ಧನಲಕ್ಷ್ಮೀ ದಯೆ ತೋರಿ ಬಾಮ್ಮ
ಚಿತ್ರ - ಧನಲಕ್ಷ್ಮಿ/ ಸಂಗೀತ - ಎಂ ರಂಗರಾವ್ / ಗಾಯಕ - ಪಿ ಬಿ ಶ್ರೀನಿವಾಸ್ / ಸಾಹಿತ್ಯ - ಚಿ ಉದಯಶಂಕರ
Dhanalakshmi daye tori baamma
Singer - P B Srinivas / Music - M Rangarao / Lyrics - Chi Udayashankara / Film - Dhanalakshmi
This song is from the Kannada movie Dhanalakshmi, which starred Manjula and Srinath. P B Srinivas is the singer, and M Rangarao has composed the music. Chi Udayashankar wrote the song's lyrics. The actor for this song is Srinath. The devotional song of Godess Dhanalakshmi is extremely significant, regardless of the film's plot and setting. Rangarao, who composed excellent music, and P B Srinivas, who sang the melody, should both be commended at the same time. I've tried playing this song on the keyboard.
ಶ್ರೀನಾಥ್ ಮಂಜುಳಾ ನಟಿಸಿರುವ ಧನಲಕ್ಷ್ಮೀ ಎಂಬ ಚಿತ್ರದ ಹಾಡು ಇದು. ಹಾಡಿರುವವರು ಪಿ ಬಿ ಶ್ರೀನಿವಾಸ್, ಸಂಗೀತ ನೀಡಿದ್ದಾರೆ ಎಂ ರಂಗರಾವ್ ಅವರು. ಹಾಡಿನ ಸಾಹಿತ್ಯ ಚಿ ಉದಯಶಂಕರ ಅವರದು. ಹಾಡಿಗೆ ನಟಿಸಿದ್ದಾರೆ ಶ್ರೀನಾಥ್ ಅವರು. ಚಿತ್ರದ ಕಥೆ , ಸಂದರ್ಭ ಏನೇ ಇರಬಹುದು ಆದರೆ ಧನಲಕ್ಷ್ಮಿಯ ಸುಂದರ ವರ್ಣನೆ ಇರುವ ಹಾಡಿನ ಸಾಹಿತ್ಯವನ್ನು ಮೆಚ್ಚಲೇ ಬೇಕು ಹಾಗೆಯೆ ಮಧುರವಾಗಿ ಹಾಡಿರುವ ಪಿ ಬಿ ಶ್ರೀನಿವಾಸ್ ಅವರಿಗೂ ಹಾಗು ಉತ್ತಮ ಸಂಗೀತ ಸಂಯೋಜನೆ ನೀಡಿರುವ ರಂಗರಾವ್ ಅವರಿಗೂ ಅಭಿನಂದನೆ ಸಲ್ಲಿಸಬೇಕು .
ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ | ಕರವೀರ ಪುರದಲ್ಲಿ ಬಂದು ನೆಲೆಸಿ
ಗತಿ ನೀನೇ ಎಂದವರ ಕೈ ಬಿಡದೆ ಹರಸಿ | ಕಾಪಾಡುವ ತಾಯೆ ಬಾರೆ ಕನಿಕರಿಸಿ ||
ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ |
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ | ಸಿರಿವಂತರ ಸೆರೆಯ ತೊರೆದು ಬಾರಮ್ಮ ||
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ | ದಿವ್ಯ ದರುಶನ ನೀಡೆ ಒಲಿದು ಬಾರಮ್ಮ |
ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ ತಡೆದರದಿ ಪೂರೈಸಿ ಬೇಗ ಸಲಹಮ್ಮ ||ಧನಲಕ್ಷ್ಮೀ||
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ ಸುರಲೋಕದ ಪಾರಿಜಾತ ಅರ್ಪಿಸುವೆ |
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು | ಸಿರಿ ಪಾದ ಕಮಲಗಳಿಂದೆ ಪೂಜಿಸುವೆ ||ಧನಲಕ್ಷ್ಮೀ||
No comments:
Post a Comment