Wednesday, June 11, 2025

Navya Lokada kanasu / Lyrics & Music -Jahadeesha Chandra/ನವ್ಯಲೋಕದ ಕನಸು/ ...


ನವ್ಯಲೋಕ / New World 

ಸಂಗೀತ, ಸಾಹಿತ್ಯ - ಜಗದೀಶ ಚಂದ್ರ / Lyrics & Music -Jahadeesha Chandra

Both the poem and the music are my own creations. I've used the keyboard to play the same song. Share the video with other music lovers once you've listened to the song. 

ಈ ಕವನಕ್ಕೆ ರಾಗ ಸಂಯೋಜಿಸಿ ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಕೇಳಿ ಇತರರೊಂದಿಗೂ ಹಂಚಿಕೊಂಡು ಉತ್ತೇಜಿಸಿ.  

ನಾನೆ ಬರೆದ ನವ್ಯಲೋಕ ಎಂಬ ಕವನದ ಆಶಯ ಹೀಗಿದೆ.  ಇಂದು ಯಾರನ್ನು ಕೇಳಿದರೂ ಅದಿಲ್ಲ,  ಇದಿಲ್ಲ, ಹೀಗಿರಬೇಕು, ಹಾಗಿರಬೇಕು ಎಂದು ಹೇಳುವವರೇ ಹೊರತು ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಯಾರೂ ಸಂತೋಷ ಪಡುವುದಿಲ್ಲ. ಅದಕ್ಕೆ ತಕ್ಕಂತೆ ಇಲ್ಲಿ ದುಃಖ, ದ್ವೇಷ, ಸ್ವಾರ್ಥ, ಹಣದ ದಾಹ ಇವುಗಳೇ ಹೆಚ್ಚಾಗಿ ಪ್ರೀತಿ,  ಮಮತೆ, ಗೌರವ,  ಇವುಗಳು  ಕಣ್ಮರೆಯಾಗುತ್ತಿವೆ. ಹೀಗಾಗಿ ಕಣ್ಮರೆಯಾಗಿರುವ ಇವೆಲ್ಲವೂ ನಮಗೆ ಸಿಗಲಿ ಎಂಬುದು ಕನಸೇ ಆಗಿದೆ. ಆ ಕನಸು ನನಸಾಗಲಿ ಎಂಬ ಬಯಕೆ ಕವನದಲ್ಲಿ ಮೂಡಿದೆ. ಜಾತಿಧರ್ಮದ ಹಂಗೇ ಇಲ್ಲದ ಈ ಲೋಕದಲ್ಲಿ ಪ್ರೀತಿ, ಗೌರವ, ಮಮತೆ ಎಲ್ಲವೂ ಮೇಳೈಸಿ ಪರಮಾತ್ಮನೆಂಬ ಒಂದು ಶಕ್ತಿಯು ನಮ್ಮನ್ನು ಕಾಯುವುದು. ಈ ಹೊಸ ಜಗತ್ತಿನಲ್ಲಿ ದುಃಖ ದ್ವೇಷಗಳು ಇರುವುದಿಲ್ಲ, ಅಲ್ಲಿ ಎಲ್ಲಾ ಅನುಕೂಲಗಳು ಇದ್ದು ಸರ್ವ ಸುಖವನ್ನು ನೀಡುವುದು. ಹಕ್ಕಿಗಳ ಕಲರವ, ಬಣ್ಣಬಣ್ಣದ ಹೂ ತೋಟ ಇವೆಲ್ಲವೂ ಮನಸಿಗೆ ಮುದ ನೀಡುವುದು.  

I wrote this poetry, and the following are its wishes. Everyone you come across today claims to be unhappy. They gripe about a lot of the bad things that happen in our society. We ourselves can witness sadness, jealousy, self-centredness, etc., taking precedence over tenderness, respect, and love. We want to be granted respect, love, affection, and other good things. There won't be any grief in this new world; instead, there will be enjoyment and all the advantages. The sight of blossoming flowers and chattering birds is a visual delight. We are protected by an unseen superpower that grants us all of our desires. The poem reflects all of these desires. 

ನವ್ಯಲೋಕ / New World

ಹೊಸ ಜಗತ್ತಿನ ಕನಸನು ಕಂಡು ನವ್ಯಲೋಕವ ಕಟ್ಟುವಾ ದುಃಖ ದ್ವೇಶ ದೂರ ಸರಿಸಿ ಅಲ್ಲೆಎಲ್ಲರು ನೆಲೆಸುವಾ // ಸೂರ್ಯನ ಕಿರಣ ಬೆಚ್ಚನೆ ಮಾಡಿ ಮನೆಗೆ ಹಿತವನು ಕೊಡುವುದು ಚಂದ್ರನ ಕಿರಣ ತಂಪನು ನೀಡಿ ಕಚುಕುಳಿಯನ್ನು ಕೊಡುವುದು ಬೆಳಕು ನೆರಳು ಸಮದಿ ಬೆರೆತು ಸರ್ವ ಸುಖವನು ನೀಡುವುದು // ಬಣ್ಣ ಬಣ್ಣದ ಹಕ್ಕಿಯ ದನಿಯು ಮನಕ್ಕೆ ರಂಗನು ಹರಡಿಹುದು ಬಣ್ಣ ಬಣ್ಣದ ಹೂವು ಗಳೆಲ್ಲವು ಇಂಪು ಕಂಪನು ನೀಡಿಹವು ಇಂದ್ರಛಾಪವು ಜನಗಳ ನಡುವೆ ಸೇತು ಬಂಧವು ಆಗಿಹುದು // ನವ್ಯಲೋಕದ ಎಲ್ಲ ಜನರ ಕನಸು ನನಸು ಆಗಿಹುದು ಜಾತಿಧರ್ಮದ ಹಂಗೆ ಇಲ್ಲದೆ ಪ್ರೀತಿ ಗೌರವ ಬೆರೆತಿಹುದು ಜಗದ ಒಡೆಯನ ಮಮತೆ ಪ್ರೀತಿ ಸದಾ ಕಾಲವು ದೊರಕಿಹುದು // +4 vol065 T280 L291 split T271 L149 R077VSa spd70

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...