ಜಯತೇ, ಜಯತೇ, ಸತ್ಯಮೇವ ಜಯತೆ
Jayathe Jayathe Sathyameva Jayathe (The truth always wins)
ರಚನೆ - ಕು ರಾ ಸೀತಾರಾಮ ಶಾಸ್ತ್ರಿ / ಸಂಗೀತ - ಜಯದೇವ್ / ಗಾಯಕರು - ಮನ್ನಾಡೇ, ಅಂಬರ್ ಕುಮಾರ್ / ಕೃಷ್ಣಾ ಕಾಳೆ / ಚಿತ್ರ - ಕಲ್ಪವೃಕ್ಷ / ಈ ಹಾಡನ್ನು ಮಠ ಚಿತ್ರದಲ್ಲೂ ಅಳವಡಿಸಿಕೊಳ್ಳಲಾಗಿದೆ.
Lyrics - Ku Ra Seetharama Shastri / Music - Jayadev / Singer - Mannadey. Ambar Kumar, Krishna Kaale / Film - Kalpavruksha / This song is also adopted in the movie 'Mata' ಮಠ
Sri Ku Ra Seetharama Sastry's song brilliantly expresses how we should live as authentic human beings.
Do not plant a neem tree and expect sweetness from it. This suggests that we reap what we sow. Do not become a devil by causing harm to others. Always remember that if you desire evil on others, bad will come to you as well, and that truth always wins.
Everyone benefits from sweet words, just like honey. Such people live divine lives. Keep your words nice and positive. The truth always wins.
Having kindness and beautiful sentiments in your heart is like a temple to God. All wealth is available to those who live a decent life. Live a simple life and be honest. The truth always wins.
Don't worry about whether it's right or wrong; just do what is right and that makes you happy. A person's self-confidence and independence are crucial. With this, you will receive what you desire in the manner that "Kalpavruksha" provides. Truth is always victorious.
ಎಂದಿಗೂ ಸತ್ಯಕ್ಕೆ ಜಯ ಎಂದು ಹೇಳುತ್ತಾ ನಾವು ನಿಜವಾದ ಮಾನವರಾಗಿ ಹೇಗೆ ಬಾಳಬೇಕು ಎಂದು ಹಾಡಿನ ಮೂಲಕ ಸೊಗಸಾಗಿ ಶ್ರೀ ಕು ರಾ ಸೀತಾರಾಮಶಾಸ್ತ್ರಿ ಅವರು ತಿಳಿಸಿಕೊಟ್ಟಿದ್ದಾರೆ.
ಕಹಿಯಾದ ಬೇವನ್ನು ಬಿತ್ತಿ ಅದರಲ್ಲಿ ಸಿಹಿಯನ್ನು ಪಡೆಯಲು ಪ್ರಯತ್ನಿಸಬೇಡ, ಅಂದರೆ ನಾವು ಏನನ್ನು ಬಿತ್ತುತ್ತೇವೋ ಅದರ ಫಲವನ್ನೇ ಪಡೆಯುತ್ತೇವೆ ಎಂದರ್ಥ. ಇನ್ನೊಬ್ಬರಿಗೆ ನೋವು ಕೊಟ್ಟು ಅವರನ್ನು ಅಳಿಸಿ ರಾಕ್ಷಸನಾಗಬೇಡ, ಇನ್ನೊಬ್ಬರಿಗೆ ಕೆಡುಕನ್ನು ಬಯಸಿದರೆ ನಿನಗೂ ಕೆಡುಕುಂಟಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಸತ್ಯವಂತರಾಗಿರಿ, ಸತ್ಯಕ್ಕೆ ಎಂದಿಗೂ ಜಯ.
ಮಧುವಿನಂತೆ ಆಡುವ ಸಿಹಿ ಮಾತುಗಳು ಎಲ್ಲರಿಗೂ ಒಳ್ಳೆಯದು ಮಾಡುತ್ತದೆ. ಅಂತಹವರ ಜೀವನ ದೈವಿಕವಾಗಿರುತ್ತದೆ. ಒಳ್ಳೆಯ ಮಾತುಗಳಿಂದ ನಡತೆ ಉಳಿಸಿಕೊಳ್ಳಿ, ಘನತೆ ಬೆಳೆಸಿಕೊಳ್ಳಿ . ಸತ್ಯ ಎನ್ನುವುದು ಇದ್ದರೆ ಸೋಲು ಎಂದಿಗೂ ಇರುವುದಿಲ್ಲ.
ಮಧುರವಾದ ಭಾವ ತುಂಬಿದ್ದಾರೆ ಅದು ದೇವ ಮಂದಿರವಿದ್ದಂತೆ. ಸಾತ್ವಿಕ ಜೀವನ ನಡೆಸುವವನಿಗೆ ಎಲ್ಲ ನಿಧಿಗಳು ನಿಲುಕುತ್ತದೆ. ಸರಳಜೀವಿಯಾಗಿ ಸತ್ಯವಂತನಾಗಿದ್ದರಂತೂ ಎಲ್ಲವನ್ನೂ ಗೆಲ್ಲಬಹುದು.
ಮಾಡುವ ಕೆಲಸ ಸರಿಯೋ ಇಲ್ಲವೋ ಎಂಬ ಅಳುಕು ಇರಬಾರದು. ಮನುಷ್ಯನಿಗೆ ಆತ್ಮಶಕ್ತಿ, ಆತ್ಮವಿಶ್ವಾಸ ಬಹಳ ಮುಖ್ಯ. ಇವುಗಳಿದ್ದರೆ ಕಲ್ಪವೃಕ್ಷದಂತೆ. ಬಯಸಿದ್ದೆಲ್ಲವೂ ಸಿಗುತ್ತದೆ. ಸತ್ಯವಂತರಾಗಿರಿ, ಸತ್ಯಕ್ಕೆ ಎಂದಿಗೂ ಜಯ.
ಹಾಡಿನ ಸಾಹಿತ್ಯ
ಜಯತೇ, ಜಯತೇ, ಜಯತೇ,
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ,
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ..
ಕೆಡುಕ ಬಯಸೆ ಕೆಡುವೆ ಖಚಿತ...
ಕೆಡುಕ ಬಯಸೆ ಕೆಡುವೆ ಖಚಿತ, ಪಡೆವೆ ನೋವು ಖಂಡಿತ..
ಸತ್ಯವಾದ ಘನತೆ ಸೋಲೇ ಕಾಣದಂತೆ.. //
ಮಧುವಿಗಿಂತ ಮದುರವಾದ ಮಾತು ಮನಸು ಕಾಯಕ,
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ..
ಉಳಿಸಿಕೊಳ್ಳಿ ಹಿರಿಯ ನಡತೆ...
ಉಳಿಸಿಕೊಳ್ಳಿ ಹಿರಿಯ ನಡತೆ, ಗಳಿಸಿಕೊಳ್ಳಿ ಮಾನ್ಯತೆ..
ಸತ್ಯವಾದ ಘನತೆ ಸೋಲೇ ಕಾಣದಂತೆ.. //
ಮಧುರ ಭಾವ ತುಂಬಿದಂಥ ಮನಸೇ ದೇವಮಂದಿರ,
ಸಾತ್ವಿಕನಿಗೆ ನಿಲುಕದಂಥ ನಿಧಿಯೇ ಇಲ್ಲ ಬಲ್ಲಿರಾ..
ಸರಳಜೀವಿಗೆಂದಿಗೂ..
ಸರಳಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರ...
ಸತ್ಯವಾದ ಘನತೆ ಸೋಲೇ ಕಾಣದಂತೆ.. //
ಆಸೆ ಫಲಿಸದೇನೋ ಎಂದು ಅಳುಕಲೇಕೆ ಅಳ್ಳೆದೆ,
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಯದೆ..
ಆತ್ಮಶಕ್ತಿಗಿಂತ ಬೇರೆ..
ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ...
ಸತ್ಯವಾದ ಘನತೆ ಸೋಲೇ ಕಾಣದಂತೆ.. //
12 40 137 329 Da 291 149 77VSa 90
No comments:
Post a Comment