Friday, August 15, 2025

Krishna Enabarade/Purandaradasa /Keyboard - Jagadeesha Chandra /ದೇವದಾಸಿ ...


DEVOTIONAL SONG - KRISHNA ENABARADE (RECITE KRISHNA'S NAME) - PURANDARA DASA

According to Purandara Dasa, if the name of God is spoken every day (the name 'Krishna' in the devotional song "Krishna Enabardhe"), it will bring good fortune. The ability to speak well has been bestowed upon man. Thus, don't waste your words; think of Krishna and talk kindly, and all of your problems will be answered.

The ability to speak well has been bestowed upon man.  Thus, don't waste your words; think of Krishna and talk kindly, and all of your problems will be answered.

Occasionally, when you're moving around, think of Krishna's name. when your body feels weak, think of it again; if you're having a disagreement while speaking, focus on Krishna; if you're carrying something heavy, saying Krishna's name makes it easier to lift. Repeating the name of Krishna brings us good, whether we are happy or sad. Although we have thousands of things to do every day, remembering the name of Krishna brings us calm. He has given several examples and extolled the virtues of the name.

As you play with children, remember the name of Krishna; even when you are sitting on a soft bed and relaxing, remember the name of God; and since we believe that God is both the cause and the end of our problems, remember his name and exalt the name of Krishna, who is also Purandara Vittala, the Garuda-riding deity.

One might gain merit by singing songs like these in a melodic or listened manner.  In a nutshell, this divine name aims for everyone to be nice by speaking effectively or utilising their tongue appropriately. 

This song was adopted in Kannada film "Devadasi", music scored by G K Venkatesh and melociously sung by Vani Jayram.

"ಕೃಷ್ಣ ಎನಬಾರದೆ" - ಪುರಂದರ ದಾಸರ ದೇವರ ನಾಮ

ಪುರಂದರ ದಾಸರ "ಕೃಷ್ಣ ಎನಬಾರದೆ" ಎಂಬ ದೇವರನಾಮ ದಲ್ಲಿ ಕೃಷ್ಣನ ಹೆಸರನ್ನು ದಿನ ನಿತ್ಯ ಆಗಾಗ್ಗೆ ಹೇಳುತ್ತಿದ್ದರೆ ಪುಣ್ಯ ಸಿಗುತ್ತದೆ ಎಂದಿದ್ದಾರೆ. ಮನುಷ್ಯ ಜನ್ಮ ನಮಗೆ ಬಂದಿದೆ, ದೇವರು ಮಾತನಾಡಲು ನಾಲಿಗೆ ಕೊಟ್ಟಿದ್ದಾನೆ. ಹಾಗಿದ್ದಮೇಲೆ ಮಾತುಗಳನ್ನು ವ್ಯರ್ಥಮಾಡಬೇಡಿ, ಒಳ್ಳೆಯ ಮಾತುಗಳನ್ನು ಆಡಿ, ಕೃಷ್ಣ ಎಂದು ನೆನೆಯಿರಿ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುವುದು ಎನ್ನುತ್ತಾರೆ.

ಅಲ್ಲಿ ಇಲ್ಲಿ ಓಡಾಡುವಾಗ ಆಗಾಗ್ಗೆ ಕೃಷ್ಣ ಎನ್ನಿ; ಮೈಮುರಿದು ಏಳುವಾಗ ಕೃಷ್ಣ ಎಂದುಕೊಂಡು ಏಳಿ; ಮಾತು ವಿಕೋಪಕ್ಕೆ ಹೋಗುತ್ತಿದೆ ಎನ್ನಿಸಿದಾಗ ಕೃಷ್ಣ ಎಂದು ಧ್ಯಾನಿಸಿ ಬಿಡಿ; ಏನಾದರೂ ಭಾರ ಹೊರುವಾಗ ಕೃಷ್ಣ ಎನ್ನುತ್ತಾ ಎತ್ತಿಕೊಳ್ಳಿ ಸುಲಭವಾಗುತ್ತದೆ; ದುಃಖವಿದ್ದಾಗಲೂ, ತಮಾಷೆ ಮಾಡುವಾಗಲೂ ಕೃಷ್ಣನ ನಾಮ ನಮಗೆ ಒಳ್ಳೆಯದನ್ನೇ ಮಾಡುತ್ತದೆ; ಪ್ರತಿನಿತ್ಯ ಸಾವಿರಾರು ಕೆಲಸಗಳಿರುತ್ತದೆ, ಆಗಲೂ ಕೃಷ್ಣನ ನಾಮಸ್ಮರಣೆ ನಮಗೆ ಶಮನ ನೀಡುತ್ತದೆ; ಹೀಗೆ ಹಲವಾರು ಉದಾಹರಣೆಗಳನ್ನು ಕೊಟ್ಟು ಕೃಷ್ಣನ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ.

ಮಕ್ಕಳನ್ನು ಮುದ್ದಾಡುವಾಗಲೂ ಕೃಷ್ಣನ ನಾಮಸ್ಮರಣೆಯಾಗಲಿ; ಮೆತ್ತನೆಯ ಹಾಸಿಗೆಯ ಮೇಲೆ ಕುಳಿತು ವಿರಮಿಸುವಾಗಲೂ ದೇವನ ನಾಮಸ್ಮರಣೆ ಬರಲಿ; ಕಷ್ಟಗಳನ್ನು ಕೊಡುವವನೂ, ನಿವಾರಿಸುವವನೂ ದೇವರೇ ಎಂಬ ನಂಬಿಕೆಯಿಂದ ದೇವರ ನಾಮಸ್ಮರಣೆ ಮಾಡಿ, ಆ ಗರುಡವಾಹನನಾದ ಪುರಂದರ ವಿಠಲನೂ ಕೃಷ್ಣನೇ ಎಂದು ಕೃಷ್ಣನ ನಾಮದ ಮಹಿಮೆಯನ್ನು ಎತ್ತಿ ಹಿಡಿದ್ದಾರೆ. ಇಂತಹ ಹಾಡುಗಳನ್ನು ಇಂಪಾಗಿ ಹಾಡಿದರೆ, ಹಾಡಲಾಗದಿದ್ದರೆ ಕೇಳಿಯಾದರೂ ಪುಣ್ಯ ಕಟ್ಟಿಕೊಳ್ಳಬಹುದಲ್ಲವೇ? ಒಟ್ಟಾಗಿ ಹೇಳಬೇಕೆಂದರೆ ನಾಲಿಗೆಯನ್ನು ಅಂದರೆ ಮಾತುಗಳನ್ನು ಸರಿಯಾಗಿ ಆಡಿ ಎಲ್ಲರೂ ಚೆನ್ನಾಗಿ ಇರಬೇಕು ಎಂಬುದೇ ಈ ದೇವರ ನಾಮದ ಉದ್ದೇಶ.

ಈ ದೇವರನಾಮವನ್ನು ಕನ್ನಡದ ದೇವದಾಸಿ ಎಂಬ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಸಂಗೀತಜ್ಞ ಜಿ.ಕೆ. ವೆಂಕಟೇಶ್ ಹಾಗೂ ಮಧುರವಾಗಿ ಹಾಡಿರುವವರು ವಾಣಿ ಜಯರಾಮ್ ಅವರು.

ಬಿ ಎಸ್ ಜಗದೀಶ ಚಂದ್ರ

ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಶ್ರೀ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಶ್ರೀ ಕೃಷ್ಣ ಎನಬಾರದೆ ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ ಮುದ್ದು ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ದುರಿತರಾಶಿಗಳನು ತರಿದು ಬಿಸಾಡುವ ಕೃಷ್ಣ ಎನಬಾರದೆ ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆ

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...