Tuesday, July 8, 2025

Chennakeshava stuti/Ba Na Sundararao/ShantaJayatirtha / ವರಪುರಿಯ ಶ್ರೀ/ಬ ನ...


ವರಪುರಿಯ ಶ್ರೀ ಚೆನ್ನಕೇಶವ : -  ರಚನೆ - ಬ ನ ಸುಂದರರಾವ್ / ಸಂಗೀತ - ಶಾಂತಾ ಜಯತೀರ್ಥ

Varapuriya Sri Chennakeshava ;-  Lyrics - Ba Na Sundara Rao, Music - Shantra Jayatheertha 

ಈ ಭಕ್ತಿಗೀತೆಯನ್ನು ನನ್ನ ತಂದೆ ಬ ನ ಸುಂದರರಾವ್ ಅವರು ವರ್ತೂರಿನ ಚೆನ್ನರಾಯ ದೇವರ ಕುರಿತು ಬರೆದದ್ದು. ಹಿಂದೆ ವರ್ತೂರಿಗೆ ವರಪುರಿ ಎಂದು ಹೆಸರಿತ್ತು. ಈ ಭಕ್ತಿಗೀತೆಗೆ ಆಕಾಶವಾಣಿಯ ಸಂಗೀತಗಾರ್ತಿ ಶ್ರೀಮತಿ ಶಾಂತಾ ಜಯತೀರ್ಥ ಅವರು ಭೀಮಪಲಾಸ್ ರಾಗದಲ್ಲಿ ಸಂಗೀತ ಸಂಯೋಜಿಸಿಕೊಟ್ಟಿದ್ದಾರೆ. ಇದನ್ನು ನನ್ನ ತಾಯಿ, ಶ್ರೀಮತಿ ರತ್ನಮ್ಮ ಸುಂದರರಾವ್ ಹಾಗೂ ಅಕ್ಕ ಶ್ರೀಮತಿ ನೇತ್ರಾವತಿ ಅಭಿರಾಮಮೂರ್ತಿ ಅವರು ಹಾಡುತ್ತಿದ್ದರು. ಅದನ್ನು ನಾನು ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಕೇಳಿ, ನೀವೂ ಹಾಡಿ,  ಇತರರೊಂದಿಗೂ ಶೇರ್ ಮಾಡಿ. 

My father, B N Sundara Rao  penned this devotional song on Lord Chennaraya of Varthur. Varthur was formerly known as Varapuri. Mrs. Shanta Jayatirtha of All India Radio composed the music for this devotional song in the raga Bhimpalas. Smt. Ratnamma Sundararao, my mother, and Smt. Nethravathi Abhiramamurthy, my older sister, sang it. It was played on the keyboard by me. Sing, listen, and spread the word.


ವರಪುರಿಯ ಶ್ರೀ ಚೆನ್ನಕೇಶವ    

ವರಸುತರ ನೀ ಕಾಪಿಡೋ ದೇವಾ //

ನಿನ್ನ ಮಹಿಮೆಯ ನೋಡಿ    ನಿನ್ನ ಸೇವೆಯ ಮಾಡಿ  

ನಿನ್ನ ಭಕ್ತರ ಕೂಡಿ    ನಿನ್ನ ಗಾನವ ಪಾಡಿ    

ಆನಂದ ಸಾಗರದಲೋಲಾಡಿ ನಾನೂ //

ನಿತ್ಯ ನಲಿವೆನು ನಾನು   ಪರಮ ಮೂಢನು ನಾನು   

ತಾಯಿ ತಂದೆಯು ನೀನು   ಬಂಧು ಬಳಗವು ನೀನು   

ಎಮ್ಮ ಪಾಪವ ಹರಿಸಿ ಮುಕುತಿ ಕೊಡು ನೀನೂ //

ನಿನ್ನ ನಾಮವ ಭಜಿಸಿ   ನಿನ್ನ ಸ್ತೋತ್ರವ ಸ್ತುತಿಸಿ 

ಧನ್ಯನಾಗುವೆ ನಾನು   ಪುಣ್ಯ ಪಡೆಯುವೆ ನಾನು   

ಎಮ್ಮ ಪುರದಲಿ ನೆಲೆಸಿ ಮೆರೆಯುತಿಹೆ ನೀನೂ //




+1 T280L291 Split T131L355 R077 spd80

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...