ಮನವೇ ಮಂದಿರ ನ್ಯಾಯ ದೇಗುಲ / Manave Mandira
ಗಾಯಕರು: ಪಿ.ಬಿ.ಶ್ರೀನಿವಾಸ್ / ಸಂಗೀತ : ವಿಜಯಭಾಸ್ಕರ್ / ಸಾಹಿತ್ಯ: ನಂಜರಾಜ್ ಅರಸ್ / ಚಿತ್ರ: ತೂಗುದೀಪ / ಕೀಬೋರ್ಡ್ - ಜಗದೀಶ ಚಂದ್ರ
P B Srinivas / Music - Vijaya Bhaskar /Lyrics - Nanjaraj Urs / Film - Thoogu Deepa / Keyboard - Jagadeesha Chandra
P B Srinivas, who has a melodic voice in some of the oldest melody songs, sings this song, which was composed as well by Vijaya Bhaskar. Nanjaraja Aras is the lyricist. This song is based on the Kalawati raga. It is equivalent to the Valachi Raga in Carnatic music. The lyrics is equally appropriate to a very appealing tune.
This poem advises us how to be a good person to lead an excellent life. We should be mentally calm, and our good deeds are like a temple, our inner beauty is like God, and our love and devotion are like lamps.
We should value mercy, love, affection, and proper norms and regulations in order to have a decent life. Our body and mind turn into a temple when we are away from distrust, envy, and fraud aggression.
If we believe that everyone around us is equal, our hearts will be filled with love for God. This is what the poem wishes to convey.ಹಳೆಯ ಕೆಲವು ಮಧುರ ಹಾಡುಗಳಲ್ಲಿ ಮಧುರ ಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಅವರು ಹಾಡಿರುವ, ವಿಜಯಭಾಸ್ಕರ್ ಅವರು ಸಂಗೀತ ನೀಡಿರುವ ಈ ಹಾಡು ಸಹ ಒಂದು. ಸಾಹಿತ್ಯ ನಂಜರಾಜ ಅರಸ್ ಅವರದು. ಇದು ಕಲಾವತಿ ಎಂಬ ರಾಗದ ಆಧಾರಿತ ಹಾಡು. ಕರ್ನಾಟಕ ಸಂಗೀತದಲ್ಲಿ ಇದು ವಲಚಿ ಎಂಬ ರಾಗಕ್ಕೆ ಸಮಾನಾಂತರವಾಗಿದೆ. ಬಹಳ ಮಧುರವಾದ ರಾಗ ಅಷ್ಟೇ ಸೊಗಸಾಗಿ ಹಾಡಿಗೆ ಅಳವಡಿಸಿದ್ದಾರೆ.
ಒಳ್ಳೆಯ ಬದುಕನ್ನು ಸಾಗಿಸಲು ನಾವು ಹೇಗೆ ಇರಬೇಕು ಎಂಬ ಸಂದೇಶವನ್ನು ಈ ಕವನ ನೀಡುತ್ತದೆ. ಮನಸ್ಸು ಚೆನ್ನಾಗಿರಬೇಕು, ನ್ಯಾಯಯುತವಾದ ನಡವಳಿಕೆ ಮಂದಿರವಾದರೆ ನಮ್ಮ ಅಂತರಂಗದ ಚೆಲುವು ದೇವರಾಗಿ ನಾವು ತೋರುವ ಪ್ರೀತಿಯೇ ನಂದಾದೀಪವಾಗುತ್ತದೆ.
ಜೀವನದಲ್ಲಿ ಕರುಣೆಗೆ ಮಮತೆಗೆ, ಒಳ್ಳೆಯ ನೀತಿ ನಿಯಮಗಳಿಗೆ ಸ್ಥಾನವಾಗಿದ್ದರೆ ಅದು ಸಿಹಿ ತುಂಬಿದ ಜೇನುಗೂಡಾಗುತ್ತದೆ. ಸಂಶಯ, ಅಸೂಯೆ, ವಂಚನೆ ಹಿಂಸೆ ಇವುಗಳಿಂದ ದೂರವಿದ್ದರೆ ನಮ್ಮ ದೇಹ ಮನಸ್ಸುಗಳೇ ಒಂದು ದೇವಾಲಯವಾಗುತ್ತದೆ.
ನಮ್ಮ ಸುತ್ತಮುತ್ತಲಿರುವ ಎಲ್ಲರೂ ಒಂದೇ ಎಂಬ ಭಾವವು ನಮ್ಮಲ್ಲಿದ್ದರೆ ಆಗ ನಮ್ಮ ಹೃದಯವೇ ದೇವನಿರುವ ಪ್ರೇಮಮಂದಿರವಾಗುತ್ತದೆ. ಇದೆ ಈ ಕವನದ ಆಶಯ.
ಮನವೇ ಮಂದಿರ ನ್ಯಾಯ ದೇಗುಲ
ಚೆಲುವೆ ದೇವರು ಒಲವೇ ದೀವಿಗೆ
ಮನವೇ ಮಂದಿರ.......ಆಆಆ
ಕರುಣೆ ಮಮತೆ ನೀತಿ ನಿಯಮ
ಇರಲು ಬದುಕು ಜೇ..ನು ಗೂಡು
ಬೇಡ ಸಂಶಯ ಭ್ರಾಂತಿ ವಂಚನೆ
ಹಿಂಸೆ ತುಂಬಿದ ವಿಷದ ವಚನ
ಮನವೇ ಮಂದಿರ.......ಆಆಆ
ನಾನು ನೀನು ಅವನು ಇವಳು
ಎಲ್ಲ ಒಂದೇ ತಾಯ ಸುತರು
ಎಂಬ ಭಾವವು ಬಂದ ಹೃದಯವು
ದೇವನಿರುವ ಪ್ರೇಮ ನಿಲಯ
ಮನವೇ ಮಂದಿರ....ಆಆಆ....ಆಆಆ
6 45 137 329 Da 291 240 77VSa 85
No comments:
Post a Comment