Wednesday, July 9, 2025

Acharya Guruve / Lyrics & Music- Jagadeesha Chandra / ಆಚಾರ್ಯ ಗುರುವೇ / ರಚ...


Role of Acharya in our life 

A significant role in our faith is played by the guru.  In the Upanishad, Acharya Devo Bhava is mentioned.  The trinity—Brahma, Vishnu, and Maheshwara—are regarded as the Guru in our eternal shloka.  In addition, parents take the role of the guru.  Guru is everything to us after the parents.

To succeed in life, you must put in a lot of effort.  For this reason, a lot of people are honoured in our religion in lieu of the Guru.  A guru's teachings are a blessing for people seeking prosperity.  One who dispels darkness and introduces light is a great guru. 

A summary of the poem has been given below:

O Acharya, Sadguru, I admire your holy feet. May my gurus be the great sages of our past times, such as Vyasa, Saptarishi, Vasistha, and Valmiki, lead me to the path of salvation. 

Hold my hands, listen to me, and raise me up, O Guru, the world's ruler.  For salvation, I bow down to the feet of acharyas like Shankara, Ramanuja, Madhva, Buddha, Chinmayananda, Ramakrishna, Paramhansa, and Vivekananda.

ನಮ್ಮ ಜೀವನದಲ್ಲಿ ಗುರುವಿನ ಮಹತ್ವ 

ನಮ್ಮ ಸನಾತನ ಧರ್ಮದಲ್ಲಿ ಗುರುವಿಗೆ ಬಹಳ ಮಹತ್ವದ ಸ್ಥಾನವನ್ನು ಕೊಟ್ಟಿದ್ದಾರೆ. ಉಪನಿಷತ್ತಿನಲ್ಲಿ ಆಚಾರ್ಯದೇವೋ ಭವ ಎಂದಿದ್ದಾರೆ. ನಮ್ಮ ನಿತ್ಯ ಶ್ಲೋಕದಲ್ಲಿ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಎಂದು ತ್ರಿಮೂರ್ತಿಗಳನ್ನೂ ಗುರುವಿಗೆ ಹೋಲಿಸಿದ್ದಾರೆ. ತಂದೆ ತಾಯಿಯ ನಂತರ ಗುರುವೇ ನಮಗೆ ಎಲ್ಲವೂ ಆಗುತ್ತಾರೆ. ತಂದೆ ತಾಯಿಯರೂ ನಮಗೆ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. 

ಜೀವನದಲ್ಲಿ ಯಶಸ್ಸಿಗೆ ಗುರುಕೃಪೆ ಬೇಕು. ಹೀಗಾಗಿಯೇ ನಮ್ಮ ಧರ್ಮದಲ್ಲಿ ಅನೇಕರನ್ನು ಗುರುಸ್ಥಾನದಲ್ಲಿ ಕಲ್ಪಿಸಿಕೊಂಡು ಅವರ ಉಪದೇಶದಿಂದ ಉದ್ಧಾರರಾಗುತ್ತಾರೆ ಹಾಗು ಯಶಸ್ಸು ಕಾಣುತ್ತಾರೆ. ಕತ್ತಲೆಯನ್ನು ತೆಗೆದು ಹಾಕಿ ಬೆಳಕನ್ನು ನೀಡಿ,  ಅಜ್ಞಾನವನ್ನು ತೆಗೆದುಹಾಕಿ ಜ್ಞಾನವೆನ್ನುವ ಬೆಳಕನ್ನು ನೀಡುವವನೇ ನಿಜವಾದ ಗುರು. 

ಈ ಕೆಳಗಿನ ಕವನದ ಸಾರಾಂಶ ಹೀಗಿದೆ 

ಓ ಆಚಾರ್ಯನೇ, ಸದ್ಗುರುವೇ ನಿನ್ನ ಪವಿತ್ರ ಚಾರಣಕ್ಕೆ ನಮಿಸುತ್ತೇನೆ. ನಮ್ಮ ಹಿಂದಿನ ಮಹಾನ್ ಋಷಿಗಳಾದ ವ್ಯಾಸ, ವಾಲ್ಮೀಕಿ, ವಸಿಷ್ಠ, ಸಪ್ತಋಷಿಗಳು ಮೊದಲವರೆಲ್ಲ ನನ್ನ ಗುರುಗಳಾಗಲಿ. ಪಾಮರನಾದ ನನಗೆ ಮಾರ್ಗವನ್ನು ತೋರಿ, ಅಭಯವನಿತ್ತು ಉದ್ಧರಿಸಿ, ಮುಕ್ತಿಯನ್ನು ಕರುಣಿಸಿ ಗುರುಗಳೇ. 

ಆಚಾರ್ಯತ್ರಯರಾದ ಶಂಕರ, ರಾಮಾನುಜ ಮಧ್ವರ ರೂಪದ ಗುರುಗಳೇ, ಬುದ್ಧ, ಚಿನ್ಮಯಾನಂದ, ರಾಮಕೃಷ್ಣ ಪರಮಹಂಸ, ವಿವೇಕಾನಂದರ ರೂಪದ ಗುರುಗಳೇ ನನ್ನ ಈ ಮೊರೆಯನ್ನು ಆಲಿಸಿ ನನ್ನ ಕೈಗಳನ್ನು ಹಿಡಿದು ಉದ್ಧರಿಸಿ, ಓ ಜಗದೊಡೆಯ ಸ್ವರೂಪನಾದ ಗುರುವೇ. 

ಗುರುನಮನ 

ಆಚಾರ್ಯ ಗುರುವೇ ಸದ್ಗುರು ರಾಯ 
ಪರಮ ಪವಿತ್ರ ಚರಣಕೆ ನಮಿಪೆ //
 
ವಸಿಷ್ಠ ವ್ಯಾಸ  ವಾಲ್ಮೀಕಿ ನೀನೇ 
ಸಪ್ತರ್ಷಿ ಸದ್ಗುರು ರಾಜನು  ನೀನೇ 
ಪಾಮರ ನನಗೆ ಮಾರ್ಗವ ತೋರಿ  
ಅಭಯವನಿತ್ತು ಉದ್ಧರಿಸಯ್ಯ 
ಮುಕ್ತಿಯ ನೀಡು ಸದ್ಗುರು ರಾಯಾ ssss //

ಶಂಕರ ರಾಮಾನುಜ ಮಧ್ವನು ನೀನೇ 
ಚಿನ್ಮಯ ರಾಮಕೃಷ್ಣ ಬುದ್ಧನು  ನೀನೇ 
ತರಳನ ಮೊರೆಯನು ಆಲಿಸಿ ಬೇಗ 
ಕರಪಿಡಿದೆನ್ನ ಉದ್ಧರಿಸಯ್ಯ 
ಕಾಪಾಡುಗುರುವೆ  ಹೇ ಜಗದೊಡೆಯ sss //

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...