ತಂದಿದ್ದಾರೆ ನಮ್ಮ ಹಿರಿಯರು. ಈ ಕವನದ ಸಾರಾಂಶ ಇದೇ . ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಸುಖ ಸಂತೋಷದಿಂದ ವಾಸವಿದ್ದಾರೆ . ಈಗ ಹೆಂಡತಿ ಗರ್ಭಿಣಿ . ಅವಳನ್ನು ನೋಡಿಕೊಳ್ಳುವರು ಯಾರು ? ಯಾವುದೇ ಹೆಣ್ಣಿಗೆ ತಾಯಿಯ ಬಳಿ ಹೋಗಿ ಇರಬೇಕೆಂಬ ಆಸೆ ಇದ್ದೆ ಇರುತ್ತದೆ . ಈಗ ಹೆರಿಗೆಯ ನೆಪದಲ್ಲಿ ತಾಯಿಯ ಮನೆಗೆ ಹೋಗುವ ಸಮಯ ಬಂದಿದೆ. ಅವಳಿಗೋ ತಾಯಿಯ ಮನೆಗೆ ಹೋಗುವ ಸಂಭ್ರಮ, ಸಂತೋಷ. ಗಂಡನಿಗೆ ? ಅವಳ ಸೇವೆಯನ್ನು ತಾನು ಮಾಡಲಾರ, ಅವಳನ್ನು ಬಿಟ್ಟೂ ಇರಲಾರ . ಆದರೆ ಬೇರೆ ದಾರಿ ಇಲ್ಲದೆ ಅವಳನ್ನು ತವರು ಮನೆಗೆ ಕಳಿಸುತ್ತಾನೆ. ಇಂದಿನಂತೆ ಅಂದು ವಾಟ್ಸಾಪ್, ವಿಡಿಯೋ ಕಾಲ್ ಬಿಡಿ, ಲ್ಯಾಂಡ್ ಲೈನ್ ಸಹ ಅಪರೂಪವೇ. ಹೀಗಾಗಿ ಅಂಚೆಯ ಮೂಲಕವೇ ಎಲ್ಲಾ ವ್ಯವಹಾರಗಳು. ಗಂಡ ತನ್ನ ತಂದೆ ತಾಯಿಯ ಜೊತೆ, ಸೋದರ ಸೋದರಿಯರ ಜೊತೆಗೆ ಇದ್ದರೆ ಹೆಂಡತಿಯ ಅಗಲುವಿಕೆ ಅಷ್ಟಾಗಿ ಗೊತ್ತಾವುದಿಲ್ಲ. ಆದರೆ ಏನೇನೋ ಕಾರಣಗಳಿಂದಾಗಿ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿದ್ದರೆ ಆಗ ಹೆಂಡತಿಯ ಅಗಲಿಕೆ ಬಹಳ ವೇದನೆಯನ್ನು ಕೊಡುತ್ತದೆ. ಸಾಮಾನ್ಯವಾಗಿ ಹೆರಿಗೆ ಎಂದರೆ ಮಗುವಿಗೆ ೫ ತಿಂಗಳಾಗುವವರೆಗೂ ಹೆಂಡತಿ ತವರಲ್ಲೇ ಇದ್ದು ಬರುತ್ತಾಳೆ. ವಿರಹಿ ಗಂಡನಿಗೆ ಒಂದೊಂದು ತಿಂಗಳು ಒಂದೊಂದು ವರ್ಷವಾದಂತೆ ಭಾಸವಾಗುತ್ತದೆ. ಹೆಂಡತಿಯಿಲ್ಲದ ಮನೆಯಲ್ಲಿ ಒಬ್ಬನೇ ಇರಬೇಕಾದ ಪರಿಸ್ಥಿತಿ ಗಂಡನಿಗೆ ಮೈ ಪರಚುಕೊಳ್ಳುವಂತಾಗುತ್ತದೆ. ಅದು ಸಿಟ್ಟಿನ ಮೂಲಕ ಹೆಂಡತಿಯ ಮೇಲೆ ತಿರುಗುತ್ತದೆ. ನೀನೇನು ಆರಾಮವಾಗಿ ಅಮ್ಮನ ಕೈಲಿ ಸೇವೆ ಮಾಡಿಸಿಕೊಂಡು ಚೆನ್ನಾಗಿ ತಿಂದುಕೊಂಡು ಸಂತೋಷವಾಗಿದ್ದಿಯ ಎಂದು ಅಸೂಯೆಯನ್ನು ತೆಗಳಿಕೆ, ಆಕ್ಷೇಪಣೆಯ ಮೂಲಕ ತೋರಿಸುತ್ತಾನೆ. ಆಗ ಹೆಂಡತಿಯು, ಹಾಗೆನ್ನಬೇಡಿ, ಹಗಲೆಲ್ಲಾ ನನಗೆ ನಿಮ್ಮದೇ ಚಿಂತೆ, ಕನಸಲ್ಲೂ ನಿಮ್ಮದೇ ನೆನಪು; ನೀಲಾಕಾಶದಲ್ಲಿ ಚಂದ್ರ ಹಾಗು ರೋಹಿಣಿ ನಕ್ಷತ್ರಗಳನ್ನು ನೋಡಿದಾಗ ಅದು ನಾವಿಬ್ಬರೇ ಎಂಬ ಭಾವ ಬರುತ್ತದೆ ಎನ್ನುತ್ತಾಳೆ. ಅಮ್ಮ ಮಾಡುವ ಅಡುಗೆಯ ಆಸೆಗೆ ನಾನು ಇಲ್ಲಿ ಕುಳಿತಿಲ್ಲ, ಮಗುವಿಗೆ ೫ ತಿಂಗಳು ತುಂಬುತ್ತಿದೆ, ಇನ್ನು ಕೆಲವೇ ದಿನದಲ್ಲಿ ತಂಗಿಯ ಮದುವೆಯೂ ಇದೆ ಅದಕ್ಕಾಗಿ ಒಂದೆರೆಡು ದಿನ ಇದ್ದು ಬಂದು ಬಿಡುತ್ತೇನೆ, ನಾನು ತವರು ಅನ್ನುವ ಪಂಜರದ ಗಿಣಿಯಲ್ಲ ಸ್ವಲ್ಪ ಸಹಿಸಿಕೊಳ್ಳಿ, ಬಂದುಬಿಡುತ್ತೇನೆ ಎಂದು ಸಮಾಧಾನ ಮಾಡುತ್ತಾಳೆ. ನಾನು ನಿಮ್ಮೊಂದಿಗೆ ಇದ್ದಾಗ ನೀವು ಎಷ್ಟು ಪ್ರಶಾಂತರಾಗಿ ನನ್ನ ಮೇಲೆ ಪ್ರೀತಿ ತೋರುತ್ತಿದ್ದಿರಿ, ಈಗ ಮಗುವಿನ ಹೆರಿಗೆಯ ಕಾರಣ ತವರಿಗೆ ಬಂದರೆ, ಹೂವನ್ನು ಹಾವಿನಂತೆ ಕಂಡು ನನ್ನ ಮೇಲೆ ಬಿರುನುಡಿಗಳನ್ನಾಡುವುದು ನಿಮಗೆ ತರವೇ? ಎಂದು ಪ್ರಶ್ನಿಸುತ್ತಾಳೆ. ಚಿತ್ರದುರ್ಗದ ರೈಲು ನಿತ್ಯ ಮೈಸೂರಿಗೆ ಓಡಾಡುತ್ತದೆ, ಇನ್ನೊಂದು ಎರಡು ದಿನ ಕಾದುಬಿಡಿ ಬಂದುಬಿಡುತ್ತೇನೆ. ಹೊರಡವಾಗ ನಮ್ಮ ಸಂಪ್ರಾಯದಂತೆ ಸೋಬಲಕ್ಕಿಯನ್ನು ಇಟ್ಟು, ನಮ್ಮ ಮುದ್ದು ಹೆಣ್ಣು ಮಗುವಿಗೆ ರೇಷ್ಮೆ ಜರಿಯ ಲಂಗವನ್ನು ಹೋಲಿಸಿ ಹಾಕಿ ಕಳಿಸಿಬಿಡುತ್ತಾರೆ, ನನ್ನ ಹೆತ್ತವರನ್ನು ಯಾವುದೊ ಸಿಟ್ಟಿಗೆ ದೂರಬೇಡಿ, ಬೇಕಿದ್ದರೆ ಅವರೇ ನನ್ನನ್ನು ಕರೆದುಕೊಂಡು ಬಂದು, ಅವರ ತಪ್ಪಿಲ್ಲದಿದ್ದರೂ ಕ್ಷಮೆ ಕೇಳುತ್ತಾರೆ, ಸರಿಯೇ ಎಂದು ಸಮಾಧಾನ ಮಾಡುತ್ತಾಳೆ. ಇಲ್ಲಿ ಹೆಣ್ಣಿನ ತಂದೆಯ ಪರಿಸ್ಥಿತಿಯನ್ನು ನೆನೆದರೆ ಕಣ್ದುಂಬಿ ಬರುತ್ತದೆ. ನಿಮ್ಮನ್ನು ಮರೆತುಬಿಟ್ಟಿದ್ದೇನೆ ಎಂದು ದೂರಬೇಡಿ. ನಮ್ಮ ಪುಟ್ಟ ಮಗು ಮುದ್ದಾಗಿ ಬೆಳೆದಿದೆ. ಅದನ್ನು ನೋಡಿದರೆ ನಿಮ್ಮ ಸಿಟ್ಟೆಲ್ಲವು ಕರಗಿಬಿಡುತ್ತದೆ. ಸಿಟ್ಟಾಗಬೇಡಿ, ಕೊರಗಬೇಡಿ, ಚುಚ್ಚು ಮಾತುಗಳಿಂದ ಆಕ್ಷೇಪಿಸಬೇಡಿ, ಇದೋ ಬಂದೆ ಬಿಡುತ್ತಿದ್ದೇನೆ ಎಂದು ಗಂಡನಿಗೆ ಮಾತುಕೊಡುತ್ತಾಳೆ.
ಬರೆಯುತ್ತ ಹೋದರೆ ಇನ್ನೂ ಸಾಕಷ್ಟು ಇವೆ. ಸಧ್ಯಕ್ಕೆ ಇಷ್ಟು ಇರಲಿ. ಒಂದು ಕವನದ ಮೂಲಕ ಎಷ್ಟೊಂದು ಸಂದೇಶಗಳು, ಎಷ್ಟೊಂದು ವಿಷಯಗಳ ಅರಿವು ನಮಗಾಗುವುದಲ್ಲವೇ? ಒಂದು ಸಂಸಾರದ ನೋವು ನಲಿವುಗಳನ್ನು ಕವನದ ಮೂಲಕ ತಿಳಿಯಪಡಿಸಿದ ಕೆ ಎಸ್ ನರಸಿಂಹಸ್ವಾಮಿ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು. - ಜಗದೀಶ ಚಂದ್ರ

THE LETTER FROM A WIFE

Our society has seen numerous transformations in recent years. Many of the customs that were prevalent fifty years or more ago are either changing or going extinct. Going to the mother's house to give birth to the first child was customary in the past. Additionally, it promoted a loving and caring attachment with the mother. The girl used to get some joy and contentment from this. However, in order to care for their daughter's pregnancy and delivery, the daughter's parents are now travelling overseas. At the time, landlines were a commodity, and neither mobile phones nor the internet were known. Letters sent through the post office were the only means of contact. At this point, we are talking about K. S. Narasimha Swamy's poetry "Wife's Letter". The letter from the wife ended up becoming a poetry. It used to be customary for the mother's house to be the site of the first birthing following marriage. This tradition is still observed by some. It does, in a sense, highlight the bond between mother and daughter. For a woman, pregnancy is a challenging period. She shudders at the thought of a future kid and the agony of childbirth. The mother's comfort and support in such a situation offers her incredible courage and mental strength. This circumstance has been established as a practice by our elders through a custom. This is the poem's main idea. A newlywed couple is content with their lives. The wife now need a lot of care because she is pregnant. Who is going to look after her? Every lady wants to be with her mother during this challenging period. Now is the time to visit her mother's house. Going to her mother's house makes her very happy. However, her absence makes the husband feel lonely. Being unable to assist her or leave her puts him in a helpless situation. He is compelled to send his wife to live with her mother. Emails, video calls, WhatsApp, and other services were unheard of during that time, and landlines were extremely uncommon. All correspondence was done through the post office. The wife doesn't notice the separation much if the husband lives with his parents and siblings. However, the wife's absence causes a great deal of anguish if, for some reason, only the husband and wife are at home. It is customary for a pregnant woman to remain at her mother's house until the baby is five months old. A long time apart makes the husband feel lonely and makes each month seem like a year. He experiences sadness, anger, and other uncomfortable emotions as a result of this feeling. He expresses all of his resentment and anxiety on his wife. He exhibits his jealousy by opposing and condemning his wife. He is envious because his wife is content at her mother's place, eating contentedly the delectable meal her mother has prepared, and not having to work. Her husband's annoying behaviour is causing her a great deal of misery. She responds to all of this in a letter. Don't argue that I've forgotten you; I think about you constantly throughout the day and even in my dreams. It feels like we are two when I see the moon and stars in the azure sky. Don't assume that I'm consuming my mother's delectable cooking while I sit here. Our child is just five months old, and I will be returning back home shortly after my sister's wedding, which is in a few days. You used to love me so peacefully when I was in our house with you, but now that I'm gone, you act like a snake against me. Only because of the birth and in accordance with tradition am I here at my mother's house. Wait another two days, and I'll be back. The train from Chitradurga travels to Mysore daily. According to our custom, they put Sobalakki and deliver it through our cherished daughter as I leave my mother's house. They also think the child wearing a silk zari skirt is adorable. Don't be angry with my father. Even if it wasn't his fault, he will beg for pardon when he comes to drop me and the child if you wish. (Anybody will start crying at this point if they see the girl's father's situation.) Don't think I've forgotten about you. Our baby has grown into a lovely child. All of your rage fades away when you see this adorable child. Don't worry, I'll be right back. Through poetry, don't we learn a great deal about human connections, values, and messages? We should extend our sincere gratitude to Sri K. S. Narasimhaswamy for using poetry to capture the traditions, customs, and relationships of an Indian family. - Jagadeesha Chandra ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ

ಸಂಗೀತ – ಸಿ ಅಶ್ವಥ್ / ಕೀಬೋರ್ಡ್ - ಜಗದೀಶ ಚಂದ್ರ
K S Narasimha Swamy / C Ashwath / Keyboard - Jagadeesha Chandra

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು ಬೃಂದಾವನದ ಹಣೆಗೆ ಕುಂಕುಮವನಿಡುವಾಗ ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ ನೀಲಾಂಬರದ ನಡುವೆ ಚಂದಿರನು ಬಂದಾಗ ರೋಹಿಣಿಯು ಬೆಳಗುವಳು ಸನ್ನಿಧಿಯಲಿ || ತೌರ || ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ ಇನ್ನು ತಂಗಿಯ ಮದುವೆ ತಿಂಗಳಿಹುದು ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ ಐದು ತಿಂಗಳ ಕಂದ ನಗುತಲಿಹುದು || ತೌರ ||

ಕಣ್ಣೆದುರಿಗಿರುವಾಗ ನಿಮ್ಮ ಮನ ಉಕ್ಕುವುದು
ಕ್ಷೀರ ಸಾಗರದಂತೆ ಶಾಂತಿಯೊಳಗೆ
ಕಣ್ಣು ಮರೆಯಾದಾಗ ಹೂವಲ್ಲ ಹಾವೆಂದು
ಬಿರುನುಡಿಯ ನಾಡುವುದು ನಿಮಗೆ ತರವೇ
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ ಮೈಸೂರ ಸೇರುವುದು ನಾನು ಬಲ್ಲೆ ನಾಳೆ ಮಂಗಳವಾರ ಮಾರನೆಯ ದಿನ ನವಮಿ ಆಮೇಲೆ ನಿಲ್ಲುವೇನೆ ನಾನು ಇಲ್ಲೇ || ತೌರ ||

ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳಿಸುವರು
ಕಂದನಿಗೆ ಹೊಸ ಜರಿಯ ಲಂಗವುಡಿಸಿ
ತಂದೆಯವರೇ ಬಂದು ತಪ್ಪಾಯಿತೆನ್ನುವರು
ಹೆಣ್ಣು ಹೆತ್ತವರನ್ನು ದೂರಬೇಡಿ

ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ ಅಚ್ಚಮಲ್ಲಿಗೆಯರಳು ಬಿರಿಯುತಿಹುದು ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ ಚುಚ್ಚದಿರಿ ಮೊನೆಯಾದ ಮಾತನೆಸೆದು || ತೌರ ||

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...