ಅಳುವುದು ಯಾತಕೊ ರಂಗ / ಪುರಂದರದಾಸರು
Aluvudyatako Ranga (Ranga, why are you crying?) / Purandaradasaru
Purandaradasa states that this devotional song was composed in honour of Beluru Chennakesava. This serves as both a lullaby and a way to comfort the weeping Balakrishna. The song's lyrics describe the birth of Krishna, his early years spent with Yashoda, and the miracle he accomplished. Purandara Dasa asks whether he experienced any bad visions for his bravery, if he fractured his leg dancing on the snake Kalinga, if he hurt his finger raising Govardhan Hill, etc. These were all from his childhood adventures. Purandara Dasa wonders if the factors mentioned above are the source of his tears.
ಬೇಲೂರಿನ ಚೆನ್ನಕೇಶವ ದೇವರ ಮೇಲೆ ಪುರಂದರದಾಸರು ಬರೆದಿರುವ ದೇವರನಾಮ ಇದು. ಆದರೆ ಈ ದೇವರನಾಮವನ್ನು ಜೋಗುಳವನ್ನಾಗಿ ಮಾಡಿ, ಹಾಗೆಯೇ ಅಳುವ ಬಾಲಕೃಷ್ಣನನ್ನು ಸಮಾಧಾನ ಮಾಡುವ ಹಾಡನ್ನಾಗಿಯೂ ಪರಿವರ್ತಿಸಿದ್ದಾರೆ. ಈ ಮೂಲಕ ಕೃಷ್ಣನ ಹುಟ್ಟು, ಯಶೋದೆಯ ಬಳಿ ಕಳೆದ ಬಾಲ್ಯದಿನಗಳು, ಪುಟ್ಟ ಮಗುವಾಗಿ ಮಾಡಿದ ಪವಾಡ ಎಲ್ಲವನ್ನು ಚಿತ್ರಿಸಿದ್ದಾರೆ. ಈ ಬಾಲ್ಯದ ಕಾಲದಲ್ಲಿ ಮಾಡಿದ ಸಾಹಸ ಕೃತ್ಯಗಳಿಂದ ದೃಷ್ಟಿ ತಾಕಿತೇ, ಕಾಳಿಂಗನ ಮೇಲೆ ನರ್ತಿಸಿದುದಕ್ಕೆ ಕಾಲು ಉಳುಕಿತೇ, ಗೋವರ್ಧನ ಗಿರಿಯನ್ನು ಬೆರಳಲ್ಲಿ ಎತ್ತಿದುದಕ್ಕೆ ಬೆರಳು ನೋವಾಯಿತೇ ಎಂದು ಪ್ರಶ್ನಿಸಿ ಅದಕ್ಕಾಗಿ ಅಳುತ್ತಿರುವಿಯೇನೋ ಎಂದು ಕೇಳುತ್ತಾರೆ. ಸಮಯದ ಅಭಾವದಿಂದಾಗಿ ಮೂರು ಚರಣಗಳನ್ನು ನುಡಿಸಿಲ್ಲ. ನುಡಿಸಿರುವ ಉಳಿದ ಚರಣದಂತೆಯೇ ಅದನ್ನೂ ಹಾಡಬಹುದು.
ಅಳುವದು ಯಾತಕೊ ರಂಗಾ |
ಅತ್ತರೆ ಅಂಜಿಸುವನೋ ಗುಮ್ಮಾ |ಪ|
ಜೋ ಜೋ ಜೋ ಜೋ
ಪುಟ್ಟಿದ ಏಳು ದಿನದಲ್ಲಿ
ಕೊಂದೆ ದುಷ್ಟ ಪೂತನಿಯಾ /
ವಿಷ ಮೊಲೆ ಹಾಲನು ಉಂಡಾ ಕಾರಣ
ದೃಷ್ಟಿ ಯು ತಾಕಿತೆ ಕಂದಯ್ಯ //
ಜೋ ಜೋ ಜೋ ಜೋ
ಶರಣು ವೇಲಾಪುರದ
ಚೆಲುವ ಚೆನ್ನಿಗರಾಯ /
ಶರಣರ ಸಲಹುವ ದೊರೆ ನೀನಲ್ಲವೇ
ಪುರಂದರ ವಿಠಲ ಗೋವಿಂದ //
ಜೋ ಜೋ ಜೋ ಜೋ
ಈ ಚರಣಗಳನ್ನು ನುಡಿಸಿಲ್ಲ
ಬಾಲ್ಯದಿ ಗೋಪಾಲರ
ಒಡಗೂಡಿ ಕಾಳಿಂಗನ
ಮಡುವನ್ನೂ ಕಲಕಿದ ಕಾರಣ |
ಕಾಲು ಉಳುಕಿತೆ ರಂಗಯ್ಯ //
ತುರುವ ಕಾಯಲು ಪೋಗಿ |
ಭರದಿಂದ ಮಳೆಗೆರೆಯೆ
ಬೆರಳಲ್ಲಿ ಬೆಟ್ಟವನೆತ್ತಿದ ಕಾರಣ |
ಬೆರಳು ಉಳುಕಿತೇ ಕಂದಯ್ಯ //
ವಸುದೇವ ಸುತನಾಗಿ |
ಅಸುರರನೂ ಮರ್ದಿಸಿದೆ
ಬಸುರಲಿ ಬೊಮ್ಮನ ಪಡೆದ ಕಾರಣ |
ಕಿಸರು ತಾಕಿತೆ ರಂಗಯ್ಯ //
+9 T280 L291 R65 spd85
No comments:
Post a Comment