ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
Ee Sambhashane (These are our conversations about love)
S Janaki, S P Balasubhramanyam; Music: Upendrakumar; Lyrics: Vijaya Naarasimha; Keyboard - Jagadeesha Chandra
ಎಸ್ ಜಾನಕಿ , ಎಸ್ ಪಿ ಬಾಲಸುಬ್ರಮಣ್ಯಂ; ಸಂಗೀತ: ಉಪೇಂದ್ರಕುಮಾರ್ ; ಸಾಹಿತ್ಯ: ವಿಜಯ ನಾರಸಿಂಹ / ಕೀಬೋರ್ಡ್: ಜಗದೀಶ ಚಂದ್ರ
Puttanna Kanagal is the director of the movie. S. Janaki and S. P. Balasubrahmanyam sing, and Upendrakumar composes the music. Beautiful lyrics have been written by Vijaya Naarasimha. Pure Kannada, the regional style, and Kannada combined with Sanskrit all have their own unique beauty while writing lyrics. Here, the "combination of Sanskrit and Kannada" style has added a certain grandeur. Srinath and Satyapriya, two lovers, sing this beautiful song.
Their romance is a brand-new poem with a charming core.
Like a river, the song's joy, excitement, and fantasy are reminiscent of the new wave and are gentle and delightful.
Their song is as beautiful as the spring blossom, as pure and delicate as the beauty wave.
As a result, this song's melody, lyrics, and singing style all work together to make it worth listening to multiple times. Music fans are delighted by Upendrakumar's exquisite adoption of the Mohana or Bhupali raga.
ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರ್ಮಸೆರೆ ಎಂಬ ಚಿತ್ರದ ಹಾಡು. ಸಂಗೀತ ನಿರ್ದೇಶನ ಉಪೇಂದ್ರಕುಮಾರ್ ಅವರದ್ದು, ಗಾಯನ ಎಸ್ ಜಾನಕಿ ಹಾಗು ಎಸ್ ಪಿ ಬಾಲಸುಬ್ರಮಣ್ಯಂ ಅವರದ್ದು. ವಿಜಯನಾರಸಿಂಹ ಅವರು ಸೊಗಸಾದ ಸಾಹಿತ್ಯ ನೀಡಿದ್ದಾರೆ. ಕನ್ನಡ ಭಾಷೆಗೆ ಅಚ್ಚಕನ್ನಡದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಸಂಸ್ಕೃತ ಮಿಶ್ರಿತ ಕನ್ನಡದಲ್ಲಿ ತನ್ನದೇ ಆದ ಸೌಂದರ್ಯವಿರುತ್ತದೆ. ಇಲ್ಲಿ ಸಂಸ್ಕೃತ ಮಿಶ್ರಿತ ಕನ್ನಡವು ಪ್ರಯೋಗವಾಗಿ ಒಂದು ರೀತಿಯ ಗಾಂಭೀರ್ಯವನ್ನು ತಂದಿದೆ. ಇಬ್ಬರು ಪ್ರಣಯಿಗಳು, ಶ್ರೀನಾಥ್ ಮತ್ತು ಸತ್ಯಪ್ರಿಯ ಹಾಡುವ ಪ್ರಣಯ ಗೀತೆ ಇದು.
ನಮ್ಮ ಪ್ರೇಮ ಸಂಭಾಷಣೆಯು ಹೊಸದಾಗಿಯೂ, ರಸಭರಿತ ಕಾವ್ಯದಂತೆಯೂ ಮಧುರವಾಗಿದೆ.
ನಮ್ಮ ಹಾಡು ಗಾನ ಗಂಗೆಯಾಗಿ, ಲಾಸ್ಯ, ಹಾಸ್ಯದಿಂದಲೂ ಶೃಂಗಾರಭರಿತವಾಗಿ ಮಧುರವಾಗಿದೆ.
ನಮ್ಮ ಈ ಹಾಡು ಅಬ್ಬರದ ಕಡಲಿನಂತೆ ಮೆರೆದು, ಮೊರೆದು, ಹೊಸದಾದ ರಾಗಾಧಾರೆಯಂತೆ ಹರಿದು ಜೇನುತುಂಬಿದಂತಿದೆ.
ನಮ್ಮ ಹಾಡು ಚೈತ್ರಮಾಸದ ಚಿಗುರಿನ ಚೆಲುವಂತೆ, ಸೌಂದರ್ಯದ ಅಲೆಯಂತೆ, ನಿರ್ಮಲವಾಗಿಯೂ, ಕೋಮಲವಾಗಿಯೂ ಇದೆ.
ಹೀಗೆ ಈ ಹಾಡಿನಲ್ಲಿ, ಗಾಯನ ಶೈಲಿ, ಸಾಹಿತ್ಯ ಮತ್ತು ರಾಗಸಂಯೋಜನೆ ಎಲ್ಲವು ಮಿಳಿತವಾಗಿ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಮೋಹನ ಅಥವಾ ಭೂಪಾಲಿ ರಾಗವನ್ನು ಆಧರಿಸಿ ಉಪೇಂದ್ರಕುಮಾರ್ ಅವರು ಸೊಗಸಾದ ಹಾಡನ್ನು ಸಂಗೀತ ಪ್ರಿಯರಿಗೆ ನೀಡಿದ್ದಾರೆ.
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ ||
ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ
ಪ್ರೇಮ ಗಾನ ಕದಲಾಸ್ಯ ಮೃದುಹಾಸ್ಯ
ಶೃಂಗಾರ ಭಾವ ಗಂಗ
ಸುಂದರ ಸುಲಲಿತ ಮಧುರ ಮಧುರ ಮಧುರ
ಧೀರ ಶರದಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧಾರೆಯಂತೆ
ಮಂಜುಳ ಮಧುಮಯ ಮಧುರ ಮಧುರ ಮಧುರ
ಚೈತ್ರ ತಂದ ಚಿಗುರಂತೆ ಚೆಲುವಂತೆ
ಸೌಂದರ್ಯ ಲಹರಿಯಂತೆ
ನಿರ್ಮಲ ಕೋಮಲ ಮಧುರ ಮಧುರ ಮಧುರ

No comments:
Post a Comment