Monday, June 9, 2025

ಮಕ್ಕಳನ್ನು ಮುದ್ದಿಸಿ ಬೆಳೆಸಬಾರದು / Don't pamper the kids

 




ಗಿಡಗಳಿಗೆ ಎಷ್ಟು ಬೇಕೋ ಅಷ್ಟು ನೀರು ಹಾಕಿ ಬೆಳೆಸಿದರೆ ಅವು ಬೇರನ್ನು ಆಳಕ್ಕೆ ಬಿಟ್ಟು ನೀರನ್ನು ಹುಡುಕಿಕೊಂಡು ಬದುಕುತ್ತವೆ. ನಿತ್ಯ ನೀರನ್ನು ಹೆಚ್ಚಾಗಿ ಹಾಕಿ ಬೆಳೆಸಿದರೆ ಬೇರು ಆಳಕ್ಕೆ ಇಳಿಯುವುದಿಲ್ಲ, ಹೂವು ಹಣ್ಣುಗಳೂ ಸರಿಯಾಗಿ ಬಿಡುವುದಿಲ್ಲ. ಒಂದು ಸ್ವಲ್ಪ ಗಾಳಿ ಬಂದರೂ ಬಿದ್ದುಹೋಗುತ್ತವೆ. ಕಾರಣ, ಬೇರು ಆಳಕ್ಕೆ ಇಳಿದಿರುವುದಿಲ್ಲ. ನಿಮ್ಮ ಮಕ್ಕಳಿಗೂ ಅಷ್ಟೇ, ಎಷ್ಟು ಬೇಕೋ ಅಷ್ಟನ್ನು ಕೊಡಿಸಿ, ನಿಮ್ಮ ಮಿತಿಯನ್ನು ತಿಳಿಸಿಕೊಡಿ. ಕೇಳಿದ್ದನ್ನೆಲ್ಲಾ ಕೊಡಿಸಲು ಹೋಗಬೇಡಿ. ದುಡ್ಡಿನ ಬೆಲೆ ಅವರಿಗೆ ತಿಳಿದಿರಲಿ. ಜಗಳದಿಂದಲೋ, ಬೈದಾಟ ದಿಂದಲೋ ಹೇಳಿಕೊಡಬೇಡಿ. ಹತ್ತಿರ ಕೂಡಿಸಿಕೊಂಡು ನಿಮ್ಮ ಇತಿ ಮಿತಿ ಇವನ್ನು ಮನದಟ್ಟು ಮಾಡಿಕೊಡಿ. ನೋಡಿ, ನಾವು ಇರುವುದೇ ಹೀಗೆ ಎಂದು ಗೆಳೆಯರೊಂದಿಗೆ ಬಾಳುವುದನ್ನು ಕಲಿಸಿಕೊಡಿ. ದುಂದು ವೆಚ್ಚ ಮಾಡುವವರ ಸಂಗದಿಂದ ದೂರವಿದ್ದು ತಮ್ಮ ಇತಿ ಮಿತಿಯಲ್ಲಿ ಇರುವುದನ್ನು ಕಲಿತರೆ, ಮುಂದೆ ಬಾಳು ಸುಗಮ ವಾಗುತ್ತದೆ ಎಂಬ ನಂಬಿಕೆ ಅವರಿಗೆ ಬರುವಂತೆ ಬೆಳೆಸಿ

 

In pursuit of water, the plants will emerge from their deep roots.  In addition to preventing the roots from growing deeper, overwatering the plant will produce fewer blooms and fruits.   The plant will be blown by a breeze with minimal force because the roots are shallow.

Give your children as much as they want while still letting them know your limits.   Don't give in to their demands and accomplish this without arguing or fighting.  Teach children the value of money and parental boundaries.   Establish limits, adhere to them, and ensure that children comprehend them.   Teach them how to turn down friends who spend a lot of money.  If they learn to live within their means and stay away from people who spend too much, their future will be smooth and bright. Inculcate these principles in kids early on. Children benefit from this by becoming better citizens as adults.

No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...